777 Charlie: ಮೈಸೂರು​ ಟು ಕಾಶ್ಮೀರ, ಹೇಗಿದೆ ನೋಡಿ ಮುದ್ದು ಚಾರ್ಲಿಯ ಜರ್ನಿ

ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ, 777 ಚಾರ್ಲಿ ಚಿತ್ರದ ‘ಜರ್ನಿ‘ ಹಾಡು ತುಂಬಾ ವಿಶೇಷವಾಗಿದೆ. ಇದನ್ನು ನೋಡಿದ ಸಿನಿಪ್ರೇಮಿಗಳು ಮುದ್ದು ಚಾರ್ಲಿಗೆ ಫಿದಾ ಆಗಿದ್ದಾರೆ.

777 ಚಾರ್ಲಿ

777 ಚಾರ್ಲಿ

  • Share this:
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ‘ (777 Charlie) ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಚಿತ್ರತಂಡ ಚಿತ್ರದ ಪ್ರಮೋಷನ್​​ ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ (Trailer) ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಚಾರ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ (Dog) ಯನ್ನು ಟ್ರೈಲರ್​​ನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಚಿತ್ರದ ಹೊಸ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಈ ಹಾಡನ್ನು ಚಿತ್ರೀಕರಿಸಿದ್ದರ ಬಗ್ಗೆ ಕುತೂಹಲಕಾರಿಯಾದ ಮಾಹಿತಿ ಹೊರಬಿದ್ದಿದೆ.

ಜರ್ನಿ ಹಾಡಿನ ವಿಶೇಷತೆ:

ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ, 777 ಚಾರ್ಲಿ ಚಿತ್ರದ ‘ಜರ್ನಿ‘ ಹಾಡು ತುಂಬಾ ವಿಶೇಷವಾಗಿದೆ. ಇದನ್ನು ನೋಡಿದ ಸಿನಿಪ್ರೇಮಿಗಳು ಮುದ್ದು ಚಾರ್ಲಿಗೆ ಫಿದಾ ಆಗಿದ್ದಾರೆ. ಅದರಲ್ಲಿಯೂ ಈ ಹಾಡು ಪಕ್ಕಾ ಜರ್ನಿಯನ್ನು ಹೊಂದಿದೆ. ಈ ಹಾಡಿಗಾಗಿ ಚಿತ್ರತಂಡ ಮೈಸೂರಿನಿಂದ ಕಾಶ್ಮೀರದ ವರೆಗೆ ಪ್ರಯಾಣ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ. ಅದರಲ್ಲಿಯೂ ಈ ಹಾಡಿನಲ್ಲಿ ಚಾರ್ಲಿ (ನಾಯಿ) ಅನ್ನು ಕರೆದುಕೊಂಡು ಹೋಗುವುದು ತುಂಬಾ ಕಷ್ಟಕರವಾಗಿತ್ತು ಎಂದು ನಿರ್ದೇಶಕ ಕಿರಣ್ ರಾಜ್ ಹೇಳುತ್ತಾರೆ. ಸರಿಸುಮಾರು ಮೈಸೂರಿನಿಂದ ಕಾಶ್ಮೀರ ಎಮದರೆ 3500 ಕಿ.ಮೀ ದೂರದ ಪ್ರಯಾಣ ಮಾಡುವ ಮೂಲಕ ಈ ಹಾಡನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.

ವಿಮಾನದಲ್ಲಿ ಹಾರಾಡಿತ್ತು ಚಾರ್ಲಿ:

ಹೌದು, ಚಾರ್ಲಿಯನ್ನು ಈ ಹಾಡಿನ ಶೂಟಿಂಗ್​ ಗಾಗಿ ಕಾಶ್ಮೀರಕ್ಕೆ ಮೊದಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ನಂತರ ಅಲ್ಲಿಂದ ಚಾರ್ಲಿಗಾಗಿ ವಿಶೇಷ ಕ್ಯಾರಾವಾನ್ ಸಿದ್ಧಪಡಿಸಲಾಗಿತ್ತು. ಇದಲ್ಲದೇ ಹಿಮದೆಂದೂ ಸಿಗದ ಅದ್ಭುತ ದೃಶ್ಯಗಳನ್ನು ಪ್ರೇಕ್ಷಕರು ಈ ಚಿತ್ರದಲ್ಲಿ ಅದರಲ್ಲಿಯೂ ಈ ಹಾಡಿನಲ್ಲಿ ನೋಡುತ್ತಾರೆ. ಅಲ್ಲದೇ ಕೇವಲ ಎರಡು ರೀತಿಯ ಹವಾಮಾನಕ್ಕಾಗಿ ನಾವು 2 ಬಾರಿ ಕಾಶ್ಮೀರಕ್ಕೆ ಹೋಗಿದ್ದೇವು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 777 Charlie: ಕನ್ನಡದ ಚಾರ್ಲಿಗೆ ಹಾಲಿವುಡ್​ನ ಡೈನೋಸಾರ್​ ಫೈಟ್​, ಚಾರ್ಲಿಯ ಕೈ ಹಿಡಿಯುತ್ತಾರಾ ಸಿನಿಪ್ರೇಮಿಗಳು?

21 ಸಿಟಿಗಳಲ್ಲಿ ವಿಶೇಷ ಪ್ರೀಮಿಯರ್ ಶೋ:

ಇನ್ನು, ಚಿತ್ರವು ಜೂನ್ 10ಕ್ಕೆ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು 777 ಚಾರ್ಲಿ ಚಿತ್ರವು ಹೈದರಾಬಾದ್, ಚೆನ್ನೈ, ದೆಲ್ಲಿ, ಪುಣೆ, ಪಂಜಾಬ್, ಕೊಚ್ಚಿ, ಲಕ್ನೋ, ಕೋಲ್ಕತ್ತಾ ಸೇರಿದಂತೆ ಪ್ರಮುಖ 21 ಸಿಟಿಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ದೊಡ್ಡ ತಾರಾಗಣದ ಚಾರ್ಲಿ:

ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ಬಂಡವಾಳ ಹೂಡಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ ಸಂಗೀತಾ ಶೆಟ್ಟಿ ಆಬಿನಯಿಸಿದ್ದರೆ, ಶಾರ್ವರಿ ಮತ್ತು ಪ್ರಾಣ್ಯ ಎಂಬ ಪುಟಾಣಿ ಮಕ್ಕಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 777 Charlie ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್​! ಧರ್ಮ-ಚಾರ್ಲಿ ಕನೆಕ್ಷನ್​ ತಿಳಿಸೋ ಸಾಲುಗಳಿವು

ಬುಕ್ಕಿಂಗ್ ಓಪನ್:

ಈಗಾಗಲೇ ಚಿತ್ರದ ಬುಕ್ಕಿಂಗ್ ಓಪನ್ ಆಗಿದೆ. ಬುಕ್​ ಮೈ ಶೋ ಸೇರೆದಂತೆ ಅನೇಕಡೆ 777 ಚಾರ್ಲಿ ಚಿತ್ರದ ಬುಕ್ಕಿಂಗ್ ಇಂದಿನಿಂದ ಓಪನ್ ಆಗಿದ್ದು, ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ.
Published by:shrikrishna bhat
First published: