• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Kantara in English: ಕಾಂತಾರ ಚಿತ್ರದ ಶಿವ ಇನ್ಮೇಲೆ ಇಂಗ್ಲೀಷ್ ಮಾತಾಡ್ತಾರೆ! ಇಲ್ಲಿದೆ ಅಸಲಿ ವಿಷಯ?

Kantara in English: ಕಾಂತಾರ ಚಿತ್ರದ ಶಿವ ಇನ್ಮೇಲೆ ಇಂಗ್ಲೀಷ್ ಮಾತಾಡ್ತಾರೆ! ಇಲ್ಲಿದೆ ಅಸಲಿ ವಿಷಯ?

ಕಾಂತಾರ ಸಿನಿಮಾ ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್

ಕಾಂತಾರ ಸಿನಿಮಾ ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್

ರಿಷಬ್ ಶೆಟ್ರ ಇಂಗ್ಲೀಷ್ ಕಾಂತಾರ ಸಿನಿಮಾ ಬರುವ ಮಾರ್ಚ್​-1 ರಂದು ರಿಲೀಸ್ ಆಗುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದ್ದು, ಇಂಗ್ಲೀಷ್ ಭಾಷೆಯಲ್ಲೂ ಇನ್ಮುಂದೆ ಕನ್ನಡದ ಕಾಂತಾರ ಚಿತ್ರವನ್ನ ನೋಡಬಹುದಾಗಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಕಾಂತಾರ ಸಿನಿಮಾ ಕನ್ನಡ ನಾಡಿನ (Kannada Kantara Movie) ಹೆಸರನ್ನ ಎಲ್ಲೆಡೆ ಪಸರಿಸಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿ (Kantara Soon Release in English) ರಿಲೀಸ್ ಆಗಿದೆ. ದೇಶ-ವಿದೇಶದಲ್ಲೂ ಕನ್ನಡ ಕೀರ್ತಿಯನ್ನ ಹೆಚ್ಚಿಸಿದ ಖ್ಯಾತಿ ಕೂಡ ಈ ಚಿತ್ರಕ್ಕೆ ಸಲ್ಲುತ್ತದೆ. ಬಹು ಭಾಷೆಯಲ್ಲಿ (Pan India Kantara Movie) ರಿಲೀಸ್ ಆಗಿ ಪ್ಯಾನ್ ಇಂಡಿಯಾ ರಿಲೀಸ್ ಖ್ಯಾತಿ ಪಡೆದ ಕಾಂತಾರ ಸಿನಿಮಾ ಈಗ ಇನ್ನೂ ಒಂದು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹಾಗೆ ಆ ಭಾಷೆಯಲ್ಲಿ ರಿಲೀಸ್ ಆಗೋ (Kantara in English Language) ಮೂಲಕ ಕನ್ನಡದ ಮೊಟ್ಟ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ  ಒಮ್ಮೆ ಓದಿ.


ಕಾಂತಾರ ಸಿನಿಮಾ ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್
ಕಾಂತಾರ ಸಿನಿಮಾ ಆರಂಭದಲ್ಲಿ ಕನ್ನಡದ ಭಾಷೆಯಲ್ಲಿ ರಿಲೀಸ್ ಆಗಿದೆ. ಚಿತ್ರದ ಕಂಟೆಂಟ್ ಜನರಿಗೆ ಇಷ್ಟ ಆಗಿದ್ದೇ ತಡ, ಸಿನಿಮಾವನ್ನ ನಮ್ಮ ಭಾಷೆಯಲ್ಲಿ ಡಬ್ ಮಾಡಿ ಕೊಡಿ ಎಂದು ಕೇಳಿಕೊಂಡರು.


Kannada Kantara Movie Will Be Release in English on March-1
ಕಾಂತಾರ ಚಿತ್ರದ ಶಿವ ಇನ್ಮೇಲೆ ಇಂಗ್ಲೀಷ್ ಮಾತಾಡ್ತಾರೆ!


ಇದರ ಫಲದಿಂದಾಗಿ ಹೊಂಬಾಳೆ ನಿರ್ಮಾಣ ಸಂಸ್ಥೆ ಕನ್ನಡದ ಕಾಂತಾರ ಚಿತ್ರವನ್ನ ಬೇರೆ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಿತ್ತು. ಇದರಿಂದ ಕನ್ನಡ ಚಿತ್ರ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಚಿತ್ರವೇ ಆಯಿತು.
ಕಾಂತಾರ ಇಂಗ್ಲೀಷ್ ಸಿನಿಮಾ ಯಾವಾಗ ರಿಲೀಸ್
ಕನ್ನಡದ ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿ 100 ದಿನ ಪೂರೈಸಿ ಆಗಿದೆ. ಇದನ್ನ ಸಿನಿಮಾ ತಂಡ ಅಷ್ಟೇ ಖುಷಿಯಲ್ಲಿಯೇ ಆಚರಿಸಿದೆ. ಇದರ ಬೆನ್ನಲ್ಲಿಯೇ ಇನ್ನೂ ಒಂದು ಸುದ್ದಿ ಹೊರ ಬಿದ್ದಿದೆ.


ಹೌದು, ಬಹು ಭಾಷೆಯಲ್ಲಿ ರಿಲೀಸ್ ಆಗಿರೊ ಕಾಂತಾರ ಸಿನಿಮಾ ಇಂಗ್ಲೀಷ್ ನಲ್ಲೂ ರಿಲೀಸ್ ಆಗುತ್ತದೆ. ಆದರೆ ಇದು ಸಿಂಗಲ್ ಥಿಯೇಟರ್​ಗೆ ಬರೋದಿಲ್ಲ. ಬದಲಾಗಿ ಓಟಿಟಿಯಲ್ಲಿ ಪ್ರದರ್ಶನ ಆಗುತ್ತದೆ.


ಕನ್ನಡದ ಇಂಗ್ಲೀಷ್ ಕಾಂತಾರ ಮಾರ್ಚ್​-1ಕ್ಕೆ ರಿಲೀಸ್
ಕಾಂತಾರ ಸಿನಿಮಾದ ಪಾತ್ರಗಳು ಇನ್ಮುಂದೆ ಇಂಗ್ಲೀಷ್​ನಲ್ಲೂ ಮಾತನಾಡುತ್ತವೆ. ಕೇವಲ ಇಂಗ್ಲೀಷ್ ಭಾಷೆಯನ್ನ ಬಲ್ಲವರು ಕಾಂತಾರ ಚಿತ್ರವನ್ನ ಅವರ ಭಾಷೆಯಲ್ಲಿ ನೋಡಬಹುದಾಗಿದೆ.


ರಿಷಬ್ ಶೆಟ್ರ ಇಂಗ್ಲೀಷ್ ಕಾಂತಾರ ಸಿನಿಮಾ ಬರುವ ಮಾರ್ಚ್​-1 ರಂದು ರಿಲೀಸ್ ಆಗುತ್ತಿದೆ. ನೆಟ್​ಫ್ಲಿಕ್ಸ್ ನಲ್ಲಿ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದ್ದು, ಇಂಗ್ಲೀಷ್ ಭಾಷೆಯಲ್ಲೂ ಇನ್ಮುಂದೆ ಕನ್ನಡದ ಕಾಂತಾರ ಚಿತ್ರವನ್ನ ನೋಡಬಹುದಾಗಿದೆ.


ಕಾಂತಾರ ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆದ ಮೊದಲ ಕನ್ನಡ ಸಿನಿಮಾ ಆಗಿದೆ. ಇಲ್ಲಿವರೆಗೂ ಎಲ್ಲ ಭಾಷೆಯಲ್ಲೂ ಕನ್ನಡದ ಸಿನಿಮಾಗಳು ಡಬ್ ಆಗಿವೆ. ಆದರೆ ಇಂಗ್ಲೀಷ್ ಭಾಷೆಯಲ್ಲಿ ಬಂದಿರೋದು ಕಡಿಮೇನೆ ಅಂತಲೇ ಹೇಳಬಹುದು. ಹಾಗಂತ ವಿಕ್ರಾಂತ್ ರೋಣ ಚಿತ್ರ ಇಂಗ್ಲೀಷ್ ಭಾಷೆಯಲ್ಲಿ ಬಂದಿಲ್ವೇ ಅಂತ ಕೇಳಬೇಡಿ.ಇದು ಓಟಿಟಿ ವಿಚಾರ ಅಂತಲೇ ಹೇಳಬಹುದು.


ಇನ್ನು ಕಾಂತಾರ ಸಿನಿಮಾದ ಈ ಹೊಸ ಸುದ್ದಿ ನಡುವೇನೆ ಕಾಂತಾರ-2 ಚಿತ್ರದ ಮಾಹಿತಿ ಹೊರ ಬಿದ್ದಿದೆ. ಕಾಂತಾರ-2 ಚಿತ್ರ ಬರೋದಿಲ್ಲ. ಕಾಂತಾ ಪ್ರಿಕ್ವೆಲ್ ಸಿನಿಮಾ ಬರುತ್ತದೆ ಎಂದು ಸ್ವತಃ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.


Kannada Kantara Movie Will Be Release in English on March-1
ಕಾಂತಾರ ಇಂಗ್ಲೀಷ್ ಸಿನಿಮಾ ಯಾವಾಗ ರಿಲೀಸ್


ಕಾಂತಾರ ಚಿತ್ರದ 100 ದಿನ ಸಂಭ್ರಮದಲ್ಲಿ ಈ ವಿಷಯನ್ನ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂತಾರ ಚಿತ್ರದ ಪ್ರಿಕ್ವೆಲ್ ಬಗ್ಗೆ ಈಗ ಹೆಚ್ಚು ಕುತೂಹಲ ಕೆರಳಿದೆ ಅಂತ ಹೇಳಬಹುದು.


ಇದನ್ನೂ ಓದಿ: Sharan New Movie: ಶರಣ್ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್-ಅಮೃತಾ ಅಯ್ಯರ್ ಹೀರೋಯಿನ್!


ಇನ್ನುಳಿದಂತೆ ಕಾಂತಾರ ಪ್ರಿಕ್ವೆಲ್ ಕೆಲಸವೂ ಶುರು ಆಗಿದೆ. ರಿಸರ್ಚ್ ವರ್ಕ್ ಕೂಡ ಆರಂಭಗೊಂಡಿದೆ. ಇದೇ ವರ್ಷವೇ ಕಾಂತಾರ ಪ್ರಿಕ್ವೆಲ್ ಚಿತ್ರ ರಿಲೀಸ್ ಮಾಡೋ ಪ್ಲಾನ್ ಕೂಡ ಇದೆ ಅನ್ನೋ ಮಾಹಿತಿನೂ ಹರಿದಾಡುತ್ತಿದೆ. ಒಟ್ಟಾರೆ, ಕಾಂತಾರ-2 ನಿರೀಕ್ಷೆ ಮಾಡುತ್ತಿದ್ದ ಜನಕ್ಕೆ ರಿಷಬ್ ಶೆಟ್ರು, ಕಾಂತಾರ ಪ್ರಿಕ್ವೆಲ್ ಕೊಡಲು ಸಜ್ಜಾಗುತ್ತಿದ್ದಾರೆ.

First published: