Secretಕನ್ನಡದ ಕಾಂತಾರ ಸಿನಿಮಾದ ಸಿಂಗಾರ (Singara Siriye) ಸಿರಿಯೇ ಹಾಡು ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಇತರ ಗೀತೆಗಳೂ ಇವೆ. ಆದರೆ, ಈ ಗೀತೆ ಮಾತ್ರ ವಿಶೇಷವಾಗಿಯೇ ಇದೆ. ಇದರ ಮೇಕಿಂಗ್ ಕೂಡ ಸ್ಪೆಷಲ್ ಆಗಿದೆ. ಸಂಗೀತ ನಿರ್ದೇಶಕ ಅಜನೀಶ್ (Ajaneesh Loknath) ಲೋಕನಾಥ್ ಕೂಡ ಅಷ್ಟೇ ಅದ್ಭುತವಾಗಿಯೇ ಈ ಗೀತೆಯನ್ನ ಸಂಯೋಜಿಸಿದ್ದರು. ಗಾಯಕ ವಿಜಯ್ (Vijay Prakash) ಪ್ರಕಾಶ್ ಮತ್ತು ಗಾಯಕಿ ಅನನ್ಯ (Ananya Bhat) ಭಟ್ ಕೂಡ ಸ್ಪೆಷಲ್ ಆಗಿಯೇ ಈ ಗೀತೆಗೆ ಜೀವ ತುಂಬಿದ್ದಾರೆ. ಆದರೆ ಇದನ್ನ ಬರೆದ ಯುವ ಲಿರಿಕ್ ರೈಟರ್ ಪ್ರಮೋದ್ (Pramod Maravanthe) ಮರವಂತೆ ಇದನ್ನ ಬರೆಯೋವಾಗ ಸ್ಪೆಷಲ್ ಅನುಭವವನ್ನೆ ಪಡೆದಿದ್ದಾರೆ.
ಅದರ ಬಗೆಗಿನ ಒಂದು ವೀಡಿಯೋವನ್ನ ಈಗ ಶೇರ್ ಮಾಡಿದ್ದಾರೆ. ಅದರ ಸುತ್ತದ ಒಂದು ಸ್ಟೋರಿ ಇಲ್ಲಿದೆ ಓದಿ.
ಸಿಂಗಾರ ಸಿರಿಯೇ ಹಾಡಿನ ಮೇಕಿಂಗ್ ಮೆಲುಕು ಹಾಕಿದ ಪ್ರಮೋದ್
ಸಿಂಗಾರ ಸಿರಿಯೇ ಮೇಕಿಂಗ್ ವೀಡಿಯೋವನ್ನ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಈಗ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷವಾಗಿಯೇ ಮೂಡಿ ಬಂದಿದೆ. ಇದನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ರೀಲ್ಸ್ ಅಲ್ಲಿ ಈ ಹಾಡಿಗೆ ಕುಣಿದು ಖುಷಿಪಟ್ಟವರಿಗೆ ಕೊರತೇನೆ ಇಲ್ಲ ಬಿಡಿ.
ಇಂತಹ ಹಾಡಿನ ಮೇಕಿಂಗ್ ವಿಶೇಷವಾಗಿಯೇ ಇದೆ. ಅದಕ್ಕೂ ಹೆಚ್ಚಾಗಿ ಈ ಗೀತೆಯನ್ನ ಬರೆದ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಕೂಡ ವಿಶೇಷವಾಗಿಯೇ ಅನುಭವ ಪಡೆದು ಈ ಗೀತೆಯನ್ನ ಬರೆದಿದ್ದಾರೆ.
ಕಾಂತಾರ ಶೂಟಿಂಗ್ ಸೆಟ್ಗೆ ಹೋಗಿ ಹಾಡು ಬರೆದ ಪ್ರಮೋದ್
ಹೌದು, ಇದಂತೂ ನಿಜ ನೋಡಿ, ಒಂದು ಹಾಡಿನ ಭಾವವನ್ನ ತಿಳಿಯಲು ಕಥೆ ಕೇಳಬೇಕು. ಇಲ್ಲವೇ ದೃಶ್ಯಗಳನ್ನ ನೋಡಿಯೇ ಹಾಡನ್ನ ಬರೆಯಬೇಕು. ಅದರಂತೆ ಲಿರಿಕ್ ರೈಟರ್ ಪ್ರಮೊದ್ ಮರವಂತೆ ಕಾಂತಾರ ಹಾಡು ಬರೆಯೋವಾಗ ಶೂಟಿಂಗ್ ಸ್ಪಾಟ್ಗೂ ಹೋಗಿದ್ದಾರೆ.
ಮಾನಿಟರ್ ಚಿತ್ರೀಕರಣ ಮಾಡಿರೋ ದೃಶ್ಯಗಳನ್ನ ಕೂಡ ಪ್ರಮೋದ್ ಕಣ್ತುಂಬಿಕೊಂಡಿದ್ದಾರೆ. ಅದಕ್ಕೆ ಹೇಗೆ ಬೇಕೋ ಹಾಗೆ ಲಿರಿಕ್ಸ್ ಬರೆಯೋಕೆ ಸ್ಪೂರ್ತಿಯನ್ನೂ ಪಡೆದಿದ್ದಾರೆ.
ಸಿಂಗಾರ ಸಿರಿಯೇ ಹೇಗೆ ಇರ್ಬೇಕು ಅಂತ ಹೇಳಿದ ರಿಷಬ್
ಸಿಂಗಾರ ಸಿರಿಯೇ ಹಾಡು ಅದ್ಭುತವಾಗಿಯೇ ಬಂದಿತ್ತು. ಜನ ಕೂಡ ಇದನ್ನ ಮೆಚ್ಚಿದರು. ಇಂತಹ ಈ ಹಾಡು ಹೀಗೆ ಇರಬೇಕು ಅಂತಲೇ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಅವರಿಗೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಅದು ಮೇಕಿಂಗ್ ವೀಡಿಯೋದಲ್ಲೂ ಕಾಣಿಸುತ್ತದೆ.
ಸಿಂಗಾರ ಸಿರಿಯೇ ಹಾಡಿನ ಮೇಕಿಂಗ್ ವೀಡಿಯೋ ಹಂಚಿಕೊಂಡ ಪ್ರಮೋದ್
ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಚೆನ್ನಾಗಿಯೇ ಬಂದಿದೆ. ರಿಷಬ್ ಶೆಟ್ರು ಕೊಟ್ಟ ಒಂದಷ್ಟು ಐಡಿಯಾಗಳೂ ಇಲ್ಲಿ ವರ್ಕ್ ಆದಂತೆ ಇದೆ. ಹೀಗಾಗಿಯೇ ಯುವ ಲಿರಿಕ್ ರೈಟರ್ ಪ್ರಮೋದ್ ಬರೆದ ಸಿಂಗಾರ ಸಿರಿಯೇ ಗೀತೆ ಅತ್ಯುತ್ತಮ ಅಂತಲೂ ಅನಿಸುತ್ತದೆ. ಪ್ರಮೋದ್ ಮರವಂತೆ ಬರವಣಿಗೆನೂ ವಿಶೇಷ ಅನಿಸುತ್ತದೆ.
ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡು ವಿದೇಶದಲ್ಲೂ ಹಾಡಲಾಗಿದೆ. ಗಾಯಕ ವಿಜಯ್ ಪ್ರಕಾಶ್ ಮತ್ತು ಅನನ್ಯ ಭಟ್ ಹಾಡಿರೋ ಈ ಗೀತೆಯನ್ನ ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಲಂಡನ್ ದೇಶದಲ್ಲೂ ಹಾಡಿ ಅಲ್ಲಿಯ ಜನ ಮನಸ್ಸನ್ನ ಗೆದ್ದಿದ್ದರು.
ಇದನ್ನೂ ಓದಿ: Duniya Vijay New Look: ತೂಕ ಇಳಿಸಿಕೊಂಡ ದುನಿಯಾ ವಿಜಯ್, ಭೀಮ ಚಿತ್ರಕ್ಕಾಗಿ ಕರಿಚಿರತೆ ಮತ್ತೆ ರೆಡಿ!
ಅಂತಹ ಈ ಗೀತೆ ಈಗಲೂ ಹೆಚ್ಚು ಗಮನ ಸೆಳೆಯುತ್ತಲೇ ಇದೆ. ಲಿರಿಕ್ ರೈಟರ್ ತಮ್ಮ ಈ ಹಿಟ್ ಹಾಡಿನ ಮೇಕಿಂಗ್ ಕ್ಷಣಗಳನ್ನ ಮೆಲುಕು ಹಾಕ್ತಾನೇ ಇರ್ತಾರೆ. ಆ ಹಿನ್ನೆಲೆಯಲ್ಲಿಯೇ ಈಗ ಇದೇ ಹಾಡಿನ ಮೇಕಿಂಗ್ ಶೇರ್ ಮಾಡಿದ್ದಾರೆ. ಖುಷಿಪಟ್ಟಿದ್ದಾರೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ