ಕನ್ನಡದ ಕೆಜಿಎಫ್ ಸಿನಿಮಾ ಸಂಗೀತ ಈಗಲೂ (Kadal Movie Latest Updates) ಜನರ ಮನದಲ್ಲಿ ಶಾಶ್ವತವಾಗಿಯೇ ಉಳಿದುಕೊಂಡಿದೆ. ಚಿತ್ರಕ್ಕೆ ಕೊಟ್ಟ ಸಂಗೀತದ ಶಕ್ತಿ ಅಷ್ಟಿದೆ. ಅದನ್ನ ಅಷ್ಟೇ ಶೃದ್ದೆಯಿಂದಲೇ (Kannada KGF Music Director) ಮಾಡಿದ್ದಾರೆ. ಕೆಜಿಎಫ್ ಚಿತ್ರಕ್ಕೆ ಬಳಸಿದ ಪ್ರತಿ ಸೌಂಡ್ ಕೂಡ ವಿಶೇಷವಾಗಿಯೇ ಇದೆ. ಹಾಗೆ ಸಂಗೀತ ಕೊಟ್ಟ ರವಿ ಬಸ್ರೂರು ಒಬ್ಬ ಗಾಯಕರೂ ಕೂಡ ಆಗಿದ್ದಾರೆ. ಸಿನಿಮಾ (Ravi Basrur Directed Movies) ನಿರ್ದೇಶನದ ಬಗ್ಗೇನೂ ಆಸ್ತಕಿ ಉಳಿಸಿಕೊಂಡಿದ್ದಾರೆ. ತಮ್ಮ ಕುಂದಾಪುರ ಕನ್ನಡದಲ್ಲಿಯೇ ಸಿನಿಮಾ ಮಾಡಿದ್ದಾರೆ. ನವೆಂಬರ್ 8, 2019 ರಂದು ಒಂದು ಚಿತ್ರ ಬಂದಿತ್ತು. ಗಿರ್ಮಿಟ್ (Sandalwood New Cinema) ಅನ್ನೋ ಹೆಸರಿನಲ್ಲಿ ರವಿ ಬಸ್ರೂರು ಸಿನಿಮಾ ಮಾಡಿದ್ದರು.
ಗಿರ್ಮಿಟ್ ಬಳಿಕ ಮತ್ತೊಂದು ಚಿತ್ರ ಮಾಡಿದ ರವಿ ಬಸ್ರೂರು
ಈ ಚಿತ್ರದಲ್ಲಿ ಒಂದು ಅದ್ಭುತ ಪ್ರಯೋಗ ಮಾಡಿದ್ದರು. ಮಕ್ಕಳೇ ಇಲ್ಲಿ ದೊಡ್ಡವರ ಪಾತ್ರಧಾರಿಗಳಾಗಿ ಅಭಿನಯಿಸಿದ್ದರು. ಇದಕ್ಕೂ ಹೆಚ್ಚಾಗಿ ಆಯಾ ಪಾತ್ರಕ್ಕೆ ದೊಡ್ಡವರೇ ಡಬ್ಬಿಂಗ್ ಮಾಡಿದ್ದರು. ತುಂಬಾನೇ ವಿಶೇಷ ಪ್ರಯೋಗದ ಸಿನಿಮಾನೇ ಇದಾಗಿತ್ತು.
ಕಡಲ್ ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಯಾಕೆ ಸೀಮಿತ
ಅದ್ಯಾಕೋ ಏನೋ ಜನಾನೇ ಈ ಚಿತ್ರವನ್ನ ತೆಗೆದುಕೊಳ್ಳಲಿಲ್ಲ. ಇದರಿಂದ ರವಿ ಬಸ್ರೂರು ತುಂಬಾನೇ ದುಃಖಪಟ್ಟಿದ್ದರು. ಕಣ್ಣೀರು ಕೂಡ ಹಾಕಿಬಿಟ್ಟಿದ್ದರು. ಆದರೂ ಯಾರೂ ಸಿನಿಪ್ರೇಮಿಗಳು ಕರಗಲೇ ಇಲ್ಲ. ಹಾಗಂತ ರವಿ ತಮ್ಮ ಪ್ರಯತ್ನ ಬಿಡಲಿಲ್ಲ. ಇದೀಗ ಮತ್ತೊಂದು ಸಿನಿಮಾ ಮಾಡಿದ್ದಾರೆ.
ರವಿ ಬಸ್ರೂರು ಹೊಸ ಚಿತ್ರಕ್ಕೆ ಕಡಲ್ ಅನ್ನುವ ವಿಶೇಷ ಶೀರ್ಷಿಕೆ
ಈ ಚಿತ್ರಕ್ಕೆ ಕಡಲ್ ಅನ್ನುವ ವಿಶೇಷ ಹೆಸರಿಟ್ಟಿದ್ದಾರೆ. ಇದು ಹೃದಯ ಸ್ಪರ್ಶಿ ಅಪ್ಪ-ಮಗನ ಬಾಂಧವ್ಯದ ಸಿನಿಮಾ ಆಗಿದೆ. ಇದಕ್ಕಾಗಿಯೇ ಲೈವ್ ಸಂಗೀತ ಸಾಧನಗಳನ್ನ ಕೂಡ ರವಿ ಬಸ್ರೂರು ಬಳಸಿಕೊಂಡಿದ್ದಾರೆ. ಆ ಎಲ್ಲವನ್ನ ಹೇಳುವ ಒಂದು ಟೀಸರ್ ರಿಲೀಸ್ ಆಗಿದೆ.
ಕಡಲ್ ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಸೀಮಿತ
ಕಡಲ್ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಆದರೆ ಇದು ಖಾಸಗಿ ಪ್ರದರ್ಶನಕ್ಕೆ ಮಾತ್ರ ಸೀಮಿತ ಅನ್ನುವ ಸತ್ಯ ಕೂಡ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಕುಂದಾಪುರ ಭಾಷೆ ಕಡಲ್ ಸಿನಿಮಾ ರೆಡಿ ಟು ರಿಲೀಸ್
ಕಡಲ್ ಚಿತ್ರದಲ್ಲಿ ಕುಂದಾಪುರ ಕನ್ನಡ ಭಾಷೆಯನ್ನ ಬಳಸಲಾಗಿದೆ. ಈ ಮೂಲಕ ಮತ್ತೊಮ್ಮೆ ಕುಂದಾಪುರ ಭಾಷೆಯ ಸಿನಿಮಾವನ್ನ ರವಿ ಬಸ್ರೂರು ಮಾಡಿದ್ದಾರೆ. ಒಂದ್ ಒಳ್ಳೆ ಟೀಮ್ ಕಟ್ಟಿಕೊಂಡು ಈ ಚಿತ್ರ ಮಾಡಿರೋದು ಮತ್ತೊಂದು ವಿಶೇಷ ಅಂತ ಹೇಳಬಹುದು.
ರವಿ ಬಸ್ರೂರು ಕಡಲ್ ಸಿನಿಮಾ ಟೀಸರ್ ರಿಲೀಸ್
ಕಡಲ್ ಸಿನಿಮಾದಲ್ಲಿ ಒಳ್ಳೆ ದೃಶ್ಯಗಳೂ ಇವೆ. ಅದ್ಭುತ ಅನಿಸೋ ದೃಶ್ಯಗಳನ್ನ ತೆಗೆಯೋ ಹೊಣೆಯನ್ನ ಇಲ್ಲಿ ಸಚಿನ್ ಬಸ್ರೂರು ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಮತ್ತು ನಿರ್ದೇಶನ ಮಾಡಿರೋದು ಇಲ್ಲಿ ಗೊತ್ತಾಗುತ್ತದೆ. ಎನ್.ಎಸ್. ರಾಜ್‌ಕುಮಾರ್ ಈ ಚಿತ್ರಕ್ಕೆ ದುಡ್ಡುಹಾಕಿದ್ದಾರೆ.
ಕಡಲ್ ಸಿನಿಮಾ ಕನ್ಸ್ ಕಾಂಬು ಹಾಡು ರಿಲೀಸ್
ಕಡಲ್ ಚಿತ್ರದ ಕನ್ಸ್ ಕಾಂಬು ಹಾಂಗೆ ಹುಷಾರ್ ಮನ್ಸಾ ಅನ್ನುವ ಹಾಡು ಕೂಡ ಈಗಾಗಲೇ ರಿಲೀಸ್ ಆಗಿದೆ. ಇದನ್ನ ಸ್ವತಃ ರವಿ ಬಸ್ರೂರು ಬರೆದಿದ್ದಾರೆ. ತಾವೇ ಹಾಡಿ ಸಂಗೀತ ಸಹ ಕೊಟ್ಟಿದ್ದಾರೆ. ಇವರ ಈ ಹಾಡು ಸ್ಪೆಷಲ್ ಫೀಲ್ ಕೂಡ ಕೊಡುತ್ತದೆ.
ಒಟ್ಟಾರೆ, ಕಡಲ್ ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಮಾತ್ರ ಸೀಮತ ಅನ್ನುವ ಮಾತಿನ ಮೂಲಕ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ