ಲಾಕ್​ಡೌನ್​ ನಂತರ ನೇರವಾಗಿ ಚಿತ್ರಮಂದಿರದಲ್ಲಿ ರಿಲೀಸ್​ ಆಗುತ್ತಿದೆ ಕನ್ನಡದ ಮೊದಲ ಸಿನಿಮಾ ಪುರ್​ಸೋತ್ ರಾಮ

ಪುರ್​ಸೋತ್ ರಾಮ.... ಲಾಕ್​ಡೌನ್​ ನಂತರ ನೇರವಾಗಿ ರಿಲೀಸ್ ಆಗುತ್ತಿರೋ ಮೊದಲ ಕನ್ನಡ ಸಿನಿಮಾ. ನಿರ್ಮಾಪಕಿ ಮಾನಸ ಧೈರ್ಯದಿಂದ ರಿಲೀಸ್​ಗೆ ಮುನ್ನುಗಿದ್ದಾರೆ. ಪುರುಸತ್ತಾಗಿ ನಗಿಸೋದಕ್ಕೆ ಬರ್ತಿದ್ದಾರೆ ಈ ಕಾಮಿಡಿ ಕಿಂಗ್ಸ್. ಇದೇ ತಿಂಗಳ 23ರಂದು ರಾಜ್ಯದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ. 

ಪುರ್​ಸೋತ್​ ರಾಮ ಸಿನಿಮಾದ ಪೋಸ್ಟರ್​

ಪುರ್​ಸೋತ್​ ರಾಮ ಸಿನಿಮಾದ ಪೋಸ್ಟರ್​

  • Share this:
ಕಳೆದ ಏಳು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಈಗ ಮತ್ತೆ ಬಾಗಿಲು ತೆರೆದಿವೆ. ಆದರೂ ಸಹ ಈ ಹಿಂದೆ ರಿಲೀಸ್ ಆಗಿರುವ ಸಿನಿಮಾಗಳೇ ಮತ್ತೆ ರಿಲೀಸ್​ ಆಗುತ್ತಿವೆ. ಅದರಲ್ಲೂ ಜನರು ಸಿನಿಮಾ  ಮಂದಿರಗಳಿಗೆ ಬರುತ್ತಿಲ್ಲ ಅಂತ ನಿನ್ನೆ ಅಷ್ಟೆ ಎಷ್ಟೋ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಕೆಲವು ಶೋಗಳನ್ನು ಕ್ಯಾನ್ಸಲ್​ ಮಾಡಿದ್ದಾರೆ. ಇಂದು ಶುಕ್ರವಾರವಾಗಿದ್ದು, ವಾರಾಂತ್ಯದಲ್ಲಿ ಜನರು ಸಿನಿಮಾ ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ನೋಡಿರುವ ಸಿನಿಮಾಗಳನ್ನು ನೋಡಲು ಆಸಕ್ತಿ ಇಲ್ಲವೋ ಅಥವಾ ಕೊರೋನಾ ಭೀತಿಯಿಂದಾಗಿ ಬರುತ್ತಿಲ್ಲವೋ ಇನ್ನೂ ಅರ್ಥವಾಗುತ್ತಿಲ್ಲ. ಆದರೆ ಇದರಿಂದಾಗಿ ಸದ್ಯ ಸ್ಯಾಂಡಲ್​ವುಡ್​ ಮಾತ್ರ ಇನ್ನೂ ಸಂಕಷ್ಟಕ್ಕೆ ಸಿಲುಕುತ್ತಿದೆ. ಜೊತೆಗೆ ಚಿತ್ರಮಂದಿರಗ ಮಾಲೀಕರೂ ಸಹ ತಲೆಕೆಡಸಿಕೊಳ್ಳುವಂತಾಗಿದೆ. ಹೀಗಿರುವಾಗಲೇ ಕನ್ನಡದ  ಹೊಸ ಸಿನಿಮಾವೊಂದು ನೇರವಾಗಿ ಚಿತ್ರಮಂದಿರದಲ್ಲಿ ರಿಲೀಸ್​ ಆಗಲು ಸಿದ್ಧವಾಗಿದೆ. 

ಹೌದು, ಪುರ್​ಸೋತ್ ರಾಮ.... ಲಾಕ್​ಡೌನ್​ ನಂತರ ನೇರವಾಗಿ ರಿಲೀಸ್ ಆಗುತ್ತಿರೋ ಮೊದಲ ಕನ್ನಡ ಸಿನಿಮಾ. ನಿರ್ಮಾಪಕಿ ಮಾನಸ ಧೈರ್ಯದಿಂದ ರಿಲೀಸ್​ಗೆ ಮುನ್ನುಗಿದ್ದಾರೆ. ಪುರುಸತ್ತಾಗಿ ನಗಿಸೋದಕ್ಕೆ ಬರ್ತಿದ್ದಾರೆ ಈ ಕಾಮಿಡಿ ಕಿಂಗ್ಸ್. ಇದೇ ತಿಂಗಳ 23ರಂದು ರಾಜ್ಯದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.ರವಿಶಂಕರ್ ಗೌಡ, ಕುರಿಪ್ರತಾಪ್ ಹಾಗೂ ಕಾಮಿಡಿ ಕಿಲಾಡಿ ಶಿವರಾಜ್ ಕೆಆರ್ ಪೇಟೆ ಈ ಮೂರು ಮಂದಿ ಕಾಮಿಡಿ ಕಿಂಗ್ಸ್ ಅಭಿನಯದ ಪುರ್​ಸೋತ್ ರಾಮ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ. ಆದರೆ, ಕೊರೋನಾ ಕಾರಣದಿಂದಾಗಿ ರಿಲೀಸ್​ ರೆಡಿಯಾಗಿದ್ದ ಚಿತ್ರದ ಥಿಯೇಟರ್ ಓಪನ್ ಆಗೋವರೆಗೂ ಕಾಯಬೇಕಾಯ್ತು. ಇದೀಗ ರಾಜ್ಯದಾದ್ಯಂತ ಎಲ್ಲೆಡೆ ಚಿತ್ರಮಂದಿರಗಳು ತೆರೆದಿವೆ. ಪುರ್​ಸೋತ್ ರಾಮ ಚಿತ್ರತಂಡ ಧೈರ್ಯದಿಂದ ಕನ್ನಡ ಚಿತ್ರ ಪ್ರೇಮಿಗಳ ಮೇಲೆ ಭರವಸೆ ಇಟ್ಟು ಚಿತ್ರವನ್ನ ಗ್ರ್ಯಾಂಡ್ ಆಗಿ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.ಪುರ್​ಸೋತ್ ರಾಮ ಸಿನಿಮಾ ಇದೇ ತಿಂಗಳ 23ಕ್ಕೆ ಅಂದ್ರೆ ಮುಂದಿನ ಶುಕ್ರವಾರ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಜೊತೆಗೆ ಲಾಕ್​ಡೌನ್​ ನಂತರ ಥಿಯೇಟರ್ ತೆರೆದ ಮೇಲೆನೇರವಾಗಿ ರಿಲೀಸ್ ಆಗ್ತಿರೋ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗ್ತಿದೆ ಪುರ್​ಸೋತ್ ರಾಮ.

ಇದನ್ನೂ ಓದಿ: ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಯಶ್​..!

ರಿತಿಕ್ ಸರು ನಿರ್ದೇಶನದೊಂದಿಗೆ ನಟಿಸಿರೋ ಈ ಚಿತ್ರದಲ್ಲಿ ನಿರ್ಮಾಪಕಿ ಮಾನಸ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಿವರಾಜ್ ಕೆ.ಆರ್ ಪೇಟೆ, ರವಿಶಂಕರ್ ಗೌಡ, ಕುರಿಪ್ರತಾಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕ್ಲಾಸ್ ಹಾಗೂ ಮಾಸ್ ಎರಡೂ ಬಗೆಯ ಪ್ರೇಕ್ಷಕರನ್ನೈ ಸೆಳೆಯೋ ತರಹ ಇದೆ. ಅದೇನೇ ಇರಲಿ, ಲಾಕ್​ಡೌನ್ ನಂತರ ರಿಲೀಸ್ ಆಗ್ತಿರೋ ಮೊದಲ ಕನ್ನಡ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸ್ತಾರೆ ಅನ್ನೋ ಕುತೂಹಲ ಕನ್ನಡ ಸಿನಿಪ್ರಿಯರ ಜೊತೆಗೆ ಉದ್ಯಮದವರನ್ನೂ ಕಾಡುತ್ತಿದೆ.
Published by:Anitha E
First published: