• Home
  • »
  • News
  • »
  • entertainment
  • »
  • Kannada Mata Film Controversy: ಮಠ ಚಿತ್ರದ ಸುತ್ತ ವಿವಾದದ ಹುತ್ತ! ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?

Kannada Mata Film Controversy: ಮಠ ಚಿತ್ರದ ಸುತ್ತ ವಿವಾದದ ಹುತ್ತ! ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?

ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?

ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?

ಕನ್ನಡದ ಮಠ ಚಿತ್ರದ ಸುತ್ತ ವಿವಾದ ಎದ್ದಿದೆ. ಕಾಳಿ ಮಠದ ರಿಷಿ ಕುಮಾರ್ ಫಿಲ್ಮಂ ಚೇಂಬರ್ ಮೆಟ್ಟಿಲೇರಿದ್ದಾರೆ. ಡೈರೆಕ್ಟರ್ ರವೀಂದ್ರ ವಂಶಿ ಬೇಸರದಲ್ಲಿಯೇ ಇದ್ದಾರೆ. ರಿಲೀಸ್ ಟೈಮ್ ಹೀಗೆ ಮಾಡಿದ್ರೆ ಹೇಗೆ ಅಂತಲೂ ಪ್ರಶ್ನೆ ಮಾಡ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಮಠ 2016 ಮಠ ಅಂತ (Mata Film) ಸಿನಿಮಾ ಬಂದಿತ್ತು. ಇದು ರಿಲೀಸ್ ಆದಾಗ ಕೆಂಗಣ್ಣಿ ಗುರಿ ಆಗಿತ್ತು. ಮಠದಲ್ಲಿ ನಡೆಯೋ ಅನಾಚಾರಗಳ ಸತ್ಯ ದರ್ಶನದಂತೆನೇ ಇತ್ತು ಈ ಸಿನಿಮಾ. ನವರಸ ನಾಯಕ ಜಗ್ಗೇಶ್ (Actor Jaggesh) ಅದ್ಭುತವಾಗಿಯೇ ಇಲ್ಲಿ ಕಾಣಿಸಿಕೊಂಡಿದ್ದರು. ಡೈರೆಕ್ಟರ್ ಗುರು (Guru Prasad) ಪ್ರಸಾದ್ ಅಂತೂ ಎಲ್ಲ ಮಠದ ಅಸಲಿ ಸತ್ಯವನ್ನ ತೆರೆ ಮೇಲೆ ತಂದಿದ್ದರು. ಈ ಸಿನಿಮಾ ಬಂದು ಈಗ 16 ವರ್ಷಗಳೇ ಉರುಳಿ ಹೋಗಿವೆ. ಆದರೆ ಈಗ ಮಠ ಹೆಸರಿನ ಇನ್ನೂ ಒಂದು ಸಿನಿಮಾ ಕನ್ನಡದಲ್ಲಿ ರೆಡಿ ಆಗಿದೆ. ಇದೇ ನವೆಂಬರ್​ 18 ರಂದು ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಆದರೆ ಇದೇ ಮಠದ (Mata Film Trailer) ಟ್ರೈಲರ್ ನೋಡಿದ ಕಾಳಿಮಠದ ರಿಷಿಕುಮಾರ್​ ಸ್ವಾಮಿ ಪುಲ್​ ಗರಂ ಆಗಿದ್ದಾರೆ. ಫಿಲ್ಮಂ ಚೇಂಬರ್ ಮೆಟ್ಟಿಲೂ ಏರಿದ್ದಾರೆ.


ಕನ್ನಡದ ಮಠ ಸಿನಿಮಾ ಟ್ರೈಲರ್ ನೋಡಿ ಗರಂ ಆದ ಕಾಳಿ ಸ್ವಾಮಿ
ಕಾಳಿಮಠದ ರಿಷಿಕುಮಾರ್ ಸ್ವಾಮಿ ಈಗ ಫುಲ್ ಸಿಟ್ಟಿಗೆದ್ದಿದ್ದಾರೆ. ಮಠ ಚಿತ್ರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಮಠ ಚಿತ್ರದ ಟ್ರೈಲರ್ ನೋಡಿಯೇ ರೊಚ್ಚಿಗೆದ್ದಿದ್ದಾರೆ. ಇಡೀ ಸಿನಿಮಾ ನೋಡಿ ಏನಂತಾರೋ ಏನೋ.


ಆದರೆ ಮಠ ಚಿತ್ರದ ವಿರುದ್ಧ ಕೆಂಡಾಮಂಡಲವಾಗಿಯೇ ನ್ಯೂಸ್​-18 ಕನ್ನಡ ಡಿಜಿಟಲ್​​ ಜೊತೆಗೆ ಮಾತನಾಡಿದ್ದಾರೆ. ನಾನು ಯಾಕೆ ಮಠ ಚಿತ್ರವನ್ನ ವಿರೋಧಿಸುತ್ತಿದ್ದೇನೆ ಅಂತಲೂ ಹೇಳಿದ್ದಾರೆ. ಅದು ಹೀಗಿದೆ ಓದಿ.


Kannada Mata Film Controversy Overall Story
ಕನ್ನಡದ ಮಠ ಚಿತ್ರದ ಸುತ್ತ ವಿವಾದ


-ಮಠ ಚಿತ್ರದಲ್ಲಿ ಎಲ್ಲ ಹಾಸ್ಯ ಕಲಾವಿದರಿಗೆ ಖಾವಿ ತೊಡಿಸಿ ಹಾಸ್ಯ ಮಾಡಿಸಿದ್ದಾರೆ.
-5216 ಮಠಗಳ ನೈಜ ಘಟನೆಗಳ ಚಿತ್ರ ಅಂತ ಹೇಳಿದ್ದಾರೆ. ಆ ಐದು ಸಾವಿರ ಮಠದ ಡಿಟೈಲ್ಸ್ ನನಗೆ ಬೇಕು.


-ಮಠ ಅಂತ ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಮಠ ಅಂತ ಹೇಳಿ ಏನೇನೋ ಹೇಳಿದ್ರೆ ತಪ್ಪಲ್ವೆ?

-ಮಠ ಸಿನಿಮಾದ ವಿರುದ್ಧ ಸ್ಟೇ ತರಬೇಕು ಅಂತಲೇ ಫಿಲ್ಮಂ ಚೇಂಬರ್​ ಹಾಗೂ ಸೆನ್ಸಾರ್​​ ಮಂಡಳಿಗೆ ದೂರು ಕೊಡುತ್ತೇನೆ.
ಮಠ ಚಿತ್ರದ ವಿರುದ್ಧ ಕಾಳಿಮಠದ ರಿಷಿಕುಮಾರ್​ ಸ್ವಾಮಿ ಸಿಡಿಮಿಡಿಗೊಂಡಿದ್ದಾರೆ. ಇಂದು ಸಂಜೆ ಈ ವಿಚಾರವಾಗಿಯೆ ಫಿಲ್ಮಂ ಚೇಂಬರ್​​ ನಲ್ಲಿ ಸಭೆ ಕೂಡ ಇದೆ.


ಮಠ ಚಿತ್ರದ ಡೈರೆಕ್ಟರ್ ರವೀಂದ್ರ ವಂಶಿ ಏನ್ ಹೇಳ್ತಾರೆ?
ಮಠ ಚಿತ್ರದ ಡೈರೆಕ್ಟರ್ ರವೀಂದ್ರ ವಂಶಿ ಕೂಡ ನ್ಯೂಸ್-18 ಕನ್ನಡ ಡಿಜಿಟಲ್​ಗೆ


Kannada Mata Film Controversy Overall Story
ಮಠ ಚಿತ್ರದ ಡೈರೆಕ್ಟರ್ ರವೀಂದ್ರ ವಂಶಿ ಏನ್ ಹೇಳ್ತಾರೆ?


ಮಾತನಾಡಿದ್ದಾರೆ. ತಮ್ಮ ಚಿತ್ರದಲ್ಲಿ ಎಲ್ಲವೂ ಇದೆ. ಇಲ್ಲಿ ಮಠ ಗಳ ಬಗ್ಗೆ ಒಳ್ಳೆ ವಿಚಾರವನ್ನೂ ಹೇಳಿದ್ದೇವೆ. ವಾಸ್ತವ ಏನಿದಿಯೋ ಅದನ್ನ ಇಲ್ಲಿ ಹೇಳಿದ್ದೇವೆ.


ರಾಜ್ಯದ 25 ಜಿಲ್ಲೆಯ 70 ಮಠಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಆಗ ಯಾವುದೇ ಸ್ವಾಮಿಜಿ ಏನೂ ಹೇಳಲಿಲ್ಲ. ಆದರೆ ಸಿನಿಮಾ ರಿಲೀಸ್ ಹತ್ತಿರಕ್ಕೆ ಬಂದಾಗ ಎಲ್ಲವೂ ಈಗ ಶುರು ಆಗಿದೆ.
5,216 ಮಠಗಳಲ್ಲಿ ನಡೆದ ಸತ್ಯ ಘಟನೆಗಳನ್ನೆ ಇಲ್ಲಿ ಸಿನಿಮಾ ಮಾಡಿದ್ದೇವೆ. ಇಲ್ಲಿ ಎಲ್ಲವೂ ಇದೆ. ಆದರೆ ಇದೊಂದು ಸಿನಿಮಾ ಅಷ್ಟೆ. ಸೆನ್ಸಾರ್ ಕೂಡ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರಕೊಟ್ಟಿದೆ.


ಇದನ್ನೂ ಓದಿ: Super Star: 'ಸೂಪರ್ ಸ್ಟಾರ್'​ಗೆ ಸಂಕಷ್ಟ; 1 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪದಡಿ ಪೊಲೀಸ್​ ದೂರು


ಆದರೆ ಇದನ್ನ ಅಷ್ಟು ಸುಲಭವಾಗಿ ಪಡೆದುಕೊಂಡಿಲ್ಲ. ಸೆನ್ಸಾರ್​ ಮಂಡಳಿ ಚಿತ್ರವನ್ನ ಸೆನ್ಸಾರ್ ಮಾಡಲೇ ಇಲ್ಲ. ಕೋರ್ಟಿಗೆ ಹೋಗ್ತೀವಿ ಅಂದ್ಮೇಲೆ ಕೊನೆಗೆ ಸೆನ್ಸಾರ್ ಮಾಡಿದ ಅಂತಲೇ ಡೈರೆಕ್ಟರ್ ರವೀಂದ್ರ ವಂಶಿ ಹೇಳಿದರು.


ಕಾಳಿ ಸ್ವಾಮಿ ಚಿತ್ರದ ಟ್ರೈಲರ್ ನೋಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್​ ಇನ್ನೇನೂ ಮೂರು ನಾಲ್ಕು ದಿನ ಇದೆ. ಈಗ ವಿರೋಧ ಮಾಡಿದ್ರೆ ಚಿತ್ರ ರಿಲೀಸ್ ಮಾಡೋದು ಹೇಗೆ? ರಿಷಿಕುಮಾರ್​ ಸ್ವಾಮಿಜಿ ಫೋನ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ ಅಂತಲೇ ರವೀಂದ್ರ ವಂಶಿ ದೂರಿದ್ದಾರೆ.


ಮಠ ಚಿತ್ರದಲ್ಲಿ ಮಠ ಚಿತ್ರದ ಡೈರೆಕ್ಟರ್ ಗುರು ಪ್ರಸಾದ್ ಕೂಡ ಇದ್ದಾರೆ. ಸಾಧು ಕೋಕಿಲಾ, ತಬಲಾ ನಾಣಿ, ಬಿರಾದಾರ ಎಲ್ಲರೂ ಇಲ್ಲಿ ಸ್ವಾಮಿಜಿಗಳ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದೇ ನವೆಂಬರ್-18 ಕ್ಕೆ ಚಿತ್ರ ರಿಲೀಸ್ ಮಾಡೋಕೆ ಸಿನಿಮಾ ತಂಡ ಮುಂದಾಗಿದೆ.

First published: