Martin Teaser: 12 ಗಂಟೆಯಲ್ಲಿ 12 ಮಿಲಿಯನ್ ವೀಕ್ಷಣೆ! ಮಾರ್ಟಿನ್ ಟೀಸರ್ ಅಬ್ಬರ ಜೋರು

ಅಸಾಮಾನ್ಯ ಮಾರ್ಟಿನ್-ರೋಮಾಂಚನಕಾರಿ ಸಾಹಸ

ಅಸಾಮಾನ್ಯ ಮಾರ್ಟಿನ್-ರೋಮಾಂಚನಕಾರಿ ಸಾಹಸ

ಮಾರ್ಟಿನ್ ಟೀಸರ್​ಗೆ ಒಂದು ಗಂಟೆಗೆ ಒಂದು ಮಿಲಿಯನ್ ವ್ಯೂಸ್ ಅನ್ನೊ ರೀತಿ 12 ಮಿಲಿಯನ್ ಬಂದಿದೆ. ಅಲ್ಲಿಗೆ ಇಡೀ ಚಿತ್ರದ ಈ ಟೀಸರ್ ಮೋಡಿ ಎಷ್ಟಿದೆ ಅಂತ ಅಂದಾಜು ಮಾಡಬಹುದು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Martin Movie Teaser) ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ನಿರೀಕ್ಷೆ ಮಾಡದಷ್ಟು ಕ್ರೇಜ್ ಹುಟ್ಟಿಸಿದೆ. ಟೀಸರ್ ವೀಕ್ಷಿಸಿದ ಪ್ರತಿಯೊಬ್ಬರು ವಾರೆ ವ್ಹಾ ಅಂತಲೇ ಹೇಳುತ್ತಿದ್ದಾರೆ. ಪ್ರತಿ ಪ್ರೇಕ್ಷಕರಲ್ಲೂ ಒಂದು ಥ್ರಿಲ್ (Martin Teaser Released) ಮೂಡುತ್ತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರ (Action Prince Dhruva Sarja) ಜೀವನದಲ್ಲಿ ಮಾರ್ಟಿನ್ ಬೇರೆ ಲೆವಲ್​​ನ ಸಿನಿಮಾ ಆಗಿದೆ. ಇದರ ಟೀಸರ್ ಸಾಮಾನ್ಯವಾಗಿ ಎಲ್ಲ ಸಿನಿಮಾಗಳ ರೀತಿ ಇರುತ್ತದೆ ಅನ್ನುವ ಒಂದು ಅಂದಾಜಿತ್ತು. ಆದರೆ ಮಾರ್ಟಿನ್ (Pan India Martin Movie) ಟೀಸರ್ ಎಲ್ಲವನ್ನೂ ಮೀರಿಸಿದೆ.


ಪ್ರೇಕ್ಷಕರಲ್ಲಿ ಅಭಿಮಾನಿಗಳಲ್ಲಿ ಹೊಸದೊಂದು ಅಲೆಯನ್ನ ಎಬ್ಬಿಸಿದ್ದು ಮಿಲಿಯನ್ ಗಟ್ಟಲೆ ವ್ಯೂಸ್​​ ಪಡೆದು ಹೊಸ ಕ್ರೇಜ್ ಹುಟ್ಟಿಸಿಬಿಟ್ಟಿದೆ.


Kannada Martin Movie Teaser Got 12 million Views in 12 Hours
ಪ್ಯಾನ್ ಇಂಡಿಯಾ ಮಾರ್ಟಿನ್ ಹೊಸ ಅಲೆ


ಸಾಮಾನ್ಯವಾಗಿ ಧ್ರುವ ಸರ್ಜಾ ಫ್ಯಾನ್ ಫಾಲೋಯಿಂಗ್ ದೊಟ್ಟಮಟ್ಟದಲ್ಲಿಯೇ ಇದೆ. ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್​ ಟೀಸರ್ ಫುಲ್ ವೈರಲ್
ಇವರು ಆಯಾ ಪೇಜ್​ಗಳಲ್ಲೋ, ವಾಟ್ಸ್​ ಅಪ್​ ಗ್ರೂಪ್​ಗಳಲ್ಲೋ ಶೇರ್ ಮಾಡಬಹುದು? ಇಲ್ಲವೇ ಟ್ವಿಟರ್ ಪೇಜ್​ ಅಲ್ಲಿ ಶೇರ್ ಮಾಡಿ ಹಬ್ಬ ಮಾಡಬಹುದು ಅಂತಲೇ ತಿಳಿದುಕೊಳ್ಳಲಾಗಿತ್ತು.


ಆದರೆ ಮಾರ್ಟಿನ್ ಚಿತ್ರದ ಟೀಸರ್ ವಿಷಯದಲ್ಲಿ ಅದರ ಅಗತ್ಯ ಬೀಳಲೇ ಇಲ್ಲ ನೋಡಿ, ಯಾಕೆಂದ್ರೆ ಮಾರ್ಟಿನ್ ಸಿನಿಮಾದ ಟೀಸರ್ ಎಲ್ಲರನ್ನೂ ಸೆಳೆದು ಬಿಡಬಲ್ಲ ಶಕ್ತಿಯನ್ನ ಹೊಂದಿದೆ.


ಅಸಾಮಾನ್ಯ ಮಾರ್ಟಿನ್-ರೋಮಾಂಚನಕಾರಿ ಸಾಹಸ
ಇದನ್ನ ನೋಡಿದ ಪ್ರತಿಯೊಬ್ಬರಲ್ಲೂ ಒಂದು ಥ್ರಿಲ್ ಮೂಡುತ್ತದೆ. ಮಾರ್ಟಿನ್ ಟೀಸರ್ ಸಾಮಾನ್ಯವಾಗಿಲ್ಲ ಅನ್ನುವ ಭಾವನೆ ಮೊದಲ ವೀಕ್ಷಣೆಯಲ್ಲಿಯೇ ಮೂಡಿ ಬಿಡುತ್ತದೆ.


ಮಾರ್ಟಿನ್ ಟೀಸರ್​ನ್ನ ಅನೇಕರು ವೀಕ್ಷಿಸಿದ್ದಾರೆ. ಯಾರನ್ನು ಕೇಳಿದರೂ ಅಲ್ಲಿಗೆ ಈ ಟೀಸರ್​ ಕುರಿತು ಒಳ್ಳೆ ಅಭಿಪ್ರಾಯ ಬಂದಿದೆ. ಇನ್ನು ಕೆಲವರು ಚಿತ್ರದ ಟೀಸರ್ ಹೀಗೆ ಇರುತ್ತದೆ ಅಂತ ಭಾವಿಸಿರಲಿಲ್ಲ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.


ಮಾರ್ಟಿನ್ ಟೀಸರ್ ಕಂಡ ಫ್ಯಾನ್ಸ್ ಫುಲ್ ಥ್ರಿಲ್!
ಅಷ್ಟು ಪ್ರಭಾವ ಬೀರಿರೋ ಟೀಸರ್​​ನಲ್ಲಿ ಚಿತ್ರದ ಭರ್ಜರಿ ಆ್ಯಕ್ಷನ್​ಗಳ ಝಲಕ್ ಸಿಕ್ಕಿದೆ. ಧ್ರುವ ಸರ್ಜಾ ಪಾತ್ರ ಪರಿಚಯವೂ ಆಗಿದೆ. ಇದರಲ್ಲಿ ಆ ಪಾತ್ರದ ಕ್ರೌರ್ಯ ಕಾಣುತ್ತದೆ. ಆದರೆ ಈ ಕ್ರೌರ್ಯ ಯಾತಕ್ಕಾಗಿ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಇದೆ. ಡೈರೆಕ್ಟರ್ ಎ. ಪಿ. ಅರ್ಜುನ್ ಅದನ್ನ ಸದ್ಯಕ್ಕೆ ಟೀಸರ್​​ನಲ್ಲಿ ಬಿಟ್ಟುಕೊಟ್ಟಿಲ್ಲ. ಹಾಗೇನೆ ಎಲ್ಲವೂ ಹೇಳದೆ ಎಲ್ಲದರ ಝಲಕ್ ಕೊಟ್ಟಿದ್ದಾರೆ.


ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಮಾರ್ಟಿನ್ ಟೀಸರ್
ತುಂಬಾನೇ ಥ್ರಿಲ್ಲಿಂಗ್ ಆಗಿರೋ ಮಾರ್ಟಿನ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಮಾಡ್ತಾನೇ ಇದೆ. ಇದರ ಬೆನ್ನಲ್ಲಿಯೇ ರಿಲೀಸ್ ಆದ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನಲ್​ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.


ಒಂದು ಗಂಟೆಗೆ ಒಂದು ಮಿಲಿಯನ್ ವೀವ್ಸ್ ಅನ್ನು ರೀತಿ 12 ಮಿಲಿಯನ್ ವೀವ್ಸ್ ಈ ಒಂದೇ ಒಂದು ಟೀಸರ್​ಗೆ ಬಂದಿದೆ. ಅಲ್ಲಿಗೆ ಇಡೀ ಚಿತ್ರದ ಈ ಟೀಸರ್ ಮೋಡಿ ಎಷ್ಟಿದೆ ಅಂತಲೇ ಅಂದಾಜು ಮಾಡಬಹುದು.


Kannada Martin Movie Teaser Got 12 million Views in 12 Hours
ಮಿಲಿಯನ್ ಗಟ್ಟಲೆ ವೀವ್ಸ್ ಪಡೆದ ಮಾರ್ಟಿನ್ ಟೀಸರ್


ಪ್ಯಾನ್ ಇಂಡಿಯಾ ಮಾರ್ಟಿನ್ ಹೊಸ ಅಲೆ
ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾರ್ಟಿನ್ ಬೇರೆ ರೀತಿಯಾಗಿಯೇ ಇದೆ. ತಾಜಾತನದಿಂದಲೂ ಈ ಒಂದು ಟೀಸರ್ ಕೂಡಿದೆ ಅಂತಲೇ ಹೇಳಬಹುದು.


ಇದನ್ನೂ ಓದಿ: Shruti Haasan: ಸಲಾರ್​ಗೆ ಗುಡ್​ ಬೈ ಹೇಳಿದ ಶ್ರುತಿ ಹಾಸನ್! ದಿಢೀರ್ ಏನಾಯ್ತು?


ಚಿತ್ರದಲ್ಲಿ ಇದೇ ತಾಜಾತನ ಮತ್ತು ನಿರೀಕ್ಷೆ ಮಾಡದೇ ಇರೋ ಸಾಹಸಗಳೂ ಇರಬಹುದು ಅನ್ನುವ ಒಂದು ಅಂದಾಜನ್ನ ಕೂಡ ಮಾರ್ಟಿನ್ ಟೀಸರ್ ಈಗ ಕೊಟ್ಟಿದೆ ಅಂತ ಹೇಳಬಹುದು. ಒಟ್ಟಾರೆ, ಮಾರ್ಟಿನ್ ಹೊಸ ಅಲೆ ಎಬ್ಬಿಸೋ ಸಣ್ಣ ಸೂಚನೆ ಕೊಟ್ಟಿದೆ.

First published: