ರಿಯಲ್ ಸ್ಟಾರ್ ಉಪೇಂದ್ರ (Most Expected Kannada Movie) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಈಗಲೇ ಭಾರೀ ಸೌಂಡ್ ಮಾಡುತ್ತಿದೆ. ಕನ್ನಡದ ಈ (Kabzaa Expected Movie) ಚಿತ್ರದ ರಿಲೀಸ್ ಡೇಟ್ ಕೂಡ ಇನ್ನೂ ರಿಲೀಸ್ ಆಗಿಲ್ಲ. ಆಗಲೇ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳ (2023 Most Expected Movie) ಪಟ್ಟಿಯಲ್ಲಿ ಬಂದಿದೆ. ಈ ಪಟ್ಟಿಯಲ್ಲಿ ಹಿಂದಿ ಚಿತ್ರಗಳೇ ಹೆಚ್ಚಿವೆ. ಆದರೆ ಕನ್ನಡದ ಏಕೈಕ ಕಬ್ಜ ಇಲ್ಲಿ ಫುಲ್ ಹವಾ ಮಾಡಿದೆ. ಹಾಗೆ ಈ ಲಿಸ್ಟ್ ಯಾರು (Kabzaa in IMDb List) ಮಾಡಿದ್ದು ಅಂತಿರೋ? ಇದು IMDBb ಮಾಡಿರೋ ಪಟ್ಟಿನೇ ಆಗಿದೆ. ಇದನ್ನ ತಿಳಿದ ನಿರ್ದೇಶಕ ಆರ್. ಚಂದ್ರು ಏನ್ ಹೇಳಿದ್ದಾರೆ ಗೊತ್ತೇ? ತಮ್ಮ ಖುಷಿಯನ್ನ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹಂಚಿಕೊಂಡಿದ್ದಾರೆ.
IMDb ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪ್ಪಿ ಕಬ್ಜ ಸಿನಿಮಾ!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಬಹು ನಿರೀಕ್ಷೆಯ ಸಿನಿಮಾನೆ ಆಗಿದೆ. ಕನ್ನಡದ ಮಟ್ಟಿಗೆ ಕಳೆದ ವರ್ಷ 2022 ರಲ್ಲಿ ಎರಡ್ಮೂರು ಸಿನಿಮಾಗಳಿದ್ದವು. ಚಾರ್ಲಿ, ವಿಕ್ರಾಂತ್ ರೋಣ ಇದ್ದವು. ಆ ಬಳಿಕ ಕಾಂತಾರ ಅತಿ ದೊಡ್ಡ ದಾಖಲೆಯನ್ನೆ ಮಾಡಿದೆ.
2023ರಲ್ಲಿ ಒಂದಷ್ಟು ಸಿನಿಮಾಗಳು ಇವೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ KD ಚಿತ್ರವೂ ಈಗಲೇ ಕಿಚ್ಚು ಹಚ್ಚಿದೆ. ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರವೂ ನಿರೀಕ್ಷೆ ಹೆಚ್ಚಿಸಿದೆ. ಆದರೆ ಇದೆಲ್ಲಕ್ಕೂ ಹೆಚ್ಚಾಗಿ ಅತಿ ಹೆಚ್ಚು ಗಮನ ಸೆಳೆದ ಚಿತ್ರಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಕೂಡ ಇದೆ.
IMDb ಪಟ್ಟಿಯಲ್ಲಿ ಕಬ್ಜ ಒಂದೇ ಕನ್ನಡದ ಸಿನಿಮಾ
ಕನ್ನಡದ ಕಬ್ಜ ಸಿನಿಮಾ ಎಲ್ಲ ರೀತಿಯಿಂದಲೇ ಗಮನ ಸೆಳೆದಿದೆ. IMDb ಪಟ್ಟಿಯಲ್ಲಿ ಸಿನಿಮಾ ಬರೋದು ಅಂದ್ರೆ ಸುಮ್ನೆ ಅಲ್ಲ ಬಿಡಿ. ಎಲ್ಲಡೆ ಅಳೆದು ತೂಗಿ ಲೆಕ್ಕ ಹಾಕಿ ಎಲ್ಲ ಡೇಟ ಬೇಸ್ ಕಲೆಕ್ಟ್ ಮಾಡಿಯೇ ಒಂದು ಪಟ್ಟಿ ರೆಡಿ ಆಗಿರುತ್ತದೆ. ಅದಕ್ಕೇನೆ IMDb ಪಟ್ಟಿ ಬಗ್ಗೆ ಒಂದು ನಂಬಿಕೆನೂ ಇದೆ.
ಕಾಂತಾರ ಸಿನಿಮಾ ಕೂಡ ಈ ಒಂದು IMDb ಪಟ್ಟಿಯಲ್ಲಿತ್ತು. ಅದನ್ನ ಇಡೀ ಟೀಮ್ ಎಂಜಾಯ್ ಮಾಡಿರೋದು ಗೊತ್ತೇ ಇದೆ. ಅದೇ ರೀತಿ IMDb ಈಗೊಂದು ಲಿಸ್ಟ್ ಮಾಡಿದೆ. ಈ ಲಿಸ್ಟ್ ಏನಪ್ಪ ಅಂದ್ರೆ, 2023 ರಲ್ಲಿ ಬರ್ತಿರೋ ಬಹು ನಿರೀಕ್ಷಿತ ಸಿನಿಮಾಗಳೇ ಆಗಿದೆ.
ಕನ್ನಡದ ಕಬ್ಬ 2023ರ ಬಹು ನಿರೀಕ್ಷಿತ ಸಿನಿಮಾ
ಇದನ್ನ ನಾವು ಹೇಳುತ್ತಿಲ್ಲ, IMDb ಪಟ್ಟಿನೇ ಇದನ್ನ ಹೇಳುತ್ತಿದೆ. ಆದರೆ ಈ ಒಂದು ಪಟ್ಟಿಯಲ್ಲಿ ಕನ್ನಡದ ಬೇರೆ ಸಿನಿಮಾಗಳಿಲ್ಲ. ಪರ ಭಾಷೆಯ ಒಟ್ಟು 20 ಸಿನಿಮಾಗಳಿವೆ. ಅದರಲ್ಲಿ 7 ಸ್ಥಾನದಲ್ಲಿಯೇ ಕನ್ನಡದ ಕಬ್ಜ ಸಿನಿಮಾ ಇದೆ.
IMDb ಪಟ್ಟಿಯಲ್ಲಿ ಕಬ್ಜ ಸಿನಿಮಾ; ಏನಂತಾರೆ ಆರ್.ಚಂದ್ರು?
ಕಬ್ಜ ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ತುಂಬಾ ಖುಷಿಯಲ್ಲಿಯೇ ಇದ್ದಾರೆ. ನಾನು ನನ್ನ ಕೆಲಸವನ್ನ ಮಾಡಿಕೊಂಡು ಹೋಗುತ್ತಿದ್ದೇನೆ. ನಮ್ಮ ಸಿನಿಮಾ IMDb ಪಟ್ಟಿಯಲ್ಲಿ ಬಂದಿದೆ ಅನ್ನೋದೇ ದೊಡ್ಡ ಖುಷಿ ತಂದಿದೆ. IMDb ಅನ್ನೋದು ಸುಮ್ನೆ ಅಲ್ಲ. ಎಲ್ಲವನ್ನೂ ಅಳೆದು ತೂಗಿಯೇ ಪಟ್ಟಿ ಮಾಡುತ್ತಾರೆ ಎಂದು ಆರ್.ಚಂದ್ರು ಹೇಳಿದ್ದಾರೆ.
ಆರ್.ಚಂದ್ರು ಸಿನಿಮಾ ಜರ್ನಿಯಲ್ಲಿ ಇಲ್ಲಿವರೆಗೂ ಚಿತ್ರಗಳು ಕರ್ನಾಟಕದಲ್ಲಿಯೇ ಹೆಚ್ಚು ಸದ್ದು ಮಾಡಿದ್ದವು. ಅದು ಬಿಟ್ಟರೇ ಟಾಲಿವುಡ್ನಲ್ಲೂ ಗಮನ ಸೆಳೆದಿದ್ದವು. ಆದರೆ ಕನ್ನಡದ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಹೋಗುತ್ತಿದೆ.
ಇದನ್ನೂ ಓದಿ: Pathaan Trailer: ಕೊನೆಗೂ ರಿಲೀಸ್ ಆಯ್ತು ಪಠಾಣ್ ಟ್ರೇಲರ್! ಆ್ಯಕ್ಷನ್ ಸೀನ್ನಲ್ಲಿ ಶಾರುಖ್ ಮಿಂಚಿಂಗ್
ಇದರಿಂದ ಆರ್.ಚಂದ್ರು ದೊಡ್ಡಮಟ್ಟದಲ್ಲಿಯೇ ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ದೊಡ್ಡ ಭರವಸೆಯನ್ನೂ ಇಟ್ಟುಕೊಂಡಿದ್ದಾರೆ. ಆ ನಿಟ್ಟಿನಲ್ಲಿಯೇ ಚಿತ್ರ ಮಾಡಿರೋ ಖುಷಿಯಲ್ಲಿಯೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ