Kabzaa: ಏಳು ಭಾಷೆಗಳಲ್ಲಿ ಕಬ್ಜ ಡಬ್ಬಿಂಗ್; ಟೀಸರ್ ರಿಲೀಸ್ ಯಾವಾಗ?

ಕನ್ನಡದ ಬಹುನಿರೀಕ್ಷಿತ ಕಬ್ಜ ಚಿತ್ರವು ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಲದೇ ಚಿತ್ರವು ಮಲ್ಟಿ ಸ್ಟಾರರ್​ ಚಿತ್ರವಾಗಿದ್ದು, ಉಪೇಂದ್ರ ಜೊತೆ 2ನೇ ಬಾರಿ ನಟ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.

ಕಬ್ಜ

ಕಬ್ಜ

  • Share this:
ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್​ ಉಪೇಂದ್ರ (Real Star Upendra) ಅಭಿನಯದ 'ಕಬ್ಜ' (Kabza) ಚಿತ್ರ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಇದೀಗ ಚಿತ್ರದ ಶೂಟಿಂಗ್ ಕಾರ್ಯಗಳು ಅಂತಿಮ ಹಂತಕ್ಕೆ ಬಂದಿದ್ದು, ಚಿತ್ರದ ಡಬ್ಬಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯೂಸಿಯಾಗಿದೆ. ವಿಶ್ವದಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಇದೀಗ ಬರೋಬ್ಬರಿ 7 ಬಾಷೆಗಳಲ್ಲಿ ಡಬ್ಬಿಂಗ್ ಮಾಡುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಲದೇ ಚಿತ್ರವು ಮಲ್ಟಿ ಸ್ಟಾರರ್​ ಚಿತ್ರವಾಗಿದ್ದು, ಉಪೇಂದ್ರ ಜೊತೆ 2ನೇ ಬಾರಿ ನಟ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.

7 ಭಾಷೆಗಳಲ್ಲಿ ಚಿತ್ರ ಬಿಡುಗಡೆ:

ಇನ್ನು, ಕನ್ನಡ ಚಿತ್ರಂಗದಲ್ಲಿಯೇ ಇದೇ ಮೊದಲ ಬಾರಿಗೆ ವಿನೂತನವಾಗಿ ಚಿತ್ರವೊಂದು 7 ಭಾಷೆಗಳಲ್ಲಿ ಡಬ್ಬಿಂಗ್ ಆಗುತ್ತಿದ್ದು, 7 ಭಾಷೆಗಳಲ್ಲಿ ಡಬ್ಬಿಂಗ್ ಆಗುತ್ತಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು 7 ಬಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಮೇಲೆ ಭಾರತ ಚಿತ್ರರಂಗದಲ್ಲಿ ಹಾಗೂ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ.

1940ರ ಕಾಲಘಟ್ಟದ ಕಥೆ:

1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತು ಫಿದಾ ಕಬ್ಜಾಗೆ ಆಗಿದ್ದಾರೆ. ಭಾರತ ದೇಶವೇ ತಿರುಗಿ ನೋಡುವ ಸಿನಿಮಾ ಇದಾಗಲಿದೆ. "ಕಬ್ಜ" ಚಿತ್ರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ. ಚಿತ್ರದ ಟೀಸರ್ ನೋಡುವ ಕಾತುರದಲ್ಲಿದ್ದೇವೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸಿನಿಪ್ರೇಕ್ಷಕರು ಚಂದ್ರು ಅವರನ್ನು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: Ramya: 777 ಚಾರ್ಲಿಯನ್ನು ಮೆಚ್ಚಿಕೊಂಡ ಮೋಹಕ ತಾರೆ; ರಕ್ಷಿತ್ ಲೈಫ್​ನಲ್ಲಿ ಶುರುವಾಗುತ್ತಾ ಮತ್ತೆ ರಮ್ಯ ಚೈತ್ರಕಾಲ?

ಆರ್.​ ಚಂದ್ರು ನಿರ್ದೇಶನದ ಪ್ಯಾನ್​ ಇಂಡಿಯಾ ಸಿನಿಮಾ:

ನಿರ್ದೇಶಕ ಆರ್. ಚಂದ್ರು (R.Chandru) ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ 'ಕಬ್ಜ' ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಅಲ್ಲದೆ, ಈ ಸಿನಿಮಾ ಏಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮೂಲಗಳ ಪ್ರಕಾರ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಏಕಕಾಲದಲ್ಲಿ ಶೂಟಿಂಗ್ ಮಾಡಿ, ಮಿಕ್ಕ ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಗಳಿವೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: Chiranjeevi Sarja: ಚಿರು ಸರ್ಜಾ ಇಲ್ಲದೇ ಕಳೀತು 2 ವರ್ಷ! ಮೇಘನಾ ಎಷ್ಟು ಮಿಸ್ ಮಾಡಿಕೊಳ್ತಾರೆ ಅಂತ ಪದಗಳಲ್ಲಿ ವರ್ಣಿಸೋದು ಅಸಾಧ್ಯ

ಚಿತ್ರದ ಟೀಸರ್ ರಿಲೀಸ್ ಯಾವಾಗ?:

ಇನ್ನು, ಅಭಿಮಾನಿಗಳು ಚಿತ್ರದ ಅಫ್​ಡೇಟ್​ ನೀಡುವಂತೆ ನಿರ್ದೇಶಕ ಆರ್​. ಚಂದ್ರು ಅವರಲ್ಲಿ ಕೇಳಿಕೊಳ್ಳುತ್ತಿದ್ದು, ಚಿತ್ರದ ಟೀಸರ್ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ದೇಶಕರು,‘ ನಮ್ಮ ಕನ್ನಡ ಚಿತ್ರರಂಘ ಇದೀಗ ದೊಡ್ಡ ಮಟ್ಟಕ್ಕೆ ಬೆಳದೆದಿದೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ನಾವು ಚಿತ್ರದ ಟೀಸರ್ ರಿಲೀಸ್ ಮಾಡಬೇಕಿದೆ. ಈಗಷ್ಟೇ ಚಿತ್ರದ ಡಬ್ಬಿಂಗ್ ಕಾರ್ಯಗಳು ಆರಂಭವಾಗಿದ್ದು, ಡಬ್ಬಿಂಗ್ ಮುಗಿದ ತಕ್ಷಣ ಟೀಸರ್ ಬಿಡುಗಡೆ ಮಾಡುತ್ತೇವೆ‘ ಎಂದು ಹೇಳಿದ್ದಾರೆ.
Published by:shrikrishna bhat
First published: