• Home
  • »
  • News
  • »
  • entertainment
  • »
  • Kantara Success Sutra: ಕಾಂತಾರ ಗೆಲುವಿನ ಮಂತ್ರ ಯಾವುದು? ಇಲ್ಲಿದೆ ಡೀಟೆಲ್ಸ್

Kantara Success Sutra: ಕಾಂತಾರ ಗೆಲುವಿನ ಮಂತ್ರ ಯಾವುದು? ಇಲ್ಲಿದೆ ಡೀಟೆಲ್ಸ್

ಕನ್ನಡದ ಕಾಂತಾರ ಗೆಲ್ಲೋಕೆ ಹಲವು ಕಾರಣಗಳು ಇವೆ

ಕನ್ನಡದ ಕಾಂತಾರ ಗೆಲ್ಲೋಕೆ ಹಲವು ಕಾರಣಗಳು ಇವೆ

ಈ ಕಥೆಗೆ ವರಾಹಿ ರೂಪಿ ದೈವ ಪ್ರಮುಖ ಜೀವಾಳವೇ ಆಗಿದೆ. ಇಡೀ ಸಿನಿಮಾದಲ್ಲಿ ಈ ದೈವ ಇರದೇ ಇದ್ದಿದ್ದರೇ, ಶಿವ ಮತ್ತು ಲೀಲಾರ ಸಿನಿಮಾನೇ ಇದಾಗುತ್ತಿತ್ತು. ಆದರೆ ಇಲ್ಲಿ ಪಂಜುರ್ಲಿ ದೈವ ಹಾಗೂ ವರಾಹ ರೂಪಂ ಹಾಡು ಇಡೀ ಸಿನಿಮಾದ ಸೆಳೆತವೂ ಹೌದು, ಇಡೀ ಸಿನಿಮಾದ ಗೆಲುವಿನ ಮಂತ್ರವೂ ಹೌದು.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Supre Hit) ಗೆದ್ದಿದೆ. ಗೆದ್ದು ಇದು ಬೀಗುತ್ತಿಲ್ಲ. ಮುನ್ನುಗ್ಗುತ್ತಿದೆ, ದಾಖಲೆ ಮೇಲೆ ದಾಖಲೆ ಮಾಡೋವತ್ತ ಸಾಗುತ್ತಿದೆ. ಕನ್ನಡದ ಮಟ್ಟಿಗೆ ಕಾಂತಾರ ಗೆಲುವು (Kantara Kannada Pride) ಹೆಮ್ಮೆ ಆಗಿದೆ. ಕರ್ನಾಟಕದ ಹೆಮ್ಮೆಯಾಗಿ ಹೊಳೆಯುತ್ತಿದೆ. ನಿರೀಕ್ಷೆ ಮಾಡದ ಮಟ್ಟಿಗೆ ಕಾಂತಾರ ಚಿತ್ರಕ್ಕೆ ಗೆಲುವು ಸಿಕ್ಕಿದೆ. ಇದನ್ನ ನೋಡಲು ಜನ ಥಿಯೇಟರ್​ಗೆ ಮುಗಿ (Theater) ಬೀಳುತ್ತಿದ್ದಾರೆ. ಸಿನಿಮಾ ಚೆನ್ನಾಗಿದೆ ಅಂತಲೇ ಸಾಗರೋಪಾದಿಯಲ್ಲಿಯೇ ಚಿತ್ರಮಂದಿರಕ್ಕೆ ಜನಾ ಬರ್ತಾನೇ ಇದ್ದಾರೆ. ಆದರೆ ಈ ಸಕ್ಸಸ್ ಹಿಂದೆ ಇರೋ Kantara Success Sutra ಆ ಮಂತ್ರವಾದ್ರೂ ಯಾವುದು? ಏನ್ ಇದರ ಹಿಂದಿನ ರಹಸ್ಯ? ಕಾಂತಾರ ಸಿನಿಮಾ ಜನರನ್ನ ಯಾಕೆ ಸೆಳೆಯುತ್ತಿದೆ? ಕಾಂತಾರದಲ್ಲಿರೋ ಆ ಜಾದೂ ಯಾವುದು? ಈ ಎಲ್ಲ ಸಕ್ಸಸ್ ಸೂತ್ರಗಳ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.


ಕನ್ನಡದ ಕಾಂತಾರ ಗೆಲ್ಲೋಕೆ ಹಲವು ಕಾರಣಗಳು ಇವೆ 


ಕನ್ನಡದ ಕಾಂತಾರ ಸಿನಿಮಾದಲ್ಲಿ ಏನ್ ಇದೆ? ಈ ಪ್ರಶ್ನೆಯನ್ನ ಸಿನಿಮಾ ನೋಡದವರು ಕೇಳುತ್ತಿದ್ದಾರೆ. ಸಿನಿಮಾ ನೋಡಿದ್ಮೇಲೆ ಅವರಲ್ಲಿ ಒಂದೇ ಒಂದು ಅಭಿಪ್ರಾಯ ಬರುತ್ತದೆ. ಅದುವೇ "ಸಿನಿಮಾ ಚೆನ್ನಾಗಿದೆ" ಅನ್ನೋ ಅಭಿಪ್ರಾಯ. ಅದನ್ನ ಕೇಳಿದವ್ರು ಒಮ್ಮೆ ಸಿನಿಮಾ ನೋಡಲೇಬೇಕು ಅಂತ ಪ್ಲಾನ್ ಕೂಡ ಮಾಡಿಕೊಳ್ಳುತ್ತಾರೆ.
ಇಂತಹ ಈ ಸಿನಿಮಾದಲ್ಲಿ ಅಂತಹದ್ದೇನ್ ಇದೆ. ಇದನ್ನ ತಿಳಿಯುತ್ತಲೇ ಹೋದ್ರೆ ನಿಜಕ್ಕೂ ಒಂದು ಅದ್ಭುತ ಅನುಭವ ಆಗುತ್ತದೆ. ಅದನ್ನ ಅಕ್ಷರ ರೂಪದಲ್ಲಿ ಹೇಳುವದು ಕಷ್ಟವೇ ಸರಿ. ಆದರೂ, ಕಾಂತಾರದ ಗೆಲುವಿನ ಹಿಂದಿನ ಒಂದಷ್ಟು ರಹಸ್ಯಗಳನ್ನ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇವೆ.


ಕಾಂತಾರ ಸಿನಿಮಾದಲ್ಲಿ ವರಾಹ ರೂಪಿ ದೈವವೇ ಪ್ರಮುಖ ಸೆಳೆತ
ಹೌದು, ಕಾಂತಾರ ಸಿನಿಮಾದಲ್ಲಿ ವರಾಹ ರೂಪಿ ದೈವ ಇರದೇ ಇದಿದ್ದರೇ ಏನ್ ಆಗುತ್ತಿತ್ತು. ರಗಢ್ ಶಿವ ಮತ್ತು ಲೀಲಾ ಲವ್ ಸ್ಟೋರಿ ಸಿನಿಮಾನೇ ಇದಾಗುತ್ತಿತ್ತು. ಬೇಟೆಯಾಡೋ ಶಿವನ ಚಿತ್ರವೇ ಆಗಿ ಹೋಗುತ್ತಿತ್ತು. ಆದರೆ ವರಾಹ ರೂಪಿ ದೈವ ಥಿಯೇಟರ್​ನಲ್ಲಿ ಕುಳಿತವರಿಗೂ ಒಂದು ವೈಬ್ರೇಷನ್ ಹುಟ್ಟಿಸುತ್ತದೆ.


Kannada Kantara Film Kantara Success Sutra Reveal
ರಿಷಬ್ ಶೆಟ್ರು ಕಥೆ ಹೇಳಿದ ರೀತಿ ತುಂಬಾ ಆಪ್ತ ತುಂಬಾ ಅದ್ಭುತ


ಕಾಂತಾರ ಸಿನಿಮಾದ ಶಕ್ತಿನೇ ಈ ವರಾಹ ರೂಪಿ ದೈವ ಅಂದ್ರೆ ತಪ್ಪಾಗೋದಿಲ್ಲ. ಸಿನಿಮಾ ನೋಡಿ ಬಂದವ್ರಿಗೆ ಈ ಮಾತು ಬೇಗ ಕನೆಕ್ಟ್ ಆಗುತ್ತದೆ. ನೋಡದವರಿಗೆ ಕುತೂಹಲವನ್ನೂ ಕೆರಳಿಸುತ್ತದೆ. ಹೀಗಿರುವ ಈ ಸಿನಿಮಾದಲ್ಲಿ ವರಾಹ ರೂಪ ನಿಮ್ಮನ್ನ ತನ್ನತ್ತ ಸೆಳೆದು ಬಿಡುತ್ತದೆ.


ರಿಷಬ್ ಶೆಟ್ರು ಕಥೆ ಹೇಳಿದ ರೀತಿ ತುಂಬಾ ಆಪ್ತ ತುಂಬಾ ಅದ್ಭುತ
ಕಾಂತಾರ ಒಂದು ಕಥೆ. ಅದು ದಂತ ಕಥೆ. ಅದನ್ನ ಸ್ವತಃ ತಂಡವೂ ಹೇಳಿಕೊಂಡಿದೆ. ಅಂತಹ ಈ ದಂತ ಕಥೆಯನ್ನ ಡೈರೆಕ್ಟರ್ ರಿಷಬ್ ಶೆಟ್ಟಿ ಅದ್ಭುವಾಗಿಯೇ ಹೇಳಿದ್ದಾರೆ. ಅಜ್ಜಿ ಕಥೆ ಹೇಳಿದ್ರೆ ನಮಲ್ಲಿ ಒಂದು ಆಪ್ತ ಚಿತ್ರಣ ಮೂಡುತ್ತದೆ. ಕಾಂತಾರ ಸಿನಿಮಾ ದೃಶ್ಯ ರೂಪದಲ್ಲಿ ಬಂದ ಒಂದು ಅದ್ಭುತ ಕಥೇನೆ ಆಗಿದೆ.


ಕಾಂತಾರದಲ್ಲಿ ಬರುವ ರಾಜನ ಕಥೆ ನಿಮ್ಗೆ ಇಷ್ಟ ಆಗುತ್ತದೆ. ರಿಷಬ್ ಶೆಟ್ಟಿ ಇದನ್ನ ಅಷ್ಟೇ ಆಪ್ತವಾಗಿಯೇ ಹೇಳ್ತಾ ಹೋಗ್ತಾರೆ. ಒಬ್ಬ ರಾಜನಿದ್ದ, ಆತನಿಗೆ ಕಷ್ಟಗಳು ಇದ್ದವು. ಆ ಕಷ್ಟಗಳನ್ನ ನಿವಾರಿಸಲು ಪಂಜುರ್ಲಿ ದೈವ ಬೇಕಿತ್ತು. ಅದನ್ನ ಪಡೆಯಲು ಆ ರಾಜ ಏನೂ ಮಾಡಿದ ಅನ್ನೋದನ್ನ ಇಲ್ಲಿ ನೋಡ್ತಾ ಕಥೆಯೊಳಗೆ ಪ್ರವೇಶ ಮಾಡಬಹುದು.


ವರಾಹ ರೂಪಿ ಪಂಜುರ್ಲಿ ದೈವದ ಕಥೆಗೆ ವರಾಹ ರೂಪಂ ಹಾಡು 
ವರಾಹ ರೂಪಿ ಪಂಜುರ್ಲಿ ದೈವ ಇಲ್ಲಿ ಎಲ್ಲರಲ್ಲೂ ಒಂದು ಸಣ್ಣ ಭಯ ಹುಟ್ಟಿಸುತ್ತದೆ. ಥಿಯೇಟರ್​ ನಲ್ಲಿ ಕುಳಿತವರಲ್ಲೂ ಆಗಾಗ ಒಂದು ವೈಬ್ರೇಷನ್ ಕ್ರಿಯೇಟ್ ಮಾಡುತ್ತದೆ. ವರಾಹಿ ರೂಪಿ ದೈವ ಇಲ್ಲಿ ಶಿವ ಪಾತ್ರಧಾರಿ ರಿಷಬ್ ಅವರನ್ನ ಆರಂಭದಿಂದಲೇ ಕಾಡುತ್ತಲೇ ಇರುತ್ತದೆ.


ಇದನ್ನೂ ಓದಿ: Kantara Daali Dhananjaya Review: ಧನಂಜಯ್ ಮನದಲ್ಲಿ ಸಿಂಗಾರಿಯ ಕನವರಿಕೆ! ರಿಷಬ್​ಗೆ ನಾನು ಫುಲ್ ಫ್ಯಾನು ಎಂದ ಡಾಲಿ


ಈ ಕಥೆಗೆ ವರಾಹಿ ರೂಪಿ ದೈವ ಪ್ರಮುಖ ಜೀವಾಳವೇ ಆಗಿದೆ. ಇಡೀ ಸಿನಿಮಾದಲ್ಲಿ ಈ ದೈವ ಇರದೇ ಇದ್ದಿದ್ದರೇ, ಶಿವ ಮತ್ತು ಲೀಲಾರ ಸಿನಿಮಾನೇ ಇದಾಗುತ್ತಿತ್ತು. ಆದರೆ ಇಲ್ಲಿ ಪಂಜುರ್ಲಿ ದೈವ ಹಾಗೂ ವರಾಹ ರೂಪಂ ಹಾಡು ಇಡೀ ಸಿನಿಮಾದ ಸೆಳೆತವೂ ಹೌದು, ಇಡೀ ಸಿನಿಮಾದ ಗೆಲುವಿನ ಮಂತ್ರವೂ ಹೌದು.


ವರಾಹ ರೂಪಿ ದೈವದ ಸಿನಿಮಾದಲ್ಲಿ ಅರಣ್ಯದ ಅಂಚಿನ ಕಥೆ
ಅರಣ್ಯ ಇಲಾಖೆ ಮತ್ತು ಅರಣ್ಯದಂಚಿನಲ್ಲಿರೋ ಜನರ ಕಥೆ ಇಲ್ಲಿ ಬದುಕಿನ ಸತ್ಯಗಳನ್ನ ಹೇಳಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಇಲ್ಲಿ ಕಥೆಯಾಗಿದೆ. ಆದರೆ ಇವರ ಬದುಕಿನಲ್ಲಿ ಬರುವ ಆ ದೈವ ಇಲ್ಲಿ ಭೂತ ಕೋಲದ ಮೂಲಕ ತುಳುನಾಡಿನ ಸಂಸ್ಕೃತಿಯನ್ನೂ ಬಿಂಬಿಸುತ್ತಲೇ ಸಾಗುತ್ತದೆ.


ಕಾಂತಾರ ಸಿನಿಮಾದಲ್ಲಿ ಬದುಕಿನ ಸಂಘರ್ಷಗಳೂ ಇವೆ. ಧಣಿಯ ಹಿಡನ್ ದಬ್ಬಾಳಿಕೆ, ಭೂಮಿಗಾಗಿಯೇ ದೈವವನ್ನೇ ಕರೆಪ್ಟ್ ಮಾಡಲು ಸಾಗೋ ಧಣಿ, ಫಾರೆಸ್ಟ್ ಆಫೀಸರ್ ಮುರಳಿಯ ಆಕ್ರೋಶ ಭರಿತ ಪ್ರಾಮಾಣಿಕತೆ, ಕಾಡು ಹಂದಿಯ ಬೇಟೆ, ಎಲ್ಲವೂ ಇಲ್ಲಿ ಸರ್ವೆ ಸಾಮಾನ್ಯವಾಗಿವೆ.


ಕಾಡು ಮೇಡು-ಕಾಂತಾರ-ದೈವ-ಒಂದು ಸಕ್ಸಸ್
ಕಾಡು ಕಾಂತಾರ ಸಿನಿಮಾದ ಮೊದಲ ಶಕ್ತಿ ಆಗಿದೆ. ದೈವ ಇಡೀ ಸಿನಿಮಾದ ಜೀವವೇ ಆಗಿದೆ. ಜಾನಪದ ಸಂಗೀತ ಇಡೀ ಚಿತ್ರಕ್ಕೆ ಜೀವಂತಿಕೆ ತಂದು ಕೊಟ್ಟಿದೆ. ಪಂಜುರ್ಲಿ ದೈವ ಮತ್ತು ರಾಜನ ಕಥೆ ನಿಮಲ್ಲಿ ಕಥೆ ಕೇಳುವ ಆಸಕ್ತಿ ಮೂಡಿಸುತ್ತದೆ.


ಕಾಂತಾರ ಚಿತ್ರಕ್ಕೆ ಜೀವಂತಿಕೆ ಇದೆ. ದಂತ ಕಥೆ ಜೀವಂತಿಕೇನೆ ಅದಾಗಿದೆ. ಕಥೆ ನಮ್ಗೆಲ್ಲ ತುಂಬಾ ಇಷ್ಟ ಆಗುತ್ತವೆ. ಕಾಂತಾರ ಅಂತಹ ಕಥೆಯ ಸಿನಿಮಾ ಆಗಿದೆ. ಅದನ್ನ ಹೇಳಿರೋ ರೀತಿ ತುಂಬಾ ವಿಶೇಷವಾಗಿಯೇ ಇದೆ.


ಇದನ್ನೂ ಓದಿ: Rashmika Mandanna: ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್


ಕಥೆಯನ್ನ ದೃಶ್ಯ ರೂಪದಲ್ಲಿಯೇ ಕಟ್ಟಿಕೊಡಲಾಗಿದೆ. ಈ ಕಾರಣಕ್ಕೇನೆ ಕಾಂತಾರ ಜನರನ್ನ ಸೆಳೆಯುತ್ತಿದೆ. ಅದರಲ್ಲೂ ವರಾಹ ರೂಪಿ ದೈವ ಮತ್ತು ವರಾಹ ರೂಪಂ ಟ್ಯೂನ್ ಕಾಂತಾರದ ಸಕ್ಸಸ್ ಮಂತ್ರಗಳಲ್ಲಿ ಒಂದಾಗಿವೆ.


ಕಾಂತಾರ ಒಂದು ಅದ್ಭುತ ಅನುಭವ-ಇದರಲ್ಲಿ ರಿಷಬ್ ಮೇಲುಗೈ ಸಾಧಿಸಿದ್ದಾರೆ. ಅಂದ್ರೆ ತಪ್ಪೇ ಆಗೋದಿಲ್ಲ. ಒಬ್ಬ ನಟನಾಗಿ ಶಿವನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಬ್ಬ ನಿರ್ದೇಶಕನಾಗಿ ದೃಶ್ಯ ರೂಪದಲ್ಲಿಯೇ ಒಳ್ಳೆ ದಂತ ಕಥೆ ಹೇಳಿದ್ದಾರೆ. ಇದು ಈ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲೂ ಹೊಳೆಯುತ್ತಿದೆ.

First published: