ಅನಿವಾಸಿ ಕನ್ನಡಿಗರ ಸಿನಿಮಾ Mysuru: ಹೀಗೊಂದು ಮ್ಯೂಸಿಕಲ್ ಲವ್‍ಸ್ಟೋರಿ...! 

'ಮೈಸೂರು' ಎಂಬ ಟೈಟಲ್ ಇರುವ ಮಾತ್ರಕ್ಕೆ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಮೈಸೂರಿನಲ್ಲಿಯೇ ಆಗಿದೆ ಎಂದುಕೊಂಡರೆ ಖಂಡಿತ ತಪ್ಪು. ಯಾಕೆಂದರೆ ಬರೋಬ್ಬರಿ 40 ದಿನಗಳ ಶೂಟಿಂಗ್ ಶೆಡ್ಯೂಲ್​ ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ.

ಮೈಸೂರು ಸಿನಿಮಾದಲ್ಲಿ ಸಂವಿತ್​ ಹಾಗೂ ಪೂಜಾ

ಮೈಸೂರು ಸಿನಿಮಾದಲ್ಲಿ ಸಂವಿತ್​ ಹಾಗೂ ಪೂಜಾ

  • Share this:
'ಮಂಡ್ಯ', 'ಹುಬ್ಬಳ್ಳಿ', 'ಕಲಾಸಿಪಾಳ್ಯ', 'ಮೆಜೆಸ್ಟಿಕ್', 'ತಿರುಪತಿ', 'ಬಳ್ಳಾರಿ ನಾಗ', 'ಮುಂಬೈ', 'ಲವ್ ಇನ್​ ಮಂಡ್ಯ', 'ಗಾಂಧಿನಗರ', 'ಪ್ಯಾರಿಸ್ ಪ್ರಣಯ', 'ಗೋವಾ', 'ಶಿವಾಜಿನಗರ', 'ದುಬೈ ಬಾಬು', 'ಕಲರ್ಸ್ ಆಫ್ ಬೆಂಗಳೂರು', 'ಕೆಜಿಎಫ್'... ಹೀಗೆ ಒಂದು ಏರಿಯಾ ಅಥವಾ ಜಿಲ್ಲೆಯ ಹೆಸರನ್ನೊಳಗೊಂಡ ಹಲವಾರು ಸಿನಿಮಾಗಳು ಸ್ಯಾಂಡಲ್‍ವುಡ್‍ನಲ್ಲಿ ಬಂದು ಹೋಗಿವೆ. ಅದಕ್ಕೆ ಈಗ ಹೊಚ್ಚ ಹೊಸ ಸೇರ್ಪಡೆ ಮೈಸೂರು ಚಿತ್ರ (Mysuru Movie). ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನಲ್ಲಿಯೇ ಸಿನಿಮಾವೊಂದು ಸೆಟ್ಟೇರಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಪೂರ್ಣಗೊಳಿಸಿದೆ. `ಮೈಸೂರು', ಇದು ಹೊರ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗನ ಪ್ರೇಮ ಕಥೆ. ಮ್ಯೂಸಿಕಲ್ ಲವ್‍ಸ್ಟೋರಿಯೂ ಹೌದು.

ಸಂವಿತ್ ಮೈಸೂರು ಚಿತ್ರದ ನಾಯಕನಾಗುವ ಮೂಲಕ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡುತ್ತಿದ್ದಾರೆ. ಈಗಾಗಲೇ ತೆಲುಗು, ಬಂಗಾಳಿ ಹಾಗೂ ಭೋಜ್‍ಪುರಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಸಂವಿತ್ ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ ಮೈಸೂರು. ಅವರಿಗೆ ನಾಯಕಿಯಾಗಿ ಪೂಜಾ ನಟಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಅವರೂ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿ ಕುಮಾರ್ ಮುಂತಾದವರು ಮೈಸೂರು ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Movie Mysuru completed shooting and getting ready for release ae
ಮೈಸೂರು ಸಿನಿಮಾದಲ್ಲಿ ಸಂವಿತ್​ ಹಾಗೂ ಪೂಜಾ


'ಮೈಸೂರು' ಎಂಬ ಟೈಟಲ್ ಇರುವ ಮಾತ್ರಕ್ಕೆ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಮೈಸೂರಿನಲ್ಲಿಯೇ ಆಗಿದೆ ಎಂದುಕೊಂಡರೆ ಖಂಡಿತ ತಪ್ಪು. ಯಾಕೆಂದರೆ ಬರೋಬ್ಬರಿ 40 ದಿನಗಳ ಶೂಟಿಂಗ್ ಶೆಡ್ಯೂಲ್​ ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ.

ಇದನ್ನೂ ಓದಿ: ಮತ್ತೊಮ್ಮೆ ತುಂಡುಡುಗೆ ತೊಟ್ಟು ಫೋಟೋಶೂಟ್​ಗೆ ಪೋಸ್​ ಕೊಟ್ಟ ಗ್ಲಾಮರಸ್​ ಗರ್ಲ್​ Sara Annaiah

ಮ್ಯೂಸಿಕಲ್ ಲವ್‍ಸ್ಟೋರಿ ಮೈಸೂರು ಚಿತ್ರಕ್ಕೆ ಕಿರುತೆರೆಯ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿರುವ ವಾಸುದೇವ ರೆಡ್ಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಚಿತ್ರದ ಕಥೆ ಹಾಗೂ ಚಿತ್ರಕಥೆಗಳನ್ನೂ ಅವರೇ ಬರೆದಿದ್ದಾರೆ. ಎಸ್ ಆರ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಖುದ್ದು ವಾಸುದೇವ್ ರೆಡ್ಡಿಯವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರಿಗೆ ಜಗದೀಶ್ (ಜೆಕೆ) ಹಾಗೂ ಕೆ. ಆರ್. ಅಪ್ಪಾಜಿ (ಕೊಡವತ್ತಿ) ಅವರು ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.

ಮ್ಯೂಸಿಕಲ್ ಲವ್‍ಸ್ಟೋರಿಯಾಗಿರುವ ಕಾರಣ ಮೈಸೂರು ಚಿತ್ರದ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರಿದ್ದಾರೆ. ರಮಣಿ ಸುಂದರೇಶನ್, ಅನಿತಾ ಕೃಷ್ಣ, ವಿಜಯ್ ರಾಜ್ ಅವರು ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ರಘು ಶಾಸ್ತ್ರಿ, ರವಿಶಂಕರ್ ನಾಗ್ ಹಾಗೂ ಸಂಗೀತ ನಿರ್ದೇಶಕಿ ಅನಿತಾ ಕೃಷ್ಣ ಅವರೂ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: Hombale 12: ನವರಸ ನಾಯಕ ಜಗ್ಗೇಶ್ ಜತೆ ಸೇರಿ Raghavendra Stores ತೆರೆದ ಹೊಂಬಾಳೆ ಫಿಲಂಸ್​

ಕೃಷ್ಣ ಮಳವಳ್ಳಿ ಮೈಸೂರು ಚಿತ್ರದ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಭಾಸ್ಕರ್ ವಿ. ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಈ ಚಿತ್ರಕ್ಕಿದೆ. ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ ಮೈಸೂರು ಚಿತ್ರದಲ್ಲಿ ಎರಡು ಸಾಹಸ ಸನ್ನಿವೇಶಗಳಿದ್ದು, ಆ್ಯಕ್ಷನ್ ಡೈರೆಕ್ಟರ್ ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿಬಂದಿವೆ.
Published by:Anitha E
First published: