ಮಾರ್ಟಿನ್ ಸಿನಿಮಾ ಟೀಸರ್ (Martin Movie Teaser Hack) ಸೂಪರ್ ಆಗಿದೆ. ಸೂಪರ್ ರೆಸ್ಪಾನ್ಸ್ ಪಡೆದು ಮುನ್ನುಗುತ್ತಲೇ ಇತ್ತು. ಚಿತ್ರದ ಟೀಸರ್ ಓಟಕ್ಕೆ ಜನ ಫಿದಾ ಆಗಿದ್ದರು. ಆ್ಯಕ್ಷನ್ ಪ್ರಿನ್ಸ್ ಅಬ್ಬರವನ್ನ ಈ ಮೂಲಕ (Martin All Comments Delete) ಮಿಲಿಯನ್‌ಗಟ್ಟಲೆ ಜನ ವೀಕ್ಷಿಸಿದ್ದರು. 80 ಸಾವಿರ ಕಾಮೆಂಟ್ಸ್ ಕೂಡ ಬಂದಿದ್ದವು. ಆದರೆ ಎಲ್ಲದಕ್ಕೂ ಓಡೋ ಕುದುರೆಗೆ ಕಾಲುಕಟ್ಟಿ ಹಾಕಿ ಕೆಳಗೆ ಕೆಡವಿದಂಗೆ ಆಗಿದೆ. ಇದ್ದ ಎಲ್ಲ ಕಾಮೆಂಟ್ಸ್ (Movie Teaser Hack) ಮಾಯವಾಗಿವೆ. 83.5 ಮಿಲಿಯನ್ ವೀವರ್ಸ್ ಮುಂದೆ ಹೋಗ್ತಾನೆ ಇಲ್ಲ. 10.5 ಲೈಕ್ಸ್ ಗಾಯಬ್ ಆಗಿವೆ. ಯಾಕೆ ಹಿಂಗೆ? ಏನ್ ಆಗಿದೆ ಈಗ ಈ ಎಲ್ಲ ಪ್ರಶ್ನೆಗೆ (Martin Film Team Upset) ಚಿತ್ರದ ಡೈರೆಕ್ಟರ್ ಎ.ಪಿ. ಅರ್ಜುನ್ ಉತ್ತರ ಕೊಟ್ಟಿದ್ದಾರೆ.
ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಅರ್ಜುನ್ ಮಾತು ಇಲ್ಲಿದೆ ಓದಿ.
ಮಾರ್ಟಿನ್ ಟೀಸರ್ ಮೋಡಿ ಮಾಡಿತ್ತು. ಸಿನಿಮಾ ಪ್ರೇಮಿಗಳು ಫುಲ್ ಖುಷ್ ಆಗಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಹಿಂಗಿರಬೇಕು ಅನ್ನೋದೇ ಅವರ ಒಟ್ಟು ಮಾತಾಗಿತ್ತು. ಸಿನಿಮಾ ನೋಡೋ ಥಿಯೇಟರ್‌ನಲ್ಲಿ ಕುಳಿತು ಈ ಒಂದು ಚಿತ್ರದ ಟೀಸರ್ ನೋಡಿ ಖುಷಿಪಟ್ಟಿದ್ದರು.
ಆ್ಯಕ್ಷನ್ ಪ್ರಿನ್ಸ್ ಧ್ರುವ ಮಾರ್ಟಿನ್ ಟೀಸರ್ ಹ್ಯಾಕ್ ಮಾಡಿದ್ದ್ಯಾರು?
ಯುಟ್ಯೂಬ್‌ನಲ್ಲೂ ಮಾರ್ಟಿನ್ ಟೀಸರ್ ಹಂಗಾಮಾ ಮಾಡಿತ್ತು. ದೇಶ-ವಿದೇಶ ಸೇರಿದಂತೆ ಪಕ್ಕದ ರಾಜ್ಯದಲ್ಲೂ ಮಾರ್ಟಿನ್ ಅಬ್ಬರಿಸಿತ್ತು. ಇದರಿಂದ ಇಡೀ ಸಿನಿಮಾ ತಂಡದ ಖುಷಿಗೆ ಪಾರವೇ ಇರಲಿಲ್ಲ. ಆದರೆ, ಅದ್ಯಾವುದೋ ದೇಶದಲ್ಲಿ ಕುಳಿತ ಆದ್ಯಾರೋ ಕನ್ನಡದ ಮಾರ್ಟಿನ್ ಮೇಲೆ ತಮ್ಮ ಹೊಟ್ಟೆ ಕಿಚ್ಚನ್ನ ತೀರಿಸಿಕೊಂಡಂತಿದೆ ನೋಡಿ.
ಮಾರ್ಟಿನ್ ಚಿತ್ರದ ಟೀಸರ್ ಸಡನ್ ಆಗಿ ಡಿಲೀಟ್ ಆಗಿದೆ. ನೋಡ ನೋಡುತ್ತಲೇ ಎಲ್ಲ ಕಾಮೆಂಟ್ಸ್ ಮಾಯವಾಗಿವೆ. ವೀವ್ಸ್ ಅಂತೂ ಕೇಳಬೇಡಿ. ಎಲ್ಲಿದೆಯೊ ಅಲ್ಲಿಯೇ ನಿಂತು ಬಿಟ್ಟಿದೆ. ಲೈಕ್ಸ್ ಎಲ್ಲವೂ ಇಲ್ಲವೇ ಇಲ್ಲ. ಟಾಪ್ ಅಲ್ಲಿದ್ದ ಮಾರ್ಟಿನ್ ಟೀಸರ್ ಇನ್ನೇನು ಕೆಲವೇ ದಿನಗಳಲ್ಲಿ ದಾಖಲೆ ಮಾಡುತ್ತಿತ್ತು. ಆದರೆ ಎಲ್ಲವೂ ಈಗ ಮತ್ತೆ ಜೀರೋದಿಂದಲೇ ಶುರು ಆಗಬೇಕಿದೆ.
ಮಾರ್ಟಿನ್ ಟೀಸರ್ ಹ್ಯಾಕರ್ಸ್ ಏಟಿಗೆ ಬಲಿ ಆಯಿತೇ?
ಮಾರ್ಟಿನ್ ಚಿತ್ರದ ಟೀಸರ್ ಡಿಲೀಟ್ ಆಗಿದೆ. ಇದಕ್ಕೆ ಕಾರಣ ಹ್ಯಾಕರ್ಸ್ ಅನ್ನೋದು ಅಷ್ಟೇ ಸತ್ಯ. ಲಹರಿ ಸಂಸ್ಥೆಯ ಇಡೀ ಚಾನಲ್ ಹ್ಯಾಕ್ ಆಗಿದೆ. ಆದರೆ ಅದರಲ್ಲಿ ಮಾರ್ಟಿನ್ ಟೀಸರ್ ಮಾತ್ರ ಡಿಲೀಟ್ ಆಗಿದೆ. ಇದರಿಂದ ಮಾರ್ಟಿನ್ ಟೀಮ್ ಬೇಸರಗೊಂಡಿದೆ. ಡೈರೆಕ್ಟರ್ ಎ.ಪಿ. ಅರ್ಜುನ್ ಆದ ನಷ್ಟದ ಕುರಿತು ಮಾತನಾಡಿದ್ದಾರೆ.
ನಮ್ಮ ಚಿತ್ರದ ಟೀಸರ್ ಡಿಲೀಟ್ ಆಗಿದೆ. ಇದರಿಂದ 80 ಸಾವಿರ ಕಾಮೆಂಟ್ಸ್ ಈಗ ಇಲ್ವೇ ಇಲ್ಲ. ರೀಸ್ಟೋರ್ ಮಾಡಿದಾಗ 8 ಸಾವಿರ ಕಾಮೆಂಟ್ಸ್ ಮಾತ್ರ ಉಳಿದಿದೆ. ದುರಂತ ಅಂದ್ರೆ ವೀವ್ಸ್ ನಿಲ್ ಆಗಿದೆ. ಮುಂದೆ ವೀವ್ಸ್ ಬರ್ತಾನೇ ಇಲ್ಲ.
ಮಾರ್ಟಿನ್ ಟೀಸರ್ ಡಿಲೀಟ್-ಡೈರೆಕ್ಟರ್ ಎ.ಪಿ. ಅರ್ಜುನ್ ಬೇಸರ
ಹೀಗೆ ತಮ್ಮ ಬೇಸರವನ್ನ ಡೈರೆಕ್ಟರ್ ಎ.ಪಿ. ಅರ್ಜುನ್ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಟೀಸರ್ ಮೇಲೆ ಈ ರೀತಿ ಆಕ್ರೋಶ ತೋರಿದ್ರೆ ಏನಾಗುತ್ತದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರದ ಟೀಸರ್ ರೀಚ್ ಆದಾಗ ಇದೆಲ್ಲ ಮಾಡಿದ್ರೆ ಏನ್ ಆಗುತ್ತದೆ ಅನ್ನೋ ಪ್ರಶ್ನೆ ಕೂಡ ಸಿನಿಮಾ ತಂಡದಲ್ಲಿ ಮೂಡಿದೆ.
ಮಾರ್ಟಿನ್ ಸಿನಿಮಾವನ್ನ ಇಡೀ ತಂಡ ಅಷ್ಟೇ ಶ್ರದ್ಧೆಯಿಂದಲೇ ಮಾಡಿದೆ. ಇನ್ನಿಲ್ಲದಂತೆ ಶ್ರಮವಹಿಸಿ ಸಿನಿಮಾ ತಯಾರು ಮಾಡಿದೆ. ಅದರಲ್ಲಿಯ ಅದ್ಭುತ ದೃಶ್ಯಗಳ ಒಂದು ಟೀಸರ್ ಮಾಡಿ ಎಲ್ಲರಿಗೂ ಕೊಟ್ಟಿದೆ. ಚೆನ್ನಾಗಿ ಓಡ್ತಿರೋ ಟೀಸರ್ ಅನ್ನ ಹೀಗೆ ಹ್ಯಾಕ್ ಮಾಡಿ ಎಲ್ಲ ಅಯೋಮಯ ಆಗೋ ಹಾಗೆ ಮಾಡಿದ್ರೆ ಹೇಗೆ? ಈ ಒಂದು ಪ್ರಶ್ನೆ ಸಿನಿಮಾ ಟೀಮ್ ಅನ್ನ ಕಾಡ್ತಾನೇ ಇದೆ.
ಮಾರ್ಟಿನ್ ಟೀಸರ್ ಡಿಲೀಟ್ ಆಗಿರೋದು ಯಾಕೆ?
ಮಾರ್ಟಿನ್ ಚಿತ್ರ ಈ ಒಂದು ಸಮಸ್ಯೆಯನ್ನ ಎದುರಿಸುತ್ತಿದೆ. ಲಹರಿ ಯುಟ್ಯೂಬ್ ಚಾನಲ್‌ನಲ್ಲಿ ಎಲ್ಲ ಕಂಟೆಂಟ್ ಹಾಗೇ ಇದೆ. ಆದರೆ ಮಾರ್ಟಿನ್ ಟೀಸರ್ ಮಾತ್ರ ಡಿಲೀಟ್ ಆಗಿದೆ ಅನ್ನುವ ಮಾತು ಇದೆ. ಆದರೆ ಹೆಚ್ಚು ಕಡಿಮೆ 5 ದಿನಗಳವರೆಗೆ ಇಡೀ ಯುಟ್ಯೂಬ್ ಚಾನಲ್ ಹ್ಯಾಕ್ ಆಗಿದೆ.
ರಷ್ಯಾದಲ್ಲಿ ಕುಳಿತು ಅದ್ಯಾರೋ ಇಡೀ ಯುಟ್ಯೂಬ್ ಚಾನಲ್ ಅನ್ನ ಹ್ಯಾಕ್ ಮಾಡಿದ್ದಾರೆ ಅನ್ನೋದೇ ಈಗ ತಿಳಿದಿರೋ ಸತ್ಯ ಆಗಿದೆ. ಲಹರಿ ಸಂಸ್ಥೆ ಕೂಡ ಎಲ್ಲವನ್ನೂ ರೀಸ್ಟೋರ್ ಮಾಡುವಲ್ಲಿ ನಿರತವಾಗಿದೆ ಅನ್ನೋದೇ ಒಟ್ಟು ಸದ್ಯದ ಮಾಹಿತಿ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ