ಕನ್ನಡದ ಕಾಂತಾರ (Kantara) ಸಿನಿಮಾ ಬಿಗ್ (Big Hit) ಹಿಟ್ ಆಗಿದೆ. ಕನ್ನಡ ಸೇರಿದಂತೆ ಇತರ ಭಾಷೆಯಲ್ಲೂ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ. ಚಿತ್ರದಲ್ಲಿ ಕಂಟೆಂಟ್ ಕೂಡ ಚೆನ್ನಾಗಿದೆ. ತುಳುನಾಡ ದೈವದ ಕಥೆ ಇದ್ದಾಗಿದ್ದು, ಈ ಮೂಲಕ ತುಳುನಾಡ ಸಂಸ್ಕೃತಿ ಮತ್ತು ದೈವದ ಶಕ್ತಿಯು ಎಲ್ಲೆಡೆ ತಿಳಿದು ಹೋಗಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ (Song Hit) ಹಾಡುಗಳೂ ಇಡೀ ಕಥೆಗೆ ಪೂರಕವಾಗಿಯೇವೆ. ತುಳುನಾಡ ದೈವದ ಕಥೆಯನ್ನ ಹೇಳುವ ಜಾನಪದ ಸಂಗೀತವೂ ಈ ಒಂದು ಸಿನಿಮಾದಲ್ಲಿ ಅಷ್ಟೇ ಅದ್ಭುತವಾಗಿಯೇ ಬಂದಿವೆ. ಈ ಒಂದು ಹಾಡುಗಳಿಂದಲೂ ಚಿತ್ರಕ್ಕೆ ನೇಟಿವಿಟ್ ಬಂದಿದೆ. ಆದರೆ ಈ ಚಿತ್ರಕ್ಕೆ ಕಮರ್ಷಿಲ್ ಟಚ್ ಕೂಡ ಇದೆ. ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಸಿಂಗಾರಿ (Singara Siriye) ಸಿರಿಯೇ ಹಾಡು ಕೂಡ ಇದೆ. ಇದು ಸಹ ಹಿಟ್ ಆಗಿದೆ. ಲಂಡನ್ ನ ಲೈಟ್ ಹೌಸ್ ನಲ್ಲೂ ಈ ಗೀತೆಯನ್ನ ಲೈವ್ ಆಗಿಯೇ ಗಾಯಕಯ ವಿಜಯ್ ಪ್ರಕಾಶ್ ಮತ್ತು ಗಾಯಕಿ ಅನುರಾಧ ಭಟ್ ಹಾಡಿದ್ದಾರೆ.
ಲಂಡನ್ ಲೈಟ್ ಹೌಸ್ನಲ್ಲಿ ಸಿಂಗಾರ ಸಿರಿಯೇ ಗಾನ ಸುಧೆ
ಕಾಂತಾರ ಸಿನಿಮಾದ ಎಲ್ಲ ವಿಷಯದಲ್ಲೂ ಈಗ ಎಲ್ಲರ ಹೃದಯ ಗೆದ್ದಿದೆ. ಒಂದು ಸಿನಿಮಾ ಹಿಟ್ ಆದ್ರೆ ಮುಗೀತು, ಆ ಚಿತ್ರದ ಪ್ರತಿ ವಿಷಯವೂ ಸುದ್ದಿ ಆಗಿ ಬಿಡುತ್ತವೆ. ಕಾಂತಾರ ಸಿನಿಮಾ ವಿಷಯದಲ್ಲೂ ಈಗ ಆಗಿದೆ.
ಕನ್ನಡದ ಕಾಂತಾರ ಸಿನಿಮಾದಲ್ಲಿ ಜಾನಪದ ಹಾಡುಗಳ ಗುಚ್ಚವೇ ಇದೆ. ತುಳುನಾಡಿನ ದೈವದ ಕಥೆ ಹೇಳುವ ಹಾಡುಗಳೂ ಇವಾಗಿವೆ. ಇವುಗಳನ್ನ ಲೈವ್ ಆಗಿಯೇ ಸಂಗೀತ ನಿರ್ದೇಶಕ ರೆಕಾರ್ಡ್ ಮಾಡಿಕೊಂದು ಬಂದಿದ್ದಾರೆ.
ಕಾಂತಾರ ಚಿತ್ರಕ್ಕೆ ತುಳುನಾಡ ಜಾನಪದ ಹಾಡುಗಳೇ ಶಕ್ತಿ
ಸಿನಿಮಾಗೆ ಹೇಗೆ ಬೇಕೋ ಹಾಗೆ ಆಯಾ ಜಾನಪದ ಹಾಡುಗಳಿಗ ಶುಗರ್ ಕೋಟ್ ಕೂಡ ಮಾಡಿದ್ದಾರೆ. ಈ ಒಂದು ಕಾರಣಕ್ಕೇನೆ ಕಾಂತಾರ ಸಿನಿಮಾದ ಹಾಡುಗಳಲ್ಲಿ ಜೀವಂತಿಕೆ ಬಂದಿದೆ. ನೇಟಿವಿಟಿಯ ಸೊಗಡು ಈ ಚಿತ್ರದ ಗೆಲುವಿಗೂ ಕಾರಣವಾಗಿದೆ.
ಸಂಗೀತ ನಿರ್ದೇಶಕ ಅಜನೀತ್ ಲೋಕನಾಥ್ ಈ ಚಿತ್ರದಲ್ಲಿ ಸಿಂಗಾರ ಸಿರಿಯೇ ಅನ್ನೋ ಹಾಡನ್ನೂ ಮಾಡಿದ್ದಾರೆ. ಈ ಗೀತೆ ಕೂಡ ಅದ್ಭುತವಾಗಿಯೇ ಬಂದಿದೆ. ವಿಷ್ಯೂವಲಿ ಕೂಡ ಇದು ವಿಶೇಷ ಅನಿಸುತ್ತದೆ. ಸಂಗೀತ ಸಂಯೋಜನೆ ವಿಷಯದಲ್ಲೂ ಇದು ಸಿಂಗಾರ ಸಿರಿಯೇ ಗೀತೆ ಖುಷಿ ಕೊಡುತ್ತದೆ.
ಲಂಡನ್ ನ ಲೈಟ್ ಹೌಸ್ ನಲ್ಲಿ ಸಿಂಗಾರ ಸಿರಿಯೇ ಲೈವ್ ಗಾನ
ಗಾಯಕ ವಿಜಯ್ ಪ್ರಕಾಶ್ ಸಿಂಗಾರ ಸಿರಿಯೇ ಹಾಡನ್ನ ಲೈವ್ ಆಗಿಯೇ ಲಂಡನ್ನ ಲೈಟ್ ಹೌಸ್ ನಲ್ಲಿ ಹಾಡಿದ್ದಾರೆ. ಆದರೆ ತಾವೇ ಹಾಡಿದ ಈ ಗೀತೆಯ ಲೈವ್ ಗಾಯನಕ್ಕೆ ಅಭ್ಯಾಸ ಕೂಡ ಮಾಡಿದ್ದಾರೆ.
ಈ ಸಮಯದಲ್ಲಿಯೇ ಗಾಯಕ ವಿಜಯ್ ಪ್ರಕಾಶ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಆಗಲೇ ಈ ಲೈವ್ ಹಿಂದಿನ ಒಂದಷ್ಟು ವಿಷಯಗಳನ್ನೂ ಹೀಗೆ ಹಂಚಿಕೊಂಡ್ರು.
ಗಾಯಕ ವಿಜಯಪ್ರಕಾಶ್ ಲೈವ್ ಆಗಿಯೇ ಸಿಂಗಾರ ಸಿರಿಯೇ ಹಾಡು ಹಾಡಿದ್ದಾರೆ. ಫಸ್ಟ್ ಟೈಮ್ ಈ ಹಾಡನ್ನ ಸ್ಟೇಜ್ ಮೇಲೆ ಅದು ದೂರದ ಲಂಡನ್ನಲ್ಲಿ ಹಾಡಿ ಖುಷಿ ಪಟ್ಟಿದ್ದಾರೆ. ಇದಕ್ಕಾಗಿಯೇ ರಿಹರ್ಸಲ್ ಮಾಡಿರೋ ಸಂತೋಷವನ್ನೂ ಕೂಡ ಲೈವ್ ಬಂದ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಗಾಯಕ ವಿಜಯ್ ಪ್ರಕಾಶ್ ಜೊತೆಗೆ ಗಾಯಕಿ ಅನುರಾಧ ಭಟ್ ಕೂಡ ಸಾಥ್ ಕೊಟ್ಟಿದ್ದಾರೆ. ಆದರೆ ಸಿನಿಮಾದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಅನನ್ಯ ಭಟ್ ಜೊತೆಯಾಗಿ ಹಾಡಿದ್ದರು.
ಇವರ ಈ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ನೋಡುಗರು ಇದನ್ನೂ ಅಷ್ಟೇ ಮೆಚ್ಚಿಕೊಂಡಿದ್ದಾರೆ. ಲಂಡನ್ನಲ್ಲಿರೊ ಕನ್ನಡಿಗರು ಈ ಒಂದು ಗೀತೆಯನ್ನ ಲೈವ್ ಕಾರ್ಯಕ್ರಮದಲ್ಲಿ ಕೇಳಿ ಎಂಜಾಯ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ