ಸ್ಯಾಂಡಲ್ವುಡ್ ನಲ್ಲಿ 2022 ರಲ್ಲಿ 180 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಕಟ್ಟಕಡೆಯದಾಗಿ (Upcoming Kannada Expected Movies) ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಜಮಾಲಿಗುಡ್ಡ, ಪದವಿ ಪೂರ್ವ, ಮೇಡ್ ಇನ್ ಬೆಂಗಳೂರು, ಜೋರ್ಡನ್ ಅನ್ನೋ ಸಿನಿಮಾ ತೆರೆಗೆ ಬರ್ತಿವೆ. ಆದರೆ ಮುಂದಿನ ವರ್ಷ 2023 ರಲ್ಲಿ (Kannada Movies) ಕನ್ನಡದ ಯಾವ ಸಿನಿಮಾ ರಿಲೀಸ್ ಆಗುತ್ತಿವೆ. ಅದರಲ್ಲಿ ಬಹು ನಿರೀಕ್ಷಿತ ಸಿನಿಮಾಗಳಾವವು. ಕಿಚ್ಚ ಸುದೀಪ್ ಸಿನಿಮಾ ಅನೌನ್ಸ್ (Sandalwood Expected Movie) ಆಗುತ್ತದೆಯೇ? ರಾಕಿಂಗ್ ಸ್ಟಾರ್ ಯಶ್ ಚಿತ್ರ ಜನವರಿ-8ಕ್ಕೆ ಅನೌನ್ಸ್ ಆಗುತ್ತಾ? ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ರಿಯಲ್ ಸ್ಟಾರ್ ಉಪ್ಪಿಯ (Real Star Exptect Movies) ಎರಡು ಚಿತ್ರಗಳು ಭಾರೀ ನಿರೀಕ್ಷೆ ಮೂಡಿಸಿವೆ. ಈ ಎಲ್ಲ ಮಾಹಿತಿ ಒಂದು ಸ್ಟೋರಿ ಇಲ್ಲಿದೆ ಓದಿ.
ಸ್ಯಾಂಡಲ್ವುಡ್ ಮುಂದಿನ ವರ್ಷದ ಬಹು ನಿರೀಕ್ಷಿತ ಚಿತ್ರಗಳಾವವು?
ಕನ್ನಡದಲ್ಲಿ ಪ್ರತಿವರ್ಷ ಸಾಕಷ್ಟು ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಇರೋ ಒಂದಷ್ಟು ನಿರ್ಮಾಣ ಸಂಸ್ಥೆಗಳು ಒಂದೋ ಎರಡೋ ಸಿನಿಮಾಗಳನ್ನ ನಿರ್ಮಿಸುತ್ತಲೇ ಬಂದಿವೆ. ಇನ್ನುಳಿದವ್ರು ತಮ್ಮದೇ ರೀತಿಯಲ್ಲಿ ಚಿತ್ರ ನಿರ್ಮಿಸಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಾರೆ.
ಹಾಗೇ ತಯಾರಾದ ಸಿನಿಮಾಗಳ ಲೆಕ್ಕ ಸಾಕಷ್ಟಿರುತ್ತವೆ. ಆದರೆ ರಿಲೀಸ್ ಲೆಕ್ಕವನ್ನಷ್ಟೇ ಹೇಳೋದಾದ್ರೆ, ಇಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬಂದು ಸದ್ದು ಮಾಡುವ ಪ್ರಯತ್ನ ಮಾಡುತ್ತವೆ. ಅವುಗಳಲ್ಲಿ ಕೆಲವು ಮಾತ್ರ ನಿರೀಕ್ಷಿತ ಚಿತ್ರಗಳೇ ಆಗಿರುತ್ತವೆ.
2023 ರ ಕನ್ನಡದ ಬಹು ನೀರಿಕ್ಷಿತ ಚಿತ್ರಗಳು ಇಲ್ಲಿವೆ ನೋಡಿ
ಕನ್ನಡದಲ್ಲಿ ಕಳೆದ ವರ್ಷ ನಿರೀಕ್ಷಿತ ಚಿತ್ರಗಳು ತುಂಬಾನೇ ಇದ್ದವು. ವಿಕ್ರಾಂತ್ ರೋಣ, ಚಾರ್ಲಿ, ಗಂದಧ ಗುಡಿ, ಕೆಜಿಎಫ್-2, ಡೊಳ್ಳು, ವೇದ ಸಿನಿಮಾಗಳಿದ್ದವು. ಇವುಗಳಲ್ಲಿ ಅನಿರೀಕ್ಷಿತ ಹಿಟ್ ಅನಿಸಿರೋದು ಕಾಂತಾರ ಸಿನಿಮಾ ಒಂದೇ ಅಂತಲೇ ಹೇಳಬಹುದು.
ಅದೇ ರೀತಿ ಕನ್ನಡದಲ್ಲಿ ಈ ವರ್ಷವೂ ಒಂದಷ್ಟು ನಿರೀಕ್ಷಿತ ಚಿತ್ರಗಳಿವೆ. ಬಿಗ್ ಬಜೆಟ್ನ ಸಿನಿಮಾ ಅನ್ನೋ ನಂಬಿಕೆನೂ ಇದೆ. ಆ ಲೆಕ್ಕದಲ್ಲಿ ಈ ವರ್ಷ ನಿರೀಕ್ಷಿತ ಚಿತ್ರಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಎರಡು ಚಿತ್ರಗಳಿವೆ. ಇನ್ನು ಶಿವರಾಜ್ಕುಮಾರ್ ಅವರ ಒಂದು ಚಿತ್ರ ಕೂಡ ಇದೆ. ಶ್ರೀಮುರಳಿ ಅವರ ಚಿತ್ರವೂ ಈಗಲೇ ಭರವಸೆ ಮೂಡಿಸಿದೆ.
ರಿಯಲ್ ಸ್ಟಾರ್ ಉಪೇಂದ್ರ 2 ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆ
ಉಪೇಂದ್ರ ಅವರು 2022 ರಲ್ಲಿಯೇ ಮತ್ತೆ ಡೈರೆಕ್ಷನ್ಗೆ ಇಳಿದಿದ್ದಾರೆ. ಇವರ ನಿರ್ದೇಶನ ಮತ್ತು ನಟನೆಯ ಚಿತ್ರದ ಹೆಸರು UI ಅಂತಲೇ ಹೇಳಬಹುದು. ಈ ಚಿತ್ರ ಟೈಟಲ್ನಿಂದಲೇ ಈಗಾಗಲೇ ಗಮನ ಸೆಳೆದಿದೆ. ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಲಹರಿ ಸಂಸ್ಥೆ ಕೂಡ ಈ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ.
ರಿಯಲ್ ಸ್ಟಾರ್ ಉಪ್ಪಿ ಫ್ಯಾನ್ ಇಂಡಿಯಾ ಕಬ್ಜ ಸಿನಿಮಾ
ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರವನ್ನ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಈ ಚಿತ್ರ ಎಲ್ಲ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಶಿವಣ್ಣನ ಬಹು ನಿರೀಕ್ಷಿತ "ಘೋಸ್ಟ್" ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ "ಘೋಸ್ಟ್" ಚಿತ್ರ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಶ್ರೀನಿ ನಿರ್ದೇಶನದ ಈ ಚಿತ್ರದ ಕಥೆ ಕೂಡ ವಿಭಿನ್ನವಾಗಿಯೇ ಇದೆ.
ಇಡೀ ಚಿತ್ರ ಜೈಲ್ ಅಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಈಗಲೇ ನಿರೀಕ್ಷೆ ಹುಟ್ಟುಹಾಕಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ಬಹು ನಿರೀಕ್ಷಿತ ಚಿತ್ರ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಇಂಡಸ್ಟ್ರೀಯಲ್ಲಿ ಈ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಈಗಲೇ ಹುಟ್ಟಿಕೊಂಡಿದೆ.
ಹೊಂಬಾಳೆ ಪ್ರೋಡಕ್ಷನ್ ಹೌಸ್ನಿಂದ ಬರ್ತಿರೋ ಈ ಚಿತ್ರವೂ ಚೆನ್ನಾಗಿರುತ್ತದೆ ಅನ್ನೋ ನಂಬಿಕೆ ಮೂಡಿದೆ. ಡಾಕ್ಟರ್ ಸೂರಿ ನಿರ್ದೇಶನ ಈ ಚಿತ್ರದಲ್ಲಿ ಶ್ರೀಮುರಳಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: Kannada Movie Release: ಜಮಾಲಿಗುಡ್ಡದ ಡಾಲಿ ಎದುರು ಪದವಿ ಪೂರ್ವ ಹುಡ್ಗರು-ಒಂದೇ ದಿನ 3 ಸಿನಿಮಾ ರಿಲೀಸ್!
ಕಿಚ್ಚನ ಚಿತ್ರ ಅನೌನ್ಸ್ ಆಗ್ಬೇಕು-ಯಶ್ ಚಿತ್ರವೂ ಪ್ರಕಟಗೊಳ್ಳಬೇಕು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕನ್ನಡ ಇನ್ನೂ ಯಾವುದೂ ಸಿನಿಮಾ ಅನೌನ್ಸ್ ಆಗಿಲ್ಲ. ರಾಕಿಂಗ್ ಸ್ಟಾರ್ ಯಶ್ ಚಿತ್ರ ಕೂಡ ಇನ್ನೂ ಅನೌನ್ಸ್ ಆಗಿಲ್ಲ. ಜನವರಿ-8 ರಂದು ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ಇದೆ. ಈ ದಿನವೇ ಚಿತ್ರ ಅನೌನ್ಸ್ ಆಗೋ ಸುದ್ದಿ ಕೂಡ ಇದೆ.
ಕಾಂತಾರ ಚಿತ್ರ ಕೊಟ್ಟ ರಿಷಬ್ ಶೆಟ್ರು, 2023 ರಲ್ಲಿಯೇ ಕಾಂತಾರ-2 ಚಿತ್ರ ಕೊಡ್ತಾರೆ ಅನ್ನೋ ನಿರೀಕ್ಷೆನೂ ಇದೆ. ಇನ್ನುಳಿದಂತೆ ಈಗಾಗಲೇ 2022 ರಲ್ಲಿಯೇ ಒಂದಷ್ಟು ಸಿನಿಮಾಗಳು ಹೊಸ ವರ್ಷದಲ್ಲಿ ರಿಲೀಸ್ ಆಗುತ್ತಿವೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ