• Home
  • »
  • News
  • »
  • entertainment
  • »
  • Kantara-Hombale Films: ರಾಜ್ಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಂಬಾಳೆ ಸಿನಿಮಾ! ಕಾಂತಾರಕ್ಕೆ ಮತ್ತೊಂದು ಹಿರಿಮೆ

Kantara-Hombale Films: ರಾಜ್ಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಂಬಾಳೆ ಸಿನಿಮಾ! ಕಾಂತಾರಕ್ಕೆ ಮತ್ತೊಂದು ಹಿರಿಮೆ

ಕನ್ನಡ ನಾಡಿನ ಜನತೆಗೆ ಧನ್ಯವಾದ ಅರ್ಪಿಸಿದ ವಿಜಯ್ ಕಿರಗಂದೂರು

ಕನ್ನಡ ನಾಡಿನ ಜನತೆಗೆ ಧನ್ಯವಾದ ಅರ್ಪಿಸಿದ ವಿಜಯ್ ಕಿರಗಂದೂರು

ಇಲ್ಲಿವರೆಗೂ ಹೊಂಬಾಳೆ ಫಿಲಮ್ಸ್ ಹಲವು ಸಿನಿಮಾ ನಿರ್ಮಿಸಿದೆ. ಇವುಗಳಲ್ಲಿ ಕರ್ನಾಟಕದಲ್ಲಿ ಕಾಂತಾರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಹೊಸ ದಾಖಲೆ ನಿರ್ಮಿಸೋ ಹಾದಿಯಲ್ಲಿಯೇ ಕಾಂತಾರ ಸಾಗುತ್ತಿದೆ. ನಿಮ್ಮ ಈ ಪ್ರೋತ್ಸಾಹಕ್ಕೆ ನಾವು ಸದಾ ರುಣಿ ಧನ್ಯವಾದಗಳು ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Hype) ಹೈಪ್ ಇನ್ನೂ ಇದೆ. ಹೆಚ್ಚು ಕಡಿಮೆ ಒಂದು ತಿಂಗಳೇ ಆಗ್ತಾ ಬಂತು. ಆದರೂ ಸಿನಿಮಾ ಪ್ರೀತಿ ಜನರಲ್ಲಿ ಕಡಿಮೆ ಆಗಿಯೇ ಇಲ್ಲ. ಸಿನಿಮಾ (Film Lovers) ಪ್ರೇಮಿಗಳು ಈ ಚಿತ್ರ ನೋಡಲು ಥಿಯೇಟರ್​ಗೆ ನುಗ್ಗಿ ಬರ್ತಾ ಇದ್ದಾರೆ. ಅದೆಷ್ಟು ಅಂದ್ರೆ, ಎಲ್ಲರಿಗೂ ಈ ಸಿನಿಮಾ ನೋಡಲು ಸಾಧ್ಯವಾಗದೇ ಇರೋವಷ್ಟು ಟಿಕೆಟ್ (Ticket Sold Out)ಸೋಲ್ಡ್ ಔಟ್ ಆಗಿರುತ್ತದೆ. ಅಷ್ಟು ಕ್ರೇಜ್ ಉಳಿಸಿಕೊಂಡ ಸಿನಿಮಾ ಕನ್ನಡ ಈ ಕಾಂತಾರ ಸಿನಿಮಾ. ಕನ್ನಡಿಗರಷ್ಟೇ ಅಲ್ಲ, ಎಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿಯೇ ಈ ಚಿತ್ರ ತನ್ನ ಕ್ರೇಜ್ (Craze) ಅನ್ನ ಉಳಿಸಿಕೊಂಡಿದೆ. ಪರ ಭಾಷೆಯ ನಟ-ನಟಿಯರು ಕಾಂತಾರ ಚಿತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿಯೆ ಕಾಂತಾರ ಚಿತ್ರ ನಿರ್ಮಿಸಿದ ಹೊಂಬಾಳೆ ಪ್ರೋಡಕ್ಷನ್ ಹೌಸ್ ಈಗೊಂದು ಹೆಮ್ಮೆಯ ವಿಷಯವನ್ನ ಹಂಚಿಕೊಂಡಿದೆ.


ಕಾಂತಾರ ಸಿನಿಮಾ ಈಗ ಇಡೀ ನಾಡಿನ ಹೆಮ್ಮೆಯ ಸಿನಿಮಾ
ಕಾಂತಾರ ಚಿತ್ರ ಇಡೀ ಕನ್ನಡ ನಾಡಿನ ಹಮ್ಮೆಯ ಚಿತ್ರವೇ ಆಗಿದೆ. ಥಿಯೇಟರ್​ಗೆ ಬಂದು ಸಿನಿಮಾ ನೋಡಲು ಇಷ್ಟಪಡದೇ ಇರೋ ಸಿನಿ ಪ್ರೇಮಿಗಳೂ ಈಗ ಥಿಯೇಟರ್​ಗೆ ಬಂದು ಚಿತ್ರ ನೋಡುತ್ತಿದ್ದಾರೆ. ಅಷ್ಟು ಸೆಳೆತವನ್ನ ಇಟ್ಟುಕೊಂಡಿರೋ ಕಾಂತಾರ ಈಗ ಕನ್ನಡ ನಾಡಿನ ಹೆಮ್ಮೆ ಸಿನಿಮಾನೇ ಆಗಿದೆ.




ಕನ್ನಡದ ಕಾಂತಾರ ಚಿತ್ರ ಇಡೀ ದೇಶದಲ್ಲೂ ತನ್ನ ಕ್ರೇಜ್ ಕ್ರಿಯೇಟ್ ಮಾಡಿದೆ. ವಿದೇಶದಲ್ಲೂ ಕಾಂತಾರ ಸಿನಿಮಾದ ಕಿಚ್ಚು ಹತ್ತಿದೆ. ಅಲ್ಲಿರೋ ಕನ್ನಡಿಗರೂ ಕನ್ನಡದ ಕಾಂತಾರ ಚಿತ್ರವನ್ನ ನೋಡ್ತಾಯಿದ್ದಾರೆ.ತುಳುನಾಡಿನ ನೈಜ ಸಂಸ್ಕೃತಿ ಮತ್ತು ಆಚರಣೆಯನ್ನ ಕಂಡು ಫುಳಕಿತರಾಗುತ್ತಿದ್ದಾರೆ.


Kannada Kantara Film Most Watched Film in Karnataka
ಕಾಂತಾರ ಸಿನಿಮಾ ಈಗ ಇಡೀ ನಾಡಿನ ಹೆಮ್ಮೆಯ ಸಿನಿಮಾ


ಕನ್ನಡ ಸಿನಿಮಾ ಪ್ರೇಮವನ್ನ ಹೆಚ್ಚಿಸಿದ ಕಾಂತಾರ
ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿವೆ. ಕೆಜಿಎಫ್, ಚಾರ್ಲಿ 777, ಈಗ ಕಾಂತಾರ ಚಿತ್ರ ಬಂದಿದೆ. ಇಲ್ಲಿವರೆಗೂ ಇದ್ದ ಸಿನಿಮಾ ಪ್ರೇಮಿಗಳು ಕೆಜಿಎಫ್ ಬಗ್ಗೆ ಮಾತನಾಡುತ್ತಿದ್ದರು. ಚಾರ್ಲಿ 777 ಚಿತ್ರದ ಕುರಿತು ಹೇಳಿದ್ದರು. ಆದರೆ ಈಗ ಕಾಂತಾರ ಆ ಕೆಲಸ ಮಾಡಿದೆ.


ಇದನ್ನೂ ಓದಿ: Kantara-Kishore: ಕಾಂತಾರ ಧರ್ಮದ ವಿವಾದ! ನಟ ಕಿಶೋರ್ ಹೇಳಿದ್ದಿಷ್ಟು


ಕಾಂತಾರ ಸಿನಿಮಾ ಕಳೆದ ತಿಂಗಳು 30 ರಂದು ರಿಲೀಸ್ ಆಗಿತ್ತು. ಅಂದಿನಿಂದ ಇಂದಿನವರೆಗೂ ಕಾಂತಾರ ಓಡ್ತಾನೇ ಇದೆ. ಆ ಓಟ ವಿದೇಶವನ್ನೂ ತಲುಪಿದೆ. ಪರ ಭಾಷೆಯನ್ನೂ ಮುಟ್ಟಿ ತಟ್ಟಿ ಎಬ್ಬಿಸಿದೆ. ಅಷ್ಟು ವಿಶೇಷ ಕಂಟೆಂಟ್ ಉಳ್ಳ ಕಾಂತಾರ ತುಳುನಾಡಿನ ಜನರೆಲ್ಲ ಹೆಮ್ಮೆಪಡುವಂತೆ ಮಾಡಿದೆ.


ಕರ್ನಾಟಕದಲ್ಲಿ ಕಾಂತಾರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ
ಈ ಒಂದು ಸತ್ಯವನ್ನ ನಾವು ಹೇಳ್ತಾ ಇಲ್ಲ. ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಈ ಹೆಮ್ಮೆಯ ವಿಷಯವನ್ನ ಹೇಳಿಕೊಂಡಿದೆ. ಹೊಂಬಾಳೆ ನಿರ್ಮಿಸಿದ ಚಿತ್ರಗಳಲ್ಲಿ ಕಾಂತಾರ ಸಿನಿಮಾ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರವೇ ಆಗಿದೆ.


ಹೌದು, ಹೊಂಬಾಳೆ ಸಿನಿಮಾ ನಿರ್ಮಾಣ ಸಂಸ್ಥೆ ಈ ಹಿಂದೆ ಕೆಜಿಎಫ್ ಎರಡೂ ಸರಣಿ ಚಿತ್ರವನ್ನ ನಿರ್ಮಿಸಿದೆ. ಇದರ ರೀಚ್ ಎಲ್ಲರಿಗೂ ಗೊತ್ತಿರೋದೇ. ರಾಜಕುಮಾರ್ ಕೂಡ ಇದೇ ಸಂಸ್ಥೆಯ ಹಿಟ್ ಸಿನಿಮಾನೇ ಆಗಿದೆ.


ಇಂತಹ ಈ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಈಗ ತುಂಬಾ ಸಂತೋಷದಲ್ಲಿಯೆ ಇದ್ದಾರೆ.


ಹೊಂಬಾಳೆ ಫಿಲ್ಮ್ಸ್ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲೂ ಈ ಬಗ್ಗೆ ಬರೆಯಲಾಗಿದೆ. "ಇಲ್ಲಿವರೆಗೂ ಹೊಂಬಾಳೆ ಫಿಲಮ್ಸ್ ಹಲವು ಸಿನಿಮಾ ನಿರ್ಮಿಸಿದೆ. ಇವುಗಳಲ್ಲಿ ಕರ್ನಾಟಕದಲ್ಲಿ ಕಾಂತಾರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕಗೆ ಪಡೆದಿದೆ. ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಹೊಸ ದಾಖಲೆ ನಿರ್ಮಿಸೋ ಹಾದಿಯಲ್ಲಿಯೇ ಕಾಂತಾರ ಸಾಗುತ್ತಿದೆ. ನಿಮ್ಮ ಈ ಪ್ರೋತ್ಸಾಹಕ್ಕೆ ನಾವು ಸದಾ ರುಣಿ. ಧನ್ಯವಾದಗಳು"


ಪಂಜುರ್ಲಿ ದೇವರಿಗೆ ಕಾಣಿಕೆ ನೀಡಿ ಗೌರವ ಸಲ್ಲಿಸಿ!
ಕಾಂತಾರ ಚಿತ್ರದ ಹೊಂಬಾಳೆಯ ಈ ಒಂದು ಫೇಸ್ ಬುಕ್ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ಸ್ ಕೂಡ ಬಂದಿವೆ. ರಿಷಬ್ ಶೆಟ್ರಿಗೆ ಹಾಗೂ ಚಿತ್ರ ನಿರ್ಮಿಸಿದ ವಿಜಯ್ ಕಿರಗಂದೂರು ಅವರಿಗೆ ಒಬ್ಬ ಅಭಿಮಾನಿ ಧನ್ಯವಾದ ತಿಳಿಸಿದ್ದಾರೆ.



ಪಂಜುರ್ಲಿ ದೇವರಿಗೆ ಕಾಣಿಕೆ ನೀಡೋ ಮೂಲಕ ನಿಮ್ಮ ಗೌರವ ಸಲ್ಲಿಸಿ ಅಂತಲೂ ಕಾಮೆಂಟ್ಸ್ ನಲ್ಲಿ ಈಗ ಮನವಿ ಮಾಡಲಾಗಿದೆ. ಇನ್ನು ಮಲೆಯಾಳಂ ಭಾಷೆಯಲ್ಲಿ ಕಾಂತಾರ ವೀಕ್ಷಿಸಿದ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನ ಇಲ್ಲಿ ಹಂಚಿಕೊಂಡಿದ್ದಾರೆ.


ಕನ್ನಡದ ಕಾಂತಾರ ಸಿನಿಮಾ ಚೆನ್ನಾಗಿಯೇ ಮಲೆಯಾಳಂ ಭಾಷೆಯಲ್ಲಿ ಡಬ್ ಆಗಿದೆ. ಸಿನಿಮಾದ ಮೇಕಿಂಗ್-ಸಂಕಲನ-ರಿಷಬ್ ಶೆಟ್ಟಿ ಅಭಿನಯ ಎಲ್ಲವೂ ಅದ್ಭುತ ಅಂತಲೇ ಇಂಗ್ಲೀಷ್ ನಲ್ಲಿಯೇ ಬರೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


ಇದನ್ನೂ ಓದಿ: Ajay Rao New Film Annoucen: ಭಾಗ್ಯಲಕ್ಷ್ಮಿ ಹಿಂದೆ ಬಿದ್ದ ಕೃಷ್ಣ ಅಜಯ್ ರಾವ್-ದೀಪಾವಳಿ ದಿನ ಹೊಸ ಸಿನಿಮಾ ಅನೌನ್ಸ್


ಒಟ್ಟಾರೆ, ಕನ್ನಡದ ಕಾಂತಾರ ಹೊಸ ಹೊಸ ದಾಖಲೆಗಳನ್ನ ಮಾಡುವತ್ತ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಒಳ್ಳೆಯ ಅಭಿಪ್ರಾಯವನ್ನೇ ಈಗ ವ್ಯಕ್ತಪಡಿಸುತ್ತಲೇ ಇದ್ದಾರೆ.

First published: