ಸಿನಿಪ್ರಿಯರು ಬಹಳ ಕಾತರದಿಂದ ಕಾಯುತ್ತಿದ್ದ, ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2 (KGF Chapter 2) ತೆರೆಕಂಡಿದೆ. ಪ್ರಪಂಚದಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರವು ತೆರೆಕಂಡಿದ್ದು, ಎಲ್ಲಡೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ. ಕಳೆದ ರಾತ್ರಿಯಿಂದ ಯಶ್ (Rocking Star Yash) ಅಭಿಮಾನಿಗಳು ಚಿತ್ರವನ್ನು ವೀಕ್ಷಿಸುತ್ತಿದ್ದು, ರಾಕಿ ಬಾಯ್ ನೋಡಿ ಸಂತಸಗೊಂಡಿದ್ದಾರೆ. ಹಾಗೆಯೇ ಅಧೀರ ಮತ್ತು ರಾಕಿ ಬಾಯ್ ಸೆಣೆಸಾಟ ನೋಡಬೇಕು ಎಂದು ಕಾದು ಕುಳಿತ ಪ್ರೇಕ್ಷಕನಿಗೆ ಮೋಸವಿಲ್ಲ ಎನ್ನಬಹುದು. ಇನ್ನು, ಇದರ ನಡುವೆ ಕೆಜಿಎಫ್ 2 ಚಿತ್ರ ಒಂದಿಲ್ಲಾ ಒಂದು ದಾಖಲೆಗಳನ್ನು ಮಾಡುತ್ತಿದ್ದೆ. ಇದೀಗ ಹೊಸದೊಂದು ಸಾಧನೆಯನ್ನು ಕೆಜಿಎಫ್ 2 ಚಿತ್ರ ತನ್ನದಾಗಿಸಿಕೊಂಡಿದೆ.
ಕೆಜಿಎಫ್ 2 ಚಿತ್ರಕ್ಕೆ ಅಷ್ಟು ದಿಕ್ಕುಗಳಿಂದಲೂ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಬುಕ್ ಮೈ ಶೋ ಮತ್ತು IMDB ರೇಟಿಂಗ್ ನಲ್ಲಿಯೂ ದಾಖಲೆ ಮಾಡಿದೆ.
ಭರ್ಜರಿ ರೇಟಿಂಗ್ ಪಡೆದ ಕೆಜಿಎಫ್ 2:
ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಬುಕ್ ಮೈ ಶೋ ಮತ್ತು IMDB ರೇಟಿಂಗ್ ನಲ್ಲಿ ಕೆಜಿಎಫ್ 2 ಸಾಧನೆ ಮಾಡಿದೆ. ಹೌದು, ಇಂದು (ಏಪ್ರಿಲ್ 14) ಸಂಜೆ 5 ಗಂಟೆ ಸಮಯಕ್ಕೆ ಬುಕ್ ಮೈ ಶೋ ನಲ್ಲಿ ಸಿನಿಮಾಗೆ 33.9 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಚಿತ್ರ ರೇಟಿಂಗ್ ಶೇ.95ರಷ್ಟಿದ್ದೆ. ಇನ್ನು, ಅದೇ ರೀತಿ IMDB ರೇಟಿಂಗ್ ನಲ್ಲಿಯೂ ಚಿತ್ರದ ಹವಾ ಜೋರಾಗಿದ್ದು, ಇಂದು (ಏಪ್ರಿಲ್ 14) ಸಂಜೆ 5 ಗಂಟೆಗೆ 6.6 ಸಾವಿರ ಮಂದಿ ಚಿತ್ರಕ್ಕೆ ರೇಟಿಂಗ್ ನೀಡಿದ್ದು, 9.8/10 ಇದೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್ ಬದಲಾವಣೆ ಕಾಣಲಿದೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ KGF 2 ಅಬ್ಬರ ಶುರು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಾಕಿ ಬಾಯ್ ಆರ್ಭಟ
ಕೆಜಿಎಫ್ನಲ್ಲೇ ಕೆಜಿಎಫ್ 2 ಬಿಡುಗಡೆ ಆಗಿಲ್ಲ:
ಆದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೆಜಿಎಫ್ ತಾಲೂಕಿನಲ್ಲಿಯೇ ಬಿಡುಗಡೆಯಾಗಿಲ್ಲ. ವಿತರಕರು ಮತ್ತು ಚಿತ್ರಮಂದಿರದ ಮಾಲೀಕರ ನಡುವೆ ಹಣದ ವಿಚಾರವಾಗಿ ಒಮ್ಮತ ಮೂಡದ ಕಾರಣ ಕೆಜಿಎಫ್ ಜನ ಸಿನಿಮಾವನ್ನು ತಮ್ಮೂರಲ್ಲೇ ನೋಡುವದರಿಂದ ವಂಚಿತರಾಗಿದ್ದಾರೆ.
10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಮೇಲೆ ರಾಕಿ ಬಾಯ್ ದರ್ಶನ:
ಇಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ಕೆಜಿಎಫ್ 2 ಚಿತ್ರವು 10 ಸಾವಿರಕ್ಕೂ ಹೆಚ್ಚಿನ ಬೆಳ್ಳಿತೆರೆಯ ಮೇಲೆ ತೆರೆಕಾಣಲಿದೆ. ಈ ಮೂಲಕ ಬಿಡುಗಡೆ ವಿಚಾರದಲ್ಲೂ ದಾಖಲೆ ಬರೆದಿದ್ದಾರೆ ರಾಕಿ ಬಾಯ್. ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ತೆರೆಕಾಣಲಿದ್ದು, ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಉಳಿದಂತೆ ಉತ್ತರ ಭಾರತದಲ್ಲಿ 4000 ಸ್ಕ್ರೀನ್ಗಳಲ್ಲಿ, ಕರ್ನಾಟಕದಲ್ಲಿ 550 ಥಿಯೇಟರ್ಗಳಲ್ಲಿ, ತಮಿಳುನಾಡಿನಲ್ಲಿ 350 ಅಧಿಕ ಸ್ಕ್ರೀನ್, ಕೇರಳ 400 ಚಿತ್ರಮಂದಿರದಲ್ಲಿ , ಆಂದ್ರ ಮತ್ತು ತೆಲಂಗಾಣದಿಂದ 1 ಸಾವಿರ ಸ್ಕ್ರೀನ್ ಮತ್ತು ಹೊರ ದೇಶಗಳಲ್ಲಿ 4000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿದೆ. ಈ ಮೂಲಕ ಕೆಜಿಎಫ್-2 ಬಿಡುಗಡೆಯಲ್ಲಿ ರಾಕಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಟ್ವಿಟರ್ನಲ್ಲಿ ಕೆಜಿಎಫ್ 3 ಹ್ಯಾಷ್ ಟ್ಯಾಗ್ ಟ್ರೇಂಡ್:
ಇನ್ನು, ಕೆಜಿಎಫ್ 2 ಚಿತ್ರದ ನಂತರ ಕೆಜಿಎಫ್ 3 ಚಿತ್ರ ಬರಲಿದೆ ಎಂಬ ಮುನ್ಸೂಚನೆ ದೊಕ್ಕಿದ್ದೆ ತಡೆ ಅಭಿಮಾನಿಗಳು ಟ್ವಿಟರ್ನಲ್ಲಿ ಕೆಜಿಎಫ್ 3 ಹ್ಯಾಷ್ಟ್ಯಾಗ್ ನ್ನು ಟ್ರೇಂಡ್ ಮಾಡಿದ್ದಾರೆ.
ಇದನ್ನೂ ಓದಿ: KGF 2 Twitter Review: ಇದಕ್ಕಿಂತ ಅದ್ಭುತ ಬೇರೆ ಇಲ್ಲ ಬಿಡಿ, ರಾಕಿ ಭಾಯ್ ಹವಾ ಕಂಡು ಜನ ಕ್ಲೀನ್ ಬೋಲ್ಡ್!
100 ಕೋಟಿ ಕ್ಲಬ್ ಸೇರುವ ನಿರೀಕ್ಷೆ:
ಕೆಜಿಎಫ್ 2 ಅಬ್ಬರ ಎಲ್ಲೆಡೆ ಜೋರಾಗಿದ್ದು, ಮೊದಲ ದಿನವೇ 100 ಕೋಟಿ ಕ್ಲಬ್ ಸೇರಲಿದೆ ಂದು ಸಿನಿ ಪಂಡಿತರು ಹೇಳುತ್ತಿದ್ದಾರೆ. ಅಲ್ಲದೇ ಚಿತ್ರವು ಒಟ್ಟಾರೆ 1000 ಕೋಟಿಗೂ ಹೆಚ್ಚಿನ ಕಲೇಕ್ಷನ್ ಮಾಡುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ