ಕನ್ನಡದಲ್ಲಿ ಅನೇಕ ಹಿಟ್ ಚಿತ್ರಗಳು ಬಂದಿವೆ. ಅದೃಷ್ಟ ನೋಡಿ, ಈ ಚಿತ್ರಗಳು ಡಿಸೆಂಬರ್ನಲ್ಲಿಯೇ ರಿಲೀಸ್ (Kannada Film December Secret) ಆಗಿವೆ. ಪ್ರತಿ ವರ್ಷ ಬರುವ ಡಿಸೆಂಬರ್ ತಿಂಗಳು ನಿಜಕ್ಕೂ ಲಕ್ಕೀನಾ? ಈ ತಿಂಗಳಲ್ಲಿ ಬಂದ ಸಿನಿಮಾಗಳೆಲ್ಲ (Kannada Hit Cinema) ಹಿಟ್ ಆಗಿವೆ. ಇದಕ್ಕೆ ಕಾರಣ ಏನಿರಬಹುದು? ಕನ್ನಡದಲ್ಲಿ ಇಲ್ಲಿವರೆಗೂ ಬಂದಿರೋ ಚಿತ್ರಗಳಲ್ಲಿ ಡಿಸೆಂಬರ್ನಲ್ಲಿ (Kannada Movie December Secret) ತೆರೆ ಕಂಡ ಸಿನಿಮಾಗಳೇ ಕ್ಲಿಕ್ ಆಗಿದೆ. ಆದರೆ ಕಾಂತಾರ ಸಿನಿಮಾ ವಿಷಯದಲ್ಲಿ ಡಿಸೆಂಬರ್ ಏನೂ ಇಲ್ಲ ಬಿಡಿ. ಅದರಂತೆ ಕನ್ನಡದ ಇನ್ನು ಹಲವು ಸಿನಿಮಾಗಳು ಇದೇ ತಿಂಗಳು ರಿಲೀಸ್ ಆಗಿ (Kannada Super Hit Cinema) ಸೂಪರ್ ಹಿಟ್ ಆಗಿವೆ. ಹಾಗೆ ಬಂದ ಸಿನಿಮಾಗಳು ಹಳೆ ನೆನಪುಗಳನ್ನ ಮೆಲಕು ಹಾಕುತ್ತಿವೆ.
ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆದ ಚಿತ್ರ ಹಿಟ್
ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆಗುತ್ತವೆ. ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬರುತ್ತವೆ. ಆದರೆ ಪ್ರತಿ ವರ್ಷ, ವರ್ಷದ ಕೊನೆ ತಿಂಗಳು ಡಿಸೆಂಬರ್ ತಿಂಗಳಲ್ಲಿ ಸಿನಿಮಾಗಳ ರಿಲೀಸ್ ಅಬ್ಬರ ಜಾಸ್ತಿ ಇರುತ್ತದೆ.
ಹೊಸ ವರ್ಷ ಬರುವ ಮುಂಚೇನೆ ಸಿನಿಮಾಗಳನ್ನ ರಿಲೀಸ್ ಮಾಡ್ಬೇಕು ಅಂತಲೇ ಸಿನಿಮಾ ಟೀಮ್ ಪ್ಲಾನ್ ಮಾಡಿಕೊಳ್ಳುತ್ತವೆ. ಅದರಂತೆ ಡಿಸೆಂಬರ್ ತಿಂಗಳಲ್ಲಿ ಚಿತ್ರಗಳು ರಿಲೀಸ್ ಆಗುತ್ತವೆ. ನಿರೀಕ್ಷೆ ಮೀರಿದ ಸಂಖ್ಯೆಯಲ್ಲೂ ಸಿನಿಮಾಗಳು ತೆರೆಗೆ ಬರುತ್ತವೆ.
ಡಿಸೆಂಬರ್ ತಿಂಗಳಲ್ಲಿ ಲಕ್ಕಿನಾ ಅನ್ ಲಕ್ಕಿನಾ.?
ಈ ಒಂದು ಮಾತು ಇದ್ದೇ ಇದೆ. ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆದ ಚಿತ್ರಗಳು ಹಿಟ್ ಆಗಿದ್ದು ಇದೆ. ಹಾಗೆ ಬಂದು ಹೀಗೆ ಹೋದ ಉದಾಹರಣೆಗಳೂ ಸಾಕಷ್ಟಿವೆ. ಕಾರಣ, ಈ ತಿಂಗಳಲ್ಲಿ ಒಂದೇ ವಾರಕ್ಕೆ 6 ಇಲ್ಲವೇ 8 ಸಿನಿಮಾಗಳು ರಿಲೀಸ್ ಆಗುತ್ತವೆ.
ಇದು ಪ್ರತಿ ವಾರವೂ ಇರುತ್ತದೆ. ಇದರಿಂದ ಸಿನಿಮಾಗಳು ಥಿಯೇಟರ್ನಲ್ಲೂ ನಿಲ್ಲೋದಿಲ್ಲ. ಬರ್ತಾವೆ ಹೋಗ್ತಾನೇ ಇರುತ್ತವೆ. ಆದರೆ ಕನ್ನಡದ ಹಿಟ್ ಚಿತ್ರಗಳೆಲ್ಲ ಡಿಸೆಂಬರ್ ತಿಂಗಳಲ್ಲಿ ಬಂದು ಸೂಪರ್ ಡೂಪರ್ ಹಿಟ್ ಆಗಿರೋದು ಕೂಡ ಅಷ್ಟೇ ಸತ್ಯವಾಗಿದೆ.
ನಾಗರಹಾವು, ಮಿಸ್ಟರ್&ಮಿಸೆಸ್ ರಾಮಾಚಾರಿ, ರಾಕಿ, ಕಿರಿಕ್ ಪಾರ್ಟಿ!
ಕನ್ನಡದ ಸೂಪರ್ ಸ್ಟಾರ್ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಡಿಸೆಂಬರ್ ತಿಂಗಳಲ್ಲಿಯೇ ರಿಲೀಸ್ ಆಗಿತ್ತು. 1972, 29 ರಂದು ಈ ಚಿತ್ರ ಬಂದಿತ್ತು. ಇದು ಸೂಪರ್ ಹಿಟ್ ಆಗಿ ಇತಿಹಾಸವನ್ನೆ ಸೃಷ್ಟಿಸಿದೆ. ಈಗ ಈ ಸಿನಿಮಾ ರಿಲೀಸ್ ಆಗಿ 50 ವರ್ಷ ಪೂರ್ಣವಾಗಿದೆ.
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರವೂ ಡಿಸೆಂಬರ್ ತಿಂಗಳಲ್ಲಿಯೇ ರಿಲೀಸ್ ಆಗಿತ್ತು. 2014 ಡಿಸೆಂಬರ್-25 ರಂದು ಈ ಚಿತ್ರ ರಿಲೀಸ್ ಆಗಿತ್ತು. ಹಾಗೆ ತೆರೆ ಕಂಡ ಈ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಅಂದ್ಹಾಗೆ ಈ ಚಿತ್ರ ರಿಲೀಸ್ ಆಗಿ ಈಗ 8 ವರ್ಷಗಳೇ ಕಳೆದಿವೆ.
ರಾಕಿಂಗ್ ಸ್ಟಾರ್ ಯಶ್ ರಾಕಿ ಡಿಸೆಂಬರ್ ತಿಂಗಳಲ್ಲಿಯೇ ರಿಲೀಸ್
ರಾಕಿ ಭಾಯ್ ಯಶ್ ಅಭಿನಯದ ರಾಕಿ ಚಿತ್ರವೂ 2008 ಡಿಸೆಂಬರ್-25 ರಂದು ರಿಲೀಸ್ ಆಗಿತ್ತು. ರಾಕಿ ಅನ್ನೋ ಹೆಸರನ್ನ ಯಶ್ಗೆ ಕೊಟ್ಟ ಈ ಚಿತ್ರ ರಿಲೀಸ್ ಆಗಿ ಈಗ 14 ವರ್ಷಗಳೇ ಉರುಳಿ ಹೋಗಿವೆ.
ಕಿರಿಕ್ ಪಾರ್ಟಿ ಹಿಟ್-ಇದು ಡಿಸೆಂಬರ್ನಲ್ಲಿ ರಿಲೀಸ್!
ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಕೂಡ 2016 ಡಿಸೆಂಬರ್-30 ರಂದು ರಿಲೀಸ್ ತೆರೆಕಂಡಿತ್ತು. ಹಾಗೆ ಈ ಚಿತ್ರ ಕೂಡ ಸೂಪರ್ ಹಿಟ್ ಆಯಿತು. ನಟ-ನಿರ್ದೇಶಕ ರಿಷಬ್ ಶೆಟ್ರಿಗೆ ಒಳ್ಳೆ ಹೆಸರು ತಂದುಕೊಡ್ತು. ಅದೇ ರೀತಿ ಈ ಚಿತ್ರ ತೆರೆಗೆ ಬಂದು ಈಗ 6 ವರ್ಷಗಳೆ ಕಳೆದಿದೆ.
ಇದನ್ನೂ ಓದಿ: Pushpa 2: ಮತ್ತಷ್ಟು ಏರಿಕೆಯಾಗಿದೆ ಪುಷ್ಪ ಸಿನಿಮಾ ಬಜೆಟ್! ಒಟ್ಟು ಮೊತ್ತ ಎಷ್ಟು ಗೊತ್ತಾ?
ಹೀಗೆ ಕನ್ನಡದಲ್ಲಿ ಇನ್ನೂ ಅನೇಕ ಸಿನಿಮಾಗಳು ಬಂದಿವೆ. ಅವು ತಮ್ಮದೆ ರೀತಿಯಲ್ಲಿಯೇ ಹವಾ ಕ್ರಿಯೇಟ್ ಮಾಡಿವೆ. ಈ ವರ್ಷ ಅಂದ್ರೆ 2022 ಡಿಸೆಂಬರ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ರಿಲೀಸ್ ಆಗಿದೆ.
ಒಳ್ಳೆ ರೆಸ್ಪಾನ್ಸ್ ಕೂಡ ಪಡೆದಿದೆ. ಡಾಲಿ ಧನಂಜಯ್ ಅಭಿನಯದ ಜಮಾಲಿಗುಡ್ಡ ಚಿತ್ರವೂ ತೆರೆ ಕಂಡಿದೆ. ಇವು ಕೂಡ ತಮ್ಮದೇ ರೀತಿಯಲ್ಲಿ ಈಗ ಮುನ್ನುಗ್ಗುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ