• Home
  • »
  • News
  • »
  • entertainment
  • »
  • Malayalam Kantara: ದೇವರ ನಾಡಲ್ಲಿ ಕಾಂತಾರ ಕ್ರೇಜ್! ಪ್ರಚಾರದಲ್ಲಿ ರಿಷಬ್ ಬ್ಯುಸಿ

Malayalam Kantara: ದೇವರ ನಾಡಲ್ಲಿ ಕಾಂತಾರ ಕ್ರೇಜ್! ಪ್ರಚಾರದಲ್ಲಿ ರಿಷಬ್ ಬ್ಯುಸಿ

ಮಲೆಯಾಳಂ ಸಿನಿಮಾ ಪ್ರಚಾರದಲ್ಲಿ ರಿಷಬ್ ಶೆಟ್ಟಿ ಬ್ಯುಸಿ

ಮಲೆಯಾಳಂ ಸಿನಿಮಾ ಪ್ರಚಾರದಲ್ಲಿ ರಿಷಬ್ ಶೆಟ್ಟಿ ಬ್ಯುಸಿ

ಇದೇ ತಿಂಗಳ 20 ರಂದು ಸಿನಿಮಾ ಕೇರಳದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಮೋಡಿ ಮಾಡಿದ ಕಾಂತಾರ ಸಿನಿಮಾ, ಮಲೆಯಾಳಂ ಭಾಷೆಯಲ್ಲೂ ಸಾಕಷ್ಟು ಜನರ ಮನಸನ್ನು ಕದಿಯೋ ಹಾಗೇನೆ ಕಾಣುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ (Kantara Cinema) ಕಾಂತಾರ ಚಿತ್ರದ ವೈಬ್ರೇಷನ್ ತುಂಬಾ ಇದೆ. ಇಡೀ ಚಿತ್ರರಂಗದಲ್ಲಿ (Film industry) ಕಾಂತಾರ ಕ್ರೇಜ್ ನಿಲ್ಲುತ್ತಲೇ ಇಲ್ಲ. ಅದು ತನ್ನದೇ ರೀತಿಯಲ್ಲಿ ಸಾಗ್ತಾನೇ ಇದೆ. ಕಳೆದ ತಿಂಗಳ 30 ರಿಂದ ಹಿಡಿದು ಇಲ್ಲಿವರೆಗೂ ಎಲ್ಲಿ ನೋಡಿದ್ರು ಕಾಂತಾರ ಚಿತ್ರದ್ದೇ ಮಾತು ಇದೆ. ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾ ಬರುತ್ತದೆ. ಆದರೆ ಕಾಂತಾರ ಸಿನಿಮಾ ಪ್ರತಿ ವಾರವೂ ರಿಲೀಸ್ ಆಗುತ್ತಿದೆ. ಅದು ಬೇರೆ ಬೇರೆ ಭಾಷೆಯಲ್ಲಿ ಅನ್ನೋದೇ ಕನ್ನಡದ ಮಟ್ಟಿಗೆ ವಿಶೇಷವಾದ ವಿಚಾರವೇ ಆಗಿದೆ. ಈ ಚಿತ್ರ ಹಿಂದಿ (Hindi language) ಭಾಷೆಯಲ್ಲಿ ಕಳೆದ ವಾರ ರಿಲೀಸ್ ಆಯಿತು. ಈ ವಾರ ಗುರುವಾರವೇ ಮಾಲಿವುಡ್​ಗೂ (Mollywood) ಕಾಂತಾರ ಸಿನಿಮಾ ಕಾಲಿಡುತ್ತಿದೆ.


ದೇವರ ನಾಡಲ್ಲಿ ಕಾಂತಾರ ಸಿನಿಮಾ ರಿಲೀಸ್
ಕಾಂತಾರ ತನ್ನ ಯಶಸ್ವಿಯಾತ್ರೆಯನ್ನ ಮುಂದುವರೆಸಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲವೂ ಮುಗಿಸಿಕೊಂಡು ಈಗ ಮಾಲಿವುಡ್​ ಕನ್ನಡದ ಕಾಂತಾರ ಕಾಲಿಡುತ್ತಿದೆ. ಕನ್ನಡದ ಭಾಷೆಯಲ್ಲಿ ಕನ್ನಡಿಗರ ಹೃದಯ ಗೆದ್ದ ಕಾಂತಾರ ಈಗಾಗಲೇ ಆಯಾ ಭಾಷೆಯಲ್ಲಿಯೇ ಸಿನಿಮಾ ರಿಲೀಸ್ ಆಗಿದೆ.


ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಮೊದಲು ಕನ್ನಡ ಭಾಷೆಯಲ್ಲಿಯೇ ಕಾಂತಾರ ಸಿನಿಮಾ ರಿಲೀಸ್ ಆಗಿದೆ. ಕಳೆದ ತಿಂಗಳ 30 ರಂದು ತೆರೆಗೆ ಬಂದ ಕಾಂತಾರ ಚಿತ್ರ ರಿಲೀಸ್ ಮುಂಚಿನ ಪ್ರಿಮಿಯರ್ ಶೋದಲ್ಲಿಯೇ ಒಳ್ಳೆ ರೆಸ್ಪಾನ್ಸ್ ಪಡೆಯಿತು.


Kannada Kantara Film is going to Release this week on Mollywood
ಇದೇ ತಿಂಗಳ 20 ರಂದು ಸಿನಿಮಾ ಕೇರಳದಲ್ಲಿ ರಿಲೀಸ್


ಕನ್ನಡದ ಕಾಂತಾರದ ಮೇಲೆ ಗುಳಿಗ ದೈವದ ಆಶೀರ್ವಾದ
ಕಾಂತಾರ ಸಿನಿಮಾದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದ ಕಥೆ ಇದೆ. ತುಳುನಾಡಿನ ಸಂಸ್ಕೃತಿಯನ್ನ ಬಿಂಬಿಸೋ ಈ ಸಿನಿಮಾ ನಿಜಕ್ಕೂ ಎಲ್ಲರ ಹೃದಯವನ್ನ ಗೆಲ್ಲುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆ ತಮ್ಮ ಈ ಚಿತ್ರವನ್ನ ಎಲ್ಲ ಭಾಷೆಯಲ್ಲೂ ಈಗ ರಿಲೀಸ್ ಮಾಡುತ್ತಿದೆ.




ಮಾಲಿವುಡ್​​​ನಲ್ಲಿ ಕಾಂತಾರ ಸಿನಿಮಾ ಗುರುವಾರವೇ ರಿಲೀಸ್
ಹೌದು, ಕಾಂತಾರ ಸಿನಿಮಾ ಮಲೆಯಾಳಂ ಭಾಷೆಯಲ್ಲೂ ಡಬ್ಬಿಂಗ್ ಆಗಿದೆ. ಈಗಾಗಲೇ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಈ ಟ್ರೈಲರ್​ ನೋಡಿದಾಗ, ಇದು ಮಲೆಯಾಳಂ ಭಾಷೆಯ ಸಿನಿಮಾ ನೋಡಿದ ಅನುಭವವೇ ಆಗುತ್ತದೆ.


Kannada Kantara Film is going to Release this week on Mollywood
ದೇವರ ನಾಡಲ್ಲಿ ಗುಳಿಗ ದೈವದ ಕಾಂತಾರ ಕ್ರೇಜ್


ದೇವರ ನಾಡು ಕೇರಳದಲ್ಲಿ ಆಚರಣೆ ಜಾಸ್ತಿ ಅಲ್ವೇ? ಅದಕ್ಕೋ ಏನೋ? ಮಲೆಯಾಳಂ ಡಬ್ಬಿಂಗ್ ಕಾಂತಾರ ಸಿನಿಮಾ ಪಕ್ಕಾ ಮಲೆಯಾಳಂ ಚಿತ್ರವೇ ಅನಿಸುತ್ತಿದೆ.


ಇದೇ ಗುರುವಾರ 20 ರಂದು ಮಲೆಯಾಳಂ ಕಾಂತಾರ ರಿಲೀಸ್
ಇಂತಹ ಈ ಚಿತ್ರದ ರಿಲೀಸ್ ಪ್ಲಾನ್ ಕೂಡ ಈ ಮೊದಲೇ ಆಗಿದೆ. ಇದೇ ತಿಂಗಳ 20 ರಂದು ಸಿನಿಮಾ ಕೇರಳದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಮೋಡಿ ಮಾಡಿದ ಕಾಂತಾರ ಸಿನಿಮಾ, ಮಲೆಯಾಳಂ ಭಾಷೆಯಲ್ಲೂ ಸಾಕಷ್ಟು ಜನರ ಮನಸನ್ನು ಕದಿಯೋ ಹಾಗೇನೆ ಕಾಣುತ್ತಿದೆ.


ಇದನ್ನೂ ಓದಿ: Upendra UI: ಒಂದು ಶಾಟ್ ತೆಗೆಯೋಕೆ 100 ಕ್ಯಾಮೆರಾ! ಉಪ್ಪಿ ಫ್ಯಾನ್ಸ್ ಥ್ರಿಲ್


ಮಾಲಿವುಡ್​​ ನಲ್ಲೂ ಕಾಂತಾರ ಸಿನಿಮಾ ಗೆಲ್ಲೋ ಭಾರೀ ನಿರೀಕ್ಷೆ 


ಮಲೆಯಾಳಂ ಭಾಷೆ ಸಿನಿಪ್ರೇಮಿಗಳ ಮನಸನ್ನೂ ಕಾಂತಾರ ಗೆಲ್ಲೋ ಎಲ್ಲ ಭರವಸೆಯನ್ನ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಮಲೆಯಾಳಂ ಕಾಂತಾರ ಚಿತ್ರದ ರಿಲೀಸ್ ಗಾಗಿಯೇ ಓಡಾಡುತ್ತಿದ್ದಾರೆ.


ಇದನ್ನೂ ಓದಿ: Kantara ಬಗ್ಗೆ ಯಶ್ ಮಾತನಾಡಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸ್ತಿರೋ ಕಿಡಿಗೇಡಿಗಳು! ರಿಷಬ್​ ಹೇಳಿದ್ದಿಷ್ಟು


ಮಲೆಯಾಳಂ ಭಾಷೆಯಲ್ಲಿ ಕಾಂತಾರ ರಿಲೀಸ್ ಮಾಡೋದಷ್ಟೇ ಅಲ್ಲ, ಚಿತ್ರದ ಪ್ರಚಾರವನ್ನೂ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಕಾಂತಾರ ಸಿನಿಮಾ ಪ್ರಚಾರದಲ್ಲಿಯೇ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಇಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿ ಮುನ್ನುಗ್ಗುತ್ತಿದ್ದಾರೆ.

First published: