• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ponniyin Selvan: ಮಣಿರತ್ನಂ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆ ರಚನೆ; ಹಾಡು ಕೇಳಿದ್ರೆ ನಿಮ್ಮ ದಿಲ್ ಖುಷ್

Ponniyin Selvan: ಮಣಿರತ್ನಂ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆ ರಚನೆ; ಹಾಡು ಕೇಳಿದ್ರೆ ನಿಮ್ಮ ದಿಲ್ ಖುಷ್

ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಕಿರುನಗೆ ಎಂಬ ಅದ್ಭುತ ಗೀತೆ

ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಕಿರುನಗೆ ಎಂಬ ಅದ್ಭುತ ಗೀತೆ

ಜಯಂತ್ ಕಾಯ್ಕಿಣಿ ಅವರು ಬರೆದ ಈ ಹಾಡಿನಲ್ಲಿ ಸರಳ ಪದಗಳ ಬಳಕೆ ಆಗಿದೆ. ನಗು ಅನ್ನೋದು ಎಲ್ಲೆಡೆ ಇರುತ್ತದೆ ಅನ್ನೋದು ಇಲ್ಲಿ ಅದ್ಭುತ ಕಲ್ಪನೆಯನ್ನ ಕಟ್ಟಿಕೊಡುತ್ತದೆ. ಅದರಂತೆ ಜಯಂತ್ ಕಾಯ್ಕಿಣಿ ಬರೆದ ಹಾಡಿನ ಕೆಲವು ಸಾಲುಗಳು ಇಂತಿವೆ ಓದಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:
  • published by :

ಕನ್ನಡದ ಚಿತ್ರ ಸಾಹಿತಿ ಮತ್ತು ಕವಿ ಜಯಂತ್ ಕಾಯ್ಕಿಣಿ (Jayant Kaikini Special Song)ಅವರು ಇಲ್ಲಿವರೆಗೂ ಕನ್ನಡದ ಹಾಡುಗಳನ್ನೆ ಬರೆದಿದ್ದಾರೆ. ಇವರ ಬಳಕೆಯ ಆ ಪದಗಳು ಎಲ್ಲರ ಹೃದಯದಲ್ಲಿ ಹಾಗೆ ಉಳಿದು (PS2 Movie Song Release) ಬಿಡುತ್ತವೆ. ಆದರೆ ಇದೀಗ ಕನ್ನಡದ ಕವಿ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ತಮಿಳು ಚಿತ್ರಕ್ಕೆ ಹಾಡು ಬರೆದಿದ್ದಾರೆ. ಆದರೆ ಅದು ಕನ್ನಡದಲ್ಲಿಯೇ ಅನ್ನೊದೇ (Ponniyin Selvan-2 Movie) ವಿಶೇಷ. ದಕ್ಷಿಣದ ಹೆಸರಾಂತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಪೊನ್ನಿಯಿನ್ ಸೆಲ್ವನ್-2 ಚಿತ್ರದ ಹಾಡಿಗೇನೆ ಜಯಂತ್ ಕಾಯ್ಕಿಣಿ ಅದ್ಭುತ ಸಾಲುಗಳ ಕಿರುನಗೆ ಅನ್ನುವ (Mani Ratnam Movie) ಹಾಡನ್ನ ಬರೆದಿದ್ದಾರೆ. ಈ ಹಾಡಿನ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.


ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಕಿರುನಗೆ ಎಂಬ ಅದ್ಭುತ ಗೀತೆ


ಪೊನ್ನಿಯಿನ್ ಸೆಲ್ವನ್-2 ಸಿನಿಮಾ ರೆಡಿ ಆಗಿದೆ. ಏಪ್ರಿಲ್-28 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಸದ್ಯದ ಟ್ರೆಂಡ್‌ನಂತೆ ಈ ಚಿತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಬಹು ತಾರೆಯರ ಬಹು ಕೋಟಿಯ ವೆಚ್ಚದ ಈ ಸಿನಿಮಾದ ಪಾರ್ಟ್‌ ಒನ್ ಈಗಾಗಲೇ ಗೆದ್ದು ಬೀಗಿದೆ.


Kannada Lyric Writer Jayant Kaikini Wrote Special Song for Ponniyin Selvan-2 Movie
ಕಿರುನಗೆ ಎಂಬ ಹಾಡಿನಲ್ಲಿ ಹತ್ತು ಹಲವು ವಿಶೇಷತೆಗಳು


ಮಣಿರತ್ನಂ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅದ್ಭುತ ಹಾಡು ರಚನೆ


ಇದೀಗ ಪೊನ್ನಿಯನ್ ಸೆಲ್ವನ್-2 ಚಿತ್ರದ ಸರದಿ ಬಂದಿದೆ. ಸಿನಿಮಾದ ಒಂದೊಂದೇ ವಿಷಯ ಹೊರ ಬೀಳುತ್ತಿವೆ. ಆ ಒಂದು ಲೆಕ್ಕದಲ್ಲಿ ಈಗ ಚಿತ್ರದ ಒಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ಕನ್ನಡದ ಹಾಡು ತುಂಬಾ ಚೆನ್ನಾಗಿಯೇ ಮೂಡಿ ಬಂದಿದೆ.




ಕನ್ನಡದ ಹೆಸರಾಂತ ಕವಿ ಮತ್ತು ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಈ ಒಂದು ಗೀತೆಯನ್ನ ರಚಿಸಿಕೊಟ್ಟಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಈ ಗೀತೆ ತುಂಬಾ ಚೆನ್ನಾಗಿಯೇ ಬಂದಿದೆ. ರಕ್ಷಿತಾ ಸುರೇಶ್ ಇದನ್ನ ಅದ್ಭುತವಾಗಿಯೇ ಹಾಡಿದ್ದಾರೆ.


ಕಿರುನಗೆ ಎಂಬ ಹಾಡಿನಲ್ಲಿ ಹತ್ತು ಹಲವು ವಿಶೇಷತೆಗಳು


ಕಿರುನಗೆ ಅಂತಲೇ ಶುರು ಆಗೋ ಈ ಗೀತೆಗೆ ತಮಿಳು ನಟ ಕಾರ್ತಿ ಮತ್ತು ತ್ರಿಷಾ ಮೇಲೆ ಈ ಒಂದು ಗೀತೆಯನ್ನ ಚಿತ್ರಿಸಲಾಗಿದೆ. ಆದರೆ ಈಗ ಬಿಟ್ಟಿರೋ ಲಿರಿಕಲ್ ವಿಡಿಯೋದಲ್ಲಿ ಈ ಕಲಾವಿದರ ಪಾತ್ರದ ಚಿತ್ರಗಳು ರಾರಾಜಿಸುತ್ತಿವೆ. ಇಡೀ ಹಾಡಿನ ಚಿತ್ರಣವನ್ನ ಸ್ಪೆಷಲ್ ಆಗಿಯೇ ಕಟ್ಟಿಕೊಡುತ್ತವೆ.




ಜಯಂತ್ ಕಾಯ್ಕಿಣಿ ಅವರು ಬರೆದ ಈ ಹಾಡಿನಲ್ಲಿ ಸರಳ ಪದಗಳ ಬಳಕೆ ಆಗಿದೆ. ನಗು ಅನ್ನೋದು ಎಲ್ಲೆಡೆ ಇರುತ್ತದೆ ಅನ್ನೋದು ಇಲ್ಲಿ ಅದ್ಭುತ ಕಲ್ಪನೆಯನ್ನ ಕಟ್ಟಿಕೊಡುತ್ತದೆ. ಅದರಂತೆ ಜಯಂತ್ ಕಾಯ್ಕಿಣಿ ಬರೆದ ಹಾಡಿನ ಕೆಲವು ಸಾಲುಗಳು ಇಂತಿವೆ ಓದಿ.


ಕಿರು ನಗೆ ಕಿರು ನಗೆ


ಹೃದಯದಲಿ...


ಮೆಲು ನಗೆ ಮೆಲು ನ


ಸುಮನದಲಿ...


ಕುಡಿ ನಗೆ ಕುಡಿ ನಗೆ


ಅಡವಿಯಲಿ...


ಭುವನವೇ ನಗುತ್ತಿದೆ


ಬೆಡಗಿನಲಿ...


ಹೀಗೆ ಅದ್ಭುತ ಕವಿತೆಯನ್ನ ಈ ಒಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅವರು ಬರೆದುಕೊಟ್ಟಿದ್ದಾರೆ. ಹಾಗೇನೆ ಇನ್ನೂ ಸರಳಿ ಮತ್ತು ಸುಮಧುರ ಅನೀಸೋ ಫೀಲ್ ಇಡೀ ಹಾಡನ್ನ ಕೇಳ್ತಾ ಹೋದಂತೆ ನಿಮಗೆ ಖಂಡಿತಾ ಆಗುತ್ತದೆ.


Kannada Lyric Writer Jayant Kaikini Wrote Special Song for Ponniyin Selvan-2 Movie
ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಕಿರುನಗೆ ಎಂಬ ಅದ್ಭುತ ಗೀತೆ


ಜಯಂತ್ ಕಾಯ್ಕಿಣಿ ಕಲ್ಪನೆಯ ಸುಮಧುರ ಪ್ರಳಯ ಎಂಬ ಪದ ಬಳಕೆ


ಜಯಂತ್ ಅವರು ಇಡೀ ಹಾಡಿನಲ್ಲಿ ಅದ್ಭುತ ಪದಗಳ ಬಳಕೆ ಜೊತೆಗೆ ಸುಮಧುರ ಪ್ರಳಯ ಅನ್ನುವುದು ಇಲ್ಲಿ ವಿಶೇಷ ಕಾಣುತ್ತದೆ. ಅಷ್ಟು ವಿಶೇಷವಾಗಿಯೇ ಇರೋ ಈ ಹಾಡು ರಿಲೀಸ್ ಆಗಿದೆ. ಕೇಳುವ ಮತ್ತು ಸಾಹಿತ್ಯ ಅಭಿರುಚಿ ಇರೋ ಜನ ಈ ಗೀತೆಯನ್ನ ತುಂಬಾ ಇಷ್ಟಪಡ್ತಾರೆ ಅಂತಲೇ ಹೇಳಬಹುದು.


ಇದನ್ನೂ ಓದಿ: Kichcha Sudeepa: ಡಾಲಿ ನಿಮ್ಮ ಪಾತ್ರಕ್ಕೆ ಮೀಸೆ ಯಾಕಿಲ್ಲ? ಕಿಚ್ಚ ಪ್ರಶ್ನೆಗೆ ಧನಂಜಯ್ ಕೊಟ್ಟ ಆನ್ಸರ್ ಇಂಟ್ರೆಸ್ಟಿಂಗ್

top videos


    ಇನ್ನು ಚಿತ್ರ ಏಪ್ರಿಲ್-28 ರಂದು ರಿಲೀಸ್ ಆಗುತ್ತಿದೆ. ಪಾರ್ಟ್ ಒನ್ ರೀತಿ ಈ ಚಿತ್ರವೂ ಬಹು ನಿರೀಕ್ಷೆಯನ್ನೆ ಹುಟ್ಟುಹಾಕಿದೆ. ಮತ್ತೊಂದು ಗೆಲುವಿನತ್ತ ಸಾಗಲು ಈಗ ರೆಡಿ ಆಗುತ್ತಿದೆ. ಸದ್ಯಕ್ಕೆ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

    First published: