Bhrame: ರಿಲೀಸ್ ಮುನ್ನವೇ 10 ಸಾವಿರ ಟಿಕೆಟ್ ಸೇಲ್: ಇದು 'ಭ್ರಮೆ'ಯಲ್ಲ ಸತ್ಯ ಘಟನೆ! 

ಭ್ರಮೆ ಸಿನಿಮಾ ಹಾರರ್ ಕಮ್ ಕಾಮಿಡಿ ಚಿತ್ರವಾಗಿದ್ದು, ನಿರ್ದೇಶಕ ಚರಣ್​ ರಾಜ್​ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಓಟಿಟಿಯಲ್ಲಿ ಭ್ರಮೆ ಸಿನಿಮಾ ರಿಲೀಸ್ ಆಗಲಿದೆ. ಇನ್ನು, ಓಟಿಟಿಯಲ್ಲಿ ಆನ್​ಲೈನ್​ ಮೂಲಕವೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ಒಟಿಟಿ ವೇದಿಕೆಯಲ್ಲಿ ರಿಲೀಸ್​ ಆಗಲಿದೆ ಭ್ರಮೆ ಸಿನಿಮಾ

ಒಟಿಟಿ ವೇದಿಕೆಯಲ್ಲಿ ರಿಲೀಸ್​ ಆಗಲಿದೆ ಭ್ರಮೆ ಸಿನಿಮಾ

  • Share this:
ಕೊರೊನಾ ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳು ಬಂದ್ ಆಗಿ ಆರೂವರೆ ತಿಂಗಳೇ ಕಳೆದಿವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಓಟಿಟಿ ಅಥವಾ ಡಿಜಿಟಲ್ ವೇದಿಕೆಗೆ ಇನ್ನಿಲ್ಲದ ಬೇಡಿಕೆ ಹುಟ್ಟಿಕೊಂಡಿದೆ. ಫ್ರೆಂಚ್ ಬಿರಿಯಾನಿ, ಲಾ ಸಿನಿಮಾಗಳು ಥಿಯೇಟರ್​ಗೆ ಬಾರದೆ ನೇರವಾಗಿ ಓಟಿಟಿಯಲ್ಲೇ ರಿಲೀಸ್ ಆಗಿವೆ. ಅದರ ಬೆನ್ನಲ್ಲೇ ಭ್ರಮೆ ಎಂಬ ಮತ್ತೊಂದು ಸಿನಿಮಾ ಓಟಿಟಿ ರಿಲೀಸ್​ಗೆ ರೆಡಿಯಾಗಿದೆ. ಹೌದು, ಚರಣರಾಜ್ ನಿರ್ದೇಶನದ ಭ್ರಮೆ ಸಿನಿಮಾ ಸದ್ಯ ಓಟಿಟಿ ರಿಲೀಸ್​ಗೆ ದಿನಗಣನೆ ಮಾಡುತ್ತಿದೆ. ಅದಕ್ಕೆಂದೇ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದು, ಲಕ್ಕಿ ಡಿಪ್ಅನ್ನೂ ನಡೆಸುತ್ತಿದೆ. ಇತ್ತೀಚೆಗಷ್ಟೇ 10 ಸಾವಿರ ಟಿಕೆಟ್ ಮಾರಾಟವಾದ ಸಂಭ್ರಮದಲ್ಲಿ ಚಿತ್ರತಂಡ ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸಿತ್ತು. ಭ್ರಮೆ... ಕುಂದಾಪುರದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ. ಹೀಗಾಗಿಯೇ ಕುಂದಾಪುರ ಭಾಷೆಯ ಸೊಗಡೂ ಈ ಚಿತ್ರದಲ್ಲಿದೆ. ಹಿರಿ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ಭ್ರಮೆ ಮೂಲಕ ನಾಯಕನಾಗಿ ಸ್ಯಾಂಡಲ್​ವುಡ್​ನಲ್ಲಿ ಡೆಬ್ಯೂ ಮಾಡುತ್ತಿದ್ದಾರೆ. ಅವರಿಗೆ ನಾಯಕಿಯರಾಗಿ ಅಂಜನಾ ಗೌಡ ಹಾಗೂ ಇಶಾನಾ ಕಾಣಿಸಿಕೊಂಡಿದ್ದಾರೆ. 

ಭ್ರಮೆ ಸಿನಿಮಾ ಹಾರರ್ ಕಮ್ ಕಾಮಿಡಿ ಚಿತ್ರವಾಗಿದ್ದು, ನಿರ್ದೇಶಕ ಚರಣ್​ ರಾಜ್​ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಓಟಿಟಿ ಮೂಲಕ ನಮ್ಮ ಫ್ಲಿಕ್ಸ್​ನಲ್ಲಿ ಭ್ರಮೆ ಸಿನಿಮಾ ರಿಲೀಸ್ ಆಗಲಿದೆ. ಇನ್ನು, ಓಟಿಟಿಯಲ್ಲಿ ಆನ್​ಲೈನ್​ ಮೂಲಕವೇ ಟಿಕೆಟ್ ಬುಕ್ ಮಾಡಬಹುದಾಗಿದೆ.

OTT Release, Bhrame Movie, Kannada Movie Bhrame, Kannada Movie Bhrame is ready for OTT release
ಭ್ರಮೆ ಸಿನಿಮದ ಆಡಿಯೋ ರಿಲೀಸ್​ ಕಾರ್ಯಕ್ರಮದ ಚಿತ್ರ


ಈ ಸಿನಿಮಾದ ಒಂದು ಟಿಕೆಟ್​ ಬೆಲೆ 90 ರೂಪಾಯಿ. ಕೇವಲ ಎರಡು ವಾರಗಳಲ್ಲಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಖರೀದಿಸಿದ್ದು, ಭ್ರಮೆ ಚಿತ್ರತಂಡದ ಸಂಭ್ರಮವನ್ನು ಡಬಲ್ ಆಗಿಸಿದೆ. ವಿಶೇಷ ಅಂದ್ರೆ ಆ ಹತ್ತು ಸಾವಿರ ಟಿಕೆಟ್​ಗಳಲ್ಲಿ ಲಕ್ಕಿ ಡಿಪ್ ಮೂಲಕ ಕೆಲವರಿಗೆ ಕಾರು, ಬುಲೆಟ್, ಸ್ಕೂಟರ್, ಟ್ಯಾಬ್ ಹೀಗೆ ನಾನಾ ಬಗೆಯ ಬಹುಮಾನಗಳನ್ನೂ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಟ್ಯಾಬ್ ಮತ್ತುಸ್ಕೂಟರ್​ಗಳನ್ನು ಲಕ್ಕಿ ಡಿಪ್ ಗೆದ್ದವರಿಗೆ ತಲುಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬುಲೆಟ್ ಮತ್ತು ಕಾರ್ ಗೆದ್ದವರನ್ನೂ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಿದೆ ಭ್ರಮೆ ಟೀಮ್.

ಇದನ್ನೂ ಓದಿ: ರಿಲೀಸ್​ ಆಯ್ತು ಅಕ್ಷಯ್​ ಅಭಿನಯದ ಬೆಲ್​ಬಾಟಮ್​ ಸಿನಿಮಾದ ಟೀಸರ್​..!

ವಿಶೇಷ ಅಂದರೆ ಚಿಕ್ಕಮಗಳೂರಿನ ರಾಣಿ ಝರಿ ಎಂಬಲ್ಲಿ ಇದುವರೆಗೂ ಯಾರೂ ಶೂಟ್ ಮಾಡಿರಲಿಲ್ಲ. ಅಂತಹ ಜಾಗದಲ್ಲಿ ಭ್ರಮೆ ಚಿತ್ರತಂಡ ಹೋಗಿ ಸುಂದರ ತಾಣದಲ್ಲಿ ಹಾಡೊಂದನ್ನು ಚಿತ್ರೀಕರಿಸಿದೆಯಂತೆ.
Published by:Anitha E
First published: