ಕಾಂತಾರ ಚಿತ್ರ ಖ್ಯಾತಿಯ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ರು ಒಳ್ಳೆ ಕಥೆಗಳನ್ನೆ ಸಿನಿಮಾ ಮಾಡಿದ್ದಾರೆ. ಇವರ ಸಿನಿಮಾಗಳ ಕಥೆ ಕೂಡ ವಿಶೇಷವಾಗಿರುತ್ತವೆ. ಕಾಂತಾರ (Kantara Cinema Director) ಚಿತ್ರ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಆಗಿದೆ. ಇದಕ್ಕೂ ಮೊದಲು ರಿಷಬ್ ಶೆಟ್ರು ಒಂದು ಸಿನಿಮಾ ಮಾಡಿದ್ದರು. ಈ ಚಿತ್ರ ಬರುವ (K Kalyan Unknown Facts) ಮುಂಚೆನೂ ಅನೇಕರು ಆ ವಿಷಯದ ಮೇಲೆ ಚಿತ್ರಗಳನ್ನ ಮಾಡಿದ್ರು. ಆದರೆ ರಿಷಬ್ ಶೆಟ್ರ ಸಿನಿಮಾ ಬೇಗ ರೀಚ್ ಆಯಿತು. ತಲುಪಿಸಬೇಕಾಗಿರೋ ವಿಷಯವನ್ನ ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಹೇಳಿದ್ದರು. ಈ ಒಂದು ಕಾರಣಕ್ಕೆ ಸಿನಿಮಾ ಜನರ ಹೃದಯದಲ್ಲಿ ಈಗಲೂ ಇದೆ. ಇದೇ ಚಿತ್ರದ ಒಂದು ಹಾಡು ಈಗಲೂ ಜನರ ಮನದಲ್ಲಿ ಉಳಿದಿದೆ.
ಇದನ್ನ ಪ್ರೇಮ ಕವಿ ಕೆ.ಕಲ್ಯಾಣ್ ಬರೆದುಕೊಟ್ಟಿದ್ದರು. ಹಾಗೆ ಈ ಹಾಡಿನ (He Sharade Song Making) ರಚನೆಯ ಸಮಯದ ಒಂದಷ್ಟು ಸ್ವಾರಸ್ಯಕರ ಕಥೆಗಳೂ ಇವೆ. ಅದನ್ನ ಇಲ್ಲಿ ಹೇಳ್ತಾ ಹೋಗಿದ್ದೇವೆ ಓದಿ.
ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಒಂದು ಅದ್ಭುತ ಸಿನಿಮಾ ಮಾಡಿದ್ದರು. ಸರ್ಕಾರಿ ಶಾಲೆಗಳ ಸ್ಥಿತಿ-ಗತಿಯನ್ನ ಈ ಚಿತ್ರ ಹೇಳಿತ್ತು. ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಈ ಚಿತ್ರದಲ್ಲಿದ್ದವು. ಚಿತ್ರ ಆಗ ಜನರಿಗೆ ರೀಚ್ ಆಯಿತು. ಚಿತ್ರದಲ್ಲಿದ್ದ ಹಾಡುಗಳು ಎಲ್ಲರ ಮನಸನ್ನ ಕದ್ದಿದ್ದವು.
ವಿಶೇಷವೆಂದ್ರೆ ಈ ಚಿತ್ರದಲ್ಲಿ ಕೆ.ಕಲ್ಯಾಣ್ ಅವರೂ ಒಂದು ಗೀತೆ ಬರೆದಿದ್ದರು. ಈ ಗೀತೆ ತುಂಬಾ ಸ್ಪೆಷಲ್ ಆಗಿಯೇ ಬಂದಿತ್ತು. ಇದನ್ನ ಕೇಳಿದ ಸಿನಿಮಾ ತಂಡದ ಪ್ರತಿಯೊಬ್ಬರು ಇಷ್ಟಪಟ್ಟರು. ರಿಷಬ್ ಶೆಟ್ರು ವಿಶೇಷವಾಗಿಯೇ ಕಲ್ಯಾಣ್ ಅವರಿಗೆ ಧನ್ಯವಾದ ಹೇಳಿದರು.
ಹೇ ಶಾರದೇ ಹಾಡು ಹುಟ್ಟಿದ್ದು ಹೇಗೆ?
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ರಿಷಬ್ ಶೆಟ್ಟಿ ಒಳ್ಳೆ ವಿಷಯವನ್ನೇ ಹೇಳಿದ್ದರು. ಇದರಿಂದ ಪ್ರೇಕ್ಷಕರಲ್ಲಿ ಒಂದು ಸಣ್ಣ ಜಾಗೃತಿನೂ ಮೂಡಿತ್ತು. ಇದಕ್ಕೂ ಹೆಚ್ಚಾಗಿ ರಿಷಬ್ ಶೆಟ್ರು ತಮ್ಮ ಈ ಚಿತ್ರದಲ್ಲಿ ಒಂದು ಪ್ರಾರ್ಥನೆ ಗೀತೆ ಇಡಬೇಕು ಅಂತಲೇ ಪ್ಲಾನ್ ಮಾಡಿದ್ದರು.
ಅದೇ ರೀತಿ ಗೀತರಚನಕಾರ ಕೆ.ಕಲ್ಯಾಣ್ ಅವರಿಗೂ ಹೇಳಿದರು. ಸಿನಿಮಾದ ಸನ್ನಿವೇಶವನ್ನು ಫೋನ್ ನಲ್ಲಿ ವಿವರಿಸಿದ್ದರು. ಆದರೆ ಹಾಗೆ ಮಾತನಾಡೋವಾಗ ಫೋನ್ ನೆಟ್ವರ್ಕ್ ಸರಿ ಇರಲೇ ಇಲ್ಲ. ಆದರೂ ಪ್ರೇಮ್ ಕವಿ. ಕಲ್ಯಾಣ್ ಕೇಳಿದಷ್ಟೇ ವಿಷಯವನ್ನ ಅರ್ಥ ಮಾಡಿಕೊಂಡು ಪ್ರಾರ್ಥನೆ ಗೀತೆ ಪ್ಲಾನ್ ಮಾಡಿದ್ದರು.
ಹೇ ಶಾರದೇ ಹಾಡು ಕೇವಲ 10 ನಿಮಿಷದಲ್ಲಿ ಹುಟ್ಟಿತು!
ಚಿತ್ರದ ಸಂಗೀತ ನಿರ್ದೇಶ ವಾಸುಕಿ ವೈಭವ್ ಮೇಲೂ ಒತ್ತಡ ಇತ್ತು. ಬೇಗ ಹಾಡನ್ನ ರೆಕಾರ್ಡ್ ಮಾಡೋ ಅವಶ್ಯಕತೆನೂ ಇತ್ತು. ಹಾಗಾಗಿಯೇ ರಾತ್ರಿ ವೇಳೆ ಕೆ.ಕಲ್ಯಾಣ್ ಅವರಿಗೆ ವಾಸುಕಿ ವೈಭವ್ ಕಾಲ್ ಮಾಡಿದರು. ಬೇಗ ಲಿರಿಕ್ಸ್ ಕೊಟ್ರೆ ಅನುಕೂಲ ಆಗುತ್ತದೆ ಅಂತಲೂ ಹೇಳಿದ್ದರು.
ವಾಸುಕಿ ವೈಭವ್ ಕಾಲ್ ಮಾಡಿದಾಗ ಊಟ ಮಾಡುತ್ತಿದ್ದ ಕೆ.ಕಲ್ಯಾಣ್, ಊಟ ಮಾಡಿ ಕಾಲ್ ಮಾಡುವೆ ಅಂತಲೇ ಹೇಳಿದ್ದರು. ಹೇಳಿದಂತೆ ಕೆ.ಕಲ್ಯಾಣ್ ಕಾಲ್ ಮಾಡಿದ್ದರು. ಟ್ಯೂನ್ ಹೇಳು ಅಂತಲೇ ವಾಸುಕಿಗೆ ಹೇಳಿದರು. ವಾಸುಕಿ ಟ್ಯೂನ್ ಹೇಳಿದರು. ಕೆ.ಕಲ್ಯಾಣ್ ಸಾಲುಗಳನ್ನ ಹೇಳ್ತಾ ಹೋದ್ರು.
ಪಲ್ಲವಿ-ಎರಡು ಚರಣ 40 ನಿಮಿಷದಲ್ಲಿ ಫುಲ್ ರೆಡಿ!
ಹೇ ಶಾರದೆ ಹಾಡನ್ನ ಕೆ.ಕಲ್ಯಾಣ್ 10 ನಿಮಿಷದಲ್ಲಿ ಬರೆದಿದ್ದರು. ವಾಸುಕಿ ವೈಭವ್ ಟ್ಯೂನ್ ಹೇಳಿದಂತೆ, ತಾವೇ ಬರೆದ ಸಾಲುಗಳನ್ನ ಹೇಳ್ತಾ ಹೋಗಿದ್ದರು. ಹಾಗೆ ಫೋನ್ ಪ್ರೋಸಸ್ ನಲ್ಲಿ ರೆಡಿಯಾದ ಹಾಡಿನ ಒಂದು ಪಲ್ಲವಿ ಮತ್ತು ಎರಡು ಚರಣ 40 ನಿಮಿಷದಲ್ಲಿ ರೆಡಿ ಆಯಿತು.
ಮರು ದಿನವೇ ಹೇ ಶಾರದೇ ಹಾಡಿನ ರೆಕಾರ್ಡಿಂಗ್
ಹೇ ಶಾರದೇ ಹಾಡಿನ ರೆಕಾರ್ಡಿಂಗ್ ಅನ್ನು ವಾಸುಕಿ ವೈಭವ ಮರು ದಿನ ಬೆಳಗ್ಗೇನೆ ಮುಗಿಸಿದ್ದರು. ಕೆ.ಕಲ್ಯಾಣ್ ಪೋನ್ನಲ್ಲಿ ಏನೇ ಕೇಳಿದ್ರು, ಹಾಡಿನ ಸಾಲುಗಳನ್ನ ಹೇಳಿಯೇ ರಿಯ್ಯಾಕ್ಟ್ ಮಾಡುತ್ತಿದ್ದರು. ವಾಸುಕಿ ಮನಸ್ಸಿನಲ್ಲಿ ಅಷ್ಟೊಂದು ಆಳವಾಗಿಯೇ ಈ ಗೀತೆ ಇಳಿದಿತ್ತು.
ಇದನ್ನ ಗಮನಿಸಿದ ಪ್ರೇಮ ಕವಿ ಕೆ.ಕಲ್ಯಾಣ್ ತುಂಬಾ ಖುಷಿಪಟ್ಟರು. ತಮ್ಮ ಒಂದು ಗೀತೆ ಇಷ್ಟೊಂದು ಚೆನ್ನಾಗಿ ಬಂದಿದೆ ಅನ್ನೋದೇ ಅವರ ಖುಷಿಗೆ ಕಾರಣವೂ ಆಗಿತ್ತು. ಹಾಗೇ ಈ ಗೀತೆಯನ್ನ ಕೇಳಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತುಂಬಾ ಮೆಚ್ಚಿಕೊಂಡಿದ್ದರು.
ಕೆ.ಕಲ್ಯಾಣ ಕಂಡೊಡನೆ ತಬ್ಬಿಕೊಂಡು ಸೂಪರ್ ಎಂದ ರಿಷಬ್
ಹೇ ಶಾರದೇ ಹಾಡಿನ ಚಿತ್ರೀಕರಣ ಆದ್ಮೇಲೆ ಕೆ.ಕಲ್ಯಾಣ್ ಮತ್ತು ರಿಷಬ್ ಶೆಟ್ಟಿ ಮುಖಾ-ಮುಖಿ ಭೇಟಿ ಆಗಿರಲಿಲ್ಲ. ಆದರೆ ಅದಕ್ಕೆ ಒಮ್ಮೆ ಅವಕಾಶವೂ ಸಿಕ್ಕಿತು. ಹಾಗೆ ನೇರವಾಗಿ ಭೇಟಿಯಾದಾಗ ಕೆ.ಕಲ್ಯಾಣ್ ಅವರನ್ನ ರಿಷಬ್ ಶೆಟ್ರು ತಬ್ಬಿಕೊಂಡು ಸೂಪರ್ ಸಾಂಗ್ ಅಂತಲೇ ಹೇಳಿದ್ದರು.
ಇದನ್ನೂ ಓದಿ: Sonam Kapoor: ಸೋನಂ ಕಪೂರ್ ಮಗ ಹೇಗಿದ್ದಾನೆ? ವಾಯು ಫೋಟೋ ಬಗ್ಗೆ ನಟಿ ಹೇಳಿದ್ದೇನು?
ಹೇ ಶಾರದೇ ನಿಜಕ್ಕೂ ಒಂದು ಒಳ್ಳೆ ಸಾಂಗ್ ಆಗಿದೆ. ಕೆ.ಕಲ್ಯಾಣ್ ಅಂದುಕೊಂಡಂತೆ ಇದು ಎಲ್ಲರೂ ಹಾಡಿಕೊಳ್ಳುವ ಒಂದು ಪ್ರಾರ್ಥನೆ ಗೀತೆ ಆಗಿದೆ. ಇದನ್ನ ಕೆ.ಕಲ್ಯಾಣ್ ಆಗಾಗ ನೆನಪಿಸಿಕೊಳ್ತಾನೇ ಇರ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ