ಸ್ಯಾಂಡಲ್ವುಡ್ನ ಲಿರಿಕ್ ರೈಟರ್ (Lyric Writer Kaviraj) ಕವಿರಾಜ್ ಯಾರಿಗೆ ಗೊತ್ತಿಲ್ಲ ಹೇಳಿ? ಸ್ಯಾಂಡಲ್ವುಡ್ ಕ್ವೀನ್ ರಮ್ಯ ಅಭಿನಯದ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಅದ್ಭುತ ಗೀತೆಗಳನ್ನ (Darling Krishna-Milana Nagaraj) ರಚಿಸಿಕೊಟ್ಟಿದ್ದರು. ಈ ಚಿತ್ರದ ಎಲ್ಲ ಹಾಡುಗಳೂ ಈಗಲೂ ಕೇಳುವಂತಿದೆ. ಎಲ್ಲ ಕಾಲಕ್ಕೂ ಸಲ್ಲುವ ಈ ಗೀತೆಯಂತೆ ಕನ್ನಡದ (Love Birds Movie) ಲವ್ ಬರ್ಡ್ಸ್ ಚಿತ್ರಕ್ಕೆ ಕವಿರಾಜ್ ಒಂದ್ ಒಳ್ಳೆ ಹಾಡು ಬರೆದುಕೊಟ್ಟಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಈ ಗೀತೆಯ ಲಿರಿಕಲ್ ವಿಡಿಯೋ ಮಾತ್ರ ಈಗ ರಿಲೀಸ್ ಆಗಿದೆ. ನಿರ್ದೇಶಕ ಪಿ.ಸಿ.ಶೇಖರ್ (Diretor PC Shekar) ಈ ಒಂದು ಹಾಡಿನ ಹಿನ್ನೆಲೆಯಲ್ಲಿ ಮೇಕಿಂಗ್ ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ. ಅದರ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ ಒಮ್ಮೆ ಓದಿ.
ಲವ್ ಬರ್ಡ್ಸ್ಗಾಗಿ ಕವಿ ಬರೆದರು ಪಳ ಪಳ ಹಾಡು
ಕನ್ನಡ ಚಿತ್ರರಂಗದ ರಿಯಲ್ ಪೇರ್ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಮತ್ತೆ ಬೆಳ್ಳಿ ತೆರೆ ಮೇಲೆ ಬಂದಿದ್ದಾರೆ. ಒಟ್ಟಿಗೆ ವಿಭಿನ್ನವಾಗಿ ಕಾಣಿಸಿಕೊಂಡು ಮತ್ತೊಮ್ಮೆ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆ ಹೇಳೋಕೆ ಲವ್ ಬರ್ಡ್ಸ್ ಆಗಿಯೇ ಬರ್ತಿದ್ದಾರೆ.
ಲವ್ ಬರ್ಡ್ಸ್ ಚಿತ್ರದ ಮೂಲಕ ಈ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಬರ್ತಿದೆ. ಪಿ.ಸಿ.ಶೇಖರ್ ಈ ಜೋಡಿಯನ್ನ ಡೈರೆಕ್ಟ್ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಅಭಿನಯದ ಮೇಕಿಂಗ್ ವಿಡಿಯೋವನ್ನು ಕೂಡ ರಿವೀಲ್ ಮಾಡಿದ್ದಾರೆ.
ಲವ್ ಬರ್ಡ್ಸ್ ಚಿತ್ರಕ್ಕೆ ಕವಿರಾಜ್ ಸೂಪರ್ ಸಾಹಿತ್ಯದ ಗೀತೆ
ಲವ್ ಬರ್ಡ್ಸ್ ಸಿನಿಮಾದಲ್ಲಿ ಒಳ್ಳೆ ಹಾಡುಗಳನ್ನ ಪ್ಲಾನ್ ಮಾಡಲಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಅದ್ಭುತ ಟ್ಯೂನ್ಗಳೇ ಬಂದಿದೆ. ಇದಕ್ಕೆ ಸೂಕ್ತ ಅನಿಸೋ ಸಾಲುಗಳನ್ನ ಗೀತರಚನೆಕಾರ ಕವಿರಾಜ್ ಒಳ್ಳೆ ಹಾಡು ಬರೆದುಕೊಟ್ಟಿದ್ದಾರೆ. ಈ ಹಾಡಿನ ಸಾಲು ತುಂಬಾ ವಿಶೇಷವಾಗಿಯೇ ಇವೆ.
ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ
ಇನ್ನು ನನ್ನದೇ
ಕಣೋ ಹುಡುಗನೇ
ಗೆಳೆಯನೇ..
ನಿನ್ನ ಪಿಸು ಪಿಸು ನುಡಿಗಳ
ಆಲಿಸೋ ಹಂಬಲ
ಮುಗಿಯೋದಿಲ್ಲ
ಕಣೋ.. ಹುಡುಗನೇ
ಇನಿಯನೇ
ಮಡಿಲಲ್ಲಿ ಜಾಗ ಕೊಡುವೆ
ಮಗುವೇ ಆಗುವೇ..
ಇಗೊ ತಗೋ ಪಾದದಡಿಯಲಿ
ಹೃದಯವೇ ಇರಿಸುವೇ...
ಗೀತರಚನೆಕಾರ ಕವಿರಾಜ್ ಇಷ್ಟು ಸರಳ ಪದಗಳಲ್ಲಿಯೇ ಸುಂದರ ಹಾಡನ್ನ ಕಟ್ಟಿಕೊಟ್ಟಿದ್ದಾರೆ. ಚೆಂದದ ಸಾಲುಗಳನ್ನ ಹೆಸರಾಂತ ಗಾಯಕಿ ಐಶ್ವರ್ಯ ರಂಗರಾಜನ್ ತುಂಬಾ ವಿಶೇಷವಾಗಿಯೇ ಹಾಡಿದ್ದಾರೆ. ಅದರ ಮೇಕಿಂಗ್ ವಿಡಿಯೋ ಕೂಡ ಈಗ ರಿಲೀಸ್ ಆಗಿದೆ.
ಲವ್ ಬರ್ಡ್ಸ್ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್
ಲವ್ ಬರ್ಡ್ಸ್ ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಕೂಡ ಲಿರಿಕಲ್ ವಿಡಿಯೋ ಮೂಲಕ ರಿವೀಲ್ ಆಗಿದೆ. ವೀಣಾ ಸುಂದರ್, ರಂಗಾಯಣ ರಘು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಧು ಕೋಕಿಲಾ ಇಲ್ಲೂ ಹಾಸ್ಯದ ಹೊನಲು ಹರಿಸಲಿದ್ದಾರೆ. ಸಂಯುಕ್ತಾ ಹೊರನಾಡು, ಅವಿನಾಶ್ ಈ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಫೆಬ್ರವರಿ-17 ರಂದು ಲವ್ ಬರ್ಡ್ಸ್ ಸಿನಿಮಾ ರಿಲೀಸ್
ಲವ್ ಬರ್ಡ್ಸ್ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಸಿನಿಮಾ ಒಂದೊಂದೇ ಪಾತ್ರವನ್ನ ಡೈರೆಕ್ಟರ್ ಪಿ.ಸಿ.ಶೇಖರ್ ರಿವೀಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ಒಂದು ಟೀಸರ್ ಕೂಡ ರಿಲೀಸ್ ಆಗಿತ್ತು. ಅದರಲ್ಲಿ ನಾಯಕ ನಾಯಕಿಯ ಪಾತ್ರದ ಪರಿಚಯ ಕೂಡ ಆಗಿತ್ತು. ಈಗ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಇದನ್ನೂ ಓದಿ: Alia Bhatt: ಮಗಳೇ ನನ್ನ ಮೊದಲ ಆದ್ಯತೆ! ನಟನೆಗೆ ಬ್ರೇಕ್ ಕೊಡ್ತಾರಾ ಆಲಿಯಾ ಭಟ್!?
ಫೆಬ್ರವರಿ-17 ರಂದು ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. ನಟ-ನಿರ್ಮಾಪಕ ಚಂದ್ರು ಈ ಚಿತ್ರಕ್ಕೆ ದುಡ್ಡುಹಾಕಿದ್ದಾರೆ. ರಿಯಲ್ ಜೋಡಿಯ ಸಿನಿಮ್ಯಾಟಿಕ್ ಕಥೆಯನ್ನ ನೋಡಲು ಜನರಲ್ಲಿ ಈಗಲೇ ಒಂದು ಸಣ್ಣ ಕುತೂಹಲ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ