• Home
  • »
  • News
  • »
  • entertainment
  • »
  • Kantara Rishab Shetty Next Movie: ಕಾಂತಾರ ಸಿನಿಮಾ ಸೂಪರ್ ಹಿಟ್, ಮುಂದೇನ್ ಮಾಡ್ತಾರೆ ರಿಷಬ್?

Kantara Rishab Shetty Next Movie: ಕಾಂತಾರ ಸಿನಿಮಾ ಸೂಪರ್ ಹಿಟ್, ಮುಂದೇನ್ ಮಾಡ್ತಾರೆ ರಿಷಬ್?

ಕಾಂತಾರ ಸಿನಿಮಾ ಹಿಟ್ ಆಯ್ತು, ಮುಂದೇನು?

ಕಾಂತಾರ ಸಿನಿಮಾ ಹಿಟ್ ಆಯ್ತು, ಮುಂದೇನು?

ಕಾಂತಾರ ಆದ್ಮೇಲೆ ರಿಷಬ್ ಶೆಟ್ಟಿ ಮುಂದೇನ್ ಮಾಡ್ತಾರೆ. ಈ ಕುತೂಹಲದ ಪ್ರಶ್ನೆಗೆ ರಿಷಬ್ ಶೆಟ್ಟಿ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಒಂದಷ್ಟು ವಿಷಯವನ್ನ ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ (Kannada Industry) ಹೆಸರನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಸಿನಿಮಾಗಳು ಹಲವು ಇವೆ. ಕಾಲ ಕಾಲಕ್ಕೆ ಬೇರೆ ಬೇರೆ ಹೀರೋಗಳು ಬಂದು (Cinema) ಸಿನಿಮಾರಂಗದ ಹೆಸರನ್ನ ಬೆಳಗಿದ್ದಾರೆ. ಕೆಜಿಎಫ್ ಮೂಲಕ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕನ್ನಡ ಚಿತ್ರರಂಗದ ಖ್ಯಾತಿಯನ್ನ ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋದ್ರು. ಅದೇ ಕೆಆರ್​ಜಿ (KRG) ನಿರ್ಮಾಣ ಸಂಸ್ಥೆಯ ಕಾಂತಾರ ಸಿನಿಮಾದ ರಿಷಬ್ ಶೆಟ್ಟಿ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಕನ್ನಡ ಚಿತ್ರದ ಮೂಲಕ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ತಿಳಿಸಿದ್ದಾರೆ.ಕಳೆದ 25 ದಿನಗಳಿಂದಲೂ ಎಲ್ಲ ರಾಜ್ಯದ, ಎಲ್ಲ ಥಿಯೇಟರ್​ ನಲ್ಲೂ ಓಡ್ತಿರೋ ಕಾಂತಾರ ಸಿನಿಮಾ ಈಗ ದಾಖಲೆಗಳನ್ನ ಮಾಡ್ತಾನೇ ಇದೆ.


ಇದೇನೋ ಸರಿ, ಆದರೆ ಕಾಂತಾರ ಆದ್ಮೇಲೆ ರಿಷಬ್ ಶೆಟ್ಟಿ ಮುಂದೇನ್ ಮಾಡ್ತಾರೆ. ಈ ಕುತೂಹಲದ ಪ್ರಶ್ನೆಗೆ ರಿಷಬ್ ಶೆಟ್ಟಿ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಒಂದಷ್ಟು ವಿಷಯವನ್ನ ಹಂಚಿಕೊಂಡಿದ್ದಾರೆ.




ಕಾಂತಾರ ಗೆದ್ದಾಗಿದೆ ಹೊಸ ದಾಖಲೆ ಮಾಡಿ ಆಗಿದೆ
ಕಾಂತಾರ ಸಿನಿಮಾ ಹಿಟ್ ಆಗಿದೆ. ಹಿಟ್ ಅಷ್ಟೇ ಅಲ್ಲ, ಸೂಪರ್ ಹಿಟ್ ಆಗಿದೆ. ಡಿವೈನ್ ಬ್ಲಾಕ್​ಬಸ್ಟರ್ ಎಂಬ ಹೆಗ್ಗಳಿಕೆಯೂ ಬಂದಿದೆ. ಕಾಂತಾರ ಕಂಡವ್ರಿಗೆ ಬೇಸರ ಇಲ್ಲವೇ ಇಲ್ಲ. ಎಲ್ಲರೂ ಥ್ರಿಲ್ ಆಗಿ ಒಳ್ಳೆ ಸಿನಿಮಾ ನೋಡಿರೋ ಫೀಲ್​​ ನಲ್ಲಿಯೇ ಥಿಯೇಟರ್​ನಿಂದ ಹೊರ ಬರುತ್ತಿದ್ದಾರೆ.


ಕಾಂತಾರ ಸಿನಿಮಾದ ಸಕ್ಸಸ್ ಸೂತ್ರ ಏನೂ ಅನ್ನೋದು ಸಿನಿಮಾದವ್ರಿಗೆ ಗೊತ್ತಾಗಿದೆ. ಆದರೆ ಅದೇ ಸೂತ್ರವನ್ನ ಮತ್ತೆ ಟ್ರೈ ಮಾಡಿದ್ರೆ ಜನ ಒಪ್ಪೋದಿಲ್ಲ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಕಾರಣಕ್ಕೆ ಕಾಂತಾರದಂತಹ ಮತ್ತೊಂದು ಸಿನಿಮಾ ಬರೋದು ಡೌಟ್.


Kannada Kantara Film Rishab Shetty Next Movie Updates
ಕಾಂತಾರ ಪಾರ್ಟ್-2 ಸಿನಿಮಾ ಬರುತ್ತದೆಯೇ?


ಕಾಂತಾರ ಪಾರ್ಟ್-2 ಸಿನಿಮಾ ಬರುತ್ತದೆಯೇ?
ಕಾಂತಾರ ಸಿನಿಮಾದಲ್ಲಿ ಪಾರ್ಟ್-2 ಮಾಡೋ ಕಂಟೆಂಟ್ ಇದೆ. ಅದರ ಹಿಂಟ್ ಕೂಡ ಚಿತ್ರದ ಕೊನೆಯಲ್ಲಿಯೇ ಸಿಗುತ್ತದೆ. ಅಲ್ಲಿಗೆ ನಾವು ಕಾಂತಾರ ಪಾರ್ಟ್​-2 ಚಿತ್ರ ಬರಬಹುದು ಅಂತಲೇ ಅಂದಾಜು ಮಾಡಬಹುದು. ಆದರೆ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇಲ್ಲವೇ ಇಲ್ಲ.


ಇದರ ಹೊರತಾಗಿ ಕಾಂತಾರ ಸಿನಿಮಾ ಯಾವುದೇ ತೊಂದರೇ ಇಲ್ಲದೇ ಮುನ್ನುಗ್ಗುತ್ತಿದೆ. ಎಲ್ಲಿ ರಿಲೀಸ್ ಆಗುತ್ತದೆಯೋ ಅಲ್ಲಿ ತನ್ನದೇ ಛಾಫು ಮೂಡಿಸುತ್ತಿದೆ. ಇಂತಹ ಗ್ರೇಟ್ ಸಕ್ಸಸ್ ಆದ್ಮೇಲೆ ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಮುಂದೇನ್ ಮಾಡ್ತಾರೆ?


ಕಾಂತಾರ ಚಿತ್ರದ ಬಳಿಕ ರಿಷಬ್ ಯಾವ ಚಿತ್ರ ಮಾಡ್ತಾರೆ?
ಕಾಂತಾರ ಸಿನಿಮಾ ನಿರೀಕ್ಷೆ ಮೀರಿ ಹಿಟ್ ಆಗಿದೆ. ಇದರಿಂದ ಜನರಲ್ಲಿ ರಿಷಬ್ ಶೆಟ್ಟಿ ಮುಂದಿನ ಚಿತ್ರದ ಬಗ್ಗೆ ಅಷ್ಟೆ ಕುತೂಹಲವೂ ಇದೆ. ಕಾಂತಾರ ಸಿನಿಮಾ ಆದ್ಮೇಲೆ ರಿಷಬ್ ಕೊಡುವ ಮುಂದಿನ ಸಿನಿಮಾ ಹೇಗಿರುತ್ತದೆ? ಈ ಒಂದು ಪ್ರಶ್ನೆ ಈಗಲೇ ಹುಟ್ಟಿಕೊಂಡಿದೆ.


ಇದನ್ನೂ ಓದಿ: Puneeth Rajkumar: ವೂಟ್​-ಕಲರ್ಸ್ ಕನ್ನಡದಿಂದ ಅಪ್ಪು ನಮನ! ಅಭಿಮಾನಿಗಳಿಗಾಗಿ ಹಿಟ್ ಸಿನಿಮಾ ಪ್ರಸಾರ


ಕಾಂತಾರ ಸಿನಿಮಾ ನೋಡಿದವ್ರಿಗೆ ಈ ಒಂದು ಪ್ರಶ್ನೆ ಹುಟ್ಟಲು ಕಾಂತಾರ ಸಿನಿಮಾನೇ ಕಾರಣ ಆಗಿದೆ. ತುಂಬಾ ಒಳ್ಳೆ ಚಿತ್ರವನ್ನ ಕೊಟ್ಟಾಗ, ನಿರ್ದೇಶಕ-ನಾಯಕ-ನಿರ್ಮಾಪಕರ ಮೇಲೆ ಒಳ್ಳೆ ಚಿತ್ರವನ್ನೆ ಕೊಡುಬೇಕು ಅನ್ನೋ ಒತ್ತಡವೂ ಹೆಚ್ಚಾಗುತ್ತದೆ.


Kannada Kantara Film Rishab Shetty Next Movie Updates
ಕಾಂತಾರ ಚಿತ್ರದ ಬಳಿಕ ರಿಷಬ್ ಯಾವ ಚಿತ್ರ ಮಾಡ್ತಾರೆ?


ಕಾಂತಾರ ಡೈರೆಕ್ಟರ್ ರಿಷಬ್ ಶೆಟ್ಟಿ ಈ ಬಗ್ಗೆ ಏನ್ ಹೇಳ್ತಾರೆ?
ರಿಷಬ್ ಶೆಟ್ಟಿ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಮ್ಮ ಮುಂದಿನ ಪ್ಲಾನ್ ಬಗ್ಗೆ ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಕೆಲಸದಲ್ಲಿಯೇ ಇನ್ನು ಬ್ಯುಸಿ ಇದ್ದೇನೆ. ಈ ಎಲ್ಲ ಕೆಲಸಗಳು ಮುಗಿಯಬೇಕು.


ಇದಾದ್ಮೇಲೆ ಮುಂದಿನ ಎರಡು ತಿಂಗಳು ಏನಂದ್ರ ಏನೂ ಮಾಡುವ ಪ್ಲಾನ್ ಇಲ್ಲವೇ ಇಲ್ಲ. ಊರು ಕಡೆಗೆ ಹೋಗುವ ಪ್ಲಾನ್ ಇದೆ. ಅಷ್ಟು ಬಿಟ್ಟರೇ ಸದ್ಯಕ್ಕೆ ಕಾಂತಾರ ಮತ್ತು ಕಾಂತಾರ ಅಂತಲೇ ಹೇಳುತ್ತಾರೆ.


ಕಿರಿಕ್ ಪಾರ್ಟಿ-2 ಯಾವಾಗ ಆಗುತ್ತದೆ ಶುರು?
ಕಾಂತಾರ ಆದ್ಮೇಲೆ ಕಿರಿಕ್ ಪಾರ್ಟಿ-2 ಚಿತ್ರವನ್ನ ರಿಷಬ್ ಶುರು ಮಾಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದಕ್ಕೂ ರಿಯಾಕ್ಟ್ ಮಾಡಿರೋ ರಿಷಬ್ ಶೆಟ್ಟಿ, ಸದ್ಯಕ್ಕೆ ಯಾವುದೇ ಸಿನಿಮಾ ಆರಂಭಿಸೋ ಪ್ಲಾನ್ ಇಲ್ಲ. ಕಿರಿಕ್ ಪಾರ್ಟ್-2 ಬಗ್ಗೆ ಈಗಲೇ ಏನೂ ಹೇಳೋದಿಲ್ಲ ಅನ್ನೋ ಅರ್ಥದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Pooja Hegde: ಟ್ರೆಡಿಷನ್ ಡ್ರೆಸ್​ನಲ್ಲಿ ಪೂಜಾ ಹೆಗ್ಡೆ; ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ 


ಕಾಂತಾರ ಹಿಟ್ ಆದ ಖುಷಿಯಲ್ಲಿರೋ ರಿಷಬ್ ಶೆಟ್ಟಿ ಸದ್ಯಕ್ಕೆ ಚಿತ್ರದ ಪ್ರೊಡಕ್ಷನ್ ಹೌಸ್ ಪ್ರೋಮೋಷನ್ ಪ್ಲಾನಿಂಗ್ ನಂತೇನೆ ಎಲ್ಲೆಡೆ ಚಿತ್ರದ ಪ್ರಚಾರಕ್ಕೆ ಹೋಗ್ತಾಯಿದ್ದಾರೆ. ಅದರಲ್ಲಿಯೇ ಫುಲ್ ಬ್ಯುಸಿ ಆಗಿದ್ದಾರೆ.

First published: