• Home
  • »
  • News
  • »
  • entertainment
  • »
  • Kantara Cinema Making: ನಟ ಚೇತನ್ ಹೇಳಿಕೆ ಬಳಿಕ ಕಾಂತಾರ ಸಿನಿಮಾ ಮೇಕಿಂಗ್ ರಿಲೀಸ್ ? ಏನ್ ಇದರ ಹಿಂದಿನ ಸತ್ಯ ?

Kantara Cinema Making: ನಟ ಚೇತನ್ ಹೇಳಿಕೆ ಬಳಿಕ ಕಾಂತಾರ ಸಿನಿಮಾ ಮೇಕಿಂಗ್ ರಿಲೀಸ್ ? ಏನ್ ಇದರ ಹಿಂದಿನ ಸತ್ಯ ?

ಕಾಂತಾರ ಸಿನಿಮಾ ಮೇಕಿಂಗ್ ರಿಲೀಸ್ ?

ಕಾಂತಾರ ಸಿನಿಮಾ ಮೇಕಿಂಗ್ ರಿಲೀಸ್ ?

ಆ ದಿನಗಳು ಚೇತನ್ ಎತ್ತಿದ್ದ ಪ್ರಶ್ನೆ ಕೋಲಾಹಲ ಎಬ್ಬಿಸಿದೆ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೇ ತಡ, ಎಲ್ಲ ದಿಕ್ಕಿಗಳಿಂದಲೂ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಸಿನಿಮಾ ತಂಡ ಭೂತ ಕೋಲ ಸೇರಿದಂತೆ ಚಿತ್ರದ ಹಲವು ಮೇಕಿಂಗ್ ವೀಡಿಯೋ ರಿವೀಲ್ ಮಾಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Cinema) ಸಿನಿಮಾ ಓಡ್ತಾನೆ ಇದೆ. ಇಂದು ಮಲಯಾಳಂ ಭಾಷೆಯಲ್ಲೂ ಸಿನಿಮಾ (Cinema Release) ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಯಲ್ಲೂ ಬಾಕ್ಸ್ (Box Office) ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಆದರೆ ತುಳುನಾಡ ಸಂಸ್ಕೃತಿಯ ಬಗೆಗಿನ ಈ ಚಿತ್ರದ ಬಗ್ಗೆ ಯಾರೂ ಪ್ರಶ್ನೆ ಮಾಡಿರಲಿಲ್ಲ. ಆ ದಿನಗಳು (Actor Chetan) ಚೇತನ್ ಎತ್ತಿದ್ದ ಪ್ರಶ್ನೆ ಕೋಲಾಹಲ ಎಬ್ಬಿಸಿದೆ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೇ ತಡ, ಎಲ್ಲ ದಿಕ್ಕುಗಳಿಂದಲೂ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಸಿನಿಮಾ ತಂಡ ಭೂತಕೋಲ ಸೇರಿದಂತೆ ಚಿತ್ರದ ಹಲವು ಮೇಕಿಂಗ್ ವೀಡಿಯೋ ರಿವೀಲ್ ಮಾಡಿದೆ. ಹೇಳಿಕೆಗೂ ಮೇಕಿಂಗ್ ವೀಡಿಯೋ ರಿಲೀಸ್​​ಗೂ ಏನಾದ್ರು ಸಂಬಂಧ ಇದಿಯೇ? ಈ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ವೀಡಿಯೋಗಳು ಕಾಂತಾರ ಮೇಕಿಂಗ್​ನ ಒಂದಷ್ಟು ಝಲಕ್ ಕೊಡ್ತಿವೆ.


ಕಾಂತಾರ ಚಿತ್ರದ ಭೂತಕೋಲ ಮೇಕಿಂಗ್ ವೀಡಿಯೋ
ಕಾಂತಾರ ಸಿನಿಮಾದಲ್ಲಿ ದೈವಾರಾಧನೆ ಪ್ರಮುಖವಾಗಿದೆ. ಈ ಸಿನಿಮಾದಲ್ಲಿ ಇಡೀ ಕಥೆಗೆ ಇದು ಪ್ರಮುಖವಾಗಿಯೇ ಇದೆ. ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕ ಕೊನೆ 20 ನಿಮಿಷದಲ್ಲಿ ಬರುವ ಈ ವಿಷಯದ ಬಗ್ಗೇನೆ ಮಾತನಾಡುತ್ತಾರೆ. ರಿಷಬ್ ಕೂಡ ಕೊನೆಯ 20 ನಿಮಿಷ ದೈವ ರೂಪದಲ್ಲಿ ನಿಮ್ಮನ್ನ ಆವರಿಸಿ ಬಿಡುತ್ತಾರೆ.


ಈ ಒಂದು ಆಚರಣೆ ಬಗ್ಗೇನೆ ಚೇತನ್ ಒಳ್ಳೆಯದ್ದನೂ ಮಾತನಾಡಿದ್ದಾರೆ. ಇದು ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ ಅನ್ನೋದನ್ನು ಅಷ್ಟೇ ಸ್ಪಷ್ಟವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಇದರ ನಡುವೇನೆ ಸಿನಿಮಾ ತಂಡ ಮೇಕಿಂಗ್ ವೀಡಿಯೋಗಳನ್ನೂ ಈಗ ಹೊರ ಬಿಟ್ಟಿದೆ.


ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ಮೇಕಿಂಗ್ ರಿವೀಲ್


ಕಾಂತಾರ ಸಿನಿಮಾದಲ್ಲಿ ಅಜನೀಶ್ ಸಂಗೀತವೂ ಅಷ್ಟೇ ಪ್ರಮುಖ ಕೆಲಸ ಮಾಡುತ್ತದೆ. ಚಿತ್ರಕ್ಕಿರೋ ಸಂಗೀತವೂ ಸಿನಿಮಾ ಆಚರಣೆಯ ನೈಜತೆಯ ಅನುಭವವನ್ನೂ ಕಟ್ಟಿಕೊಡುತ್ತದೆ.


ಸಂಗೀತ ನಿರ್ದೇಶಕ ಅಜನೀಶ್ ಮಂಗಳೂರಿಗೆ ಲೈವ್ ಆಗಿಯೇ ಹಾಡುಗಳನ್ನ ರೆಕಾರ್ಡ್ ಮಾಡಿಕೊಂಡು ಬಂದಿದ್ದಾರೆ. ಅದು ಕೂಡ ಈ ಒಂದು ಮೇಕಿಂಗ್ ವೀಡಿಯೋ ಗೊತ್ತಾಗುತ್ತದೆ. ಇಂತಹ ಸಂಗೀತದ ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ತನ್ನದೇ ಛಾಪು ಮೂಡಿಸುತ್ತಲೇ ಸಾಗುತ್ತಿದೆ.




ಕಾಂತಾರ ಚಿತ್ರಕ್ಕೆ ಸಾಕಷ್ಟು ತಯಾರಿ ನಡೆದಿದೆ. ಸಿನಿಮಾ ಹಿಟ್ ಆದ್ಮೇಲೆ ಅದರ ಬಗ್ಗೆ ಸಹಜ ಕುತೂಹಲ ಇರುತ್ತದೆ. ಅದನ್ನ ತಿಳಿಸುವ ಕೆಲಸವನ್ನ ಮೇಕಿಂಗ್ ಈಗ ಮಾಡುತ್ತಿವೆ ಅಂತಲೂ ಹೇಳಬಹುದು. ಅದರಂತೆ ದೈವಾರಾಧನೆ, ಭೂತಕೋಲದ ತಯಾರಿಯ ಎಲ್ಲ ಚಿತ್ರಣವೂ ಮೇಕಿಂಗ್ ವೀಡಿಯೋದಲ್ಲಿ ಕ್ಯಾಪ್ಚರ್ ಆಗಿದೆ.


ಇದನ್ನೂ ಓದಿ: Kantara Movie: ಸದ್ಯದಲ್ಲೇ ಕಾಂತಾರ ತುಳುವಿನಲ್ಲಿ ಡಬ್, ರಿಲೀಸ್​ಗೂ ಮುನ್ನ ಚಿತ್ರತಂಡಕ್ಕಿತ್ತು ಆ ಒಂದು ಭಯ


ಕಾಂತಾರ ಸಿನಿಮಾ ತಂಡ ತನ್ನ ಎಲ್ಲ ಶ್ರಮವನ್ನ ಮೇಕಿಂಗ್ ವೀಡಿಯೋದಲ್ಲೂ ಸೆರೆ ಹಿಡಿದಿದೆ. ಚಿತ್ರಕ್ಕೆ ದುಡಿದ ಪ್ರತಿಯೊಬ್ಬರ ಮಾತು ಕ್ಯಾಪ್ಚರ್ ಆಗಿವೆ. ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿಯೇ ಪ್ರಗತಿ ಕೆಲಸ ಮಾಡಿದ್ದಾರೆ. ಇವರ ವೀಡಿಯೋ ಕೂಡ ಈಗ ರಿಲೀಸ್ ಆಗಿದೆ.


ಸಪ್ತಮಿ ಗೌಡ-ಕಿಶೋರ್ ಪಾತ್ರದ ಮೇಕಿಂಗ್ ರಿಲೀಸ್
ಕಾಂತಾರ ಸಿನಿಮಾದಲ್ಲಿ ಡೈರೆಕ್ಟರ್ ರಿಷಬ್ ಶೆಟ್ಟಿ ನಿರ್ವಹಿಸಿರೋ ಪಾತ್ರ ಶಿವ ಕೂಡ ವಿಶೇಷವಾಗಿಯೇ ಇದೆ. ಚಿತ್ರಕ್ಕೆ ಹೀರೋ ಇದೇ ಪಾತ್ರವೇ ಆಗಿದ್ದರೂ ಕೂಡ ಕಿಶೋರ್ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಇದರ ಮೇಕಿಂಗ್ ಕೂಡ ಸೂಪರ್ ಆಗಿಯೇ ಇದೆ.




ಸಪ್ತಮಿ ಗೌಡ ಈ ಚಿತ್ರದಲ್ಲಿ ಲೀಲಾ ಪಾತ್ರವನ್ನೆ ಮಾಡಿದ್ದಾರೆ. ಈ ಪಾತ್ರದ ಓಟ ಮತ್ತು ನೋಟ ಎರಡೂ ವಿಭಿನ್ನಾಗಿಯೇ ಇವೆ. ಇದರ ಮೇಕಿಂಗ್ ಕೂಡ ವಿಶೇಷವಾಗಿಯೇ ಇದೆ. ಅದನ್ನೂ ನಾವು ಈಗ ನೋಡಬಹುದು.


ಕಾಂತಾರ ಸಿನಿಮಾ ಮೇಕಿಂಗ್ ನೋಡಿದ್ರೆ, ಇಡೀ ತಂಡ ಸಾಕಷ್ಟು ಕಷ್ಟಪಟ್ಟಿದೆ. ಆ ದಿನಗಳ ಚಿತ್ರಣವನ್ನ ಕಟ್ಟಿಕೊಡಲು ಸಿನಿಮಾದ ಪ್ರತಿ ವಿಭಾಗವೂ ಚೆನ್ನಾಗಿಯೇ ಕೆಲಸ ಮಾಡಿದೆ. ಅದರ ಫಲವೇ ಕಾಂತಾರ ಚಿತ್ರ ಅದ್ಭುತವಾಗಿಯೇ ಮೂಡಿ ಬಂದಿದೆ.


ಇದನ್ನೂ ಓದಿ: Malayalam Kantara: ದೇವರ ನಾಡಲ್ಲಿ ಕಾಂತಾರ ಕ್ರೇಜ್! ಪ್ರಚಾರದಲ್ಲಿ ರಿಷಬ್ ಬ್ಯುಸಿ


ಒಳ್ಳೆ ಸಿನಿಮಾ ಬಂದಾಗ, ಜನ ಅದನ್ನ ಥಿಯೇಟರ್​​ಗೆ ಹೋಗಿಯೇ ನೋಡ್ತಾರೆ. ಅದಕ್ಕೆ ಕಾಂತಾರ ಸಿನಿಮಾ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಹೇಳಬಹುದು. ಸಿನಿಮಾನ ಥಿಯೇಟರ್​​ಗೆ ಹೋಗ ನೋಡಿ ಅಂತ ಕೇಳುವ ಪ್ರಶ್ನೆನೆ ಬರೋದಿಲ್ಲ.


ಈ ಹಿಂದಿನ ಚಾರ್ಲಿ ಚಿತ್ರವನ್ನ ಜನ ಥಿಯೇಟರ್​​ಗೆ ಹೋಗಿಯೇ ನೋಡಿದ್ರು, ಈಗ ಕಾಂತಾರ ಚಿತ್ರವನ್ನ ಎಲ್ಲರೂ ನೋಡ್ತಾಯಿದ್ದಾರೆ ಅಂತಲೇ ಹೇಳಬಹುದು.

First published: