ಕನ್ನಡದಲ್ಲಿ ಲವ್ ಮಾಕ್ಟೆಲ್ (Love Mocktail) ಚಿತ್ರ ಬರೋ ಮುಂಚೆ ಅನೇಕ ಚಿತ್ರಗಳು ಬಂದಿದ್ದವು. ಪ್ರೀತಿಯ ವಿವಿಧ ರೀತಿ, ಅದರ ತೀವ್ರತೆ ಎರಡನ್ನೂ ಹೇಳಿದ್ದರು. ಲವ್ ಮಾಕ್ಟೆಲ್ (Love Mocktail-2 Movie) ಸಿನಿಮಾ ಅದನ್ನೆಲ್ಲ ಮೀರಿ ರೆಡಿ ಆಗಿತ್ತು. ಪ್ರೀತಿಯಲ್ಲಿ ಹೀಗೂ ಸಾಧ್ಯತೆ ಇದೆ ಅನ್ನೋದನ್ನ ಈ ಚಿತ್ರ ತಿಳಿಸಿಕೊಟ್ಟಿತ್ತು. ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ನಾಯಕ ಸತ್ತು ಹೋದ್ರೆ ಇಷ್ಟಪಡೋದಿಲ್ಲ. ಇಲ್ಲಿ (Darling Krishna Movie) ನಾಯಕ ಡಾರ್ಲಿಂಗ್ ಕೃಷ್ಣ ಸಾಯೋದಿಲ್ಲ. ಆದರೆ ನಾಯಕಿ ಸತ್ತು ಹೋಗುತ್ತಾಳೆ. ಅದೇ ಪಾಯಿಂಟ್ ಸಿನಿ ಪ್ರೇಮಿಗಳ ಹೃದಯದಲ್ಲಿ ಅಗಾಧ ಪ್ರೀತಿಯನ್ನ ಹುಟ್ಟಿಸಿಬಿಟ್ಟಿತ್ತು. ಹಾಗೆ ಈ ಲವ್ ಮಾಕ್ಟೆಲ್ ಚಿತ್ರ ಬಂದು ಮೂರು ವರ್ಷ ಕಳೆದಿದೆ.
ಆದರೆ ಲವ್ ಮಾಕ್ಟೆಲ್-2 (Love Mocktail-2 Cinema) ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಪೂರ್ಣ ಆಗಿದೆ.
ಇದೇ ಖುಷಿಯಲ್ಲಿಯೇ ನಾಯಕ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಚಿತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಲವ್ ಮಾಕ್ಟೆಲ್-1 ಚಿತ್ರವನ್ನ ತುಂಬಾ ಶ್ರದ್ಧೆಯಿಂದಲೇ ಮಾಡಿದ್ದೆವು ಎಂದಿದ್ದಾರೆ.
ಲವ್ ಮಾಕ್ಟೆಲ್-2 ಚಿತ್ರ ಮಾಡುವ ಪ್ಲಾನ್ ಮೊದಲು ಇರಲಿಲ್ಲ!
ಚಿತ್ರವನ್ನ ಗೆಲ್ಲಿಸಬೇಕು ಅನ್ನುವ ನಿರೀಕ್ಷೆ ಇತ್ತು. ಜನ ಸ್ವೀಕರಿಸುತ್ತಾರೆ ಅನ್ನುವ ಭರವಸೆ ಇತ್ತು. ಅದು ಸಾಧ್ಯವಾಯಿತು. ಆದರೆ ಲವ್ ಮಾಕ್ಟೆಲ್-2 ಚಿತ್ರ ಮಾಡುವ ಇರಾದೆ ಇರಲಿಲ್ಲ. ಲವ್ ಮಾಕ್ಟೆಲ್ ಮೊದಲ ಭಾಗದಲ್ಲಿಯೇ ಕಥೆ ಪೂರ್ಣ ಆಗಿತ್ತು.
ಆದರೆ ಲವ್ ಮಾಕ್ಟೆಲ್-2 ಚಿತ್ರ ಮಾಡಬೇಕು ಅಂತ ನಿರ್ಧರಿಸಿದೆವು. ಆಗ ನಿಜಕ್ಕೂ ಆ ಕೆಲಸ ತುಂಬಾ ಸವಾಲಿನ ಕೆಲಸವೇ ಆಗಿತ್ತು. ಚಿತ್ರದಲ್ಲಿ ಲಾಜಿಕಲ್ ಎಂಡ್ ಕೊಟ್ಟಿದ್ದೇವೆ. ಕಥೆ ಕೂಡ ಪೂರ್ಣ ಆಗಿದೆ.
ಲವ್ ಮಕ್ಟೆಲ್-2 ಕಥೆ ಬರೆಯೋದೇ ಸವಾಲಾಗಿತ್ತು!
ಲವ್ ಮಾಕ್ಟೆಲ್-2 ಚಿತ್ರದ ಕಥೆ ಬರೆಯೋದು ಹೇಗೆ? ಹೀಗೆ ಯೋಚನೆ ಮಾಡೋ ಹೊತ್ತಿಗೆ ಲವ್ ಮಾಕ್ಟೆಲ್-2 ಚಿತ್ರವನ್ನ ಕ್ಲೈಮ್ಯಾಕ್ಸ್ನಿಂದಲೆ ಬರೆಯೋಕೆ ಶುರು ಮಾಡಿದೆ.
ಆಗ ಚಿತ್ರದ ಕಥೆ ಹೊಳೆಯುತ್ತಲೇ ಸಾಗಿತ್ತು. ಹಾಗೆ ಈ ಚಿತ್ರ ಮಾಡಿದಾಗ ಜನ ಹೇಗೆ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಇತ್ತು. ಈ ಒಂದು ಜಾಗದಲ್ಲಿ ಜನ ಚಿತ್ರವನ್ನ ಹೀಗೆ ತೆಗೆದುಕೊಳ್ಳುತ್ತಾರೆ. ಈ ಒಂದು ಡೈಲಾಗ್ನ್ನ ತುಂಬಾ ಎಂಜಾಯ್ ಮಾಡ್ತಾರೆ ಅಂತಲೂ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮಾರ್ಕ್ ಮಾಡಿದ್ದರು.
ಲವ್ ಮಾಕ್ಟೆಲ್-2 ಚಿತ್ರವನ್ನ ಗೆಸ್ ಮಾಡಿದಂತೆ ಜನ ಮೆಚ್ಚಿದ್ದರು!
ಲವ್ ಮಾಕ್ಟೆಲ್-2 ಚಿತ್ರ ನೋಡಿದ ಪ್ರೇಕ್ಷಕರು ಕೃಷ್ಣ ಮಾರ್ಕ್ ಮಾಡಿರೋ ಡೈಲಾಗ್, ಸೀನ್ಗಳನ್ನ ಕೃಷ್ಣ ಗೆಸ್ ಮಾಡಿದಂತೆ ಎಂಜಾಯ್ ಮಾಡಿದ್ದರು. ಥಿಯೇಟರ್ನಲ್ಲಿ ಅದೇ ರೀತಿಯ ರಿಯಾಕ್ಟ್ ಮಾಡಿದ್ದರು.
ಅದೇ ಚಿತ್ರ ಎರಡು ತಿಂಗಳ ಮುಂಚೆ ರೆಡಿ ಆಗಿತ್ತು. ಆದರೆ ಕೊರೊನಾ ಲಾಕ್ ಡೌನ್ ಎಲ್ಲ ಪ್ಲಾನ್ ಅನ್ನ ಏರು-ಪೇರು ಮಾಡಿತ್ತು. ಹಾಗಾಗಿಯೇ ಲವ್ ಮಾಕ್ಟೆಲ್-2 ಚಿತ್ರ ಪ್ರೇಮಿಗಳ ವಾರ ಫೆಬ್ರವರಿ-11 ಕ್ಕೆ ರಿಲೀಸ್ ಆಯಿತು ಎಂದು ನಾಯಕ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೆಲ್-2 ದಿನಗಳನ್ನ ನೆನಪಿಸಿಕೊಂಡ್ರು.
ಲವ್ ಮಾಕ್ಟೆಲ್-2 ಚಿತ್ರಕ್ಕೆ ಇಂದು ಒಂದು ವರ್ಷ ಪೂರ್ಣ
ಲವ್ ಮಾಕ್ಟೆಲ್-2 ಚಿತ್ರ ಬಂದು ಫೆಬ್ರವರಿ-11ಕ್ಕೆ ಒಂದು ವರ್ಷ ಪೂರ್ಣ ಆಗುತ್ತದೆ. ಆ ಹಿನ್ನೆಲೆಯಲ್ಲಿ ತಮ್ಮ ಈ ಚಿತ್ರದ ದಿನಗಳನ್ನ ಮೆಲುಕು ಹಾಕಿದ ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೆಲ್-3 ಚಿತ್ರ ಮಾಡಬೇಕು ಅಂತಲೇ ಮಾಡುತ್ತಿದ್ದಾರೆ.
ಲವ್ ಮಾಕ್ಟೆಲ್-3 ಇನ್ನು ಯೋಚನೆಯ ಹಂತದಲ್ಲಿ ಇದೆ. ಈ ಯೋಚನೆ ಕಾರ್ಯರೂಪಕ್ಕೆ ತರುವ ಆಸೆ ಕೂಡ ಇದೆ. ಆದರೆ ಲವ್ ಮಾಕ್ಟೆಲ್-2 ಮಾಡೋದು ಕೂಡ ಆಗ ಕಷ್ಟ ಆಗಿತ್ತು. ಕಥೆ ಹೇಗೆ ಮುಂದುವರೆಸೋದು ಅನ್ನೋದೆ ಸವಾಲ್ ಆಗಿತ್ತು.
ಲವ್ ಮಾಕ್ಟೆಲ್-3 ಚಿತ್ರ ಮಾಡೋ ಯೋಚನೆ ಇದೆ
ಲವ್ ಮಾಕ್ಟೆಲ್-3 ಚಿತ್ರದ ವಿಷಯದಲ್ಲೂ ಈಗ ಅಂತ ಸವಾಲ್ ಇದ್ದೇ ಇದೆ. ಕಥೆಯನ್ನ ಹೇಗೆ ಮುಂದುವರೆಸೋದು ಅನ್ನೊದನ್ನ ಯೋಚನೆ ಮಾಡುತ್ತಿದ್ದೇನೆ ಎಂದು ಡಾರ್ಲಿಗ್ ಕೃಷ್ಣ ಹೇಳುತ್ತಾರೆ.
ಲವ್ ಮಾಕ್ಟೆಲ್ ಚಿತ್ರದಲ್ಲಿ ಪ್ರೀತಿ ಮತ್ತು ಎಮೋಷನ್ ಕ್ಯಾರಿ ಮಾಡಿದ್ದೆವು. ಅದು ಜನಕ್ಕೆ ಇಷ್ಟ ಆಗಿದೆ. ಅದೇ ರೀತಿ ಈಗೀನ ದಿನಗಳಲ್ಲಿ ಬೇರೆ ರೀತಿಯ ಸಿನಿಮಾ ಮಾಡೋ ಚಾಲೆಂಜ್ ಇದ್ದೇ ಇದೆ.
ಇದನ್ನೂ ಓದಿ: Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ
ಎಮೋಷನ್ಸ್ ಚಿತ್ರದಲ್ಲಿದ್ದರೆ ಜನಕ್ಕೆ ಅದು ಇಷ್ಟ ಆಗುತ್ತದೆ!
ಅದೇ ರೀತಿ ಎಮೋಷನ್ ಎಲ್ಲ ಕಾಲಕ್ಕೂ ಎಲ್ಲರಿಗೂ ಇಷ್ಟ ಆಗುತ್ತವೆ. ಅದನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ರೆ, ಜನ ಚಿತ್ರವನ್ನ ಖಂಡಿತ ಸ್ವೀಕರಿಸುತ್ತಾರೆ ಅನ್ನೋದು ಡಾರ್ಲಿಂಗ್ ಕೃಷ್ಣ ಅವರ ಆತ್ಮವಿಶ್ವಾಸದ ಮಾತಾಗಿವೆ.
ಲವ್ ಮಾಕ್ಟೆಲ್-2 ರಿಲೀಸ್ ಆಗಿ ಒಂದು ವರ್ಷ ಕಳೆದ ಈ ದಿನ ಕೃಷ್ಣ ಸಾಕಷ್ಟು ವಿಷಯಗಳನ್ನ ಇಲ್ಲಿ ಮತ್ತೆ ನೆನಪಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ