• Home
  • »
  • News
  • »
  • entertainment
  • »
  • Kantara Movie: ಕನ್ನಡದ ಕಾಂತಾರ ಚಿತ್ರದ ಓಪನಿಂಗ್ ಸೀನ್ ಲೀಕ್! ಯಾರು ಮಾಡಿದ್ದು?

Kantara Movie: ಕನ್ನಡದ ಕಾಂತಾರ ಚಿತ್ರದ ಓಪನಿಂಗ್ ಸೀನ್ ಲೀಕ್! ಯಾರು ಮಾಡಿದ್ದು?

ಕಾಂತಾರ ಚಿತ್ರದ ಮೊದಲ ದೃಶ್ಯ ರಿವೀಲ್ ಮಾಡಿದ್ಯಾರು?

ಕಾಂತಾರ ಚಿತ್ರದ ಮೊದಲ ದೃಶ್ಯ ರಿವೀಲ್ ಮಾಡಿದ್ಯಾರು?

ಕಾಂತಾರ ಚಿತ್ರದ ಯಾವುದೇ ದೃಶ್ಯ ಇಲ್ಲಿವರೆಗೂ ಲೀಕ್ ಆಗಿರಲಿಲ್ಲ. ಸಿನಿಮಾ ತಂಡವೂ ಪ್ರಚಾರಕ್ಕೆ ಎಷ್ಟು ಬೇಕೋ ಅಷ್ಟೇ ದೃಶ್ಯಗಳನ್ನ ಪ್ರೊಮೋ ರೂಪದಲ್ಲಿಯೇ ಬಿಟ್ಟುಕೊಟ್ಟಿತ್ತು.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Kantara Movie First Scene) ಬಂದು ನೂರು ದಿನಗಳ ಕಳೆದಿದೆ. ಈ ವೇಳೆಯಲ್ಲಿಯೇ ಸಿನಿಮಾ ಪುಟ್ಟ ಪರದೆಯಲ್ಲೂ ಪ್ರಸಾರ ಆಗುತ್ತಿದೆ. ಆದರೆ ಇದೇ ವೇಳೆ ಈ ಚಿತ್ರದ ಒಂದು ದೃಶ್ಯ ಹೊರಗೆ ಬಂದಿದೆ. ಇದು ಇಡೀ ಚಿತ್ರದ (Divine Hit Kantara Movie) ಮಹತ್ವದ ದೃಶ್ಯವೇ ಆಗಿದೆ. ಇದನ್ನ ಕಂಡ ಅದೆಷ್ಟೋ ಜನ ತುಂಬಾ ಭಯ ಪಟ್ಟಿದ್ದು ಇದೆ. ಆದರೂ ಈ ಚಿತ್ರಕ್ಕೆ ಇದೇ ದೃಶ್ಯ ಮಹತ್ವದ್ದೇ ಆಗಿದೆ. ಇಡೀ ಚಿತ್ರದ ಮುಂದಿನ ಕಥೆಗೆ ಈ ಒಂದು ದೃಶ್ಯವೇ (Kannada Kantara Movie) ಆರಂಭ ಅಂತಲೇ ಹೇಳಬಹುದು. ಅಂತಹ ಈ ದೃಶ್ಯ ಈಗ ರಿವೀಲ್ ಆಗಿದೆ.


ಆದರೆ ಇದನ್ನ ಯಾರು (Kantara Movie First Scene Reveal) ರಿವೀಲ್ ಮಾಡಿದ್ರು? ಇಲ್ಲಿವರೆಗೂ ಇಲ್ಲದೇ ಇರೋದು ಈಗ ಯಾಕೆ? ಈ ಎಲ್ಲ ಪ್ರಶ್ನೆಗೆ ಇಂಟ್ರಸ್ಟಿಂಗ್ ಉತ್ತರ ಇಲ್ಲಿದೆ ಓದಿ.


Kannada Kantara Movie First Scene Now Reveal
ಹೊಂಬಾಳೆ ಸಂಸ್ಥೆಯಿಂದಲೇ ಕಾಂತಾರ ದೃಶ್ಯ ರಿವೀಲ್!


ಕಾಂತಾರ ಚಿತ್ರದ ಮೊದಲ ದೃಶ್ಯವನ್ನ ಲೀಕ್ ಮಾಡಿದ್ದ್ಯಾರು?


ಕನ್ನಡದ ಪ್ಯಾನ್ ಇಂಡಿಯಾ ಕಾಂತಾರ ಚಿತ್ರದ ಮೊದಲ ದೃಶ್ಯ ರಿವೀಲ್ ಆಗಿದೆ. ಕಾಂತಾರ ಕಥೆಗೆ ಮೂಲ ರಾಜನ ದೃಶಯವೇ ಆಗಿದೆ. ಇದೇ ದೃಶ್ಯವೇ ಸದ್ಯ ರಿವೀಲ್ ಆಗಿದೆ. ಪಂಜುರ್ಲಿ ದೈವದ ಗೆಜ್ಜೆ ನಾದವನ್ನ ಅರಿಸಿಕೊಂಡು ಬರುವ ಆ ರಾಜನ ದೃಶ್ಯವೇ ಇದಾಗಿದೆ.
ಬುಡಕಟ್ಟು ಜನಾಂಗದ ವ್ಯಕ್ತಿಯ ಮೈ ಮೇಲೆ ಪಂಜುರ್ಲಿ ದೈವ ಬಂದು ಏನೆಲ್ಲ ಆಗುತ್ತದೆ. ಏನೆಲ್ಲ ಹೇಳಿಕೆ ಆಗುತ್ತದೆ ಅನ್ನೋದೇ ಈ ಒಂದು ದೃಶ್ಯದಲ್ಲಿಯೆ ಇದೆ. ಈ ಚಿತ್ರವನ್ನ ನೋಡಿದ ಸಿನಿ ಪ್ರೇಕ್ಷಕರಿಗೆ ಸಹಜವಾಗಿ ಈ ದೃಶ್ಯ ಮೊದಲ ಬಾರಿಗೆ ಶಾಕ್ ಕೊಡುತ್ತದೆ.


ಕಾಂತಾರ ಚಿತ್ರದ ಮೊದಲ ದೃಶ್ಯ ರಿವೀಲ್ ಮಾಡಿದ್ಯಾರು?
ಕಾಂತಾರ ಚಿತ್ರದ ಯಾವುದೇ ದೃಶ್ಯ ಇಲ್ಲಿವರೆಗೂ ಲೀಕ್ ಆಗಿರಲಿಲ್ಲ. ಸಿನಿಮಾ ತಂಡವೂ ಪ್ರಚಾರಕ್ಕೆ ಎಷ್ಟು ಬೇಕೋ ಅಷ್ಟೇ ದೃಶ್ಯಗಳನ್ನ ಪ್ರೊಮೋ ರೂಪದಲ್ಲಿಯೇ ಬಿಟ್ಟುಕೊಟ್ಟಿತ್ತು.


ಆದರೆ ಈಗ ಸಿನಿಮಾದ ಒಂದು ಮಹತ್ವದ ದೃಶ್ಯವೇ ರಿಲೀಸ್ ಆಗಿದೆ. ಇದನ್ನ ಯುಟ್ಯೂಬ್​ ನಲ್ಲಿಯೇ ರಿವೀಲ್ ಮಾಡಲಾಗಿದೆ. ಇದನ್ನ ಕಂಡೋರೋ ಅತಿ ಹೆಚ್ಚು ಜನ ಹೆಚ್ಚಿದ್ದಾರೆ. ಹಾಗೇನೆ ಈಗ ಯಾಕೆ ಇದನ್ನ ಬಿಡಲಾಗಿದೆ ಅಂತಲೇ ಕೇಳುತ್ತಿದ್ದಾರೆ.


ಹೊಂಬಾಳೆ ಸಂಸ್ಥೆಯಿಂದಲೇ ಕಾಂತಾರ ದೃಶ್ಯ ರಿವೀಲ್!
ಕಾಂತಾರ ಚಿತ್ರ ರಿಲೀಸ್ ಆಗಿ ಈಗ 100 ದಿನ ಪೂರ್ಣ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆಯಿಂದಲೇ ಈ ಒಂದು ದೃಶ್ಯವನ್ನ ರಿವೀಲ್ ಮಾಡಲಾಗಿದೆ. ಇದನ್ನ ಅಧಿಕೃತ ಯುಟ್ಯೂಬ್ ಚಾನಲ್​ ನಲ್ಲಿಯೇ ರಿಲೀಸ್ ಮಾಡಲಾಗಿದೆ.


ಕಾಂತಾರ ಸಿನಿಮಾ ರಾಜ್ಯದ ಬಹುತೇಕ ಕಡೆಗೆ ಚಿತ್ರಮಂದಿರದಲ್ಲಿ ಇನ್ನೂ ಇದೆ. ಹಾಗೆ ಈ ಚಿತ್ರ ಈಗ ಕಳೆದ ವರ್ಷ ಸೆಪ್ಟಂಬರ್-30 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗಿತ್ತು. ಆ ಲೆಕ್ಕದಂತೆ ಕಾಂತಾರ ಸಿನಿಮಾ 100 ದಿನ ಪೂರೈಸಿದೆ.


Kannada Kantara Movie First Scene Now Reveal
ಕನ್ನಡದ ಕಾಂತಾರ ಚಿತ್ರದ ಓಪನಿಂಗ್ ಸೀನ್ ಲೀಕ್


ಹೊಂಬಾಳೆ ಯುಟ್ಯೂಬ್​ ಚಾನೆಲ್​ ನಲ್ಲಿಯೇ ಚಿತ್ರದ ದೃಶ್ಯ ರಿಲೀಸ್
ಈ ಒಂದು ಕಾರಣಕ್ಕೋ ಏನೋ, ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ತಮ್ಮ ಯುಟ್ಯೂಬ್ ಚಾನೆಲ್​​ನಲ್ಲಿಯೇ ಚಿತ್ರದ ಮೊದಲ ದೃಶ್ಯವನ್ನ ರಿಲೀಸ್ ಮಾಡಿದೆ.


ಇದನ್ನೂ ಓದಿ:  Rohit Shetty: ಶೂಟಿಂಗ್ ವೇಳೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಅಪಘಾತ; ಗಂಭೀರ ಗಾಯ, ಆಸ್ಪತ್ರೆಗೆ ದಾಖಲು


ಹಾಗೇನೆ ಈಗ ಚಿತ್ರ ಪುಟ್ಟಪರದೆಗೂ ಬಂದಿದೆ. ಅಲ್ಲಿ ನೋಡಿದ ಜನ ಯುಟ್ಯೂಬ್​ ನ ಹೊಂಬಾಳೆ ಚಾನಲ್​ಗೆ ಹೋದ್ರೆ ಸಾಕು, ಅಲ್ಲಿ ಕಾಂತಾರ ಚಿತ್ರದ ಮೊದಲ ದೃಶ್ಯ ಸಿಕ್ಕುಬಿಡುತ್ತದೆ.


ಇನ್ನು ಈ ಚಿತ್ರದ ಮೂಲಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಜನ ಚಿತ್ರವನ್ನ ಮೆಚ್ಚಿದ್ದರಿಂದಲೇ ಪ್ಯಾನ್ ಇಂಡಿಯಾ ಸ್ಟಾರ್ ಕೂಡ ಆಗಿದ್ದಾರೆ.

First published: