• Home
  • »
  • News
  • »
  • entertainment
  • »
  • Kantara-Kabzaa: ಕಾಂತಾರ ನಂತರ ವಾಟ್ ನೆಕ್ಸ್ಟ್? ಬಾಲಿವುಡ್ ಕಣ್ಣು ಈಗ ಯಾವ ಚಿತ್ರದ ಮೇಲೆ?

Kantara-Kabzaa: ಕಾಂತಾರ ನಂತರ ವಾಟ್ ನೆಕ್ಸ್ಟ್? ಬಾಲಿವುಡ್ ಕಣ್ಣು ಈಗ ಯಾವ ಚಿತ್ರದ ಮೇಲೆ?

ಕಾಂತಾರ ಬಳಿಕ ಕಬ್ಜ ಚಿತ್ರದ ಮೇಲೆ ಬಾಲಿವುಡ್ ಕಣ್ಣು?

ಕಾಂತಾರ ಬಳಿಕ ಕಬ್ಜ ಚಿತ್ರದ ಮೇಲೆ ಬಾಲಿವುಡ್ ಕಣ್ಣು?

ಕಾಂತಾರ ಸಿನಿಮಾ ಆದ್ಮೇಲೆ ಕನ್ನಡ ಇಂಡಸ್ಟ್ರಿ, ಇಡೀ ನಾಡಿಗೆ-ಇಡೀ ದೇಶಕ್ಕೆ ಬೇರೆ ಯಾವ ಚಿತ್ರ ಕೊಡುತ್ತದೆ ಅಂತಲೇ ಕುತೂಹಲ ಇದೆ. ಆ ಒಂದು ಕುತೂಹಲಕ್ಕೆ ಈಗ ಉತ್ತರ ಸಿಕ್ಕಂತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಇಡೀ ದೇಶ ಮತ್ತು ವಿದೇಶದಲ್ಲೂ ಕಾಂತಾರ (Kantara Kamaal) ಕಮಾಲ್ ಮಾಡ್ತಾನೇ ಇದೆ. ಆಯಾ ರಾಜ್ಯದ ಮಾತೃ ಭಾಷೆಯಲ್ಲಿಯೇ ಕಾಂತಾರ (Kantara Release) ರಿಲೀಸ್ ಆಗಿ, ಎಲ್ಲರ ಹೃಯದಲ್ಲಿಯೇ ಕಾಂತಾರ ಸಿನಿಮಾದ ಕನವರಿಕೆ ಹೆಚ್ಚಿಸಿದೆ. ಥಿಯೇಟರ್​ಗೆ (Theater) ಒಂದು ಸಲ ಹೋಗಿ ಸಿನಿಮಾ ನೋಡುವುದೇ ಹೆಚ್ಚು. ಆದರೆ ಕಾಂತಾರ ಸಿನಿಮಾ ವಿಷಯದಲ್ಲಿ ಎಲ್ಲವೂ ಡಬಲ್, ಟ್ರಿಪಲ್ ಆಗಿದೆ. ಒಮ್ಮೆ ಕಾಂತಾರ ಸಿನಿಮಾ ನೋಡಿದವ್ರು, ಎರಡನೇ ಬಾರಿ, ಮೂರನೇ ಬಾರಿ,ನಾಲ್ಕನೆ ಬಾರಿ ಅಂತ ಸಿನಿಮಾ ನೋಡ್ತಾನೇ ಇದ್ದಾರೆ. ಹೀಗೆ ಮುನ್ನುಗ್ಗುತ್ತಿರುವ ಕಾಂತಾರ ಸಿನಿಮಾ ಬಾಲಿವುಡ್​ನಲ್ಲಿ (Bollywood) ಭಾರೀ ಯಶಸ್ಸು ಸಾಧಿಸಿದೆ. ಬಾಲಿವುಡ್ ವಿಶ್ಲೇಷಕರು ಈ ಸಿನಿಮಾ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ದಕ್ಷಿಣದ ಕಡೆಯಿಂದ ಮತ್ಯಾವ ಸಿನಿಮಾ ಬರ್ತಿದೆ ಅಂತಲೂ ದೃಷ್ಟಿ ನೆಟ್ಟಿದ್ದಾರೆ.


ಅಂದು ಕೆಜಿಎಫ್​-ಇಂದು ಕಾಂತಾರ-ಮುಂದೇ?


ಕನ್ನಡದಲ್ಲಿ ಕೆಜಿಎಫ್ ಸಿನಿಮಾ ಮಾಡಿದ ಮೋಡಿ ಇನ್ನೂ ಇದೆ. ಕೆಜಿಎಫ್ ಸಿನಿಮಾದ ಎರಡು ಭಾಗ ಈಗಾಗಲೇ ಬಂದಿವೆ. ಮೂರನೇ ಭಾಗ ಕೂಡ ಬರುತ್ತದೆ ಅಂತಲೇ ಮಾತುಗಳು ಇವೆ. ಅದು ಈಗಲೇ ಅಸಾಧ್ಯ ಅನ್ನೋ ಮಾತು ಇದೆ ಬಿಡಿ.


Kannada movie Kantara Rocks at Box Office After this Kabhza will be Release
ಬಿಟೌನ್​​ನಲ್ಲಿ ಕಾಂತಾರ ಕಮಾಲ್-50 ಕೋಟಿ ದಾಟಿದ ಕಲೆಕ್ಷನ್


ಆದರೆ ಈಗ ಕಾಂತಾರ ಸಿನಿಮಾ ಕನ್ನಡ ನಿರ್ದೇಶಕರಿಗೆ, ನಿರ್ಮಾಪಕರಿಗೆ ಮತ್ತೊಂದು ಹೊಸ ಭರವಸೆ ಮೂಡಿಸಿದೆ. ಒಳ್ಳೆ ಕಂಟೆಂಟ್ ಇದ್ರೆ ಸಿನಿಮಾ ಓಡುತ್ತದೆ ಅನ್ನುವ ನಂಬಿಕೆ ಹುಟ್ಟಿಸಿದೆ.


ಇದನ್ನೂ ಓದಿ: Kannadathi: ಭುವಿ ಕೈ ಹಿಡಿಯುತ್ತಲೇ ಕೊನೆಯುಸಿರೆಳೆದ್ರಾ ಅಮ್ಮಮ್ಮ? ಕನ್ನಡತಿ ಕುಟುಂಬದ ಕಣ್ಣೀರು!


ಹೀರೋ ಯಾರೂ? ಹೀರೋಯಿನ್ ಯಾರು? ಅನ್ನೋದು ಮ್ಯಾಟರ್​ ಆಗೋದಿಲ್ಲ ಅನ್ನೋದನ್ನ ಕನ್ನಡದ ಕಾಂತಾರ ತೋರಿಸಿ ಕೊಟ್ಟಿದೆ. ತುಳುನಾಡು ಮತ್ತು ಕನ್ನಡಕ್ಕೆ ಮಾತ್ರ ಪರಿಚಯ ಇದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಮಟ್ಟದ ಹೀರೋ ಆಗಿದ್ದಾರೆ.


ಬಿಟೌನ್​​ನಲ್ಲಿ ಕಾಂತಾರ ಕಮಾಲ್-50 ಕೋಟಿ ದಾಟಿದ ಕಲೆಕ್ಷನ್


ಹೌದು, ಬಾಲಿವುಡ್​ ನಲ್ಲಿ ಕಾಂತಾರ ಸಿನಿಮಾ ಓಡ್ತಾನೇ ಇದೆ. ಕಡಿಮೆ ಸಮಯದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಈಗ ಅದರ ಒಟ್ಟು ಓಟದ ಕಲೆಕ್ಷನ್ 50 ಕೋಟಿ ದಾಟಿಯಾಗಿದೆ. 75 ಕೋಟಿಯತ್ತೆ ಅಷ್ಟೇ ವೇಗದಲ್ಲಿಯೇ ಕಾಂತಾರ ಓಡ್ತಾನೇ ಇದೆ.


ಬಾಲಿವುಡ್​ನಲ್ಲಿ ಕಾಂತಾರ ಸಿನಿಮಾ ಆತಂಕ


ಕಾಂತಾರ ಸಿನಿಮಾದ ಓಟ ಬಾಲಿವುಡ್ ಸ್ಟಾರ್ ನಟರ ಚಿತ್ರ ನಿರ್ಮಾಪಕರಿಗೆ ನಡುಕ ಹುಟ್ಟುಹಾಕಿದೆ. ನಿರ್ದೇಶಕರು ತಲೆ ಕೆಡಸಿಕೊಳ್ಳುತ್ತಿದ್ದಾರೆ. ದಕ್ಷಿಣದ ಕಾಂತಾರ ಈ ಲೆವಲ್​ಗೆ ಓಡ್ತಿದೆ. ಇದೇ ರೀತಿ ಇದು ಹೋದ್ರೆ ನಮ್ಮ ಸಿನಿಮಾಗಳ ಗತಿ ಏನು? ಅನ್ನೋ ಮಟ್ಟಿಗೆ ಕಾಂತಾರ ನಡುಕ ಹುಟ್ಟಿಸಿದೆ.


ಇದರಿಂದ ಬಾಲಿವುಡ್​ ಮಂದಿಯಲ್ಲಿ ಈಗ ಇನ್ನೂ ಒಂದು ಪ್ರಶ್ನೆ ಕಾಡುತ್ತಿದೆ. ಈಗ ಕಾಂತಾರದ ಇಡೀ ಬಾಲಿವುಡ್ ಅನ್ನ ಆವರಿಸಿಕೊಂಡಿದೆ. ಕಾಂತಾರ ಬಳಿಕ ಬಾಲಿವುಡ್​ಗೆ ಮತ್ಯಾವ ದಕ್ಷಿಣದ ಸಿನಿಮಾ ಬಂದು ದಾಳಿ ಮಾಡುತ್ತದೆಯೋ ಅನ್ನುವ ಆತಂಕದಲ್ಲೂ ಬಾಲಿವುಡ್ ಮಂದಿ ಇದೆ.


Kannada movie Kantara Rocks at Box Office After this Kabhza will be Release
ಬಾಲಿವುಡ್​ನಲ್ಲಿ ಕಾಂತಾರ ಸಿನಿಮಾ ಆತಂಕ


ಕಾಂತಾರ ಬಳಿಕ ಕಬ್ಜ ಚಿತ್ರದ ಮೇಲೆ ಬಾಲಿವುಡ್ ಕಣ್ಣು?


ಈ ಒಂದು ಪ್ರಶ್ನೆ ಇದ್ದೇ ಇದೆ. ಕಾಂತಾರ ಸಿನಿಮಾ ಆದ್ಮೇಲೆ ಕನ್ನಡ ಇಂಡಸ್ಟ್ರಿ, ಇಡೀ ನಾಡಿಗೆ-ಇಡೀ ದೇಶಕ್ಕೆ ಬೇರೆ ಯಾವ ಚಿತ್ರ ಕೊಡುತ್ತದೆ ಅಂತಲೇ ಕುತೂಹಲ ಇದೆ. ಆ ಒಂದು ಕುತೂಹಲಕ್ಕೆ ಈಗ ಉತ್ತರ ಸಿಕ್ಕಂತಿದೆ.


ಈ ಒಂದು ಪ್ರಶ್ನೆ ಹಿನ್ನೆಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಆ ಒಂದು ಭರವಸೆ ಮೂಡಿಸಿದೆ. ಬಹು ಭಾಷೆಯಲ್ಲಿಯೇ ಕನ್ನಡದ ಕಬ್ಜ ರಿಲೀಸ್ ಆಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಕೂಡ ಇರೋ ಈ ಚಿತ್ರ ಕೂಡ ಬಹು ಕೋಟಿಯ ಸಿನಿಮಾನೇ ಆಗಿದೆ.


ಬಾಲಿವುಡ್​ ನಲ್ಲಿ ಕಬ್ಜ ಸಿನಿಮಾ ಟಾಕ್-ತರಣ್ ಆದರ್ಶ್ ಅಂದಾಜು


ಬಾಲಿವುಡ್​ ನಲ್ಲಿರೊ ಟ್ರೇಡ್​ ವಿಶ್ಲೇಷಕ ತರಣ್ ಆದರ್ಶ್ ಈಗಾಗಲೇ ಒಂದು ಅಂದಾಜು ಮಾಡಿದ್ದಾರೆ. ಕನ್ನಡದಲ್ಲಿ ಕೆಜಿಎಫ್, ಕೆಜಿಎಫ್-2, ಚಾರ್ಲಿ, ವಿಕ್ರಾಂತ್ ರೋಣ ಬಂದಿವೆ. ಕಾಂತಾರ ಅಂತೂ ಭಾರೀ ಕ್ರೇಜಿ ಹುಟ್ಟಿಸಿದೆ.


ಇದನ್ನೂ ಓದಿ: Actress Aditi Prabhudeva: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ?


ಇದಾದ್ಮೇಲೆ ದಕ್ಷಿಣದಿಂದ ಕಬ್ಜ ಸಿನಿಮಾ ಬರುತ್ತಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಇಲ್ಲಿದೆ ನೋಡಿ ಕಬ್ಜ ಚಿತ್ರದ ಪೋಸ್ಟರ್ ಅಂತಲೇ ಕಬ್ಜ ಚಿತ್ರದ ಹಿಂದಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.


ಕನ್ನಡದಲ್ಲಿ ಕಬ್ಜ ಈಗಲೇ ಭಾರೀ ಭರವಸೆ ಹುಟ್ಟಿಸಿದೆ. ಪ್ಯಾನ್ ಇಂಡಿಯಾ ಲೆವಲ್​ಗೆ ಇದು ಕೂಡ ರಿಲೀಸ್ ಆಗುತ್ತಿದೆ. ಕಾಂತಾರ, ಕೆಜಿಎಫ್, ಚಾರ್ಲಿ,ವಿಕ್ರಾಂತ್ ರೋಣ ರೀತಿ ಇದು ಕೂಡ ಬಾಲಿವುಡ್​ ನಲ್ಲಿ ಹೊಸ ಅಲೆ ಎಬ್ಬಿಸೋ ಭರವಸೆಯನ್ನ ಈಗ ಮೂಡಿಸಿದೆ.

First published: