Kabzaa Movie: ಒಂದು ದಿನ ಮೊದಲೇ ಕಬ್ಜ ಪ್ರೀಮಿಯರ್ ಶೋ! ಇಲ್ಲಿದೆ ಫುಲ್ ಡೀಟೆಲ್ಸ್

ಕೆನಡಾದಲ್ಲಿ ಒಂದು ದಿನ ಮುಂಚೇನೆ ಕಬ್ಜ ರಿಲೀಸ್

ಕೆನಡಾದಲ್ಲಿ ಒಂದು ದಿನ ಮುಂಚೇನೆ ಕಬ್ಜ ರಿಲೀಸ್

ಕೆನಡಾದಲ್ಲಿ ಕಬ್ಜ ಚಿತ್ರದ ಇನ್ನೂ ಒಂದು ಕೆಲಸ ಆಗುತ್ತಿದೆ. ಮಾರ್ಚ್​-17 ರಂದು ರಾಜ್ಯ-ದೇಶ-ವಿದೇಶ ಹೀಗೆ ಎಲ್ಲೆಡೆ ಕಬ್ಜ ಸಿನಿಮಾ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಕಬ್ಜ ಸಿನಿಮಾದ ಒಂದು ವಿಶೇಷ ಶೋ ಕೂಡ ಇದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸುದೀಪ್ (Kabzaa Movie) ಅಭಿನಯದ ಕಬ್ಜ ಸಿನಿಮಾದ ರಿಲೀಸ್ ದಿನಗಳು ಇನ್ನು ದೂರ ಇದೆ. ಆದರೆ ಅದಕ್ಕೂ ಮೊದಲೇ ಚಿತ್ರದ ಅಬ್ಬರ ಶ್ರುತಿ ಹಿಡಿಯುತ್ತಿದೆ. ಸಿನಿಮಾ ಪ್ರೇಮಿಗಳಲ್ಲಿ ಕಬ್ಜ ಒಂದು ಸಣ್ಣ ವೈಬ್ರೇಷನ್ ಕ್ರಿಯೇಟ್ ಮಾಡುತ್ತಿದೆ. ರವಿ ಬಸ್ರೂರು ಸಂಗೀತದಲ್ಲಿ ಆ (Kannada Movie) ಒಂದು ಫೀಲ್ ಕೊಡುತ್ತಿದೆ. ಸಿನಿಮಾ ಪ್ರೇಮಿಗಳು ಚಿತ್ರದ ಟೈಟಲ್​ ಟ್ರ್ಯಾಕ್​ ಕೇಳಿ ದೊಡ್ಡ ಭರವಸೆಯನ್ನ ಮೂಡಿಸಿಕೊಂಡಂತೆ ಕಾಣುತ್ತಿದೆ. ಕಬ್ಜ (Kazaa Movie Premiere Show) ಸಿನಿಮಾದ ಇತರ ಹಾಡುಗಳು ಯಾವಾಗ ಅನ್ನೋರಿಗೆ ಉತ್ತರ ಕೂಡ ಸಿಕ್ಕಿದೆ. ಇದೇ ಫೆಬ್ರವರಿ-26 ರಂದು ಶಿಡ್ಲಘಟ್ಟದಲ್ಲಿ ಆಡಿಯೋ ದೊಡ್ಡ ಮಟ್ಟದಲ್ಲಿ ರಿಲೀಸ್ (Kabzaa Auido Soon) ಆಗುತ್ತಿವೆ.  ಇದಕ್ಕೂ ಮೊದಲೇ ಇಂಟ್ರಸ್ಟಿಂಗ್ ಸುದ್ದಿ ಹೊರ ಬಿದ್ದಿದೆ.


ಕನ್ನಡ ಸಿನಿಮಾಗಳು ದೂರದ ವಿದೇಶಗಳಲ್ಲೂ ರಿಲೀಸ್ ಆಗುತ್ತಿವೆ. ಕನ್ನಡ ಜನತೆ ಎಲ್ಲಿದ್ದಾರೆ ಅಲ್ಲಿ ಕನ್ನಡ ಸಿನಿಮಾಗಳನ್ನ ತಲುಪಿಸೋ ಕೆಲಸ ಆಗುತ್ತಿದೆ. ಹಾಗೆ ಮುಂದೆ ಬಂದೋರಿಗೆ ಕನ್ನಡ ಸಿನಿಮಾ ನಿರ್ಮಾಪಕರು ಸಪೋರ್ಟ್ ಮಾಡುತ್ತಿದ್ದಾರೆ.


Kannada Movie Kabzaa Premiere Show in Canada on March-16
ಕೆನಡಾದಲ್ಲಿ ಕಬ್ಜ ಸಿನಿಮಾ ಪ್ರಿಮಿಯರ್ ಶೋ


ಕೆನಡಾದಲ್ಲೂ ಈಗ ಕನ್ನಡ ಸಿನಿಮಾ ರಿಲೀಸ್
ಕನ್ನಡ ಸಿನಿಮಾ ಪ್ರೇಮಿಗಳು ದೇಶ-ವಿದೇಶದಲ್ಲಿ ಎಲ್ಲಡೆ ಇದ್ದಾರೆ. ಆದರೆ ಅವರಿಗೆ ಸಿನಿಮಾಗಳು ತಲುಪುತ್ತಿರಲಿಲ್ಲ. ಕೆಜಿಎಫ್​ ಚಿತ್ರ ಬಂದ್ಮೇಲೆ ಅದು ಎಲ್ಲರಿಗೂ ತಲುಪಿತು ನೋಡಿ. ಇದಾದ್ಮೇಲೆ ಕನ್ನಡದ ಕಾಂತಾರ ಆ ದಾರಿಯನ್ನ ಇನ್ನಷ್ಟು ವಿಸ್ತಾರ ಮಾಡಿದೆ.


ಕನ್ನಡದ ಸಿನಿಮಾಗಳು ಕೆನಡಾದಲ್ಲಿ ರಿಲೀಸ್ ಆಗೋದು ಕಡಿಮೆ. ಆದರೆ ಈಗ ಅದು ಸಾಧ್ಯವಾಗುತ್ತಿದೆ. ಅಲ್ಲಿಯ ಕನ್ನಡ ಸಿನಿಪ್ರೇಮಿಗಳಿಗೆ ಕನ್ನಡ ಸಿನಿಮಾಗಳು ಸಿಗುತ್ತಿವೆ.




ಆ ಲೆಕ್ಕದಲ್ಲಿ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರದ ಸಿನಿಮಾ ಕೆನಡಾದಲ್ಲಿ ರಿಲೀಸ್ ಆಗುತ್ತಿದೆ. ಇದೇನೋ ಮೊನ್ನೆಯ ವಿಷಯ ಆಯಿತು. ಆದರೆ ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಕೂಡ ಇದೇ ಕೆನಡಾ ದೇಶದಲ್ಲಿ ರಿಲೀಸ್ ಆಗುತ್ತಿದೆ.


ಕೆನಡಾದಲ್ಲಿ ಕಬ್ಜ ಸಿನಿಮಾ ಪ್ರೀಮಿಯರ್ ಶೋ


ಕೆನಡಾದಲ್ಲಿ ಕಬ್ಜ ಚಿತ್ರದ ಇನ್ನೂ ಒಂದು ಕೆಲಸ ಆಗುತ್ತಿದೆ. ಮಾರ್ಚ್​-17 ರಂದು ರಾಜ್ಯ-ದೇಶ-ವಿದೇಶ ಹೀಗೆ ಎಲ್ಲೆಡೆ ಕಬ್ಜ ಸಿನಿಮಾ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಕಬ್ಜ ಸಿನಿಮಾದ ಒಂದು ವಿಶೇಷ ಶೋ ಕೂಡ ಇದೆ.


ಕೆನಡಾ ದೇಶದ ವಿಲೇಜ್ ಗ್ರೂಪ್ ಈ ಒಂದು ಸಿನಿಮಾವನ್ನ ಇಲ್ಲಿ ಒಂದು ದಿನದ ಮುಂಚೇನೆ ರಿಲೀಸ್ ಮಾಡುತ್ತಿದೆ. ಅದನ್ನ ಪ್ರೀಮಿಯರ್ ಶೋ ಅಂತಲೇ ಈಗಾಗಲೇ ಸುದ್ದಿ ಮಾಡಲಾಗುತ್ತಿದೆ.


ಕೆನಡಾದಲ್ಲಿ ಒಂದು ದಿನ ಮುಂಚೇನೆ ಕಬ್ಜ ರಿಲೀಸ್


ಕೆನಡಾ ದೇಶದಲ್ಲಿ ಕಬ್ಜ ಸಿನಿಮಾವನ್ನ ಇಲ್ಲಿಯ ಜನ ಒಂದು ದಿನ ಮುಂಚೆ ಅಂದ್ರೆ, ಮಾರ್ಚ್​-16 ರಂದು ನೋಡಬಹುದಾಗಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ಕೂಡ ಹೊರ ಬಂದಿದೆ.


ಸೋಷಿಯಲ್ ಮೀಡಿಯಾದಲ್ಲೂ ಈ ಪ್ರೀಮಿಯರ್ ಶೋ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಸಿನಿಮಾ ಪ್ರೇಮಿಗಳು ಒಂದು ದಿನದ ಮುಂಚೇನೆ ಕನ್ನಡದ ಕಬ್ಜ ಚಿತ್ರದ ಎಂಜಾಯ್ ಮಾಡಬಹುದಾಗಿದೆ.


Kannada Movie Kabzaa Premiere Show in Canada on March-16
ಕೆನಡಾದಲ್ಲೂ ಈಗ ಕನ್ನಡ ಸಿನಿಮಾ ರಿಲೀಸ್


ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ


ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ತಮ್ಮ ಈ ಚಿತ್ರವನ್ನ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಈ ವರ್ಷ ಕನ್ನಡದಲ್ಲಿ ಈ ಒಂದೇ ಒಂದು ಸಿನಿಮಾ ಇದೆ. ಹಾಗಾಗಿಯೇ ಈ ಚಿತ್ರದ ಬಗ್ಗೆ ತುಂಬಾನೇ ನಿರೀಕ್ಷೆ ಇದೆ.


ಇದನ್ನೂ ಓದಿ: Lakshana: ಎಲ್ಲರನ್ನು ಆಟವಾಡಿಸ್ತಿದ್ದ ಡೆವಿಲ್ ಜುಟ್ಟು ಶ್ವೇತಾ ಕೈನಲ್ಲಿ, ಸಿಎಸ್‍ಗೆ ಸತ್ಯ ಗೊತ್ತಾಗುತ್ತಾ?


ದಿನೇ ದಿನೇ ಚಿತ್ರದ ಹೊಸ ಹೊಸ ಸುದ್ದಿಗಳು ಹೊರ ಬೀಳುತ್ತಿವೆ. ಸಿನಿಮಾ ಪ್ರೇಮಿಗಳಲ್ಲೂ ರಿಯಲ್ ಸ್ಟಾರ್, ಕಿಚ್ಚ ಸುದೀಪ್ ಚಿತ್ರ ಪ್ರೇಮಿಗಳಿಗೂ ಸಿನಿಮಾ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಮೂಡಿದೆ.

First published: