ನೂರು ಕೋಟಿ ಕ್ಲಬ್​ ಸೇರಿ ಹೊಸ ಇತಿಹಾಸ ಬರೆದ ಕನ್ನಡದ ಕೆ.ಜಿ.ಎಫ್​

ಬಾಕ್ಸಾಫಿಸ್​ನಲ್ಲಿ ನೂರು ಕೋಟಿಯ ಗಡಿ ದಾಟಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಕೆ.ಜಿ.ಎಫ್​ನದ್ದಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶ-ವಿದೇಶ ಸೇರಿದಂತೆ ಕೆ.ಜಿ.ಎಫ್​ 101 ಕೋಟಿ ಬಾಚಿಕೊಂಡಿದೆ.

Anitha E | news18
Updated:December 26, 2018, 5:18 PM IST
ನೂರು ಕೋಟಿ ಕ್ಲಬ್​ ಸೇರಿ ಹೊಸ ಇತಿಹಾಸ ಬರೆದ ಕನ್ನಡದ ಕೆ.ಜಿ.ಎಫ್​
ಬಾಕ್ಸಾಫಿಸ್​ನಲ್ಲಿ ನೂರು ಕೋಟಿಯ ಗಡಿ ದಾಟಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಕೆ.ಜಿ.ಎಫ್​ನದ್ದಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶ-ವಿದೇಶ ಸೇರಿದಂತೆ ಕೆ.ಜಿ.ಎಫ್​ 101 ಕೋಟಿ ಬಾಚಿಕೊಂಡಿದೆ.
  • News18
  • Last Updated: December 26, 2018, 5:18 PM IST
  • Share this:
-ಅನಿತಾ .ಈ, 

ಸ್ಯಾಂಡಲ್​ವುಡ್​ನ ಸಿನಿಮಾ ಇಂದು ದೇಶ-ವಿದೇಶಗಳಲ್ಲಿ ದೂಳೆಬ್ಬಿಸುತ್ತಿದೆ. ಹೌದು ಕನ್ನಡ  ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದವರಿಗೆ ಮಾತೇ ಭಾರದಂತೆ ಮಾಡಿದೆ. ಅದೇ ಚಂದನವನದ 'ಕೆ.ಜಿ.ಎಫ್​' ಸಿನಿಮಾ.

ಇದನ್ನೂ ಓದಿ: Video: 'ಗೋಲ್ಡನ್​ ಸ್ಟೋರೀಸ್​ ಆಫ್​ ಕೆ.ಜಿ.ಎಫ್​': ಯಶ್​ ಗಡ್ಡ-ಹೇರ್​ಸ್ಟೈಲ್​ನಿಂದ ಆದ ರೀಟೇಕ್​ಗಳು ಎಷ್ಟು ಗೊತ್ತಾ..?

ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ತೆರೆಕಂಡು ಪರಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕೆ.ಜಿ.ಎಫ್​' ಜತೆಗೆ ತೆರೆಕಂಡ ದೊಡ್ಡ ನಟರ ಪರಭಾಷಾ ಸಿನಿಮಾಗಳು 'ಕೆ.ಜಿ.ಎಫ್'​ ಮುಂದೆ ಮಂಕಾಗಿವೆ.

ಸಿನಿಮಾ ಬಿಡುಗಡೆಯಾಗಿ ಆರು ದಿನಗಳಲ್ಲೇ  ಬಾಕ್ಸಾಫಿಸ್​ನಲ್ಲಿ ನೂರು ಕೋಟಿಗಳಿಸಿದೆ ನಮ್ಮ ಕನ್ನಡದ 'ಕೆ.ಜಿ.ಎಫ್'​.  ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆ.ಜಿ.ಎಫ್​ ಗಳಿಕೆಯಲ್ಲಿ ನೂರು ಕೋಟಿಯ ಗಡಿ ದಾಟಿದೆ.

ವರದಿಗಳ ಪ್ರಕಾರ ಕರ್ನಾಟಕದಲ್ಲಿ 62 ಕೋಟಿ, ಟಾಲಿವುಡ್​ನಲ್ಲಿ 7.3 ಕೋಟಿ, ಕಾಲಿವುಡ್​ನಲ್ಲಿ 4.5 ಕೋಟಿ, ಕೇರಳದಲ್ಲಿ 2 ಕೋಟಿ ಹಾಗೂ ವಿದೇಶದಲ್ಲಿ 5 ಕೋಟಿ ಹಣ ಮಾಡಿದ್ದು, ಒಟ್ಟಾರೆ 101.8 ಕೋಟಿ ಬಾಚಿಕೊಂಡಿದೆ  ಎಂದು ಸಿನಿಮಾ ವಿಮರ್ಶಕ ಹಾಗೂ ಮಾರುಕಟ್ಟೆ ತಜ್ಞ ರಮೇಶ್​ ಬಾಲಾ ಟ್ವೀಟ್​ ಮಾಡಿದ್ದಾರೆ.

 


'ಕೆ.ಜಿ.ಎಫ್​' ರಾಜ್ಯದಲ್ಲಿ ಸೋಮವಾರದ ಅಂತ್ಯಕ್ಕೆ 11.70 ಕೋಟಿ ಗಳಿಸಿದರೆ, ತೆಲುಗು ನೆದಲ್ಲಿ 1.90 ಕೋಟಿ, ತಮಿಳುನಾಡಿನಲ್ಲಿ0.90 ಕೋಟಿ ಹಾಗೂ ಕೇರಳದಲ್ಲಿ 0.40 ಕೋಟಿ ಎಂದು ರಮೇಶ್​ ಬರೆದುಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಕಿಂಗ್​ಖಾನ್ ಶಾರುಖ್​ ಸಿನಿಮಾವನ್ನೇ ಹಿಂದಿಕ್ಕಿರುವ 'ಕೆ.ಜಿ.ಎಫ್​' ಐದು ದಿನಗಳಲ್ಲಿ 16.45 ಕೋಟಿ ಗಳಿಸಿದೆ ಎಂದು ತರನ್​ ಆದರ್ಶ್ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿ: 38 ವರ್ಷಗಳ ನಂತರ ಮಾರುವೇಷದಲ್ಲಿ 'ಕೆ.ಜಿಎಫ್​' ಸಿನಿಮಾ ನೋಡಿದ ಜಗ್ಗೇಶ್​ ಚಿಂದಿ ಅಂದಿದ್ದೇಕೆ..?

ಸದ್ಯ ನೂರು ಕೋಟಿಯ ಕ್ಲಬ್​ ಸೇರಿದ ಹೆಗ್ಗಳಿಕೆಗೆ 'ಕೆ.ಜಿ.ಎಫ್'​ ಪಾತ್ರವಾಗಿದೆ. ಇನ್ನೂ ಒಂದು ವಾರಗಳ ಕಾಲ ಜನರು ರಜೆಯ ಮೂಡ್​ನಲ್ಲಿದ್ದು ವಾರಾಂತ್ಯಕ್ಕೆ 'ಕೆ.ಜಿ.ಎಫ್​' ಮತ್ತೊಂದು ದಾಖಲೆ ಬರೆಯುವುದರಲ್ಲಿ ಅನುಮಾನವೇ ಇಲ್ಲ.

First published: December 26, 2018, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading