ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar New Movie) ಅಭಿನಯದ ಹೊಸ ಸಿನಿಮಾದ ಕೆಲಸ ಶುರು ಆಗಿದೆ. ಕಳೆದ ವರ್ಷ ಈ ಚಿತ್ರದ (Karataka Damanaka Movie) ಶೂಟಿಂಗ್ ಶುರು ಆಗಿದೆ. ಸಿನಿಮಾದಲ್ಲಿ ಇಬ್ಬರು ಹಿರೋಗಳು ಇರೋದು ವಿಶೇಷ ಆಗಿದೆ. ಇಂಡಿಯನ್ ಮೈಕಲ್ ಜಾಕ್ಸನ್ (Prabhudeva Movie) ಎಂದು ಕರೆಸಿಕೊಳ್ಳುವ ಪ್ರಭುದೇವ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ (Shiva Rajkumar New Film) ಜೋಡಿಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಇದೇ ಚಿತ್ರದ ಒಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಹರಿದಾಡುತ್ತಿದೆ. ಇದರ ಸುತ್ತ ಒಂದಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ ಓದಿ.
ಶಿವರಾಜ್ ಕುಮಾರ್ ಸದ್ಯ ಕರಟಕ ದಮನಕ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಒಪ್ಪಿರೋ ಸಿನಿಮಾಗಳಿಗಿಂತಲೂ ಈ ಚಿತ್ರ ಇನ್ನೂ ವಿಭಿನ್ನ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಕರಟಕ ದಮನಕ ಚಿತ್ರದಲ್ಲಿ ರಾಕ್ಲೈನ್ ಪೊಲೀಸ್ ಆಫೀಸರ್
ಕರಟಕ ದಮನಕ ಅನ್ನುವ ವಿಶೇಷ ಟೈಟಲ್ನೊಂದಿಗೆ ಚಿತ್ರ ಅನೌನ್ಸ್ ಆಗಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ಸ್ವತಃ ರಾಕ್ಲೈನ್ ವೆಂಕಟೇಶ್ ಪೊಲೀಸ್ ಪಾತ್ರದ ಮೂಲಕ ವಿಶೇಷ ಪಾತ್ರವನ್ನ ಕೂಡ ಮಾಡುತ್ತಿದ್ದಾರೆ.
ಕರಟಕ ದಮನಕ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಒಂದು ದೃಶ್ಯದ ಚಿತ್ರೀಕರಣ ರಸ್ತೆ ಪಕ್ಕದ ಢಾಬಾದಲ್ಲಿ ನಡೆಯುತ್ತಿದೆ. ಇದೇ ಚಿತ್ರೀಕರಣದ ಮೇಕಿಂಗ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕರಟಕ-ದಮನಕ ಸೆಟ್ ವಿಡಿಯೋದಲ್ಲಿ ಏನಿದೆ?
ಸದ್ಯ ಹರಿದಾಡುತ್ತಿರೋ ಸೆಟ್ನ ವಿಡಿಯೋ ಸಾರಾಂಶ ಏನು ಅಂತ ಹೇಳೋದಾದ್ರೆ, ಇಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭು ದೇವ ಒಂದು ಡಾಭಾಗೆ ಬಂದಿದ್ದಾರೆ. ಊಟದ ವಿಚಾರದಲ್ಲಿ ದೊಡ್ಡಣ್ಣ ಅವರ ಜೊತೆಗೆ ಮಾತು ಕಥೆ ನಡೆಸುತ್ತಿದ್ದಾರೆ. ಆ ಮಾತಿನಲ್ಲಿ ಪ್ರಭುದೇವ ಡ್ಯಾನ್ಸಿಂಗ್ ಸ್ಟೈಲ್ ಅಲ್ಲಿಯೇ ಡೈಲಾಗ್ ಹೇಳುತ್ತಿದ್ದಾರೆ ಅನಿಸುತ್ತದೆ.
ಕರಟಕ-ದಮನಕ ಚಿತ್ರೀಕರಣದ ವಿಡಿಯೋ ರಿವೀಲ್
ಚಿತ್ರೀಕರಣದ ಸಮಯದಲ್ಲಿ ಅದ್ಯಾರೋ ತೆಗೆದಿರೋ ಈ ವಿಡಿಯೋದಲ್ಲಿ ಡಾಭಾ ಸೆಟ್ ಇರೋದು ಕಂಡು ಬರುತ್ತದೆ. ನಟ ದೊಡ್ಡಣ್ಣ ಕೂಡ ಈ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರ ತಂಡ ಈ ಒಂದು ವಿಡಿಯೋವನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇದು ಹರಿದಾಡುತ್ತಿದೆ. ಕರಟಕ-ದಮನಕ ಸಿನಿಮಾ ಸೆಟ್ ವಿಡಿಯೋ ಅನ್ನೋದು ಕೂಡ ಇದೇ ವಿಡಿಯೋ ಜೊತೆಗೆ ಬರೆದುಕೊಳ್ಳಲಾಗಿದೆ.
ಕರಟಕ ದಮನಕ ಚಿತ್ರಕ್ಕೆ ಇಬ್ಬರು ನಾಯಕಿಯರು
ಕರಟಕ ದಮನಕ ಚಿತ್ರದಲ್ಲಿ ಇಬ್ಬರು ನಾಯಕಿಯರು ಅಭಿನಯಿಸುತ್ತಿದ್ದು ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಂದಿನಂತೆ ಯೋಗರಾಜ್ ಭಟ್ ಅವರ ಈ ಸಿನಿಮಾಕ್ಕೆ ವಿ.ಹರಿಕೃಷ್ಣ ಸಂಗೀತ ಕೊಡುತ್ತಿದ್ದಾರೆ. ಸಂತೋಷ್ ರೈ ಪಾತಾಜೇ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.
ಆದರೆ ಸದ್ಯ ಸಿನಿಮಾದ ಶೂಟಿಂಗ್ನ ಒಂದು ವಿಡಿಯೋ ಎಲ್ಲೆಡೆ ಹರಿದಾಡೋ ಮೂಲಕ ಶೂಟಿಂಗ್ ನಡೆಯುತ್ತಿರೋ ವಿಷಯವನ್ನ ತಿಳಿಸುತ್ತಿದೆ ಅಂತಲೇ ಹೇಳಬಹುದು. ಸಿನಿಮಾದಲ್ಲಿ ಇನ್ನು ಏನೆಲ್ಲ ಇದೆ ಅನ್ನೊ ಕುತೂಹಲ ಕೂಡ ಇದೆ.
ಇದನ್ನೂ ಓದಿ: Arjun Janya: ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ತಯಾರಿ ಹೇಗಿದೆ? ಶಿವಣ್ಣ ಕೊಟ್ಟ ಸಲಹೆ ಏನು?
ಹಾಗೇನೆ ಈಗಾಗಲೇ ಹಬ್ಬಿರೋ ಸುದ್ದಿಯಂತೆ, ಕರಟಕ-ದಮನಕದಲ್ಲಿ ಒಂದ್ ಹೊಸ ರೀತಿಯ ಕಥೆ ಇದೆ ಅನ್ನುವ ಮಾಹಿತಿ ಇದೆ. ಇದರ ಹೊರತಾಗಿ ಚಿತ್ರದಲ್ಲಿ ಇಬ್ಬರು ಹೀರೋಗಳು-ಇಬ್ಬರು ಹೀರೋಯಿನ್ಗಳು ಇದ್ದಾರೆ. ಈ ಮೂಲಕ ಯೋಗರಾಜ್ ಭಟ್ ಹೊಸದೊಂದು ಕಥೆಯನ್ನ ಹೇಳ್ತಿದ್ದಾರೆ ಅಂತಲೂ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ