ಪುನೀತ್ ರಾಜ್ಕುಮಾರ್ ನಟನೆಯ ‘ಮಿಲನ‘ ಸಿನಿಮಾದಲ್ಲಿ ನಟಿಸಿದ ಪಾರ್ವತಿ ತಿರುವೊಥು ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿದ್ದಾರಂತೆ. ಮಾಲಿವುಡ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು ಸದ್ಯ ಲಾಕ್ಡೌನ್ ಸಮಯದಲ್ಲಿ ಸಿನಿಮಾ ಕಥೆಯನ್ನು ಬರೆದಿದ್ದಾರಂತೆ. ಹಾಗಾಗಿ ಸದ್ಯದಲ್ಲೇ ನಿರ್ದೇಶನದತ್ತ ಮುಖ ಮಾಡುವ ಮುನ್ಸೂಚನೆಯಲ್ಲಿದ್ದಾರೆ ನಟಿ ಪಾರ್ವತಿ.
ಇತ್ತಿಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಪಾರ್ವತಿ ‘ಫ್ರೀ ಪೊಡಕ್ಷನ್ ಕೆಲಸಗಳಿಗೆ ಲಾಕ್ಡೌನ್ ಸಮಯಚನ್ನು ಬಳಸುತ್ತಿದ್ದೇನೆ. ಅದರ ಜೊತೆಗೆ ಎರಡು ಸ್ಕ್ರೀಪ್ಟ್ಗಳನ್ನು ಬರೆದಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದು ಸ್ಕ್ರೀಪ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದರೆ. ಮತ್ತೊಂದು ಸ್ಕ್ರಿಪ್ಟ್ ಪೊಲಿಟಿಕಲ್ ಎಂಟರ್ಟೈನರ್ ಆಗಿದೆ ಎಂದು ಹೇಳಿದ್ದಾರೆ. ಆದರೆ ಹೆಚ್ಚಿನ ಮಾಹಿತಿಯನ್ನು ಪಾರ್ವತಿ ಬಹಿರಂಗ ಪಡಿಸಲಿಲ್ಲ.
ಇನ್ನು ಮಾಲಿವುಡ್ನಲ್ಲಿ ಕೇಳಿಬಂದಿರುವ ಮಾಹಿತಿ ಪ್ರಕಾರ ನಟಿ ಪಾರ್ವತಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿಲ್ಲವಂತೆ. ಹಾಗಾಗಿ ಸಿನಿಮಾ ನಿರ್ದೇಶನದತ್ತ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
‘ಉಯರೆ‘, ‘ಟೇಕ್ ಆಫ್‘ ಸಿನಿಮಾದಲ್ಲಿ ಪಾವರ್ತಿ ನಟಿಸಿದ್ದರು. ಇವರು ನಟಿಸಿದ ‘ವೈರಸ್‘ ಸಿನಿಮಾ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು. ಇನ್ನು ‘ರಾಚಿಯಮ್ಮ‘, ‘ಹಲಾಲ್ ಲವ್ ಸ್ಟೋರಿ‘, ‘ವರ್ತಮಾನಂ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಈ ಸಿನಿಮಾಗಳು ಮುಂಬರುವ ದಿನಗಳಲ್ಲಿ ತೆರೆ ಮೇಲೆ ಬರಲಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಸಹ ಕಲಾವಿದನಿಗೆ ಸಹಾಯ ಮಾಡಿದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ
Oppo Fantastic Days sale; ಫ್ಯಾಂಟಾಸ್ಟಿಕ್ ಡೇಸ್ ಸೇಲ್; ಡಿಸ್ಕೌಂಟ್ ಬೆಲೆಗೆ ಒಪ್ಪೊ ಸ್ಮಾರ್ಟ್ಫೋನ್ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ