ಮನೆಯಲ್ಲಿ ತಾಯಂದಿರು ಮಕ್ಕಳು ಏನೇ ತಪ್ಪು ಮಾಡಿದರೂ ಸಹಿಸಿಕೊಳ್ಳುತ್ತಾರೆ. ಅದೇ ಅವರು ಕನ್ನಡ ಧಾರಾವಾಹಿ(Kannada Serials) ನೋಡುವಾಗ ಚಾನೆಲ್ ಚೇಂಜ್(Channel Change) ಮಾಡಿದರೆ ಕಥೆ ಮುಗಿದಂತೆ. ಹೌದು, ಸಿನಿಮಾ(Movie)ಗಳಿಗಿಂತ ಧಾರವಾಹಿಗಳು ನಮ್ಮಜೀವನಕ್ಕೆ ಹತ್ತಿರವಾಗುತ್ತವೆ. ಮಹಿಳೆಯ(Women)ರಿಗಂತು ಸೀರಿಯಲ್ ಅಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿ ದಿನ ಪ್ರಸಾರವಾಗುವ ಧಾರಾವಾಹಿಗಳನ್ನು ನೋಡಿ, ಅದರಳೊಗೆ ಮುಳುಗಿಹೋಗುತ್ತಾರೆ. ಅದರಲ್ಲೂ ಇತ್ತೀಚೆಗೆ ಡಿಫ್ರೆಂಟ್, ಡಿಫ್ರೆಂಟ್ ಕಾನ್ಸೆಪ್ಟ್ ಇಟ್ಟುಕೊಂಡು ಬಂದ ಸೀರಿಯಲ್ಗಳು ಸಾಕಷ್ಟು ಜನಪ್ರಿಯತೆ ಗಳಿಸಿದೆ. ಅದೇ ಸಾಲಿಗೆ ಉದಯ ಟಿವಿ(Udaya Tv)ಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರಾವಾಹಿ(Kavyanjali Serial) ಕೂಡ ಸೇರುತ್ತೆ. ಈ ಸೀರಿಯಲ್ಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಕಾರಣ ಈ ಧಾರಾವಾಹಿಯ ಟೈಟಲ್(Title). ಹೌದು, ಇದೇ ಟೈಟಲ್ನಲ್ಲಿ ಈ ಹಿಂದೆಯೂ ಧಾರಾವಾಹಿ ಪ್ರಸಾರವಾಗುತ್ತಿದೆ. ಇದಾದ ಬಳಿಕ ಬಳಿಕ ಹಳೇ ಹೆಸರಿನ ಹೊಸ ಕತೆಯೊಂದಿಗೆ ಬಂದ ಕಾವ್ಯಾಂಜಲಿ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿಕೊಳ್ತು. ಹೆಸರೇ ಸೂಚಿಸುವಂತೆ ಇದೊಂದು ಇಬ್ಬರು ಸಹೋದರಿಯರ ನಡುವಿನ ಪ್ರೀತಿ, ಭಾಂದವ್ಯದ ಮಹತ್ವ ಸಾರುವ ಧಾರಾವಾಹಿ. ಟಾಪ್ ಸೀರಿಯಲ್ಗಳ ಪಟ್ಟಿಯಲ್ಲಿದ್ದ ಕಾವ್ಯಾಂಜಲಿ ಧಾರಾವಾಹಿ ಅಭಿಮಾನಿಗಳಿಗೆ ಇದೀಗ ಬೇಸರ ಮೂಡಿಸಿದೆ. ಈ ಧಾರಾವಾಹಿ ತಂಡ ಶಾಕಿಂಗ್ ನ್ಯೂಸ್ ನೀಡಿದೆ. ಅದೇನು ಅಂತೀರಾ? ಮುಂದೆ ನೋಡಿ..
ಶೀಘ್ರವೇ ಕೊನೆಗೊಳ್ಳುತ್ತಾ ಕಾವ್ಯಾಂಜಲಿ ಧಾರಾವಾಹಿ?
ಉದಯ ಟಿವಿಯ ಟಾಪ್ ಸೀರಿಯಲ್ ಕಾವ್ಯಾಂಜಲಿ.. ಇನ್ನೇನು 500 ಎಪಿಸೋಡ್ ಹತ್ತಿರ ಬಂದು ನಿಂತಿದೆ. ಒಳ್ಳೆ ರೇಟಿಂಗ್ ಕೂಡ ಈ ಧಾರಾವಾಹಿಯಿಂದ ಬರುತ್ತಿತ್ತು. ಆದರೆ, ಇದೀಗ ಈ ಸೀರಿಯಲ್ ಮುಕ್ತಾಯಗೊಳಿಸಲು ತಂಡ ಮುಂದಾಗಿದೆ ಎಂಬ ಮಾಹಿತಿ ದೊರೆತಿದೆ. ಸುಮಾರು 2 ವರ್ಷದಿಂದ ಜನರನ್ನು ರಂಜಿಸಿಕೊಂಡು ಬಂದಿದ್ದ ಕಾವ್ಯಾಂಜಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತಿದ್ದಾಳೆ. ಸುಮಾರು 2 ವರ್ಷದಿಂದ ಉದಯಟಿವಿಯಲ್ಲಿ ಟಾಪ್ ಸೀರಿಯಲ್ ಪಟ್ಟಿಯಲ್ಲಿ ಕಾವ್ಯಾಂಜಲಿ ಮೊದಲ ಸ್ಥಾನದಲ್ಲಿತ್ತು. ಇದೀಗ ಏಕಾಏಕಿ ಸೀರಿಯಲ್ ನಿಲ್ಲಿಸಲು ತಯಾರಿ ನಡೆಯುತ್ತಿದ್ದಂತೆ. ಇದಕ್ಕೆ ಅಸಲಿ ಕಾರಣವಾದರೂ ಏನು ಅಂತೀರಾ? ಮುಂದೆ ನೀವೇ ನೋಡಿ..
ಇದನ್ನು ಓದಿ: ಸರ್ಕಾರದ ನಿಯಮ ಗಾಳಿಗೆ ತೂರಿ ಮುದ್ದುಲಕ್ಷ್ಮಿ ಸೀರಿಯಲ್ ಚಿತ್ರೀಕರಣ.. ಖಾಕಿ ದಾಳಿ ಮಾಡ್ತಿದ್ದಂತೆ ಶೂಟಿಂಗ್ ಪ್ಯಾಕ್ಅಪ್!
ಟಿಆರ್ಪಿ ಡೌನ್, ಪ್ರಸಾರ ಸಮಯದ ಹೊಡೆತ!
ಹೌದು, 2 ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್ ಟಿಆರ್ಪಿ ಕಾರಣದಿಂದ ಮುಕ್ತಾಯಗೊಳ್ಳುತ್ತಿದೆ. ರಾತ್ರಿ 8:30 ಕ್ಕೆ ಈ ಸೀರಿಯಲ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಈ ಸೀರಿಯಲ್ನ ಪ್ರಸಾರ ಸಮಯ ಬದಲಾವಣೆ ಮಾಡಲಾಗಿತ್ತು. ರಾತ್ರಿ 9 ಕ್ಕೆ ಈ ಧಾರಾವಾಹಿ ಪ್ರಸಾರ ವಾಗುತ್ತಿದೆ. ಹೀಗೆ ಪ್ರಸಾರ ಸಮಯ ಬದಲಿಸಿದ್ದಕ್ಕೆ ಟಿಆರ್ಪಿಗೆ ಹೊಡೆದ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಐದು ಭಾಷೆಗಳಲ್ಲಿ ರಿಮೇಕ್ ಆಗಿರೋದು ಈ ಕ್ಯಾವಾಂಜಲಿಯ ಹೆಮ್ಮೆ ಅನ್ನೊದು ವಿಶೇಷ. ಸದಾ ನಂಬರ್ ಸ್ಥಾನದಲ್ಲಿದ್ದ ಈ ಸೀರಿಯಲ್ ಪ್ರಸಾರದ ಸಮಯ ಬದಲಿಸುತ್ತಿದ್ದಂತೆ ಟಿಆರ್ಪಿ ಕಳೆದುಕೊಂಡಿದೆ.
ಇದನ್ನು ಓದಿ: ಅಬ್ಬಬ್ಬಾ... ಅರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ!
ಧಾರಾವಾಹಿಯ ಚಿತ್ರೀಕರಣ ಕಂಪ್ಲೀಟ್!
ಈಗಾಗಲೇ ಧಾರಾವಾಹಿ ತಂಡ ಕೊನೆಯ ದೃಶ್ಯಗಳ ಚಿತ್ರಿಕರಣ ಮುಗಿಸಿದೆ. ಇನ್ನೇನು ಕೆಲವು ದಿನಗಳು ಮಾತ್ರ ಸೀರಿಯಲ್ ಟೆಲಿಕಾಸ್ಟ್ ಆಗಲಿದೆ. ಈ ಸೀರಿಯಲ್ನಲ್ಲಿ ಬರುವ ಅಂಜಲಿ ಪಾತ್ರಧಾರಿ ಒಟ್ಟು ಮೂರು ಬಾರಿ ಬದಲಾಗಿತ್ತು. ಮೊದಲು ಅಂಜಲಿ ಪಾತ್ರಕ್ಕೆ ಜೀವ ತುಂಬಿದ್ದರು. ನಟಿ ಸುಶ್ಮಿತಾ, ಬಳಿಕ ದೀಪಾ ಹೀರೆಮಠ್ ಎಲ್ಲರ ಮನಸ್ಸು ಗೆದ್ದಿದ್ದರು. ಸದ್ಯ ಅಂಜಲಿಯಾಗ ಅಕ್ಷತಾ ದೇಶಪಾಂಡೆ ಕಾಣಿಸಿಕೊಂಡಿದ್ದರು. ಅದೇನೆ ಇರಲಿ ಹೀಗೆ ನಂಬರ್ ಒನ್ ಸ್ಥಾನದಲ್ಲಿದ್ದ ಸೀರಿಯಲ್ ಮುಕ್ತಾಯಗೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ