ಬಾಲಿವುಡ್ ನಾಯಕ ನಟ (Sanjay Dutt) ಸಂಜಯ್ ದತ್ ಕನ್ನಡದ ಕೆಡಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇಲ್ಲಿಯ ಜನರ ಪ್ರೀತಿಗೆ ಪಾತ್ರರಾಗಿರೋ (Sanju Baba) ಸಂಜಯ್ ದತ್ ಹೆಚ್ಚು ಕಡಿಮೆ ಒಂದು ತಿಂಗಳಿಗೂ ಹೆಚ್ಚು ದಿನಗಳವರೆಗೆ ಕೆಡಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ಕಲ್ಪನೆಯ ಪಾತ್ರಕ್ಕೆ (Heavy Workout) ಸಂಜಯ್ ದತ್ ಜೀವ ತುಂಬುತ್ತಿದ್ದಾರೆ. ಸಿನಿಮಾದ ಶೂಟಿಂಗ್ (KD Movie Sanjay Dutt) ಮಧ್ಯೆ ಸಂಜಯ್ ದತ್ ತಮ್ಮ ಎಂದಿನ ರೂಟಿನ್ಗಳನ್ನೂ ಫಾಲೋ ಮಾಡುತ್ತಿದ್ದಾರೆ. ಆ ರೂಟಿನ್ ಏನೂ ಅನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ. ಇದರ ಜೊತೆಗೆ ಸಂಜಯ್ ದತ್ ವರ್ಕೌಟ್ ಮಾಡೋ ವಿಡಿಯೋ ಕೂಡ ಗಮನ ಸೆಳೆಯುವಂತಿದೆ ನೋಡಿ.
ಸಂಜಯ್ ದತ್ ನಿತ್ಯವೂ ವರ್ಕೌಟ್ ಮಾಡ್ತಾರೆ. 64 ನೇ ವಯಸ್ಸಿನಲ್ಲೂ ಸಂಜು ಬಾಬಾ ಬೇಜಾನ್ ಕಸರತ್ತು ಮಾಡುತ್ತಿದ್ದಾರೆ. ಇವರ ದೇಹದ ರೂಪ ನೋಡಿದ್ರೆ ಸಾಕು, ಎಂತವರಿಗೂ ಸಂಜಯ್ ದತ್ ಕಸರತ್ತಿನ ಪರಿ ಅರ್ಥ ಆಗುತ್ತದೆ.
ಸಂಜಯ್ ದತ್ ಹಾರ್ಡ್ ವರ್ಕೌಟ್ ಹಿಂಗಿದೆ ನೋಡಿ
ಸಂಜಯ್ ದತ್ ಹಾರ್ಡ್ ವರ್ಕೌಟ್ ಮಾಡ್ತಾರೆ. ಇವರ ಇನ್ಸ್ಟಾಗ್ರಾಮ್ ಪೇಜ್ಗೆ ಹೋದ್ರೆ ಅಲ್ಲಿ ಸಂಜು ಬಾಬಾ ಕಸರತ್ತು ಹೇಗಿರುತ್ತದೆ ಅನ್ನುವುದರ ಸ್ಪಷ್ಟ ಚಿತ್ರಣ ಸಿಗುತ್ತದೆ.
ಸಂಜಯ್ ದತ್ ಪಾತ್ರದ ವಿಷಯದಲ್ಲಿ ಸೀರಿಯಸ್ ಆಗಿದ್ದಾರೆ. ಡೈರೆಕ್ಟರ್ ಕಲ್ಪನೆಯ ಪಾತ್ರಗಳಿಗೆ ಜೀವ ತುಂಬಲು ಬೇಕಾಗೋ ಎಲ್ಲ ಸಿದ್ದತೆ ಮಾಡಿಕೊಳ್ತಾರೆ.
KD ಸಂಜು ಬಾಬಾ ವರ್ಕೌಟ್ ಬಲು ಜೋರು
ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಖಳನಾಯಕನ ಪಾತ್ರಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿ ಆಗಿರೋ ಸಂಜಯ್ ದತ್ ಈಗಾಗಲೇ ತಮ್ಮ ಪಾತ್ರದ ಕೆಲಸ ಪೂರ್ಣಗೊಳಿಸಿ ವಾಪಸ್ ಮುಂಬೈಗೆ ಹಾರಿದ್ದಾರೆ ಅನ್ನುವ ಸುದ್ದಿ ಕೂಡ ಇದೆ
ಮುಂಬೈಯಲ್ಲಿ ಸಂಜು ಬಾಬಾ ತಮ್ಮ ಎಂದಿನ ವರ್ಕೌಟ್ನ್ನ ಅಲ್ಲಿ ಮುಂದುವರೆಸಿದ್ದಾರೆ. ಕೆಡಿ ಚಿತ್ರದ ಪಾತ್ರಕ್ಕೆ ಮತ್ತೆ ಕರಸರತ್ತು ಮಾಡುತ್ತಿದ್ದಾರೆ. ಹೆವಿ ವೇಟ್ಗಳನ್ನ ಎತ್ತಿ ದೇಹವನ್ನ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
KD ಚಿತ್ರಕ್ಕಾಗಿ ಬೆಂಗಳೂರು ಮರು ಸೃಷ್ಟಿ
ಸಂಜಯ್ ದತ್ ಪಾತ್ರದ ಕೆಲಸ ಎರಡನೇ ಹಂತದಲ್ಲೂ ಇರುತ್ತದೆ. ಈ ಒಂದು ಪಾತ್ರದ ಶೂಟಿಂಗ್ನ್ನ ಫೆಬ್ರವರಿ-27 ರಿಂದ ಶುರು ಮಾಡಿದ್ದಾರೆ ಅನ್ನುವ ಮಾಹಿತಿ ಕೂಡ ಇದೆ.
ಕೆಡಿ ಚಿತ್ರದಲ್ಲಿ ಆ ದಿನಗಳ ಕಥೆ ಇರೋದ್ರಿಂದಲೇ ಜೋಗಿ ಪ್ರೇಮ್ ಬೃಹತ್ ಸೆಟ್ಗಳನ್ನ ಪ್ಲಾನ್ ಮಾಡಿದ್ದಾರೆ. ಈ ಸೆಟ್ಗಳನ್ನ ಹಾಕಲೆಂದೇ ವಿಶಾಲವಾದ ಜಾಗವನ್ನ ಕೂಡ ನೋಡಲಾಗಿದೆ.
KD ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣ
ಈ ಜಾಗದಲ್ಲಿ ಬೆಂಗಳೂರಿನ ಆ ಕಾಲದ ಪ್ರಮುಖ ಪ್ಲೇಸ್ಗಳನ್ನ ಮರು ಸೃಷ್ಟಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆಟ್ ವರ್ಕ್ ಕೂಡ ನಡೆಯುತ್ತಿದೆ ಅನ್ನುವ ಸುದ್ದಿನೂ ಹರಿದಾಡುತ್ತಿದೆ.
View this post on Instagram
ದಕ್ಷಿಣದಲ್ಲಿ ಸಂಜಯ್ ದತ್ ಅಧೀರನ ಅಬ್ಬರ
ಸಂಜಯ್ ದತ್ ತಮ್ಮ ಈ ಹಿಂದಿನ ಚಿತ್ರಗಳಲ್ಲೂ ಸಖತ್ ತಯಾರಿ ನಡೆಸಿದ್ದರು. ಕೆಜಿಎಫ್ ಚಿತ್ರಕ್ಕಾಗಿ ಕೂಡ ಸಂಜು ಬಾಬಾ ವರ್ಕೌಟ್ ಮಾಡ್ತಾಯಿದ್ದರು. ಅದಕ್ಕೇನೆ ಅಧೀರ ಪಾತ್ರದಲ್ಲಿ ಸಂಜಯ್ ದತ್ ಭರ್ಜರಿಯಾಗಿಯೇ ಕಂಡರು.
ಇದನ್ನೂ ಓದಿ: Alia Bhatt: ಇದರಲ್ಲಿ ಸೆಲ್ಫಿ ಕ್ಯಾಮೆರಾ ಎಲ್ಲಿದೆ? Android ಫೋನ್ ಬಳಸಲು ತಿಳಿಯದೆ ಪರದಾಡಿದ ಆಲಿಯಾ
ಕೆಜಿಎಫ್ ಅದ್ಮೇಲೆ ಸಂಜಯ್ ಕನ್ನಡಕ್ಕೆ ಕೆಡಿ ಮೂಲಕ ಕಾಲಿಟ್ಟಿದ್ದಾರೆ. ವಿಜಯ ಅಭಿನಯದ ತಮಿಳು ಚಿತ್ರವನ್ನು ಕೂಡ ಸಂಜಯ್ ದತ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ದಕ್ಷಿಣದ ಚಿತ್ರಗಳಲ್ಲಿ ಸಂಜು ಹೆಚ್ಚು ಗಮನ ಸೆಳೆಯಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ