ಸ್ಯಾಂಡಲ್ವುಡ್ನಲ್ಲಿ (Sandalwood) ಇತ್ತೀಚೆಗೆ ಬಹಳ ಡಿಫರೆಂಟಾಗಿರುವ ಸಿನಿಮಾಗಳು (Cinema) ಬರುತ್ತಲೇ ಇವೆ. ಹೊಸ ಕಾನ್ಸೆಪ್ಟ್, ಹೊಸ ಕಥೆ, ಹೊಸ ರೀತಿಯಲ್ಲಿ ಮೂಡಿ ಬರುತ್ತಿರುವ ಕನ್ನಡ ಸಿನಿಮಾಗಳು (Movie) ಪ್ರೇಕ್ಷಕರಿಗೆ ಹತ್ತಿರವಾಗುತ್ತಿವೆ. ವಿಶೇಷವಾಗಿ ಈ ಹೊಸ ಸಿನಿಮಾಗಳಲ್ಲಿ ಹೊಸ ಮುಖಗಳನ್ನು ಕಾಣುವುದು ಮತ್ತೊಂದು ವಿಶೇಷ. ಇದೀಗ ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಸಿನಿಮಾ ಸಿದ್ಧವಾಗುತ್ತಿದ್ದು ಇದು ರಾಜಧಾನಿ ಬೆಂಗಳೂರಿನ (Bengaluru) ಬಗ್ಗೆ. ಬೆಂಗಳೂರು ಬಗ್ಗೆ ಸಿನಿಮಾ ಅಂದ್ರೆ ಸಖತ್ ಕುತೂಹಲ ಇದ್ದೇ ಇರುತ್ತದೆ. ಬೆಂಗಳೂರಿನಲ್ಲಿ ಯುವಕರ ತಂಡವೊಂದು ಸ್ಟಾರ್ಟಪ್ ಆರಂಭಿಸುವ ಕಥೆಯನ್ನು ಈ ಸಿನಿಮಾ ಒಳಗೊಂಡಿರುವಂತೆ ಟ್ರೈಲರ್ ತೋರಿಸುತ್ತದೆ.
ರಜನಿ ಥರ್ಸ್ಡೇ ಸ್ಟೋರಿಸ್ನಲ್ಲಿ ಈ ಟ್ರೈಲರ್ ಬಿಡುಗಡೆಯಾಗಿದೆ. ಅನಂತ್ ನಾಗ್, ಸಾಯಿ ಕುಮಾರ್, ಪ್ರಕಾಶ್ ಬೆಳ್ವಾಡಿ, ಮಧುಸೂದನ್ ಗೋವಿಂದ್, ಪ್ರದೀಪ್ ಶಾಸ್ತ್ರಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯುವಕರ ತಂಡವೊಂದು ಸ್ಟಾರ್ಟಪ್ ಬಗ್ಗೆ ಮಾತನಾಡುತ್ತಾ ಇರುವುದನ್ನು ಈ ಟ್ರೈಲರ್ನಲ್ಲಿ ಕಾಣಬಹುದು. ಯುವಕರು ಬ್ಯುಸಿನೆಸ್ ಸ್ಟಾರ್ಟಪ್ ಎಂದು ಮಾತನಾಡುತ್ತಿದ್ದರೆ ದೊಡ್ಡವರು ಹಣ ಖರ್ಚು, ನರ್ಷ, ವ್ಯವಹಾರ ಸೋಲುವ ಬಗ್ಗೆ ಉಪದೇಶ ಕೊಡುವುದು ಕೂಡಾ ಟ್ರೈಲರ್ನಲ್ಲಿ ಕಂಡು ಬಂದಿದೆ. ಸಿಕ್ಕ ಸಿಕ್ಕ ಕಂಪನೆಗಳಿಗೆಲ್ಲ ಇನ್ವೆಸ್ಟ್ಮೆಂಟ್ಗಾಗಿ ಅಲೆದಾಡುವ ಯುವಕರ ತಂಡ ಬಂಡವಾಳಕ್ಕಾಗಿ ಸಾಕಷ್ಟು ಸರ್ಕಸ್ ಮಾಡುತ್ತದೆ.
ಮೊದಲೇ ಯುವಕರ ತಂಡ, ಸ್ಟಾರ್ಟಪ್ ಬೇರೆ, ಅನುಭವ ಬೇರೆ ಇಲ್ಲ ಇವರನ್ನು ನಂಬಿ ಹಣ ಹಾಕೋರು ಯಾರು ಅಂತ ಕಂಪೆನಿಗಳು ಇವರ ಮೇಲೆ ಇನ್ವೆಸ್ಟ್ ಮಾಡಲು ಒಪ್ಪುವುದಿಲ್ಲ. ಆದರೆ ಈ ಯುವಕರು ಸ್ಟಾರ್ಟಪ್ ಆರಂಭಿಸ್ತಾರಾ? ಇವರಿಗೆ ಬಂಡವಾಳ ಎಲ್ಲಿಂದ ಸಿಗುತ್ತದೆ? ಬ್ಯುಸಿನೆಸ್ ಸಕ್ಸಸ್ ಆಗುತ್ತಾ? ಈ ಎಲ್ಲ ಪ್ರಶ್ನೆಗೆ ಸಿನಿಮಾ ಉತ್ತರವಾಗಲಿದೆ.
ಇದನ್ನೂ ಓದಿ: Kartik Aaryan: ಲವ್ಗಾಗಿಯೇ ಒಂದು ಕೋಣೆ ಇದೆ ಎಂದ ಕಾರ್ತಿಕ್ ಆರ್ಯನ್!
ಯುವಕರ ಜೊತೆ ಒಂದು ಚಂದದ ಯುವತಿ ಕೂಡಾ ಸೇರಿಕೊಳ್ಳುತ್ತಾರೆ. ಆದರೆ ಇದು ಹೀರೋಯಿನಗ್ ಓರಿಯೆಂಟೆಡ್ ಸಿನಿಮಾ ಏನಲ್ಲ. ಆದರೆ ಸ್ವಲ್ಪ ಕಾಮಿಡಿ, ರೊಮ್ಯಾನ್ಸ್ ಎಲ್ಲ ಸೇರಿಸಿಕೊಡುವ ಒಂದು ಪಾತ್ರವನ್ನು ಕೂಡಾ ಸೇರಿಸಲಾಗಿದೆ.
ಆದರೆ ಸಿನಿಮಾದಲ್ಲಿ ಯುವಕ ಸ್ಟ್ರಗಲ್ ತುಂಬಾ ಹೈಲೈಟ್ ಆಗಿದೆ. ಬ್ಯುಸಿನೆಸ್ ಆರಂಭಿಸುತ್ತಾರಾ, ಸಕ್ಸಸ್ ಆಗುತ್ತಾರಾ? ವಿಶೇಷವಾಗಿ ಇದ್ಯಾಕೆ ಬೆಂಗಳೂರಿನಲ್ಲೇ ಆಯಿತು? ಬೆಂಗಳೂರಿನ ಯುವಕರು, ಅವರ ಕನಸುಗಳ ಕುರಿತು ಸಿನಿಮಾದಲ್ಲಿ ವಿವರವಾಗಿ ತೋರಿಸಿರುವುದು ಟ್ರೈಲರ್ನಲ್ಲಿ ಗೊತ್ತಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ