• Home
  • »
  • News
  • »
  • entertainment
  • »
  • Ajaneesh Loknath Birthday : ಕಾಂತಾರ ಸಕ್ಸಸ್ ಈ ವರ್ಷದ ಅಜನೀಶ್ ಬರ್ತ್ ಡೇ ಗಿಫ್ಟ್​

Ajaneesh Loknath Birthday : ಕಾಂತಾರ ಸಕ್ಸಸ್ ಈ ವರ್ಷದ ಅಜನೀಶ್ ಬರ್ತ್ ಡೇ ಗಿಫ್ಟ್​

ಕಾಂತಾರ ಸಕ್ಸಸ್ ಈ ವರ್ಷದ ಅಜನೀಶ್ ಬರ್ತ್ ಡೇ ಗಿಫ್ಚ್

ಕಾಂತಾರ ಸಕ್ಸಸ್ ಈ ವರ್ಷದ ಅಜನೀಶ್ ಬರ್ತ್ ಡೇ ಗಿಫ್ಚ್

ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಕಾಂತಾರ ಬಿಗ್ ಸಕ್ಸಸ್ ಈ ವರ್ಷದ ಹುಟ್ಟುಹಬ್ಬದ ಗಿಫ್ಟ್ ಎಂದು ಹೇಳುವ ಅಜನೀಶ್ ನ್ಯೂಸ್ 18 ಕನ್ನಡ ಡಿಜಿಟಲ್​ ಜೊತೆಗೆ ಇನ್ನೂ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದು ಮುಂದೆ ಇದೆ ಓದಿ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Kantara Cinema) ಸಕ್ಸಸ್ ಆಗಿದೆ. ಚಿತ್ರಕ್ಕೆ ದುಡಿದ ಪ್ರತಿಯೊಬ್ಬರಿಗೂ ಚಿತ್ರ ಜೀವನದ ಮೈಲುಗಲ್ಲು ಆಗಿದೆ. ಈ ಸಿನಿಮಾದ ಸಂಗೀತ ನಿರ್ದೆಶಕ ಅಜನೀಶ್ (Ajaneesh Loknath) ಲೋಕನಾಥ್ ಅವರಿಗೂ ಈ ಚಿತ್ರದಿಂದ ದೊಡ್ಡ ಹೆಸರು ಬಂದಿದೆ. ಚಿತ್ರ ಜೀವನದ ಒಟ್ಟು ಪಯಣದಲ್ಲಿ ಕಾಂತಾರದ (Kantara Vibration) ವೈಬ್ರೇಷನ್ ಇಡೀ ಜೀವನಕ್ಕೆ ಸಾಕಾಗುವಷ್ಟಿದೆ. ಇದನ್ನ ಬಣ್ಣಿಸೋದು ಕಷ್ಟವೇ. ಆದರೆ ಅದನ್ನ ಒಂದೇ ಪದದಲ್ಲಿ ತುಂಬಾ ಖುಷಿ ಅಂತಲೇ ಹೇಳಬಹುದು. ಈ ವರ್ಷದ ಜನ್ಮ ದಿನದ (Special Gift) ವಿಶೇಷ ಗಿಫ್ಟ್ ಅಂತಲೂ ಹೇಳಿ ಬಿಡಬಹುದು. ಹೀಗೆ ಅಜನೀಶ್ ಲೋಕನಾಥ್ ಮಾತನಾಡ್ತಾ ಹೋದ್ರು. ಮಾತಿನಲ್ಲಿ ಸೌಮ್ಯ ಇತ್ತು, ಅಹಂ ಕಾಣಲೇ ಇಲ್ಲ. ಸಕ್ಸಸ್ ಕೊಟ್ಟ ಗತ್ತು ಇರಲಿಲ್ಲ. ಮೊದಲು ಹೇಗಿದ್ದರೋ ಅಜನೀಶ್ ಹಾಗೆ ಮಾತು ಮುಂದುವರೆಸಿದ್ರು.


ಅಜನೀಶ್ ಫೋನ್ ಕಾಲ್ ಮಾಡಿದಾಗ, ಅದೇ ಸೌಮ್ಯತೆ ಮತ್ತು ಅದೇ ಸರಳತೆಯಿಂದಲೇ ಮಾತನಾಡಿದ್ರು. ಸಂಗೀತ ನಿರ್ದೇಶಕರಲ್ಲಿ ಅತಿ ದೊಡ್ಡ ಅಹಂ ಬರೋದಿಲ್ಲ ಅನಿಸುತ್ತದೆ.
ಅದರಲ್ಲೂ ಅಜನೀಶ್ ಕಾಂತಾರದಂತಹ ಚಿತ್ರ ಕೊಟ್ಟು ದೇಶ-ವಿದೇಶಕ್ಕೆಲ್ಲ ಪರಿಚಿತರಾಗಿದ್ದಾರೆ. ಇಷ್ಟಾದ್ಮೇಲೆ ಒಂಚೂರು ಅಹಂ ಬಂದಿರಬಹುದು ಅಂತ ನೀವೂ ಗೆಸ್ ಮಾಡಿದ್ರೆ, ನಿಮ್ಮ ಗೆಸ್ಸಿಂಗ್ ಸುಳ್ಳಾಗುತ್ತದೆ.


ಜನ್ಮ ದಿನದ ಹಿನ್ನೆಲೆ ಅಜ್ಜು ಜೊತೆಗೆ ವಿಶೇಷ ಮಾತು-ಕತೆ
ಅಜನೀಶ್ ಬದಲಾಗಿಯೇ ಇಲ್ಲ. ಕಾಂತಾರ ಸಕ್ಸಸ್ ಆಗೋ ಮುಂಚೇ ಹೇಗಿದ್ದರೋ ಹಾಗೇ ಇದ್ದಾರೆ. ಅದೇ ಸೌಮ್ಯ ಮಾತುಗಳಿಂದಲೇ ತಮ್ಮ ಈ ವರ್ಷದ ಜನ್ಮ ದಿನದ ವಿಶೇಷಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್​​ ಜೊತೆಗೆ ಹಂಚಿಕೊಳ್ಳುತ್ತಲೇ ಹೋದ್ರು.


Kannada Kantara Film Music Director Ajaneesh Loknath Today Celebrating his birthday
ಸೌಮ್ಯ ಸ್ವಭಾವದ ಸರಳ ಮಾತುಗಾರ ಈ ಸಂಗೀತಗಾರ


ತಮ್ಮೂರಿನತ್ತ ಪಯಣ ಬೆಳಸಲಿಕ್ಕೋ ಏನೋ, ಏರ್​ಪೋರ್ಟ್​​ನಲ್ಲಿಯೇ ಇದ್ದರು, ಇನ್ನು ಚೆಕ್ ಇನ್ ಆಗ್ಬೇಕು ಅನ್ನೋವಷ್ಟರಲ್ಲಿಯೇ ಕಾಲ್ ಮಾಡಿದಾಗ, ಅರೆ ಕ್ಷಣ ಕಾಲ್​ ರಿಂಗ್ ಆಯಿತು. ಕಟ್ ಮಾಡಿ ಒಂದು ನಿಮಿಷವೂ ಆಗಿರಲಿಲ್ಲ.


ಸೌಮ್ಯ ಸ್ವಭಾವದ ಸರಳ ಮಾತುಗಾರ ಈ ಸಂಗೀತಗಾರ
ಅಜನೀಶ್ ಲೋಕನಾಥ್ ವಾಪಸ್ ಕಾಲ್ ಮಾಡಿಯೇ ಬಿಟ್ಟರು. ಅದೇ ಸೌಮ್ಯ ಮಾತು ಅದೇ ಸರಳತೆಯಿಂದಲೇ ಮಾತು ಶುರು ಮಾಡಿದರು. ಜನ್ಮ ದಿನ ಏನೂ ಸ್ಪೆಷಲ್ ಇಲ್ಲ. ಇನ್ನೂ ಏನೂ ಪ್ಲಾನ್ ಕೂಡ ಮಾಡಿಲ್ಲ. ಆದರೆ ದೇವಸ್ಥಾನಕ್ಕೆ ಹೋಗುವ ಪ್ಲಾನ್ ಇದೆ.
ಜನ್ಮ ದಿನದ ವಿಶೇಷಕ್ಕೆ ಕಾಂತಾರ ಚಿತ್ರದ ಸಕ್ಸಸ್ ಈ ವರ್ಷದ ಗಿಫ್ಟ್ ಎಂದು ಹೇಳಬಹುದು. ಕನ್ನಡ ಚಿತ್ರರಂಗಲ್ಲಿ ಹೆಚ್ಚು ಕಡಿಮೆ 19 ವರ್ಷದಿಂದ ಇದ್ದೇನೆ. ಈ ವರ್ಷ ಸಿಕ್ಕ ಗಿಫ್ಟ್ ವಿಶೇಷವಾಗಿಯೇ ಇದೆ. ಈ ಚಿತ್ರದ ಬಳಿಕ ಮತ್ಯಾವ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ.


ಅಜನೀಶ್ ಕಾಂತಾರ ಬಳಿಕ ಹೊಸ ಪ್ರೋಜೆಕ್ಟ್ ಒಪ್ಪಿಕೊಂಡಿಲ್ಲ!
ಈಗಾಗಲೇ ಸುಮಾರು ಐದು ಪ್ರೋಜೆಕ್ಟ್​ ಗಳಿವೆ. ರಿಯಲ್ ಸ್ಟಾರ್ ಉಪ್ಪಿ ಅವರ ಯು ಐ ಸಿನಿಮಾ ಇದೆ. ಡಾಲಿ ಧನಂಜಯ್ ಅವರ ಹೊಯ್ಸಳ ಕೂಡ ಒಪ್ಪಿಕೊಂಡಿದ್ದೇನೆ. ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ ಚಿತ್ರವೂ ಇದೆ. ರೋರಿಂಗ್ ಸ್ಟಾರ್ ಮುರಳಿ ಅವರ ಭಗೀರಾ ಚಿತ್ರಕ್ಕೂ ಮ್ಯೂಸ್ ಕಂಪೋಜ್ ಮಾಡುತ್ತಿದ್ದೇನೆ.


ಅಜನೀಶ್ ಚಿತ್ರಗಳ ಕತೆಯನ್ನ ಆಡಿಯೋ ರೂಪದಲ್ಲಿಯೇ ಕೇಳ್ತಾರೆ!
ಸಾಮಾನ್ಯವಾಗಿ ನಾನು ಕಥೆಯನ್ನ ಕೇಳೋದಿಲ್ಲ. ಅವರು ಕೊಡುವ ಇನ್​​ಪುಟ್ಸ್ ಮೇಲೆನೆ ಸಂಗೀತ ಮಾಡೋದು ಇದೆ. ಆದರೆ ಕಥೆ ಕೇಳುವ ಅವಶ್ಯಕತೆ ಬಂದ್ರೆ, ಕಥೆ ಕೇಳುತ್ತೇನೆ ಅದು ಆಡಿಯೋ ರೂಪದಲ್ಲಿಯೇ ಕೇಳುತ್ತೇನೆ. ಸಿನಿಮಾದ ಕಥೆಯನ್ನ ಆಡಿಯೋ ರೂಪಲ್ಲಿ ಕೇಳಿದಾಗ ನನಗೆ ಇಮ್ಯಾಜಿನೇಷನ್​ ಮಾಡಿಕೊಳ್ಳಲು ಅನುಕೂಲ ಅಗುತ್ತದೆ. ಸಂಗೀತ ಸಂಯೋಜನೆಗೂ ಸ್ಪೂರ್ತಿ ಬರುತ್ತದೆ.


Kannada Kantara Film Music Director Ajaneesh Loknath Today Celebrating his birthday
ಅಜನೀಶ್ ಕಾಂತಾರ ಬಳಿಕ ಹೊಸ ಪ್ರೊಜೆಕ್ಟ್ ಒಪ್ಪಿಕೊಂಡಿಲ್ಲ!


ಪುನೀತ್ ರಾಜ್​​ಕುಮಾರ್ ಅವರ ಗಂಧದ ಗುಡಿ ನನಗೆ ತುಂಬಾ ವಿಶೇಷವಾದ ಸಿನಿಮಾನೇ ಆಗಿದೆ. ಮಕ್ಕಳು ಚಿತ್ರವನ್ನ ನೋಡುತ್ತಿದ್ದಾರೆ. ಇದು ನನಗೆ ಬಹುವಾಗಿಯೇ ಖುಷಿ ತಂದಿದೆ. ನಾನು ಮೆಲೋಡಿಗೆಷ್ಟೇ ಸೀಮಿತವಾಗಿಲ್ಲ. ಎಲ್ಲ ರೀತಿಯ ಸಂಗೀತ ಮಾಡುತ್ತೇನೆ.


ಎಲ್ಲ ರೀತಿಯ ಸಂಗೀತ ನಿರ್ದೇಶನ ಮಾಡ್ತಾನೇ ಬಂದಿದ್ದೇನೆ. 2004 ರಲ್ಲಿ ಕೀ ಬೋರ್ಡ್ ಪ್ಲೇಯರ್ ಆಗಿಯೂ ಕೆಲಸ ಮಾಡಿದ್ದೇನೆ. ಮಂಜು ಸ್ವರಾಜ್ ಅವರ ಶಿಶಿರ ಚಿತ್ರದ ಮೂಲಕ 2010 ರಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕನಾಗಿದ್ದೇನೆ.


ಅಲ್ಲಿಂದ ಶುರುವಾದ ಪಯಣದಲ್ಲಿ ಹೆಚ್ಚು ಕಡಿಮೆ ಈಗ 40 ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದೇನೆ. ಸಿನಿ ಜೀವನ ಖುಷಿ ತಂದಿದೆ. ಚಾಲೆಂಜಿಂಗ್ ಸಿನಿಮಾ ಅಂತ ಏನೂ ಇಲ್ಲ. ಇನ್ವಾಲ್ವ್ ಆದ್ರೆ ಯಾವುದೂ ಕಷ್ಟ ಅನಿಸೋದಿಲ್ಲ ಅಂತಲೇ ಅಜನೀಶ್ ಹೇಳಿ ಮಾತು ಮುಗಿಸುತ್ತಾರೆ.


ಇದನ್ನೂ ಓದಿ: Kantara OTT: ಕಾಂತಾರ ಒಟಿಟಿ ರಿಲೀಸ್​​ಗೆ ಡೇಟ್ ಫಿಕ್ಸ್! ಇಲ್ಲಿದೆ ಡೀಟೆಲ್ಸ್


ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಜನೀಶ್ ಹೆಚ್ಚು ಕಡಿಮೆ 5 ರಿಂದ 10 ನಿಮಿಷ ಮಾತನಾಡಿದ್ರು ಅಷ್ಟರಲ್ಲಿಯೇ ತಮ್ಮ ಚಿತ್ರದ ಪಯಣದ ಜರ್ನಿಯನ್ನ ಹೇಳಿ ಮುಗಿಸಿದರು.
ಅಜನೀಶ್ ಅವ್ರೇ ನಿಮಗೆ ಈಗ ಏಜ್ ಎಷ್ಟು ಅಂತ ಕೇಳಿದಾಗ, ನಕ್ಕು ಬಿಟ್ಟರು.


ಕೊನೆಗೆ 30 ಪ್ಲಸ್ ಅಂತ ಹೇಳಿ ಸ್ಪೆಷಲ್ ಮಾತು-ಕಥೆಗೆ ಪೂರ್ಣ ವಿರಾಮ ಇಟ್ಟರು. ಸಂಗೀತ ಜೀವನದಲ್ಲಿ ತಮ್ಮದೇ ಹಾದಿಯಲ್ಲಿ ಸಾಗುತ್ತಿರೋ ಅಜನೀಶ್ ಅವರಿಗೆ ನ್ಯೂಸ್-18 ಕನ್ನಡ ಡಿಜಿಟಲ್​ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.

First published: