ಕನ್ನಡದ ಪ್ರೇಮ ಕವಿ ಕೆ.ಕಲ್ಯಾಣ್ ಆ (K.Kalyan) ಒಂದು ಚಿತ್ರಕ್ಕೆ ಹಾಡು ಬರೆಯೋ ಮುನ್ನ, ಬರೋಬ್ಬರಿ 44 ಚಿತ್ರಗಳಿಗೆ ಹಾಡು ಬರೆದಿದ್ದರು. ಒಳ್ಳೆ ಹಾಡುಗಳನ್ನೆ (K.Kalyan Hit Songs) ಬರೆದುಕೊಟ್ಟಿದ್ದರು. ಆದರೆ ಕನ್ನಡದ ಆ ಒಂದೇ ಒಂದು ಸಿನಿಮಾ ಈ ಕವಿಯ ಹೆಸರನ್ನ ಇಡೀ ನಾಡಿನ ಜನತೆಗೆ ಪರಿಚಯ ಮಾಡಿಸಿತು. ಆ ಒಂದು ಪುಟ್ಟ ಕ್ಯಾಸೆಟ್ ಮೇಲೆ ಕೆ.ಕಲ್ಯಾಣ್ ಅನ್ನೋ ಹೆಸರು ಬರುವಂತೆ (K.Kalyan Lyrics) ಮಾಡಿತು. ಆ ಸಿನಿಮಾ ಹಾಡಿನ ರಚನೆಯ ಹಿಂದೆ ಸ್ವಾರಸ್ಯಕರ ಕಥೆಗಳೂ ಇವೆ. ಅವುಗಳನ್ನ ಸ್ವತಃ ಕೆ.ಕಲ್ಯಾಣ್ ಈಗ ನೆನಪಿಸಿಕೊಂಡಿದ್ದಾರೆ. ತಮ್ಮದೇ (K.Kalyan Unknow Facts) ಕಥೆಗಳನ್ನ ಹೇಳಲಿಕ್ಕೆ ಶುರು ಮಾಡಿದ್ದಾರೆ. ಆ ಕಥೆಗಳನ್ನ ಕೇಳ್ತಾ ಹೋದ್ರೆ, ನಿಮಗೂ ಒಂದು ಅರೆಕ್ಷಣ ಆಶ್ಚರ್ಯವೂ ಆಗುತ್ತದೆ.
ಲಿರಿಕ್ ರೈಟರ್ ಬದುಕಿನಲ್ಲೂ ಇಂತಹ ಥ್ರಿಲ್ ಇರುತ್ತದೆಯೇ ಅನ್ನೊ ಖುಷಿನೂ ಆಗುತ್ತದೆ.
ಕೆ.ಕಲ್ಯಾಣ್ ಕನ್ನಡ ಪ್ರೇಮ ಕವಿ-ಈ ಕವಿಯ ಹಾಡುಗಳು ಈಗಲೂ ಮನದಲ್ಲಿ ರಿಂಗಣಿಸುತ್ತವೆ. ನಮ್ಮೂರ ಮಂದಾರ ಹೂವೇ ಚಿತ್ರದ ಹಾಡುಗಳನ್ನ ಕೇಳಿದ್ರೆ ನಿಮಗೆ ಈಗಲೂ ಅದೇನೋ ಒಂದು ಖುಷಿ ಆಗುತ್ತದೆ. ವಿ.ಮನೋಹರ್, ಕೆ.ಕಲ್ಯಾಣ್, ದೊಡ್ಡರಂಗೇಗೌಡರ ಅವರು ಈ ಚಿತ್ರಕ್ಕೆ ಗೀತೆ ಬರೆದಿದ್ದಾರೆ.
ಆದರೂ ಈ ಚಿತ್ರದಲ್ಲಿರೋ ಆ ಮೂರು ಹಾಡುಗಳು ವಿಶೇಷವಾಗಿಯೇ ಇದ್ದವು. ಆ ಗೀತೆಯನ್ನ ಅಂದಿನ ಯುವಕರು ಅತಿ ಹೆಚ್ಚು ಇಷ್ಟಪಟ್ಟರು. ವಿಶೇಷ ಪದಗಳ ಬಳಕೆ, ವಿಶಿಷ್ಠ ಭಾವನೆ ಮೂಡಿಸೋ ಸಾಲುಗಳು, ಹೀಗೆ ಆ ಮೂರು ಹಾಡುಗಳು ಜನರ ದಿಲ್ ಅಲ್ಲಿ ಆಗಲೂ ಇದ್ದವು. ಈಗಲೂ ಇವೆ.
ಹಳ್ಳಿ ಲಾವಣಿಯಲ್ಲಿ ಲಾಲಿ ಹಾಡು ಹುಟ್ಟಿದ್ದೇ ರೋಚಕ
ನಮ್ಮೂರ ಮಂದಾರ ಹೂವೇ ಚಿತ್ರದಲ್ಲಿ ಹಳ್ಳಿ ಲಾವಣಿಯಲ್ಲಿ ಲಾಲಿ ಹಾಡು ವಿಶೇಷಾಗಿಯೇ ಇದೆ. ಇದನ್ನ ಅಂದು ಕೇಳಿದ ಅನೇಕರು ಗುನುಗಿದರು. ಮತ್ತೆ ಮತ್ತೆ ಹಾಡಿಕೊಂಡು ಖುಷಿಪಟ್ಟಿದ್ದರು. ಈ ಒಂದು ಸೆಳೆತಕ್ಕೆ ಅಲ್ಲಿದ್ದ ಇದ್ದದ್ದು ಒಂದು ಸಂಗೀತ ಮತ್ತೊಂದು ಸಾಹಿತ್ಯ. ಎರಡೂ ಇಲ್ಲಿ ವಿಶೇಷಾಗಿಯೇ ಇದ್ದವು.
ಹಳ್ಳಿ ಲಾವಣಿಯಲ್ಲಿ ಲಾಲಿ ಹಾಡು ಬರೆದದ್ದು ಕೆ.ಕಲ್ಯಾಣ್
ಹಳ್ಳಿ ಲಾವಣಿಯಲ್ಲಿ ಲಾಲಿ ಗೀತೆಯನ್ನ ಕೆ.ಕಲ್ಯಾಣ್ ಬರೆದಿದ್ದಾರೆ. ಈ ಗೀತೆಯನ್ನ ಟ್ಯೂನ್ಗೇನೆ ಕೆ.ಕಲ್ಯಾಣ್ ಬರೆದಿದ್ದರು. ಅದಕ್ಕಾಗಿಯೇ ಮೊದಲೇ ಟ್ಯೂನ್ ಅನ್ನ ಕೂಡ ಕೆ.ಕಲ್ಯಾಣ್ ಕೇಳಿದ್ದರು. ಒಳ್ಳೆ ಸಾಹಿತ್ಯವನ್ನೆ ಬರೆದುಕೊಂಡಿದ್ದರು. ಅದರ ರೆಕಾರ್ಡಿಂಗ್ ಕಥೆ ಇಂತಿದೆ ಓದಿ.
ಹಳ್ಳಿ ಲಾವಣಿಯಲ್ಲಿ ಲಾಲಿ ಹಾಡಿನ ಲಿರಿಕ್ಸ್ ಬೇರೆ ಇತ್ತು!
ಚಂದ ಚಂದಕ್ಕೆ ನೀನು ಚಂದ ಅಲ್ಲವೇನು? ಅಂತಲೇ ಇದೆ. ಇದರ ರೆಕಾರ್ಡಿಂಗ್ ಕೂಡ ಪ್ಲಾನ್ ಆಗಿತ್ತು. ಬೆಂಗಳೂರಿನ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ, ಗಾಯಕರಾದ ಚಿತ್ರಾ, ಎಸ್.ಪಿ.ಬಿ ಹೀಗೆ ಎಲ್ಲರೂ ಇದ್ದಾರೆ.
ಕೆ.ಕಲ್ಯಾಣ್ ಬರೆದ ಚಂದ ಚಂದಕ್ಕೆ ನೀನೆ ಚಂದ ಅಲ್ಲವೇನು ಹಾಡಿನ ರೆಕಾರ್ಡಿಂಗ್ ಶುರು ಆಗಿದೆ. ಇದನ್ನ ರೆಕಾರ್ಡಿಂಗ್ ಮಾಡೋಕೆ ಕುಳಿತ ಸಂಗೀತ ನಿರ್ದೇಶಕ ಇಳಯರಾಜಾ ಬಾಲು ಟೇಕ್ ಅಂತಲೇ ಹೇಳಿದ್ರು. ಆದರೆ ಆ ಕ್ಷಣವೇ ಸ್ಟಾಪ್ ಅಂತಲೇ ಹೇಳಿದ್ರು.
ಕೆ.ಕಲ್ಯಾಣ್ ಗೆ ಹೇಳಿದ್ರು, ಇದೇನಾ ನೀನು ಕೊಟ್ಟಿರೋ ಲಿರಿಕ್ಸ್ ಅಂತ ನೇರವಾಗಿಯೇ ಕೇಳಿ ಬಿಟ್ಟರು. ಅದನ್ನ ಕೇಳಿದ ಕೆ.ಕಲ್ಯಾಣ್ ಒಂದು ಅರೆಕ್ಷಣ ಗಾಬರಿ ಆದರು. ಈ ಲಿರಿಕ್ಸ್ ಅನ್ನ ಚೇಂಜ್ ಮಾಡಿ ಅಂತಲೇ ಹೇಳಿ ಬಿಟ್ಟರು.
ಆದರೆ ಈ ಒಂದು ರಿಲಿಕ್ಸ್ ಅನ್ನ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರೇ ಫೈನಲ್ ಮಾಡಿದ್ದರು. ಆದರೂ ಇಳಯರಾಜಾ ಇದನ್ನ ಬದಲಿಸೋಕೆ ಹೇಳಿದರು. ಆಗ ಕೆ.ಕಲ್ಯಾಣ್ ಏನು ಮಾಡೋದೇ ತಿಳಿಯಲ್ಲಿಲ್ಲ.
ಹಳ್ಳಿ ಲಾವಣಿಯಲಿ ಲಾಲಿ ಸಾಲು ಹುಟ್ಟಿದ್ದು ಹೇಗೆ?
ಚಂದ ಚಂದಕ್ಕೆ ನೀನೆ ಚಂದ ಅಲ್ಲವೇನು? ಅಂತಲೇ ಬರೆದಿದ್ದ ಕೆ.ಕಲ್ಯಾಣ್ ಯೋಚನೆ ಮಾಡಿರು. ಆದರೆ ಡೈರೆಕ್ಟರ್ ಒಂದಕ್ಷರವನ್ನೂ ಬದಲಿಸಬೇಡ ಅಂದಿದ್ದರು. ಇಳಯರಾಜಾ ನೋಡಿದ್ರೆ, ಬದಲಿಸು ಅಂತಿದ್ದಾರೆ. ಏನ್ ಮಾಡೋದು?
ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿಯೇ ಏನ್ ಮಾಡೋದು ಸರ್, ನನ್ನ ಈಗೀನ ಪರಿಸ್ಥಿತಿ ಅರ್ಥ ಆಗದೇ ಇರೋ ಲಾವಣಿ ಥರ ಆಗಿದೆ ಸರ್ ಅಂತಲೇ ಇಳಯರಾಜಾ ಮುಂದೆ ಅಂದ್ರು. ಆಗ ಲಾವಣಿ ಅನ್ನೋದನ್ನೆ ಇಟ್ಟುಕೊಂಡು ಬೇರೆ ಲಿರಿಕ್ಸ್ ಬರೆದು ಬಿಡು ಅಂದ್ರು.
ಆಗ ಸಿನಿಮಾ ಹಳ್ಳಿ ಕಥೆ ಆಗಿದ್ದರೆ ಲಾವಣಿ ಅಂತ ಬರೆಯಬಹುದಿತ್ತು ಅಂತಲೇ ಕೆ.ಕಲ್ಯಾಣ್ ಅವರಿಗೆ ಹೇಳಿದರು. ಚೆನ್ನಾಗಿದೆ ಅಲ್ವೇ ಹಳ್ಳಿ ಲಾವಣಿಯಲಿ ಅಂತಲೇ ಬರೆದು ಬಿಡು ಅಂದ್ರು. ಆಗಲೇ ಈ "ಹಳ್ಳಿ ಲಾವಣಿಯಲಿ ಲಾಲಿ ಸುವ ಲಾಲಿ" ಹಾಡು ಹುಟ್ಟಿದೆ.
ಹಳ್ಳಿ ಲಾವಣಿಯಲಿ ಹಾಡಿನ ಬಗ್ಗೆ ಡೈರೆಕ್ಟರ್ಗೆ ಬೇಸರ ಇತ್ತು!
ಹೌದು, ಈ ಹಾಡು ನಾನು ಫೈನಲ್ ಮಾಡಿದ್ದಲ್ಲ. ಇದು ನಾನು ಕೇಳಿದ್ದ ಹಾಡೇ ಅಲ್ಲ ಅಂತಲೇ ಡೈರೆಕ್ಟರ್ ಸುನಿಲ್ ಕುಮಾರ್ ದೇಸಾಯಿ ಅಂದು ಹೇಳಿದ್ದರು. ಒಲ್ಲದ ಮನಸಿನಲ್ಲಿಯೇ ಇದನ್ನ ಒಪ್ಪಿಕೊಂಡಿದ್ದರು. ಆದರೆ ಇದೇ ಹಾಡು ಹಿಟ್ ಆಯಿತು.
ಇದರ ಯಶಸ್ಸು ಕಂಡ ಡೈರೆಕ್ಟರ್ ಸುನಿಲ್ ಕುಮಾರ್ ದೇಸಾಯಿ, ನೇರವಾಗಿಯೇ ಕಲ್ಯಾಣ್ ಬಳಿ ಬಂದು ತಬ್ಬಿಕೊಂಡರು. ಹಾಡು ಹಿಟ್ ಆಗಿದ್ದಕ್ಕೆ ಶುಭ ಹಾರೈಸಿದ್ದರು. ಮನ ಬಿಚ್ಚಿ ಕೆ.ಕಲ್ಯಾಣ್ ಅವರಿಗೆ ಹಾರೈಸಿದರು. ಹೀಗೆ ಹಳ್ಳಿ ಲಾವಣಿಯಲಿ ಲಾಲಿ ಹಾಡು ಹುಟ್ಟಿತ್ತು.
ಇದನ್ನೂ ಓದಿ: Shivarajkumar-Basavaraj Bommai: ಸಿಎಂ ಭೇಟಿಯಾದ ಶಿವಣ್ಣ! ಏನು ಈ ಭೇಟಿಯ ರಹಸ್ಯ?
ಇದನ್ನ ಸ್ವತಃ ಕೆ.ಕಲ್ಯಾಣ್ ಹೇಳಿಕೊಂಡಿದ್ದಾರೆ. ತಮ್ಮದೇ ಒಂದು Premakavi K Kalyan ಹೆಸರಿನ ಯುಟ್ಯೂಬ್ ಚಾನಲ್ ಅನ್ನೂ ಮಾಡಿಕೊಂಡಿದ್ದಾರೆ. ಅಲ್ಲಿ ತಮ್ಮ ಆ ಹಳೆ ಕಥೆಗಳನ್ನ ಈಗ ಹೇಳಲಿಕ್ಕೆ ಶುರು ಮಾಡಿದ್ದಾರೆ. ಅದನ್ನ ಕೇಳ್ತಾ ಹೋದ್ರೆ ನಿಮಗೂ ಖುಷಿ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ