News18 India World Cup 2019

99 Movie: ಗೋಲ್ಡನ್​ ಸ್ಟಾರ್​ ಗಣೇಶ್​ 'ಹೇಳಿ ಹೋಗು ಕಾರಣ' ಎನ್ನುತ್ತಿರುವುದು ಯಾರಿಗೆ ಗೊತ್ತಾ..?

ಗೋಲ್ಡನ್​ ಸ್ಟಾರ್​ ಗಣೇಶ್​ ಇತ್ತೀಚೆಗೆ ನಟಿ ಭಾವನಾ ಅವರಿಗೆ ಹೇಳಿ ಹೋಗು ಕಾರಣ ಅಂತ ಹೇಳಿಯೇ ಸುದ್ದಿಯಾಗಿದ್ದಾರೆ. ಅದು ಕಾರಣ ಏತಕ್ಕೆ ಹೇಳಬೇಕು, ಇವರಿಬ್ಬರ ನಡುವೆ ಏನು ನಡೆಯುತ್ತಿದೆ ಅಂತ ತಿಳಿಯೋಕೆ ಈ ವರದಿ ಓದಿ.

Anitha E | news18
Updated:March 5, 2019, 2:10 PM IST
99 Movie: ಗೋಲ್ಡನ್​ ಸ್ಟಾರ್​ ಗಣೇಶ್​ 'ಹೇಳಿ ಹೋಗು ಕಾರಣ' ಎನ್ನುತ್ತಿರುವುದು ಯಾರಿಗೆ ಗೊತ್ತಾ..?
ಕನ್ನಡದ '99' ಸಿನಿಮಾದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​ ಹಾಗೂ ಭಾವನಾ
Anitha E | news18
Updated: March 5, 2019, 2:10 PM IST
ತಮಿಳಿನಲ್ಲಿ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿರೋ '96' ಸಿನಿಮಾ ಕನ್ನಡಕ್ಕೆ ರೀಮೇಕ್​ ಆಗುತ್ತಿದೆ. ಸದ್ಯ ಚಿತ್ರೀಕರಣದಲ್ಲಿ ನಿರತವಾಗಿರೋ ಚಿತ್ರತಂಡ ಸಿನಿಮಾದ ಬ್ಯೂಟಿಫುಲ್ ಹಾಡೊಂದನ್ನ ರಿಲೀಸ್ ಮಾಡಿದೆ.

ಇದನ್ನೂ ಓದಿ: 'ಉದ್ಘರ್ಷ' ಸಿನಿಮಾದಲ್ಲಿ ಕಿಚ್ಚ ಸುದೀಪ್​: 'ಸುನೀಲ್​ ಸರ್​ಗಾಗಿ ಏನು ಬೇಕಾದರೂ ಮಾಡಲು ಸಿದ್ಧ' ಎಂದಿದ್ದೇಕೆ​..!

ವಿಜಯ್ ಸೇತುಪತಿ ಮತ್ತು ತ್ರಿಶಾ ಕಾಂಬಿನೇಷನ್‍ನಲ್ಲಿ ಕಳೆದ ವರ್ಷ ತೆರೆಕಂಡ '96' ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು ಅಂದ್ರೆ, ಎಲ್ಲಾ ವರ್ಗದ ಸಿನಿಪ್ರೀಯರನ್ನ ತನ್ನತ್ತ ಸೆಳೆದಿತ್ತು. ಹೀಗಾಗಿ ಬೇರೆ ಬೇರೆ ಭಾಷೆಗೆ ಈ ಸಿನಿಮಾ ರಿಮೇಕ್ ಆಗುತ್ತಿದ್ದು,' 99' ಎಂಬ ಟೈಟಲ್‍ನಲ್ಲಿ ಕನ್ನಡದಲ್ಲಿ ರಿಮೇಕ್ ಆಗುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಜಾಕಿ ಭಾವನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರತಂಡ ಒಂದು ಫುಲ್​ ಫೀಲಿಂಗ್​ ಇರೋ ಲಿರಿಕಲ್​ ಹಾಡನ್ನು ಬಿಡುಗಡೆ ಮಾಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದ್ದು, ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ವಿಶೇಷ ಅಂದರೆ ಇದು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 100ನೇ ಚಿತ್ರ.

 



ಅಷ್ಟೇ ಅಲ್ಲ ಈ ಹಾಡು ಸದ್ಯ ಟ್ರೆಂಡಿಂಗ್​ನಲ್ಲಿ 10ನೇ ಸ್ಥಾನದಲ್ಲಿದೆ.



ರಾಮು ಫಿಲ್ಮ್ಸ್​ ನಿರ್ಮಾಣದ ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದ್ದು, ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ಇನ್ನು ಆದಷ್ಟು ಬೇಗ ಸಿನಿಮಾ ಕೂಡ ತೆರೆಮೇಲೆ ಬರಲಿದೆ.

 ತಮಿಳಿನ '96'ರ ಕನ್ನಡ ರೀಮೇಕ್​ '99' ಸಿನಿಮಾದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ನ್ಯೂ ಲುಕ್ಸ್​..!

First published:March 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...