ಸ್ಯಾಂಡಲ್ವುಡ್ನಲ್ಲಿ ಅನೇಕ (Sandalwood Director) ನಿರ್ದೇಶಕರಿದ್ದಾರೆ. ಇವರಲ್ಲಿ ತುಂಬಾ ಸ್ಪೆಷಲ್ ಅನಿಸೋ ನಿರ್ದೇಶಕರಲ್ಲಿ ಪವನ್ ಕುಮಾರ್ (Director Pawan Kumar) ಕೂಡ ಒಬ್ಬರು. ಇವರನ್ನ ಕೇವಲ ಪವನ್ ಕುಮಾರ್ ಅಂದ್ರೆ ಬೇಗ ಅರ್ಥ ಆಗೋದಿಲ್ಲ. ಲೂಸಿಯಾ ಪವನ್ ಅಂದಾಕ್ಷಣ ಒಂದು ಸ್ಪೆಷಲ್ ಮುಖ ಚಹರೆ ಕಣ್ಮುಂದೆ ಬರುತ್ತದೆ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿದ ಪವನ್ ಕುಮಾರ್, ಲೂಸಿಯಾ ಮೂಲಕ ಎಲ್ಲರ ಹೃದಯದಲ್ಲಿ ಈಗಲೂ ಇದ್ದಾರೆ. ಇವರನ್ನ ಯಾರೂ ಮರೆತಿಲ್ಲ. ಅಂತಹ ಪವನ್ ಕುಮಾರ್, ಲೈಫು ಇಷ್ಟೇನೆ (Life Istene Re-Release) ಅಂತ ಒಂದು ಚಿತ್ರ ಮಾಡಿದ್ದರು. ಈ ಚಿತ್ರದ ಬಗ್ಗೆ ಪವನ್ ಕುಮಾರ್ ಅವರಿಗೆ ವಿಶೇಷ ಪ್ರೀತಿ ಇದೆ.
ಈ ಪ್ರೀತಿಯಿಂದಲೇ ಪವನ್ ಕುಮಾರ್ ತಮ್ಮ ಈ ಚಿತ್ರವನ್ನ ಪ್ರೇಮಿಗಳ (Valentine's week Movie Re-Release) ದಿನದ ನಾಲ್ಕು ದಿನದ ಮುಂಚೆ ಮತ್ತೆ ರಿಲೀಸ್ ಮಾಡುತ್ತಿದ್ದಾರೆ.
ಪ್ರೇಮಿಗಳಿಗಾಗಿ ಲೈಫು ಇಷ್ಟೇನೆ ಚಿತ್ರ ರೀ-ರಿಲೀಸ್
ಕನ್ನಡದ ಲೈಫು ಇಷ್ಟೇನೆ ಚಿತ್ರ ರಿಲೀಸ್ ಆಗಿ 12 ವರ್ಷ ಕಳೆದಿದೆ. 2011 ರಂದು ಸೆಪ್ಟೆಂಬರ್-09 ರಂದು ಈ ಚಿತ್ರ ರಿಲೀಸ್ ಆಗಿತ್ತು. ಆಗ ಈ ಚಿತ್ರದ ಡೈರೆಕ್ಟರ್ ಪವನ್ ಕುಮಾರ್ ಅವರಿಗೆ ಇದು ಮೊದಲ ಸಿನಿಮಾ ಆಗಿತ್ತು. ಅಂತಹ ಈ ಚಿತ್ರ ಆ ಟೈಮ್ನಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ಕೊಟ್ಟಿತ್ತು.
ದೂದ್ ಪೇಡ ದಿಗಂತ್, ಸಿಂಧೂ ಲೋಕನಾಥ್, ನೀನಾಸಂ ಸತೀಶ್, ಸಂಯುಕ್ತಾ ಹೊರನಾಡು, ಹೀಗೆ ಕನ್ನಡ ಕಲಾವಿದರ ದಂಡೇ ಈ ಚಿತ್ರದಲ್ಲಿತ್ತು. ಇವರ ಅಭಿನಯದಲ್ಲಿ ಕನ್ನಡ ಜನತೆಯ ಮನಸ್ಸಿಗೆ ಈ ಲೈಫು ಇಷ್ಟೇನೆ ಚಿತ್ರ ಬಹುವಾಗಿಯೇ ಇಷ್ಟ ಆಗಿತ್ತು.
ಲೈಫು ಇಷ್ಟೇನೆ ಮತ್ತೆ ರೀ ರಿಲೀಸ್ ಯಾಕೆ ಗೊತ್ತೆ?
ಡೈರೆಕ್ಟರ್ ಪವನ್ ಕುಮಾರ್ ಅವರಿಗೆ ಲೈಫು ಇಷ್ಟೇನೆ ಚಿತ್ರ ತುಂಬಾ ವಿಶೇಷ ಚಿತ್ರವೇ ಆಗಿದೆ. ಈ ಚಿತ್ರ ನಿರ್ದೇಶಿಸೋ ಮುಂಚೇನೆ ಯೋಗರಾಜ್ ಭಟ್ ಅವರ ಮನಸಾರೆ, ಪಂಚರಂಗಿ ಚಿತ್ರಕ್ಕೆ ಸ್ಕ್ರಿಪ್ಟ್ ವರ್ಕ್ ಮಾಡಿದ್ದರು. ಆದರೆ ಲೈಫು ಇಷ್ಟೇನೆ ಚಿತ್ರ ಪವನ್ ಕುಮಾರ್ ಅವರಿಗೆ ಹೊಸ ಅನುಭವವನ್ನೆ ನೀಡಿತ್ತು.
ಚಿತ್ರದ ಮೊದಲ ದಿನದ ಮೊದಲ ದೃಶ್ಯವನ್ನ ಈಗಲೂ ನೆನಪಿಸಿಕೊಳ್ಳುವ ಪವನ್ ಕುಮಾರ್, ಆ ಒಂದು ದೃಶ್ಯ ನನಗೆ ತುಂಬಾ ಫೇವರಿಟ್ ಅಂತಲೂ ಹೇಳಿಕೊಳ್ತಾರೆ. ಅಂತಹ ಈ ವಿಶೇಷ ಅನುಭವ ಕೊಟ್ಟ ಚಿತ್ರವನ್ನ ಪವನ್ ರೀ-ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಪ್ರೇಮಿಗಳಿಗೆ ಪಾಠ ಹೇಳಲು ಮತ್ತೆ ಬರ್ತಿದೆ ಲೈಫು ಇಷ್ಟೇನೆ ಚಿತ್ರ!
ಲೈಫು ಇಷ್ಟೇನೆ ಸಿನಿಮಾ ವಿಶೇಷವಾಗಿಯೇ ಇದೆ. ರೋಮ್ಯಾಂಟಿಕ್ ಕಾಮಿಡಿ ಕಂಟೆಂಟ್ ಹೊಂದಿರೋ ಈ ಚಿತ್ರವನ್ನ ಮತ್ತೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಕೇವಲ ಕೆಲವೇ ಕೆಲವು ಚಿತ್ರಮಂದಿರದಲ್ಲಿ ಲೈಫು ಇಷ್ಟೇನೆ ಚಿತ್ರ ರಿಲೀಸ್ ಆಗುತ್ತಿದೆ.
A limited theatrical re-release of my first film "Lifeu Ishtene" to help boys, girls, men, women, and others deal with valentine's week.
FEB 10, 2023 - Do watch in theatres. It's a Romantic Comedy. pic.twitter.com/xDne8I9qg4
— Pawan Kumar (@pawanfilms) February 4, 2023
ನನ್ನ ಮೊದಲ ಸಿನಿಮಾ ಪ್ರೇಮಿಗಳ ದಿನದ ವಾರವೇ ರಿಲೀಸ್ ಆಗುತ್ತಿದೆ. ಈ ಮೂಲಕ ಯುವಕರಿಗೆ, ಯುವತಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರೇಮಿಗಳ ದಿನವನ್ನ ಆಚರಿಸಲು ಹೆಲ್ಪ್ ಆಗಲಿದೆ ಅಂತಲೇ ಡೈರೆಕ್ಟರ್ ಪವನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಲೈಫು ಇಷ್ಟೇನೆ ಚಿತ್ರಕ್ಕೆ ಮನೋ ಮೂರ್ತಿ ಸಂಗೀತದ ಸ್ಪರ್ಶ
ಲೈಫು ಇಷ್ಟೇನೆ ಚಿತ್ರದಲ್ಲಿ ಒಳ್ಳೆ ಹಾಡುಗಳು ಇದ್ದವು. ಸಿನಿ ಪ್ರೇಮಿಗಳು ಮನೋ ಮೂರ್ತಿಯವರ ಸಂಗೀತದ ಹಾಡುಗಳನ್ನ ಮೆಚ್ಚಿಕೊಂಡಿದ್ದರು. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪವನ್ ಕುಮಾರ್ ಈ ಚಿತ್ರಕ್ಕೆ ಅದ್ಘುತ ಸಾಹಿತ್ಯವನ್ನ ರಚಿಸಿಕೊಟ್ಟಿದ್ದರು.
ಇದನ್ನೂ ಓದಿ: Lata Mangeshkar: ಮೊದಲ ಹಾಡಿಗೆ 25 ರೂಪಾಯಿ ಪಡೆದಿದ್ದ ಲತಾ ಮಂಗೇಶ್ಕರ್! ಯಾರ ಪಾಲಾಯ್ತು ಗಾನ ಕೋಗಿಲೆಯ ಕೋಟಿ ಕೋಟಿ ಆಸ್ತಿ?
ಯೋಗರಾಜ್ ಭಟ್ ಅವರು ಬರೆದ "ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು" ಹಾಡು ಹೆಚ್ಚು ಜನಪ್ರಿಯತೆ ಪಡೆದಿತ್ತು. ಹಾಡುಗಳ ಮೂಲಕವೂ ಜನರನ್ನ ಸೆರೆಹಿಡಿದಿದ್ದ ಲೈಫು ಇಷ್ಟೇನೆ ರೀ-ರಿಲೀಸ್ ಆಗುತ್ತಿದೆ. ಪ್ರೇಮಿಗಳ ದಿನದ ವಾರದಲ್ಲಿರೋ ಜನಕ್ಕೆ ಮತ್ತೆ ಲೈಫು ಇಷ್ಟೇನೆ ಅಂತ ಹೇಳೋಕೆ ಬರ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ