ಸ್ಯಾಂಡಲ್‌ವುಡ್‌ನಲ್ಲಿ ಕೆಡಿ ಸಿನಿಮಾ ಹವಾ (KD Movie Lates Poster Release) ಜೋರಾಗಿಯೇ ಇದೆ. ಈ ಚಿತ್ರದ ಪ್ರತಿ ಹೆಜ್ಜೆಯನ್ನ ಅಷ್ಟೇ ಕುತೂಹಲದಿಂದಲೇ ಫ್ಯಾನ್ಸ್ ನೋಡುತ್ತಿದ್ದಾರೆ. ಇದರ ಮಧ್ಯೆ ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಚಿತ್ರದ ಧ್ರುವ ಸರ್ಜಾ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹಾಗೆ ಏನೂ ಹೇಳದೇ ಕೇಳದೇ (Dhruva Sarja Movie New Poster) ದಿಢೀರ್ ಅಂತ ಜೋಗಿ ಪ್ರೇಮ್ ಪೋಸ್ಟರ್ ರಿಲೀಸ್ ಮಾಡೋದಿಲ್ಲ. ಆದರೆ ಹೀಗೆ ಹೊರ ಬಂದ ಫೋಸ್ಟರ್ ಅಧಿಕೃತ ಅನಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ (KD Movie Latet Poster Release) ಇದು ಹರಿದಾಡುತ್ತಲೇ ಇದೆ. ಇದರ ಬೆನ್ನಲ್ಲಿಯೇ ಶಿಲ್ಪಾ ಶೆಟ್ಟಿ ಆ ಒಂದು ವಿಡಿಯೋ ಕೂಡ ವೈರಲ್ ಆಗಿದೆ.
ಇದಕ್ಕೂ ಅದಕ್ಕೂ ಏನಾದ್ರೂ ಲಿಂಕ್ ಇದಿಯೇ? ಈ ಎಲ್ಲ (Action Prince Dhurva Movie) ವಿಷಯದ ಒಂದು ಸ್ಟೋರಿ ಇಲ್ಲಿದೆ ಓದಿ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಪೋಸ್ಟರ್‌ನಲ್ಲಿ ಧ್ರುವ ಸರ್ಜಾ ಲುಕ್ ಜಬರ್‌ದಸ್ತ್ ಆಗಿದೆ. ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರೋ ಈ ಪೋಸ್ಟರ್ ನೋಡಿ ಅನೇಕರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈಗ ಸಡನ್ ಆಗಿಯೇ ಈ ಪೋಸ್ಟರ್ ರಿಲೀಸ್ ಮಾಡಿದ್ಯಾಕೆ ಅಂತಲೂ ಪ್ರಶ್ನೆ ಕೇಳುತ್ತಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ಪೆಷಲ್ ಪೋಸ್ಟರ್ ರಿಲೀಸ್
ಸಾಮಾನ್ಯವಾಗಿ ಜೋಗಿ ಪ್ರೇಮ್ ತಮ್ಮ ಚಿತ್ರದ ಮಾಹಿತಿಯನ್ನ ಅಷ್ಟು ಬೇಗ ಬಿಟ್ಟುಕೊಡೋದಿಲ್ಲ. ಪೋಸ್ಟರ್‌ಗಳನ್ನ ಪಕ್ಕಾ ಪ್ಲಾನ್ ಮಾಡಿಯೇ ಹೊರ ಬಿಡ್ತಾರೆ. ಆದರೆ ಕೆಡಿ ಚಿತ್ರದ ಈ ಪೋಸ್ಟರ್ ಅದ್ಹೇಗೆ ಹೊರ ಬಂತು ಏನೋ. ವಾಟ್ಸ್ ಅಪ್ ಗ್ರೂಪ್ ಅಲ್ಲೂ ಇದು ಶೇರ್ ಆಗುತ್ತಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಪೋಸ್ಟರ್ ಸೂಪರ್ ಆಗಿದೆ. ಜೋಗಿ ಪ್ರೇಮ್ ಕಲ್ಪನೆಯ ಕೆಡಿ ರೋಲ್ ಅದ್ಭುತವಾಗಿಯೇ ಇದೆ. ಅದನ್ನ ಪೋಸ್ಟರ್ ಮೂಲಕ ಈಗಲೇ ನೋಡಬಹುದು. ಚಿತ್ರದ ಮೊದಲ ಪೋಸ್ಟರ್‌ಗಿಂತಲೂ ಈಗ ಹೊರ ಬಂದಿರೋ ಪೋಸ್ಟರ್ ಅದ್ಭುತವಾಗಿಯೇ ಇದೆ.
ಖಡಕ್ ಕೆಡಿ ಧ್ರುವ ಸರ್ಜಾ ಹೊಸ ಪೋಸ್ಟರ್ ರಿಲೀಸ್
ಧ್ರುವ ಸರ್ಜಾ ನಿರ್ಮಿಸಿರೋ ಪಾತ್ರದ ಖದರ್ ಅದ್ಭುತವಾಗಿಯೇ ಮೂಡಿ ಬಂದಿದೆ. ಖತರ್ನಾಕ್ ಲುಕ್, ಒಂದು ಕೈಯಲ್ಲಿ ಮಚ್ಚು, ಬಾಯಲ್ಲಿ ಬೀಡಿ ಇದೆ. ಇದೆಲ್ಲವನ್ನೂ ನೋಡಿದ್ರೆ, ಧ್ರುವ ಸರ್ಜಾ ಪಾತ್ರದ ಇಡೀ ಖದರ್ ತಿಳಿದು ಬಿಡುತ್ತದೆ.
ಆದರೆ ಈ ಪೋಸ್ಟರ್ ಈಗ ದಿಢೀರ್ ಅಂತ ರಿಲೀಸ್ ಆಗಿದ್ದು ಯಾಕೆ ಅನ್ನೋದು ನೆಟ್ಟಿಗರ ಪ್ರಶ್ನೆ ಆಗಿದೆ. ಅದಕ್ಕೆ ಉತ್ತರ ರೂಪದಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಷಯವೂ ಇದೆ. ಹೌದು, ಬಾಲಿವುಡ್‌ನಿಂದ ಶಿಲ್ಪಾ ಶೆಟ್ಟಿ ಕೆಡಿ ಚಿತ್ರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಶಿಲ್ಪಾ ಶೆಟ್ಟಿ ಮುಂಬೈ ವಿಡಿಯೋ ಸಖತ್ ವೈರಲ್
ಈ ವೇಳೆ ಶಿಲ್ಪಾ ಶೆಟ್ಟಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಕ್ಯಾಮೆರಾಗೂ ಪೋಸ್ ಕೊಟ್ಟಿದ್ದಾರೆ. ಆ ವೇಳೆ ತೆಗೆದ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಧ್ರುವ ಸರ್ಜಾ ಪೋಸ್ಟರ್ ರಿಲೀಸ್ ಆಗಿದಿಯೇ ಅಂತ ಕೇಳೋರು ಇದ್ದಾರೆ.
ಇದನ್ನೂ ಓದಿ: Ram Charan Movie: ಟಾಲಿವುಡ್ ಮಗಧೀರನ ಜೊತೆಗೆ ಮಫ್ತಿ ಡೈರೆಕ್ಟರ್ ಹೊಸ ಸಿನಿಮಾ; ಇಲ್ಲಿದೆ ಹೊಸ ಅಪ್ಡೇಟ್
ಇರಲಿ ಬಿಡಿ, ಕೆಡಿ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿ ಹಂಗಾಮ ಮಾಡುತ್ತಿದೆ. ಶಿಲ್ಪಾ ಶೆಟ್ಟಿ ಬೆಂಗಳೂರಿಗೆ ಬರ್ತಿರೋ ವಿಡಿಯೋ ಕೂಡ ವೈರಲ್ ಆಗಿದೆ. ಒಟ್ನಲ್ಲಿ ಕೆಡಿ ಸಿನಿಮಾ ಪ್ರಚಾರದಲ್ಲಿ ಇದ್ದೇ ಇದೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ