ಲವ್ ಮಾಕ್ಟೆಲ್ ಚಿತ್ರದ ರಿಯಲ್ (Love birds Cinema) ಜೋಡಿ ಜೊತೆಗಿದ್ರೇನೆ ಬೆಲೆ ಅಲ್ವೇ? ಬೇರೆ ಬೇರೆ ಆದ್ರೆ ಈ ರಿಯಲ್ ಲವ್ ಬರ್ಡ್ಸ್ಗೆ ಬೆಲೆ ಜಾಸ್ತಿ ಇಲ್ಲ ಅಲ್ವಾ? ಈ ಒಂದು ಮಾತು ನಾವು ಹೇಳ್ತಿಲ್ಲ. ಲವ್ ಬರ್ಡ್ಸ್ ಚಿತ್ರದಲ್ಲಿ ಅಭಿನಯಿಸಿರೋ ನಟಿ ಸಂಯುಕ್ತಾ ಹೊರನಾಡು ಈ ಒಂದು ಡೈಲಾಗ್ ಹೊಡೆಯುತ್ತಾರೆ. ಇದು ರಿಯಲ್ ಲೈಫ್ (Darling Krishna)ಜೋಡಿಗೂ ಹೇಳಿದಂತಿದೆ. ಲವ್ ಬರ್ಡ್ಸ್ ಪುಟ್ಟ ಪಕ್ಷಿಗೂ ಅಸಲಿ ವಿಚಾರವನ್ನೂ (Milana Nagaraj) ಹೇಳುತ್ತದೆ ಅನಿಸುತ್ತದೆ. ಲವ್ ಬರ್ಡ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗುವ ಮುಂಚೇ ಒಂದು ಕುತೂಹಲ ಇತ್ತು. ಸಿನಿಮಾದಲ್ಲಿ ಏನೋ (Love Birds Trailer Review) ಇದೆ ಅನ್ನೋ ಭಾವನೆ ಕೂಡ ಕೆರಳಿತ್ತು.
ಆದರೆ ಟ್ರೈಲರ್ ನೋಡಿ ಆದ್ಮೇಲೆ ಡೈರೆಕ್ಟರ್ ಪಿ.ಸಿ.ಶೇಖರ್ ಇಡೀ ಕಥೆ ಮೂಲ ಎಳೆಯನ್ನೆ ಬಿಟ್ಟುಕೊಟ್ರೇ ಅಂತಲೇ ಅನಿಸುತ್ತದೆ. ಇದರ ಸುತ್ತ ಇಲ್ಲಿ ಒಂದು ರಿವ್ಯೂ ಸ್ಟೋರಿ ಇದೆ.
ಚಿತ್ರದ ಟ್ರೈಲರ್ ನಲ್ಲಿ ಲವ್ ಬರ್ಡ್ಸ್ ಕಥೆ ರಿವೀಲ್ ಆಯಿತೇ?
ಲವ್ ಬರ್ಡ್ಸ್ ಚಿತ್ರದ ಪೋಸ್ಟರ್ಗಳು ಕುತೂಹಲ ಮೂಡಿಸಿದ್ದವು. ಟೀಸರ್ ಅಂತೂ ಮಜಾ ಕೊಟ್ಟಿದ್ದವು. Feb 09 ರಂದು ರಿಲೀಸ್ ಆದ ಟ್ರೈಲರ್ ಇಡೀ ಕಥೆ ತಿರುಳು ಬಿಟ್ಟುಕೊಟ್ಟಂತೆ ಕಾಣುತ್ತಿದೆ.
ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆ ಆಗುತ್ತಾರೆ. ಮುಂದೆ ಒಂದು ದಿನ ಇವರ ನಡುವಿನ ಪ್ರೀತಿ ಹಳಸಿ ಹೋಗುತ್ತದೆ. ಅದರಿಂದ ಇಬ್ಬರೂ ಪರಸ್ಪರ ಜಗಳವಾಡುತ್ತಾರೆ. ಆ ಬಳಿಕ ದೂರ ದೂರ ಆಗ್ತಾರೆ ಅನ್ನೋದನ್ನ ಟ್ರೈಲರ್ ನೋಡಿದಾಕ್ಷಣ ಹೇಳಿ ಬಿಡಬಹುದು.
ಲವ್ ಬರ್ಡ್ಸ್ ಚಿತ್ರವನ್ನ ಜನ ನೋಡೋದು ಬೇಡ್ವೇ?
ಲವ್ ಬರ್ಡ್ಸ್ ಸಿನಿಮಾ ಮೂಲ ಕಥೆಯನ್ನ ಟ್ರೈಲರ್ನಲ್ಲಿ ತೋರಿಸಿದ್ರೆ, ಚಿತ್ರದಲ್ಲಿ ಇನ್ನು ಏನು ಇರುತ್ತದೆ. ಲವ್ ಬರ್ಡ್ಸ್ ಚಿತ್ರದ ಕಥೆ ಗೊತ್ತಾಯಿತು ಬಿಡಿ ಅನ್ನುವ ಹಾಗೇನೆ ಚಿತ್ರದ ಟ್ರೈಲರ್ ಇದೆ.
ಲವ್ ಬರ್ಡ್ಸ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೆಮೆಸ್ಟ್ರಿ ಸಖತ್ ಆಗಿಯೇ ವರ್ಕೌಟ್ ಆಗಿದೆ. ಲವ್ ಮಾಕ್ಟೆಲ್ ಚಿತ್ರದಲ್ಲಿ ರಿಯಲ್ ಜೋಡಿ ರಿಯಲ್ ಆಗಿಯೇ ಅಭಿನಯಸಿ ಜನರ ಮನಸ್ಸು ಗೆದ್ದಿದ್ದರು.
ಲವ್ ಬರ್ಡ್ಸ್ ನಲ್ಲಿ ಸಂಯುಕ್ತಾ ಸಖತ್ ಡೈಲಾಗ್
ಲವ್ ಬರ್ಡ್ಸ್ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ವಕೀಲೆ ಪಾತ್ರ ಮಾಡಿದ್ದಾರೆ. ಇವರ ಡೈಲಾಗ್ ಸೂಪರ್ ಆಗಿಯೇ ಇವೆ. ಈ ಚಿತ್ರದಲ್ಲಿ ಸಂಯುಕ್ತಾ ಹುಡುಕಿಕೊಂಡು ಲವರ್ ಬರ್ಡ್ಸ್ ಬರ್ತಾರೋ? ಲವ್ ಬರ್ಡ್ಸ್ ಹುಡುಕಿಕೊಂಡು ಸಂಯುಕ್ತಾ ಬರ್ತಾರೋ ಅನ್ನೋದು ಸದ್ಯದ ಕುತೂಹಲ ಆಗಿದೆ.
ಲವ್ ಬರ್ಡ್ಸ್ ದೂರ ದೂರ ಇದ್ರೆ ಬೆಲೆ ಕಡಿಮೆ. ಜೊತೆಗೆ ಇದ್ದರೇ ಬೆಲೆ ಜಾಸ್ತಿ ಅಂತಲೇ ಸಂಯುಕ್ತಾ ಹೊರನಾಡು ಇಲ್ಲಿ ಹೇಳುತ್ತಾರೆ. ಇದಕ್ಕೆ ಸಾಕಷ್ಟು ಅರ್ಥ ಇದೆ. ಇದನ್ನ ಟ್ರೈಲರ್ನಲ್ಲಿ ನೋಡಿದಾಗ ಒಂದು ಅರ್ಥ ಬರುತ್ತದೆ. ಸಿನಿಮಾದಲ್ಲಿ ಮತ್ತೆ ಬೇರೆ ಅರ್ಥ ಬರಬಹುದು ಅನಿಸುತ್ತದೆ.
ಸಾಧು ಕೋಕಿಲಾ, ರಂಗಾಯಣ ರಘು ಕಾಮಿಡಿ ಟಾನಿಕ್
ಲವ್ ಬರ್ಡ್ಸ್ ಚಿತ್ರದಲ್ಲಿ ಸಾಧು ಕೋಕಿಲಾ, ರಂಗಾಯಣ ರಘು ಹಾಸ್ಯದ ಹೊಣೆ ಹೊತ್ತಿದ್ದಾರೆ. ಮಿಲನಾ ನಾಗರಾಜ್ ತಂದೆ ಪಾತ್ರವನ್ನ ಸಾಧು ಕೋಕಿಲಾ ಮಾಡಿದ್ದಾರೆ. ರಂಘಾಯಣ ರಘು ನಾಯಕನ ಪೋಷಕರ ಪಾತ್ರ ಮಾಡಿದ್ದಾರೆ. ಹಾಗಂತ ನಾವು ಈಗಲೇ ಹೇಳೋದಿಲ್ಲ. ಈಗೀನ ಟ್ರೈಲರ್ ನೋಡಿದಾಗ ಆ ಫೀಲ್ ಆಗುತ್ತದೆ.
ಮದುವೆ ಬಗ್ಗೆ ಡಾರ್ಲಿಂಗ್ ಕೃಷ್ಣ ಸಖತ್ ಡೈಲಾಗ್
ಡಾರ್ಲಿಂಗ್ ಕೃಷ್ಣ ಕೂಡ ಇಲ್ಲಿ ಮಸ್ತ್ ಡೈಲಾಗ್ ಹೊಡೆದಿದ್ದಾರೆ. ಮಂಗನಿಂದ ಮಾನವ ಆಗಲು ಸಾಕಷ್ಟು ಟೈಮ್ ಆಗಿದೆ. ಆದರೆ ಮನುಷ್ಯನಿಂದ ಮಂಗ ಆಗಲು ಒಂದು ಮದುವೆ ಸಾಕು ಅಂತ ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ.
ಇಂತಹ ಡೈಲಾಗ್ಗಳು ಇಲ್ಲಿ ಜಾಸ್ತಿನೇ ಇವೆ ಅನಿಸುತ್ತದೆ. ಮದುವೆ ಬಗ್ಗೆ ಇರೋ ಸರಿ ಮತ್ತು ತಪ್ಪುಗಳನ್ನ ಇಲ್ಲಿ ಡೈಲಾಗ್ ಮೂಲಕವೂ ಡೈರೆಕ್ಟರ್ ಪಿ.ಸಿ.ಶೇಖರ್ ಕನ್ವೆ ಮಾಡಿದ್ದು, ಚಿತ್ರದ ರಿಲೀಸ್ ಡೇಟ್ನ್ನ ಕೂಡ ಇದೇ ಟ್ರೈಲರ್ನಲ್ಲಿ ಹೇಳಿದ್ದಾರೆ.
ಫೆಬ್ರವರಿ-17 ರಂದು ಲವ್ ಬರ್ಡ್ಸ್ ಸಿನಿಮಾ ರಿಲೀಸ್
ಲವ್ ಬರ್ಡ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪ್ರೇಮಿಗಳ ದಿನ ಮುಗಿದ ಮೇಲೆ ಈ ಲವ್ ಬರ್ಡ್ಸ್ ಚಿತ್ರ ರಿಲೀಸ್ ಆಗುತ್ತಿದ್ದು, ಫೆಬ್ರವರಿ-17 ರಂದು ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಸಿನಿಮಾ ಹಾಡುಗಳಿಂದಲೂ ಗಮನ ಸೆಳೆಯುತ್ತಿದೆ. ಟೀಸರ್ ಮತ್ತು ಪೋಸ್ಟರ್ನಿಂದಲೂ ಎಲ್ಲರ ಹೃದಯವನ್ನ ತಟ್ಟುವ ಕೆಲಸ ಮಾಡಿದೆ. ಟ್ರೈಲರ್ ಇಡೀ ಚಿತ್ರದ ಒಟ್ಟು ತಿರುಳು ಕಟ್ಟಿಕೊಟ್ಟಿದೆ ಅಂತಲೂ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ