ಗಮನ ಸೆಳೆದ ಮಲೆನಾಡಿನ ಸ್ಮಗ್ಲರ್​​ಗಳ ನೈಜ ಘಟನೆ ಆಧಾರಿತ ಚಿತ್ರ ಸಿನಿಮಾ Kargal Nights

ಡೇಂಜರಸ್ ಸ್ಮಗ್ಲರ್​​​ಗಳ ಸುತ್ತ ಕಾರ್ಗಲ್ ನೈಟ್ಸ್ ಕಥೆ ಸುತ್ತುತ್ತದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವಲ್ಲಿ ಸಕ್ಸಸ್ ಆಗಿದೆ.

ಸಿನಿಮಾದ ಕಲಾವಿದರು

ಸಿನಿಮಾದ ಕಲಾವಿದರು

  • Share this:
ಬಯೋಪಿಕ್‍ಗಳು (biopics) , ರಿಯಲಿಸ್ಟಿಕ್ ಸಿನಿಮಾಗಳು ಹಾಗೂ ನೈಜ ಘಟನೆ ಆಧಾರಿತ ಚಿತ್ರಗಳಿಗೆ ಎಲ್ಲ ಚಿತ್ರರಂಗಗಳಲ್ಲೂ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ಹೀಗಾಗಿಯೇ ಆಗೊಂದು ಈಗೊಂದು ಬಯೋಪಿಕ್‍ಗಳು ಬರುತ್ತಲೇ ಇರುತ್ತವೆ. ಅದರಿಂದ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ. ಆದರೆ ಸ್ಯಾಂಡಲ್‍ವುಡ್ (sandalwood) ಹೆಚ್ಚಾಗಿ ಬೆಂಗಳೂರು ಕೇಂದ್ರಿತ ಆಗಿರುವ ಕಾರಣ ದಂಡುಪಾಳ್ಯ ಸಿನಿಮಾ ಸರಣಿ, ಸೈನೈಡ್, ಡೆಡ್ಲಿ ಸೋಮ, ಅಟ್ಟಹಾಸ, ಕಿಲ್ಲಿಂಗ್ ವೀರಪ್ಪನ್... ಹೀಗೆ ಹಲವು ಚಿತ್ರಗಳು ಬಂದಿವೆ. ಆದರೆ ಇದೇ ಮೊದಲ ಬಾರಿಗೆ ಚಿತ್ರತಂಡವೊಂದು ಮಲೆನಾಡಿನ ಖತರ್ನಾಕ್ ಸ್ಮಗ್ಲರ್​​ಗಳ  ಘನಘೋರ ಇತಿಹಾಸವನ್ನು ತೆರೆದಿಡಲು ಮುಂದಾಗಿದೆ.

ಪಶ್ಚಿಮ ಘಟ್ಟದ ಕರಾಳ ಇತಿಹಾಸ

ಚಿತ್ರದ ಹೆಸರು ಕಾರ್ಗಲ್ ನೈಟ್ಸ್ (Kargal Nights). ಕಾರ್ಗಲ್, ವಿಶ್ವ ವಿಖ್ಯಾತ ಜೋಗ್ ಫಾಲ್ಸ್‍ನಿಂದ ಕೇವಲ 5 ಕಿಲೋಮೀಟರ್‍ನಲ್ಲಿರುವ ಸಣ್ಣ ಪಟ್ಟಣ. ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಗೆ ಸೇರಿದ ಪಟ್ಟಣ. ಶರಾವತಿ ನದಿಯ ತಟದಲ್ಲಿರುವ ಲಿಂಗನಮಕ್ಕಿ ಡ್ಯಾಮ್ ಹಾಗೂ ಚೌಡೇಶ್ವರಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಕೇವಲ 10 ಸಾವಿರ ಜನಸಂಖ್ಯೆ ಇರುವ ಈ ಪಶ್ಚಿಮ ಘಟ್ಟದ ಪಟ್ಟಣಕ್ಕೂ ಒಂದು ಕರಾಳ ಇತಿಹಾಸವಿದೆ. ಅದನ್ನೇ ಕಾರ್ಗಲ್ ನೈಟ್ಸ್ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ದೇವರಾಜ್ ಪೂಜಾರಿ.ಚಿತ್ರದ ಟ್ರೈಲರ್ ರಿಲೀಸ್

1990ರ ದಶಕದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಶ್ರೀಗಂಧದ ಕಳ್ಳರ ಹಾವಳಿ ಹೆಚ್ಚಾಗಿತ್ತು. ಸ್ಮಗ್ಲರ್ ಆಟಾಟೋಪ ಎಷ್ಟಿತ್ತು ಅಂದರೆ ಸ್ಥಳೀಯ ಗ್ರಾಮಸ್ಥರು ಮಾತ್ರವಲ್ಲ ಪೊಲೀಸರೂ ಅವರ ಸಹವಾಸಕ್ಕೆ ಹೋಗಲು ಹೆದರುತ್ತಿದ್ದರು. ಅಂತಹ ಡೇಂಜರಸ್ ಸ್ಮಗ್ಲರ್‍ಗಳ ಸುತ್ತ ಕಾರ್ಗಲ್ ನೈಟ್ಸ್ ಕಥೆ ಸುತ್ತುತ್ತದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವಲ್ಲಿ ಸಕ್ಸಸ್ ಆಗಿದೆ.ಕಾರ್ಗಲ್ ನೈಟ್ಸ್ ಮೂಲಕ ಹರ್ಶಿಲ್ ಕೌಶಿಕ್ ನಾಯಕನಾಗಿ ಸ್ಯಾಂಡಲ್‍ವುಡ್ ಡೆಬ್ಯೂ ಮಾಡುತ್ತಿದ್ದಾರೆ. ರಾಗ್ ಅರಸ್, ಪ್ರಶಾಂತ್ ಸಿದ್ದಿ, ಕಿಶೋರ್, ಲಾಸ್ಯ ನಾಗರಾಜ್, ಅಕ್ಷತಾ ಅಶೋಕ್, ಅಶ್ವಿನ್ ಹಾಸನ್, ಹರೀಶ್ ಭಟ್, ಸಂದೀಪ್ ಪರಶುರಾಮ್, ನಾಗರಾಜ್ ಬೈಂದೂರ್, ಶ್ರೀಗಂಧ್ ನಾಗ್, ರಾಜೇಶ್ ರಾಮಕೃಷ್ಣ, ನರೇಂದ್ರ ಕಬ್ಬಿನಾಲೆ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸುರೇಂದ್ರನಾಥ್ ಬಿ.ಆರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೋಷನ್ ಲೋಕೇಶ್ ಸಂಕಲನವಿದೆ. ವಿಶೇಷ ಅಂದರೆ ಚಿತ್ರತಂಡ ಸಾಕಷ್ಟು ರೀಸರ್ಚ್ ನಡೆಸಿ ಚಿತ್ರದ ಕಥೆಯನ್ನು ಹೆಣೆದಿದೆ.

ಇದನ್ನೂ ಓದಿ: Meghana Raj new Movie: ಚಿರು ಹುಟ್ಟುಹಬ್ಬದಂದು ಗುಡ್​​ನ್ಯೂಸ್​; ಪತಿಯ ಕನಸು ನನಸು ಮಾಡಲು ಹೊರಟ ಮೇಘನಾ ರಾಜ್

ಸಾಗರ ತಾಲ್ಲೂಕು ಹಾಗೂ ಕಾರ್ಗಲ್‍ನಲ್ಲಿ ಕಳ್ಳಸಾಗಾಣಿಕೆ ಮಾಫಿಯಾ ಬಗ್ಗೆ ಸಾಕ್ಷಿಗಳನ್ನು ಸಂಗ್ರಹಿಸಿ ಸಿನಿಮಾವನ್ನು ನೈಜತೆಗೆ ಹತ್ತಿರವಾಗಿಯೇ ನಿರ್ಮಿಸಿದ್ದಾರೆ. ಓಂಕಾರ್ ಪ್ರೊಡಕ್ಷನ್ಸ್ ಮತ್ತು ಕಾಳಿಕಾ ಪ್ರೊಡಕ್ಷನ್ಸ್ ಬ್ಯಾಣರ್‍ನ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಕಾರ್ಗಲ್ ನೈಟ್ಸ್ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

ಇನ್ನು ಇಂದು ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನವೇ ಮೇಘನಾ ರಾಜ್  ಹೊಸ ಸಿನಿಮಾ ಘೋಷಣೆಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಚಿರುಗೆ ಗೆಳೆಯರ ಜೊತೆ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಇತ್ತು. ಆದರೆ ಆ ಕನಸು ನನಸಾಗುವ ಮೊದಲೇ ಚಿರು ವಿಧಿವಶರಾದರು. ಆ ಕನಸನ್ನು ಗೆಳೆಯರ ಜೊತೆ ಸೇರಿ ನನಸು ಮಾಡುತ್ತಿದ್ದೇವೆ ಎಂದು ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.
Published by:Kavya V
First published: