• Home
  • »
  • News
  • »
  • entertainment
  • »
  • Kantara-Sapthami Gowda: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?

Kantara-Sapthami Gowda: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?

ಕಾಂತಾರ ಲೀಲಾ ಹಿಂಗ್ಯಾಕ್ ಹೇಳಿದ್ರು ?

ಕಾಂತಾರ ಲೀಲಾ ಹಿಂಗ್ಯಾಕ್ ಹೇಳಿದ್ರು ?

ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿಯೇ ಇಂಗ್ಲೀಷ್​ ನಲ್ಲಿ "Write me a love story" ಅಂತಲೇ ಈಗಾಗಲೇ ಬರೆದುಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara) ಸಿನಿಮಾ ಡಿವೈನ್ (Devine Hit) ಹಿಟ್ ಆಗಿದೆ. ಪ್ಯಾನ್ (Pan India) ಇಂಡಿಯಾ ಲೆವಲ್​ನಲ್ಲಿಯೇ ಮಿಂಚುತ್ತಲೇ ಇದೆ. ಕನ್ನಡದ ಹೆಸರು-ತುಳುನಾಡಿನ ಹೆಸರು, ಎರಡನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದೆ. ದೈವದ ಕಥೆ ಇರೋ ಈ ಸಿನಿಮಾದಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಇವೆ. ಪ್ರೀತಿ-ಪ್ರೇಮದಂತಹ ಅಂಶಗಳು ಇವೆ. ಲೀಲಾ ಮತ್ತು ಶಿವನ ಪಾತ್ರಧಾರಿಗಳ ಅದ್ಭುತ ಲವ್ (Love Story) ಸ್ಟೋರಿ ಕೂಡ ಇದೆ. ಇದರ ಸುತ್ತವೇ ಹತ್ತು ಹಲವು ದೃಶ್ಯಗಳೂ ಇವೆ. ಈ ಜೋಡಿ ಹಕ್ಕಿಯ ಪ್ರೇಮ ಕಥೆಯ ತೀವ್ರತೆ ಹೇಳಲಿಕ್ಕೆ ಇಲ್ಲೊಂದು ಹಾಡು ಕೂಡ ಇದೆ. "ಸಿಂಗಾರ ಸಿರಿಯೇ" ಅನ್ನೋ ಈ ಗೀತೆ ಸೂಪರ್ ಹಿಟ್ ಆಗಿದೆ. ಇಂತಹ ಈ ಚಿತ್ರದ ನವ ನಾಯಕಿ ಸಪ್ತಮಿ ಗೌಡ, ಲೀಲಾ ಮೂಲಕ ಈಗ ಕನ್ನಡಿಗರಿಗೆ ಪರಿಚಯ ಆಗಿದ್ದಾರೆ.


ಕಾಂತಾರ ಸಿನಿಮಾದ ಪಾತ್ರಗಳೆಲ್ಲ ಹಿಟ್ ಮೇಲೆ ಹಿಟ್
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಮೂಲಕ ಚಿತ್ರದ ಎಲ್ಲ ಅಂಶಗಳು ಜನರ ಗಮನಕ್ಕೆ ಬಂದಿವೆ. ಚಿತ್ರವನ್ನ ತೀರಾ ಸೂಕ್ಷ್ಮವಾಗಿಯೇ ನೋಡಿದ್ದಾರೆ. ಇದರಿಂದ ಚಿತ್ರ ಪ್ರತಿ ಪಾತ್ರದ ಬಗ್ಗೇನೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.


ಕಾಂತಾರದ ಶಿವ ಪಾತ್ರದಂತೆ ಲೀಲಾ ಪಾತ್ರವೂ ಹಿಟ್
ಕಾಂತಾರ ಸಿನಿಮಾ ಶಿವ ಪಾತ್ರ ಸೂಪರ್ ಹಿಟ್ ಆಗಿದೆ. ಜನ ಸಿನಿಮಾ ನೋಡಿ ಬಂದು ಶಿವ ಪಾತ್ರದ ಬಗ್ಗೇನೆ ಮಾತನಾಡುತ್ತಿದ್ದಾರೆ. ಇದೇ ಪಾತ್ರದ ಜೊತೆಗೆ ಇರೋ ಲೀಲಾ ಪಾತ್ರವೂ ಇಲ್ಲಿ ಜನರ ಮನಸನ್ನ ಕದ್ದಿದೆ. ತೆರೆ ಮೇಲೆ ಬರುವ ಈ ಲೀಲಾ ಕನ್ನಡದ ಮಟ್ಟಿಗೆ ಭರವಸೆಯ ಬೆಡಗಿಯಾಗಿ ಕಂಗೊಳಿಸುತ್ತಿದ್ದಾರೆ.


Kannada Kantara Film Actress Sapthami Gowda in Future Wants to work in Love Stories
ಕಾಂತಾರದ ಶಿವ ಪಾತ್ರದಂತೆ ಲೀಲಾ ಪಾತ್ರವೂ ಹಿಟ್


ಕಾಂತಾರದ ಲೀಲಾ ಈಗ ಹೀಗೆ ಹೇಳಿದ್ಯಾಕೆ?
ಕಾಂತಾರ ಸಿನಿಮಾದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಲಕ್ ಚೆನ್ನಾಗಿದೆ. ಮೊದಲ ಚಿತ್ರದಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಪರಿಚಯ ಆಗಿದ್ದಾರೆ. ಕಾಂತಾರ ಸಿನಿಮಾ ಆದ್ಮೇಲೆ ಸಪ್ತಮಿ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ ನೋಡಿ.


ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ
ಹೌದು, ಈ ಮಾತನ್ನ ನಾವು ಹೇಳುತ್ತಿಲ್ಲ. ಸ್ವತಃ ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿಯೇ ಇಂಗ್ಲೀಷ್​ ನಲ್ಲಿ "Write me a love story" ಅಂತಲೇ ಈಗಾಗಲೇ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Kantara Inspired Pingara: ದೈವವನ್ನು ನಂಬಿದ ಅಷ್ಟೂ ಸಿನಿಮಾ ಹಿಟ್! ರಾಷ್ಟ್ರಪ್ರಶಸ್ತಿ ಪಡೆದ ಪಿಂಗಾರ ರಿಲೀಸ್​​ಗೆ ರೆಡಿ


ಸಪ್ತಮಿ ಗೌಡ ಮುಂದಿನ ಸಿನಿಮಾ ಲವ್ ಸ್ಟೋರಿ ಆಗಿರಬೇಕೆ?
ಕಾಂತಾರ ಬಳಿಕ ಸಪ್ತಮಿ ಗೌಡ ಮುಂದಿನ ಸಿನಿಮಾ ಲವ್ ಸ್ಟೋರಿನೇ ಆಗಿರಬೇಕೆ? ಗೊತ್ತಿಲ್ಲ, ಆದರೆ ಸಪ್ತಮಿ ಗೌಡ ತಮ್ಮ ಮನಸ್ಸಿನ ಆಸೆಯನ್ನ ಇಲ್ಲಿ ಹೇಳಿಕೊಂಡಂತಿದೆ. ಇದರ ಹೊರತಾಗಿ ಇನ್ನೂ ಸಪ್ತಮಿ ಮುಂದಿನ ಸಿನಿಮಾದ ಕುರಿತು ಈಗಲೇ ಯಾವುದೇ ಮಾಹಿತಿ ಇಲ್ಲ.


ಸಪ್ತಮಿ ಗೌಡ ಕೈ ಹಿಡಿದ ತುಳುನಾಡ ದೈವ 
ಸಪ್ತಮಿ ಗೌಡ ತಮ್ಮ ಚಿತ್ರ ಜೀವನದ ಈ ಮೊದಲ ಸಿನಿಮಾದ ಸೂಪರ್ ಹಿಟ್ ಸಂಭ್ರಮದಲ್ಲಿಯೇ ಇದ್ದಾರೆ. ಸಿನಿಮಾ ಜೀವನ ಆರಂಭದಲ್ಲಿಯೇ ಕಾಂತಾರ ಮೂಲಕ ಹಿಟ್ ಆಗಿರೋದು ಎಲ್ಲರಿಗೂ ಸಿಗೋ ಲಕ್ ಅಲ್ಲ ಬಿಡಿ.


ಇದನ್ನೂ ಓದಿ: Kantara| Veerendra Heggade: ಕಾಂತಾರ ವೀಕ್ಷಿಸಿದ ಧರ್ಮಾಧಿಕಾರಿಗಳು; ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ


ದೈವದ ಸಿನಿಮಾದಲ್ಲಿ ಅಭಿನಯಿಸಿದ ಎಲ್ಲರಿಗೂ ದೈವದ ಆಶೀರ್ವಾದ ಸಿಕ್ಕಿದೆ. ಅದರಂತೆ ಸಪ್ತಮಿ ಗೌಡರಿಗೂ ದೈವದ ಬಲ ಸಿಕ್ಕಂತಾಗಿದೆ. ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲವೂ ಈಗಲೇ ಶುರು ಆಗಿದೆ.

First published: