ಡಾಲಿ ಧನಂಜಯ್ ಅಭಿನಯದ ಹೊಯ್ಸಳ (Hoysala Special Song) ಸಿನಿಮಾದ ಅಜನೀಶ್ ಲೋಕನಾಥ್ ಸಂಗೀತದ ಬ್ಯಾರೇನ ಐತಿ (Hoysala Movie Song Release) ಹಾಡಲ್ಲಿ ಸಾಕಷ್ಟು ವಿಶೇಷತೆಗಳಿವೆ. ಆ ವಿಶೇಷತೆಗಳ ಒಂದು ಸ್ಟೋರಿ ಇಲ್ಲಿದೆ. ಇದರಲ್ಲಿ ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಇನ್ನೂ ಒಂದು (Daali Movie Song Release) ಪ್ರಯೋಗ ಮಾಡಿದ್ದಾರೆ. ಯೋಗರಾಜ್ ಭಟ್ರ ಸಾಹಿತ್ಯದಲ್ಲೂ ಹೊಸ ಹೊಳಪು ಕೇಳಿಸುತ್ತಿದೆ. ಇದರ ಒಂದು ವಿಶ್ಲೇಷಣೆ ಇಲ್ಲಿದೆ ಓದಿ.
ಹೊಯ್ಸಳ ಚಿತ್ರದ ಹೊಸ ಹಾಡು ಅದು ಬ್ಯಾರೇನ ಐತಿ
ಗುರುದೇವ್ ಹೊಯ್ಸಳ ಸಿನಿಮಾ ಮತ್ತೊಂದು ಹಾಡು ರಿಲೀಸ್ ಆಗಿದೆ. ಮೊನ್ನೆ ಮೊನ್ನೆ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇಡೀ ಸಿನಿಮಾದ ಝಲಕ್ ಈ ಒಂದು ಟ್ರೈಲರ್‌ನಲ್ಲಿ ಸಿನಿ ಪ್ರೇಕ್ಷಕರಿಗೆ ಸಿಕ್ಕಿದೆ. ಅದಕ್ಕೂ ಮೊದಲು ಬಂದ ಸೂಪರ್ ಹಾಡು ಅರೆ ಇದು ಎಂತಹ ಭಾವನೆ ಎಲ್ಲರ ಮನಸ್ಸು ಕದ್ದಿದೆ.
ಗುರುದೇವ್ ಹೊಯ್ಸಳ ಚಿತ್ರದ ಟೈಟಲ್ ಟ್ರ್ಯಾಕ್ ಕೂಡ ಸೂಪರ್ ಆಗಿಯೇ ಇದೆ. ಇಡೀ ಚಿತ್ರದ ನಾಯಕ ಗುರುದೇವ್ ಹೊಯ್ಸಳ ಪಾತ್ರವದ ಅಷ್ಟೂ ಚಿತ್ರಣ ಈ ಒಂದು ಹಾಡಲ್ಲಿ ಸಿಗುತ್ತದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿಯೇ ಹೊಯ್ಸಳ ಸಿನಿಮಾದ ಹಾಡುಗಳು ಅದ್ಭುತವಾಗಿಯೇ ಮೂಡಿ ಬಂದಿವೆ.
ಉತ್ತರ ಕರ್ನಾಟಕ ಭಾಷೆಯಲ್ಲಿ ಹೊಯ್ಸಳ ಹಾಡು ಬರೆದ ಭಟ್ರು
ಹೊಯ್ಸಳ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಯೋಗರಾಜ್ ಭಟ್ ಬರೆದ ಈ ಗೀತೆ ತುಂಬಾ ವಿಶೇಷವಾಗಿಯೇ ಇದೆ. ಬ್ಯಾರೇನ ಐತಿ ಅಂತಲೇ ಸಾಗೋ ಈ ಗೀತೆ ವಿಶೇಷವಾಗಿಯೇ ಗಮನ ಸೆಳೆಯುವಂತಿದೆ. ಇದನ್ನ ಅಷ್ಟೇ ವಿಶೇಷವಾಗಿಯೇ ಹಾಡಲಾಗಿರೋದು ಇಲ್ಲಿ ಗಮನಕ್ಕೆ ಬರುತ್ತದೆ.
ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋ ಅಜನೀಶ್ ಲೋಕನಾಥ್ ಈ ಗೀತೆಯನ್ನ ಹಾಡಿದ್ದಾರೆ. ಯೋಗರಾಜ್ ಭಟ್ ಅವರ ಸಾಲುಗಳು ಅಜನೀಶ್ ಕಂಠಸಿರಿಯಲ್ಲಿ ಬ್ಯಾರೇ ರೀತಿನೇ ಕೇಳ್ತಾ ಇವೆ. ಆ ಸಾಲುಗಳು ಹೀಗಿವೆ ನೋಡಿ.
ಹುಟ್ಟಿ ಸಾಯೋದಲ್ಲ ಒಟ್ಟು
ಬಾಳೆವೂ ಅದು ಬ್ಯಾರೇನೆ ಐತಿ
ಕಷ್ಟಾ ಸುಃಖ ಒಟ್ಟಿಗೆ ಅದಾವು
ಯಾಕಾರ ಅಳ್ತಿನಿ ಯಾಕಾರ ನಗ್ತಿ
ಸಂಕ್ಟ ಸಂತೋಷಾ ಬ್ಯಾರೆ ಬ್ಯಾರೇ ಐತಿ
ಯೋಗರಾಜ್ ಭಟ್ರು ಬರೆದ ಹಾಡು ಬ್ಯಾರೆನೆ ಐತಿ ನೋಡ್ರಿ!
ಹೀಗೆ ಸಾಗೋ ಈ ಗೀತೆಯಲ್ಲಿ ಯೋಗರಾಜ್ ಭಟ್ ಬದುಕಿನ ಅಸಲಿ ಸತ್ಯ ಹೇಳುವ ಕೆಲಸ ಆಗಿದೆ. ಡೈರೆಕ್ಟರ್ ಅಜನೀಶ್ ಲೋಕನಾಥ್ ಕೂಡ ಇದನ್ನ ಅಷ್ಟೇ ಸುಂದರವಾಗಿಯೇ ಹಾಡಿದ್ದಾರೆ. ಈ ಲಿರಿಕಲ್ ವಿಡಿಯೋ ಈಗ ರಿಲೀಸ್ ಆಗಿದೆ.
ಡಾಲಿ ಧನಂಜಯ್ ಈ ಒಂದು ಹಾಡಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಮೇಲೆ ಆದ ಅಟ್ಯಾಕ್ ನಿಂದ ದುಃಖದಲ್ಲಿರೋ ಹಾಗೆನೂ ಕಾಣಿಸುತ್ತಾರೆ. ಖಡಕ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳನ ಜೀವನದಲ್ಲಿ ಏನೋ ಆಗಿದೆ ಅನ್ನೋದನ್ನ ಈ ಒಂದು ಗೀತೆ ಹೇಳುವಂತೆಯೇ ಇದೆ.
ಇದನ್ನೂ ಓದಿ: Ramya-Shivanna: ರಮ್ಯಾ 'ಉತ್ತರಕಾಂಡ'ದಲ್ಲಿ ಶಿವಣ್ಣ! ಯಾರಿಗೆ ಜೋಡಿ ಆಗ್ತಾರೆ ಮೋಹಕ ತಾರೆ?
ಡಾಲಿ ನಟನೆಯ ಗುರುದೇವ್ ಹೊಯ್ಸಳದ ವಿಶೇಷ
ವಿಜಯ್ ಎನ್ ನಿರ್ದೇಶನದ ಈ ಸಿನಿಮಾ ಇದೇ ತಿಂಗಳು 30 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗಿದೆ. ಡಾಲಿ ಧನಂಜಯ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅಮೃತಾ ಅಯ್ಯಂಗಾರ್, ಕೆಜಿಎಫ್ ಅವಿನಾಶ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ