ಕನ್ನಡದಲ್ಲಿ (Kannada Movie) ಒಂದು ಟೈಮ್ ಇತ್ತು. ಬೇರೆ ಭಾಷೆಯ ಸಿನಿಮಾಗಳನ್ನ ಇಲ್ಲಿ ರಿಮೇಕ್ ಮಾಡಲಾಗುತ್ತಿತ್ತು. ಆದರೆ ಈಗ ಟೈಮ್ ಚೇಂಜ್ ಆಗಿದೆ. ಕನ್ನಡದ ಚಿತ್ರಗಳೇ ಬೇರೆ ಬೇರೆ ಭಾಷೆಯಲ್ಲಿ (Film Dub) ಡಬ್ ಆಗುತ್ತಿವೆ. ಅಲ್ಲಿಗೆ ಕನ್ನಡದ (Kannada Content) ಕಂಟೆಂಟ್ ಅದ್ಭುತ ಅನ್ನೋದು ಈಗ ಸಾಬೀತಾಗಿದೆ. ಅದರಂತೆ ಕನ್ನಡದ ಲವ್ ಮಾಕ್ಟೆಲ್ ಸಿನಿಮಾ ಭಾರೀ ಸುದ್ದಿ ಮಾಡಿತ್ತು. 2020 ರಲ್ಲಿ ತೆರೆಕಂಡು ಇದು ಸಖತ್ ಕ್ರೇಜ್ ಹುಟ್ಟಿಸಿತ್ತು. ಅದೇ ಚಿತ್ರ ಕನ್ನಡಿಗರ ದಿಲ್ ಕದ್ದು ಹೊಸ ಅಲೆ ಎಬ್ಬಿಸಿತ್ತು. ಇದು ಬೇರೆ ಭಾಷೆಯಲ್ಲೂ ರಿಮೇಕ್ ಆಗುತ್ತದೆ ಅನ್ನೋ ಅಂದಾಜು ಕೂಡ ಇತ್ತು. ಅದರಂತೆ ಇದೇ ಸಿನಿಮಾ 2 ವರ್ಷದ ಬಳಿಕ ರಿಮೇಕ್ (Remake Cinema) ಆಗಿ ತೆರೆಗೂ ಬರ್ತಿದೆ.
ಇದರ ಬಗ್ಗೆ ಇಲ್ಲೊಂದಿಷ್ಟು ಇಂಟ್ರಸ್ಟಿಂಗ್ ವಿಷಯ ಕೂಡ ಇವೆ. ಅದನ್ನ ಸ್ವತಃ ಡೈರೆಕ್ಟರ್ ನ್ಯೂಸ್-18 ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ.
ಟಾಲಿವುಡ್ನಲ್ಲಿ ಲವ್ ಮಾಕ್ಟೆಲ್-ಇದು ಸ್ಫೂರ್ತಿನಾ ರಿಮೇಕಾ?
ಕನ್ನಡದ ಲವ್ ಮಾಕ್ಟೆಲ್ ಯಾರಿಗೆ ಗೊತ್ತಿಲ್ಲ ಹೇಳಿ. ಚಿತ್ರದ ಪ್ರತಿ ಪಾತ್ರವೂ ಎಲ್ಲರಿಗೂ ಚಿರಪರಿಚತವಾಗಿವೆ. 2020 ರಲ್ಲಿ ತೆರೆ ಕಂಡ ಈ ಚಿತ್ರವನ್ನ ಚಿತ್ರದ ನಾಯಕ ನಟ ಡಾರ್ಲಿಗ್ ಕೃಷ್ಣ ನಿರ್ದೇಶನ ಮಾಡಿದ್ದರು. ಹಾಗೇ ರೆಡಿ ಆಗಿದ್ದ ಈ ಸಿನಿಮಾ ಇಡೀ ಸಿನಿಪ್ರೇಮಿಗಳನ್ನ ತನ್ನದೇ ರೀತಿಯಲ್ಲಿ ರಂಜಿಸಿತ್ತು.
ಕನ್ನಡಿಗರ ಈ ಸಿನಿಮಾದ ಹಾಡುಗಳೂ ತುಂಬಾ ಚೆನ್ನಾಗಿದ್ದವು. ಅದಕ್ಕೂ ಹೆಚ್ಚಾಗಿ ನಾಯಕ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಒಳ್ಳೆ ಕಥೆಯನ್ನ ಅಷ್ಟೇ ವಿಶೇಷವಾಗಿಯೇ ಹೇಳಿದ್ದರು. ಜೀವದ ಗೆಳತಿ ಮಿಲನಾ ನಾಗರಾಜ್ ಜೊತೆಗೆ ಈ ಚಿತ್ರದಲ್ಲಿ ಅಷ್ಟೇ ವಿಶೇಷವಾಗಿಯೇ ಅಭಿನಯಿಸಿದ್ರು.
ಟಾಲಿವುಡ್ನಲ್ಲಿ "ಗುರುತುಂದ ಸೀತಾಕಾಲಂ" ಸಿನಿಮಾ ರೆಡಿ
ಗುರುತುಂದ ಸೀತಾಕಾಲಂ ಸಿನಿಮಾ ಕನ್ನಡದ ಕಥೆಯನ್ನೆ ಹೊಂದಿದಿಯೇ? ಇದು ಲವ್ ಮಾಕ್ಟೆಲ್ ಚಿತ್ರದ ರೀಮೇಕಾ? ಇಲ್ಲವೇ ಲವ್ ಮಾಕ್ಟೆಲ್ ಚಿತ್ರದಿಂದ ಸ್ಪೂರ್ತಿಯನ್ನ ಪಡೆದಿದಿಯೇ.
ಈ ಒಂದು ಪ್ರಶ್ನೆ ಏಳಲು ಕಾರಣವೂ ಇದೆ. ಯಾಕೆಂದ್ರೆ, ಚಿತ್ರದ ನಿರ್ದೇಶಕ ಈ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ಸಿನಿಮಾ ಲವ್ ಮಾಕ್ಟೆಲ್ ರಿಮೇಕ್ ಸಿನಿಮಾ ಅಲ್ಲ. ಇದು ಕನ್ನಡದ ಲವ್ ಮಾಕ್ಟೆಲ್ ಚಿತ್ರದಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಿಕೊಂಡಿದ್ದಾರೆ.
ಗುರುತುಂದ ಸೀತಾಕಾಲಂ ಚಿತ್ರದ ಡೈರೆಕ್ಟರ್ ಯಾರು ಗೊತ್ತೇ?
ಕನ್ನಡದ ಪ್ರತಿಭಾವಂತ ನಟ-ನಿರ್ದೇಶಕ ನಾಗಶೇಖರ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಡೈರೆಕ್ಷನ್ ಮಾಡದೋದಲ್ಲದೇ, ನಿರ್ಮಾಪಕರಲ್ಲೊಬ್ಬರಾಗಿಯೂ ಇದ್ದಾರೆ. ಹೌದು, ಈ ಒಂದು ಸಿನಿಮಾವನ್ನ ಡೈರೆಕ್ಟರ್ ನಾಗಶೇಖರ್ ಚೆನ್ನಾಗಿಯೇ ತೆಗೆದಿರುತ್ತಾರೆ ಅಂತಲೇ ನಂಬಹುದು.
ಯಾಕೆಂದ್ರೆ, ಚಿತ್ರದ ನಿರ್ದೇಶಕ ನಾಗಶೇಖರ್ ಕಥೆ ಹೇಳೋದ್ರಲ್ಲಿ ನಿಸ್ಸೀಮರು. ಅದರಲ್ಲೂ ಹಿಟ್ ಕಥೆ ಸಿಕ್ಕಾಗ ಅದನ್ನ ಸುಮ್ನೆ ಬಿಡ್ತಾರಾ? ಅದ್ಭುತವಾಗಿಯೇ ಮಾಡಿರುತ್ತಾರೆ. ಅದರಂತೆ ಕನ್ನಡ ಲವ್ ಮಾಕ್ಟೆಲ್ ಸಿನಿಮಾದಿಂದ ಸ್ಪೂರ್ತಿ ಪಡೆದು ಒಂದ್ ಒಳ್ಳೆ ಸಿನಿಮಾ ಮಾಡಿರುತ್ತಾರೆ ಅಂತಲೇ ಹೇಳಬಹುದು.
ಗುರುತುಂದ ಸೀತಾಕಾಲಂ ಸಿನಿಮಾ ರಿಲೀಸ್ ಇವೆಂಟ್!
ಗುರುತುಂದ ಸೀತಾಕಾಲಂ ಚಿತ್ರದ ರಿಲೀಸ್ ಸನಿಹದಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿಯೇ ಚಿತ್ರದ ಪ್ರಚಾರಕ್ಕಾಗಿಯೇ ದೊಡ್ಡ ಇವೆಂಟ್ ಕೂಡ ಪ್ಲಾನ್ ಆಗಿದೆ. ಬೆಂಗಳೂರಿನ ಜಿಟಿ ಮಾಲ್ ನಲ್ಲಿಯೇ ಸಂಜೆ 7 ಕ್ಕೆ ದೊಡ್ಡ ಪ್ರಮಾಣದಲ್ಲಿಯೇ ಪ್ರೀ ರಿಲೀಸ್ ಇವೆಂಟ್ ಪ್ಲಾನ್ ಆಗಿದೆ.
ಗುರುತುಂದ ಸೀತಾಕಾಲಂ ಸಿನಿಮಾದಲ್ಲಿ ತಮನ್ನಾ ಭಾಟಿಯಾ!
ಟಾಲಿವುಡ್ನ ನಾಯಕಿ ನಟಿ ತಮನ್ನಾ ಭಾಟಿಯಾ ಈ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾಯಕ ನಟ ಸತ್ಯದೇವ್ ಕಂಚರಣ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ಕನ್ನಡದ ಟೆಕ್ನಿಷನ್ಗಳೇ ಕೆಲಸ ಮಾಡಿದ್ದಾರೆ.
ಇದೇ ಡಿ-09 ರಂದು ನಾಗಶೇಖರ್ ತೆಲುಗು ಚಿತ್ರ ರಿಲೀಸ್
ಕ್ಯಾಮೆರಾಮನ್ ಸತ್ಯ ಹೆಗಡೆ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಇದೇ ತಿಂಗಳು ಡಿಸೆಂಬರ್-09 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸೇರಿದಂತೆ ಹೈದ್ರಾಬಾದ್ ನಲ್ಲೂ ಗುರುತುಂದ ಸೀತಾಕಾಲಂ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Kichcha Sudeepa: ಹೊಂಬಾಳೆ ಜೊತೆ ಕಿಚ್ಚನ ಹೊಸ ಸಿನಿಮಾ ಪಯಣ! ಹಾಗಾದ್ರೆ ಇವರ ಮುಂದಿನ ಚಿತ್ರ ಯಾವ್ದು?
ಕರ್ನಾಟಕದಲ್ಲಿ ಗುರುತುಂದ ಸೀತಾಕಾಲಂ ಸಿನಿಮಾ 150 ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ. ಆಂಧ್ರ ಮತ್ತು ತೆಲಂಗಾಣ ಸೇರಿದಂತೆ ಒಟ್ಟು 600 ಕ್ಕೂ ಹೆಚ್ಚು ಥಿಯೇಟರ್ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗೆ ಕನ್ನಡದ ಲವ್ ಮಾಕ್ಟೆಲ್ ಸಿನಿಮಾದಿಂದಲೇ ಸ್ಪೂರ್ತಿ ಪಡೆದ ಗುರುತುಂದ ಸೀತಾಕಾಲಂ ಸಿನಿಮಾ ಅಲ್ಲಿ ಹೇಗೆ ಓಡುತ್ತದೆ ಅನ್ನೋ ಕುತೂಹಲ ಈಗಲೇ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ