• Home
  • »
  • News
  • »
  • entertainment
  • »
  • Kantara: ನಮ್ಮ ಸಿನಿಮಾ ನಮ್ಗೆ, ಅವರ ಸಿನಿಮಾ ಅವರಿಗೆ! ಪೊನ್ನಿಯನ್​ ಸೆಲ್ವನ್​ ಬಗ್ಗೆ ಭಯವಿಲ್ಲ ಎಂದ ರಿಷಭ್​ ಶೆಟ್ಟಿ

Kantara: ನಮ್ಮ ಸಿನಿಮಾ ನಮ್ಗೆ, ಅವರ ಸಿನಿಮಾ ಅವರಿಗೆ! ಪೊನ್ನಿಯನ್​ ಸೆಲ್ವನ್​ ಬಗ್ಗೆ ಭಯವಿಲ್ಲ ಎಂದ ರಿಷಭ್​ ಶೆಟ್ಟಿ

ಮಣಿರತ್ನಂ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಏನ್ ಹೇಳ್ತಾರೆ?

ಮಣಿರತ್ನಂ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಏನ್ ಹೇಳ್ತಾರೆ?

ನಮ್ಮ ಕನ್ನಡದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಬರ್ತಾನೇ ಇವೆ. ಹಾಗಾಗಿಯೇ ನಮ್ಮ ಕನ್ನಡ ಸಿನಿಮಾಗಳಿಗೆ ಇದು ಹೊಸದೇನೂ ಅಲ್ಲ. ಒಳ್ಳೆ ಸಿನಿಮಾವನ್ನ ಜನ ನೋಡಿಯೇ ನೋಡ್ತಾರೆ.

  • Share this:

ಕನ್ನಡದಲ್ಲಿ ನಾಲ್ಕು ನಾಲ್ಕು (Cinema) ಸಿನಿಮಾಗಳು ಆರು ಸಿನಿಮಾಗಳು ಒಂದೇ ದಿನ ರಿಲೀಸ್ ಆಗೋದು ಈಗ ಕಾಮನ್ ಆಗಿ ಬಿಟ್ಟಿದೆ. ಅದೇ ರೀತಿ ಈ ಶುಕ್ರವಾರ 30ಕ್ಕೆ (This Friday) ಕನ್ನಡದ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಚಿತ್ರದ ಎದುರಿಗೆ ತಮಿಳಿನ ದೊಡ್ಡ ಸಿನಿಮಾನೇ ರಿಲೀಸ್ ಆಗುತ್ತಿದೆ. ಇದರಿಂದ ಸಹಜವಾಗಿಯೇ ಒಂದು ರೀತಿ ಕನ್ನಡದ ಪ್ರೇಕ್ಷಕರು ಆ ಸಿನಿಮಾದತ್ತ ವಾಲೋ ಸಾಧ್ಯತೆನೂ ಇದೆ. ಹೌದು, ಡೈರೆಕ್ಟರ್ ಮಣಿರತ್ನಂ (Mani Ratnam)ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಹೈಪ್ ಹಾಗಿದೆ. ಆದರೆ ಇದರ ಬಗ್ಗೆ ಹೆಚ್ಚು ತೆಲೆ ಕೆಡಸಿಕೊಳ್ಳದ ಕಾಂತಾರ ಚಿತ್ರದ ಡೈರೆಕ್ಟರ್ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ತಮ್ಮದೇ ರೀತಿಯಲ್ಲಿಯೇ ನಮ್ಮ ಜೊತೆಗೆ ಮಾತನಾಡಿದ್ದಾರೆ. ಇವರ ಈ ವಿಶೇಷ ಮಾತಿನ ಒಟ್ಟು ಡಿಟೈಲ್ಸ್ ಇಲ್ಲಿದೆ.


ಕರಾವಳಿ ಕಂಪಿನ ಕನ್ನಡದ ಕಾಂತಾರ ಇದೇ 30ಕ್ಕೆ ರಿಲೀಸ್
ಕಾಂತಾರ ಸಿನಿಮಾ ಹೈಪ್ ಚೆನ್ನಾಗಿಯೇ ಇದೆ. ಕನ್ನಡದಲ್ಲಿ ಕರಾವಳಿ ಕಂಪು ಹರಿಸೋಕೆ ಈ ಸಿನಿಮಾ ರೆಡಿ ಆಗಿದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೂ ಇವೆ. ಇವುಗಳನ್ನ ಹೇಳೋದಕ್ಕಿಂತಲೂ ತೆರೆ ಮೇಲೆ ನೋಡಿದ್ರೇನೆ ಚೆಂದ ನೋಡಿ.


ಹೌದು, ಕನ್ನಡದ ಈ ಸಿನಿಮಾ ರಿಲೀಸ್ ದಿನವೇ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದರ ಹೈಪ್ ಸಿಕ್ಕಾಪಟ್ಟೆ ಇದೆ. ಬಹು ತಾರೆಯರ ಈ ಸಿನಿಮಾ ಬಹುಕೋಟಿಯಲ್ಲಿಯೇ ತಯಾರಾಗಿದೆ.


Kannada Kantara film Director Rishab Shetty Talk about Advance Ticket Booking
ಇದೇ 30ಕ್ಕೆ ಕಾಂತಾರ ಸಿನಿಮಾ ರಿಲೀಸ್


ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಈಗ ಏನ್ ಹೇಳ್ತಾರೆ?
ಈ ಸಿನಿಮಾದ ಪ್ರಚಾರ ಕೂಡ ಜೋರಾಗಿಯೇ ಇದೆ. ಹಿಂಗಿರೋವಾಗ ಕನ್ನಡದ ಕಾಂತಾರ ಸಿನಿಮಾ ಕಳೆದು ಹೋಗುತ್ತದೆಯೇ? ಈ ಒಂದು ಪ್ರಶ್ನೆಯ ಸುತ್ತವೇ ರಿಷಬ್ ನಮ್ಮ ಜೊತೆಗೆ ವಿಶೇಷವಾಗಿಯೇ ಮಾತನಾಡಿದ್ದಾರೆ. ತಮ್ಮ ಸಿನಿಮಾ ಮೇಲಿನ ಅಪಾರ ವಿಶ್ವಾಸವನ್ನೂ ಹೇಳಿಕೊಂಡಿದ್ದಾರೆ.


ಇನ್ನೂ ಓದಿ: Banaras Cinema: ಕನ್ನಡದ ಬನಾರಸ್ ಟ್ರೈಲರ್ ರಿಲೀಸ್​ಗಾಗಿ ಬರ್ತಿದ್ದಾರೆ ಬಾಲಿವುಡ್ ನಟ


ರಿಷಬ್ ಅಭಿನಯದ ಕಾಂತಾರ ಸಿನಿಮಾ ಇದೇ 30ಕ್ಕೆ ರಿಲೀಸ್ ಆಗುತ್ತಿದೆ. ಈ ದಿನ ಸಿನಿಮಾದ ಅಬ್ಬರವೂ ಇರುತ್ತದೆ. ಈಗಾಗಲೇ ಹಾಡು ಮತ್ತು ಟ್ರೈಲರ್-ಟೀಸರ್ ಮೂಲಕ ಒಂದು ಹಂತಕ್ಕೆ ಹೈಪ್ ಕೂಡ ತೆಗೆದುಕೊಂಡಿದೆ.


ಮಣಿರತ್ನಂ ಚಿತ್ರ ಬಂದ್ರೆ ನಮ್ಮ ಚಿತ್ರಕ್ಕೆ ಏನೂ ಎಫೆಕ್ಟ್ ಆಗೋದಿಲ್ಲ
ಪೊನ್ನಿಯಿನ್ ಸೆಲ್ವನ್ ಮುಂದೇ ಹೇಗೆ? ಅಂತ ಕೇಳಿದ್ರೆ, ನಮ್ಮ ಸಿನಿಮಾಕೆ ಯಾವುದೇ ತೊಂದರೆ ಆಗೋದಿಲ್ಲ. ನಮ್ಮ ಸಿನಿಮಾ ಬಗ್ಗೆ ನಮಗೆ ನಂಬಿಕೆ ಇದೆ. ಆದ್ದರಿಂದ ನಮ್ಮ ಸಿನಿಮಾದ ಮೇಲೆ ಯಾವುದೇ ರೀತಿಯ ಎಫೆಕ್ಟ್ ಮಾಡೋದಿಲ್ಲ ಬಿಡಿ.


ಹೀಗಂತ ಹೇಳೋ ರಿಷಬ್ ಶೆಟ್ಟಿ, ನಮ್ಮ ಸಿನಿಮಾ ನಮ್ಮ ನೆಲದ ಕಥೆಯನ್ನೆ ಹೊಂದಿದೆ. ಆದರೆ, ಮಣಿರತ್ನಂ ಅವರ ಸಿನಿಮಾ ತಮಿಳು ರಾಜನ ಕಥೆ ಹೇಳುತ್ತದೆ. ಹಾಗಾಗಿಯೇ ಅವರ ರಾಜನ ಕಥೆ ಅವರಿಗೆ ನಮ್ಮ ನೆಲದ ಕಥೆ ನಮಗೆ, ನಮ್ಮ ಸಿನಿಮಾ ನೋಡೋರು ಕಂಡಿತಾ ನೋಡ್ತಾರೆ ಅಂತಲೇ ವಿಶ್ವಾಸದಲ್ಲಿಯೇ ತಿಳಿಸಿದ್ದಾರೆ.


ಕನ್ನಡದಲ್ಲಿ ನಾಲ್ಕೈದು ಸಿನಿಮಾ ಒಟ್ಟಿಗೆ ಬರೋದು ಹೊಸದೇನೂ ಅಲ್ಲ
ನಮ್ಮ ಕನ್ನಡದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಬರ್ತಾನೇ ಇವೆ. ಹಾಗಾಗಿಯೇ ನಮ್ಮ ಕನ್ನಡ ಸಿನಿಮಾಗಳಿಗೆ ಇದು ಹೊಸದೇನೂ ಅಲ್ಲ. ಒಳ್ಳೆ ಸಿನಿಮಾವನ್ನ ಜನ ನೋಡಿಯೇ ನೋಡ್ತಾರೆ.


ಅದೇ ರೀತಿನೇ ಮಣಿರತ್ನಂ ಚಿತ್ರ ಬರ್ತಿದೆ. ಅದನ್ನ ನೋಡೋರು ಆ ಸಿನಿಮಾ ನೋಡ್ತಾರೆ. ನಮ್ಮ ಸಿನಿಮಾ ನೋಡೋರು ನಮ್ಮ ಸಿನಿಮಾ ನೋಡ್ತಾರೆ ಅಷ್ಟೆ ಅನ್ನೋ ರಿಷಬ್ ಶೆಟ್ಟಿ, ಸಿನಿಮಾ ರಿಲೀಸ್ ಆಗೋ ಖುಷಿಯಲ್ಲಿಯೇ ಇದ್ದಾರೆ.


Kannada Kantara film Director Rishab Shetty Talk about Advance Ticket Booking
ಕಾಂತಾರ ಎಂಬ ಹೊಸ ರೀತಿಯ ಸಿನಿಮಾ


ಕಾಂತಾರ ಅಡ್ವಾನ್ಸ್ ಬುಕ್ಕಿಂಗ್ ಬಗ್ಗೆ ಏನಂತಾರೆ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಶುರು ಆಗಿದೆ. ಭಾನುವಾರ ಬೆಳಗ್ಗೆಯಿಂದಲೆ ಕರ್ನಾಟಕದ ಬಹುತೇಕ ಕಡೆಗೆ ಕಾಂತಾರ ಚಿತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.


ಈ ಬಗ್ಗೇನೂ ಅಧಿಕೃತ ಮಾಹಿತಿಕೊಟ್ಟಿರೋ ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ, ನಮ್ಮ ಕಾಂತಾರ ಸಿನಿಮಾದ ಬುಕ್ಕಿಂಗ್ ಭಾನುವಾರದಿಂದಲೇ ಶುರು ಆಗದೆ ಕುಂದಾಪುರ, ಕಾಸರಗೋಡು ಕಡೆಗಳಲ್ಲಿ ಬುಕ್ಕಿಂಗ್ ಚೆನ್ನಾಗಿಯೆ ಆಗಿದೆ. ಆಲ್ ಮೋಸ್ಟ್ ಫುಲ್ ಅಂದ್ರೂ ತಪ್ಪಿಲ್ಲ ಅಂತಲೇ ತಿಳಿಸಿದ್ದಾರೆ.


ಬೆಂಗಳೂರು, ಮೈಸೂರು, ಶಿವಮೊಗ್ಗ ಹೀಗೆ ಇಲ್ಲೂ ಕೂಡ ಬುಕ್ಕಿಂಗ್
ಶುರು ಆಗಿದೆ. ಇನ್ನೂ ಟೈಮ್ ಇರೋದ್ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇದ್ದೇ ಇದೆ ಅಂತಲೇ ರಿಷಬ್ ವಿವರಿಸಿದ್ದಾರೆ.


ಇದನ್ನೂ ಓದಿ:Raj B Shetty: ಸೈಕೋ ಕಿಲ್ಲರ್​ ಜೊತೆ ರಾಜ್​ ಬಿ ಶೆಟ್ಟಿ ಫೋಟೋ, ವಿದೇಶದಲ್ಲಿ ಕನ್ನಡ ನಟನ ಬಗ್ಗೆ ಅಪಹಾಸ್ಯ ಮಾಡಿದ್ರಾ?


ರಾಜ್ಯದೆಲ್ಲೆಡೆ ಇದೇ 30ಕ್ಕೆ ಕಾಂತಾರ ಭರ್ಜರಿಯಾಗಿಯೇ ರಿಲೀಸ್ ಆಗುತ್ತಿದೆ. ಜನ ಕೂಡ ಈ ಸಿನಿಮಾ ಪೋಸ್ಟರ್, ಟೀಸರ್, ಟ್ರೈಲರ್ ಮತ್ತು ಹಾಡುಗಳನ್ನ ನೋಡಿ ಖುಷಿಪಟ್ಟಿದ್ದಾರೆ. ಒಳ್ಳೆ ರೆಸ್ಪಾನ್ಸ್ ಕೂಡ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಕಾಂತಾರ ಸಿನಿಮಾದ ಬಗ್ಗೆ ಒಂದು ಒಳ್ಳೆ ನಿರೀಕ್ಷೆನೂ ಇದೆ. ಕುತೂಹಲ ಕೂಡ ಇದೆ.

First published: