• Home
  • »
  • News
  • »
  • entertainment
  • »
  • Kantara 50 Days: ಕನ್ನಡದ ಕಾಂತಾರ! ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡ ಚಿತ್ರ

Kantara 50 Days: ಕನ್ನಡದ ಕಾಂತಾರ! ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡ ಚಿತ್ರ

ಕನ್ನಡದ ಕಾಂತಾರ ಕರ್ನಾಟಕದಲ್ಲಿ 50 ದಿನ ಪೂರ್ಣ

ಕನ್ನಡದ ಕಾಂತಾರ ಕರ್ನಾಟಕದಲ್ಲಿ 50 ದಿನ ಪೂರ್ಣ

ಕನ್ನಡದ ಕಾಂತಾರ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲೂ ರಿಲೀಸ್ ಆಗಿದೆ. ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Film) ಸಿನಿಮಾ ದಾಖಲೆ ಮೇಲೆ ದಾಖಲೆ ಮಾಡಿದೆ. ಕಳೆದ ಸೆಪ್ಟೆಂಬರ್​-30 ರಂದು ಬೆಳ್ಳಿ ತೆರೆಗೆ ಲಗ್ಗೆ ಇಟ್ಟ ಕಾಂತಾರ ಈಗ 50 ದಿನ ಪೂರೈಸಿದೆ. ದೇಶ-ವಿದೇಶದಲ್ಲೂ ಕನ್ನಡದ (Kannada Kantara) ಕಾಂತಾರ 50 ದಿನ ಪೂರೈಸಿದೆ.ಅಮೆರಿಕದಂತಹ (USA) ದೇಶದಲ್ಲಿ ಕಾಂತಾರದ ಎಲ್ಲ ಭಾಷೆಯ ಸಿನಿಮಾಗಳು ಪ್ರದರ್ಶನ ಕಂಡಿವೆ. ಕರ್ನಾಟಕದಲ್ಲಂತೂ ಕನ್ನಡ ಸಿನಿಮಾ ಅಬ್ಬರಿಸಿದೆ.  ನಟ-ನಿರ್ದೇಶಕ ರಿಷಬ್ ಶೆಟ್ಟಿ ಬದುಕಿನ ವಿಶೇಷ ಚಿತ್ರ ಇದಾಗಿದೆ. ನಿರೀಕ್ಷೆ ಮೀರಿ ಹಿಟ್ ಆದ ಈ ಚಿತ್ರದ ಬಗ್ಗೆ ವಿಶೇಷ ಪ್ರೀತಿನೂ ಇದೆ. ಇಂತಹ ಚಿತ್ರ  ಕನ್ನಡದ ಹೆ್ಮ್ಮೆಯನ್ನೂ ಹೆಚ್ಚಿಸಿದೆ. ಕನ್ನಡದ ಹೆಸರನ್ನ ಇಡೀ ದೇಶ-ವಿದೇಶಕ್ಕೆ ಪಸರಿಸಿದ ಕಾಂತಾರ ಸಿನಿಮಾ ಈಗ ಹಾಫ್ (50 Days Complete) ಸೆಂಚ್ಯೂರಿ ಹೊಡೆದ ಸಂಭ್ರಮದಲ್ಲಿಯೇ ಇದೆ.   ಇದರ ಬಗೆಗಿನ ಇನ್ನಷ್ಟು ವಿವರಣೆ  ಮುಂದೆ ಇದೆ ಓದಿ.


ಕನ್ನಡದ ಕಾಂತಾರ ಇಂದು ರಿಲೀಸ್ ಆಗಿ 50 ದಿನ ಪೂರ್ಣ!
ಕನ್ನಡದ ಕಾಂತಾರ ರಿಲೀಸ್ ಆಗಿ ಈಗ 50 ದಿನ ಪೂರೈಸಿದೆ. ಅದೆಷ್ಟು ಬೇಗ 50 ದಿನ ಪೂರೈಸಿದೆ ಈ ಸಿನಿಮಾ ಅಂತಲೇ ಅನಿಸುತ್ತದೆ. ರಿಲೀಸ್ ಆದ ದಿನದಿಂದಲೂ ಈ ಚಿತ್ರದ ಗುಂಗು ಹಿಡಿದು ಬಿಟ್ಟಿದೆ.


Kannada Kantara Film Complete 50 Days All Over Karnataka
ಕನ್ನಡದ ಕಾಂತಾರ ಇಂದು ರಿಲೀಸ್ ಆಗಿ 50 ದಿನ ಪೂರ್ಣ!


ಈ ಸಿನಿಮಾದ ಗುಂಗಿನಿಂದ ಜನ ಇನ್ನು ಹೊರಗೆ ಬಂದಿಯೇ ಇಲ್ಲ. ಅಷ್ಟರಲ್ಲಿಯೇ ಕಾಂತಾರ ಸಿನಿಮಾ 50 ದಿನ ಪೂರೈಸಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ, ವಿದೇಶದಲ್ಲೂ ಕಾಂತಾರ ಸಿನಿಮಾ 50 ದಿನ ಪೂರೈಸೋ ಸನಿಹದಲ್ಲೂ ಇದೆ. ಇದು ಕನ್ನಡದ ಮಟ್ಟಿಗೆ ವಿಶೇಷವೆ ಸರಿ.




ಅಮೆರಿಕಾದಲ್ಲಿ ಎಲ್ಲ ಭಾಷೆಯಲ್ಲೂ ಪ್ರದರ್ಶನ ಕಂಡ ಕಾಂತಾರ
ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ಡಬ್ ಆಗಿದೆ. ದಕ್ಷಿಣ ಭಾರತದ ಅಷ್ಟೂ ಭಾಷೆಯಲ್ಲೂ ಕನ್ನಡದ ಕಾಂತಾರ ತೆರೆ ಕಂಡಿದೆ. ಅದೇ ರೀತಿ ಅಮೆರಿಕಾದಲ್ಲೂ ಕಾಂತಾರ ರಿಲೀಸ್ ಆಗಿದೆ. ನಾಲ್ಕು ಭಾಷೆಯಲ್ಲೂ ರಿಲೀಸ್ ಆಗಿದೆ. ಅಷ್ಟೇ ಯಶಸ್ವಿ ಪ್ರದರ್ಶನವನ್ನೂ ಕಂಡಿದೆ.


ಕಾಂತಾರ ಸಿನಿಮಾ ಅಮೆರಿಕಾದಲ್ಲಿ ಅಷ್ಟೂ ಭಾಷೆಯಲ್ಲಿ ರಿಲೀಸ್ ಆಗಿದ್ದು,ಈಗ 50 ದಿನ ಪೂರೈಸಲು ಸನಿಹಕ್ಕೆ ಬಂದಿದೆ. ಇದರ ಸುತ್ತ ಹೇಳೋದಾದ್ರೆ ಇಲ್ಲಿ ಎಲ್ಲ ಭಾಷೆಯ ಜನರೂ ಇದ್ದಾರೆ. ಹಾಗಾಗಿಯೇ ಕನ್ನಡದ ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


ಆಸ್ಟ್ರೇಲಿಯಾ 50 ದಿನ ಪೂರೈಸಿದ ಕನ್ನಡದ ಮೊದಲ ಸಿನಿಮಾ
ಕನ್ನಡದ ಕಾಂತಾರ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲೂ ರಿಲೀಸ್ ಆಗಿದೆ. ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಕನ್ನಡದ ಕಾಂತಾರ ಸೆಪ್ಟಂಬರ್-30 ರಂದು ಎಲ್ಲೆಡೆ ರಿಲೀಸ್ ಆಗಿತ್ತು. ಮೊದಲ ದಿನದಿಂದಲೇ ಚಿತ್ರದ ಕ್ರೇಜ್ ಶುರು ಆಗಿತ್ತು. ಬೆಂಗಳೂರಿನಲ್ಲಿ ನಡೆದ ಪ್ರಿಮಿಯರ್ ಶೋದಲ್ಲಿ ಕನ್ನಡದ ಕಾಂತಾರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಬಂದಿತ್ತು. ಮರುದಿನ ಥಿಯೇಟರ್​ ನಿಂದಲೇ ಅದೇ ಪ್ರತ್ರಿಕೆಯೆ ಬಂದಿತ್ತು. ಮುಂದೇನ್ ಆಯಿತು ಅನ್ನೋದು ಎಲ್ಲರಿಗೂ ತಿಳಿದಿದೆ.


Kannada Kantara Film Complete 50 Days All Over Karnataka
ಆಸ್ಟ್ರೇಲಿಯಾ 50 ದಿನ ಪೂರೈಸಿದ ಕನ್ನಡದ ಮೊದಲ ಸಿನಿಮಾ


ಕನ್ನಡದ ಕಾಂತಾರ ಕರ್ನಾಟಕದಲ್ಲಿ 50 ದಿನ ಪೂರ್ಣ
ರಿಲೀಸ್ ಆದ 300 ಪ್ಲಸ್ ಥಿಯೇಟರ್ ನಲ್ಲಿ ಕಾಂತಾರ 50 ದಿನ ಪೂರೈಸಿದೆ. ರಿಲೀಸ್​ ದಿನದಿಂದ ಹಿಡಿದು ಇಲ್ಲಿವರೆಗೂ 50 ದಿನದಲ್ಲಿ ಹತ್ತು ಹಲವು ದಾಖಲೆಗಳನ್ನ ಸಿನಿಮಾ ಮಾಡುತ್ತಲೇ ಬಂದಿದೆ.


ರಿಲೀಸ್ ಆಗಿ 50 ದಿನ ಆದ್ರೂ ಜನ ಇನ್ನೂ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಕಾಂತಾರ ಚಿತ್ರದ ವಿಶೇಷತೆಗಳೇನೂ ಅನ್ನೋದು ಹೇಳೋದೇ ಬೇಡ. ಅಷ್ಟು ಆಳವಾಗಿಯೇ ಕಾಂತಾರ ತನ್ನ ಛಾಪನ್ನ ಮೂಡಿಸಿದೆ. ಮಕ್ಕಳಾದಿಯಾಗಿಯ ಎಲ್ಲರೂ ಕಾಂತಾರ ಸಿನಿಮಾದ ಕುರಿತು ಮಾತನಾಡುತ್ತಾರೆ.


ಇದನ್ನೂ ಓದಿ: Manvita Kamath: ಟಗರು ಪುಟ್ಟಿಯ ಮಸ್ತ್ ಫೋಟೋಶೂಟ್! ಸಖತ್ ಡ್ರೆಸ್​​ನಲ್ಲಿ ಮಸ್ತ್ ಮಿಂಚಿಂಗ್


ಕಾಂತಾರ ಸಿನಿಮಾ ಇತಿಹಾಸ ಸೃಷ್ಟಿಸಿ ಆಗಿದೆ. ಕನ್ನಡದ ಮಟ್ಟಿಗಷ್ಟೇ ಅಲ್ಲ, ವಿದೇಶದಲ್ಲೂ ಕಾಂತಾರ ತನ್ನ ಹೊಸ ದಾಖಲೆಯನ್ನ ಮಾಡಿದೆ. ರಿಲೀಸ್ ಆಗದೇ ಇರೋ ದೇಶದಲ್ಲೂ ಕಾಂತಾರ ರಿಲೀಸ್ ಆಗಿದೆ.


ಕನ್ನಡದ ಹೆಸರನ್ನ ಅಲ್ಲೂ ಮುಟ್ಟಿಸಿದೆ. ಒಟ್ಟಾರೆ ಕಾಂತಾರ 50 ದಿನ ಪೂರೈಸಿ ಪ್ರೇಕ್ಷಕ ದಿಲ್​ ನಲ್ಲಿ ಖಾಯಂ ಆಗಿ ಜಾಗ ಮಾಡಿಕೊಂಡು ಬಿಟ್ಟಿದೆ.

First published: