2017ರ ಕೊನೆಯಲ್ಲಿ ಬಿಡುಗಡೆಯಾಗಿದ್ದ 'ಮಫ್ತಿ' ಸಿನಿಮಾ ತನ್ನ ಅದ್ಭುತ ಮೇಕಿಂಗ್‍ನಿಂದಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಉಂಟುಮಾಡಿತ್ತು. ಕನ್ನಡ ಚಿತ್ರರಸಿಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು, ಬಾಕ್ಸಾಫಿಸ್‍ನಲ್ಲಿ ರಣಕೇಕೆ ಹಾಕಿತ್ತು. ಇದೀಗ ಈ ಸಿನಿಮಾ ತಮಿಳಿನತ್ತ ಹೊರಟಿದೆ.
ಇದನ್ನೂ ಓದಿ: Dr. Rajkumar Memories: ಅಣ್ಣಾವ್ರು ಮೈಯೆಲ್ಲಾ ಕೆಸರು ಮಾಡಿಕೊಂಡಿದ್ದ ಘಟನೆ...
'ಮಫ್ತಿ' ಸಿನಿಮಾ ತನ್ನ ಹೊಸ ರೀತಿಯ ಮೇಕಿಂಗ್‍ನಿಂದಲೇ ಗಮನ ಸೆಳೆದ ಸಿನಿಮಾ. ಅದರಲ್ಲೂ ಶಿವರಾಜ್‍ಕುಮಾರ್ ಲುಕ್ಕು, ಗೆಟಪ್ಪು, ಬೈರತಿ ರಣಗಲ್ ಪಾತ್ರ ಸ್ಯಾಂಡಲ್‍ವುಡ್ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿತ್ತು, ಪರಿಣಾಮ ಬಾಕ್ಸಾಫಿಸ್‍ನಲ್ಲಿ 'ಮಫ್ತಿ' ದೊಡ್ಡ ಯಶಸ್ಸು ಕಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ