• Home
  • »
  • News
  • »
  • entertainment
  • »
  • Kantara Demand: ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಕನಸು ನನಸು! ಕಾಂತಾರಕ್ಕೆ ಡಬ್ಬಿಂಗ್ ಡಿಮ್ಯಾಂಡ್

Kantara Demand: ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಕನಸು ನನಸು! ಕಾಂತಾರಕ್ಕೆ ಡಬ್ಬಿಂಗ್ ಡಿಮ್ಯಾಂಡ್

ಬೇರೆ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್

ಬೇರೆ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್

ಕನ್ನಡದ ಕಾಂತಾರ ಚಿತ್ರಕ್ಕಾಗಿ ಬೇರೆ ಭಾಷೆಯ ವಿತರಕರು ಡಬ್ಬಿಂಗ್ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೋಡಕ್ಷನ್ ಹೌಸ್ ಸಂಪರ್ಕಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  • Share this:

ಕಾಂತಾರ ಸಿನಿಮಾ (Kantara) ಎಲ್ಲರಿಗೂ ಇಷ್ಟ ಆಗುತ್ತಿದೆ. ಎಲ್ಲರನ್ನೂ ಅಷ್ಟೇ ಸೆಳಯುತ್ತಲೂ ಇದೆ. ದಂತ ಕಥೆ ಇದಾಗಿದ್ದರೂ ಇಲ್ಲಿ ದೈವದ ಕಥೆಯನ್ನೇ ಹೊಂದಿದೆ. ಈ ಒಂದು ಕಾರಣಕ್ಕೇನೆ ಈ ಚಿತ್ರದ ಬಗ್ಗೆ ಒಂದು ದೈವಿಕ ಮನೋಭಾವನೆ ಕೂಡ ಕರಾವಳಿ (Costal Area) ಭಾಗದಲ್ಲಿದೆ. ಇದಕ್ಕೂ ಹೆಚ್ಚಾಗಿ ಈ ಸಿನಿಮಾ ತನ್ನದೇ ವಿಶೇಷ ಮೇಕಿಂಗ್ (Making) ಮೂಲಕ ಹೊಸ ಛಾಪು ಮೂಡಿಸುತ್ತಿದೆ. ಕೇವಲ ನಾಲ್ಕೈದು ದಿನದಲ್ಲಿಯೇ ಕನ್ನಡದ ಕಾಂತಾರ ಸಿನಿಮಾದ ಮೌತ್ ಟಾಕ್ ಹೆಚ್ಚಾಗಿದೆ. ಸಿನಿಮಾಕ್ಕೆ ಬರ್ತಿರೋ ರೆಸ್ಪಾನ್ಸ್ ವೇರಿ ಗುಡ್ ಅಂತಲೇ ಹೇಳಬಹುದು. ಇಂತಹ ಈ ಚಿತ್ರದ ಕೇವಲ ಎರಡು ಭಾಷೆಗೆ ಈಗ ಸೀಮಿತವಾಗಿತ್ತು. ಆದರೆ ಇನ್ನು ಕೆಲವೇ ದಿನದಲ್ಲಿ ಕಾಂತಾರ ಬೇರೆ ಭಾಷೆಗೂ ಹೋಗ್ತಾಯಿದೆ.


ಕಾಂತಾರ ಸಿನಿಮಾ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕನಸಿನ ಸಿನಿಮಾನೇ ಆಗಿದೆ. ಇಂತಹ ಈ ಚಿತ್ರ ರಿಷಬ್ ಚಿತ್ರ ಜೀವನದಲ್ಲಿ ವಿಶೇಷ ಮೈಲುಗಲ್ಲಾಗಿಯೇ ನಿಲ್ಲುತ್ತಿದೆ. ಇಲ್ಲಿವರೆಗೂ ಇದ್ದ ಸಿನಿಮಾಗಳ ಲೆಕ್ಕ ಬೇರೆ ಇತ್ತು. ಆದರೆ ಕಾಂತಾರ ಅದನ್ನೆಲ್ಲ ಮೀರಿಸುತ್ತಿದೆ.


Kannada Kantara Cinema now Going to Release In other Language
ಕನ್ನಡದ ಕಾಂತಾರ ಬೇರೆ ಭಾಷೆಯಲ್ಲೂ ಶೀಘ್ರದಲ್ಲಿ ರಿಲೀಸ್


ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ರಿಷಬ್ ಶೆಟ್ಟಿ ಕನಸು
ಕಾಂತಾರ ಸಿನಿಮಾದ ಕಥೆ ಎಲ್ಲೆಡ ಹೋಗಬೇಕು. ಇದು ಎಲ್ಲರಿಗೂ ರೀಚ್ ಆಗಬೇಕು ಅನ್ನೋ ಕನಸು ರಿಷಬ್ ಶೆಟ್ಟಿಯವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಾಗಬೇಕು ಅಂತಲೂ ರಿಷಬ್ ಶೆಟ್ಟಿ ಕನಸು ಕಂಡಿದ್ದರು.


ಇದನ್ನೂ ಓದಿ:Kantara Ajaneesh Loknath: ಕಾಂತಾರಕ್ಕಾಗಿ 2 ತಿಂಗಳು ನಾನೂ ನಾನ್​ವೆಜ್ ಬಿಟ್ಟಿದ್ದೆ! ಅಜನೀಶ್ ಲೋಕನಾಥ್


ಕಾಂತಾರ ಒಂದು ಭಾಷೆಯಲ್ಲಿ ಸದ್ಯಕ್ಕೆ ರಿಲೀಸ್ ಆಗಿದೆ. ಕನ್ನಡ ಭಾಷೆಯಲ್ಲಿ ಎಲ್ಲೆಡೆ ಕಾಂತಾರ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಮೊನ್ನೆ 30 ನೇ ತಾರೀಖು ರಿಲೀಸ್ ಆಗಿದೆ. ಅದಕ್ಕೂ ಮೊದಲೇ ಚಿತ್ರದ ಪ್ರಿಮಿಯರ್ ಶೋ ಕೂಡ ನಡೆದಿದೆ.


ಪ್ರಿಮಿಯರ್ ಶೊ ವೇಳೆನೆ ಕಾಂತಾರ ಸಿನಿಮಾದ ವೈಬ್ರೇಷನ್ ಶುರು ಆಗಿದೆ. ಮರು ದಿನ ಚಿತ್ರ ಥಿಯೇಟರ್​ಗಳಲ್ಲಿ ರಿಲೀಸ್ ಆದ್ಮೇಲೆ ಕಾಂತಾರ ಮೊದಲ ಶೋದಲ್ಲಿಯೇ ಸಾಮಾನ್ಯ ಜನರ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೊಟ್ಟೇ ಬಿಟ್ಟರು.


Kannada Kantara Cinema now Going to Release In other Language
ಕಾಂತಾರ ಸಿನಿಮಾದ ಹೊಸ ಅಧ್ಯಾಯ ಶೀಘ್ರದಲ್ಲಿ ಶುರು


ಈಗ ಕಾಂತಾರ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಬ್ಬ ಇರೋದ್ರಿಂದ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮಂದಿನೂ ಜಾಸ್ತಿ ಆಗುತ್ತಿದ್ದಾರೆ.


ಇದರ ಬೇಡಿಕೆ ಕ್ರೇಜ್ ಈಗ ಎಷ್ಟು ರೀಚ್ ಆಗಿದೆ ಅಂದ್ರೆ, ಬೇರೆ ಭಾಷೆಯಲ್ಲೂ ಕಾಂತಾರ ಸಿನಿಮಾ ಬರಬೇಕು ಅನ್ನೋ ಮಾತು ಕೇಳಿ ಬರ್ತಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ತಮ್ಮ ಈ ಚಿತ್ರವನ್ನ ಬೇರೆ ಭಾಷೆಯಲ್ಲೂ ರಿಲೀಸ್ ಮಾಡೋಕೆ ಪ್ಲಾನ್ ಮಾಡ್ತಿದೆ.


ಕನ್ನಡದ ಕಾಂತಾರ ಬೇರೆ ಭಾಷೆಯಲ್ಲೂ ಆಗುತ್ತದೆ ರಿಲೀಸ್
ಕಾಂತಾರ ಸಿನಿಮಾ ಈಗ ಕನ್ನಡಕ್ಕೆ ಮಾತ್ರ ಸೀಮತ ಅನ್ನೊ ಹಾಗಿದೆ. ಆದರೆ ಇದೇ ಚಿತ್ರ ಬೇರೆ ಭಾಷೆಯಲ್ಲೂ ರಿಲೀಸ್ ಮಾಡೋ ಪ್ಲಾನ್ ಆಗಿದೆ. ಇತರ ಭಾಷಾ ಸಿನಿ ಪ್ರೇಮಿಗಳು ತಮ್ಮ ತಮ್ಮ ಭಾಷೆಯಲ್ಲಿಯೇ ಕನ್ನಡದ ಕಾಂತಾರ ಚಿತ್ರವನ್ನ ಇನ್ಮುಂದೆ ನೋಡಬಹುದಾಗಿದೆ.


ಹೌದು, ಈ ನಿಟ್ಟಿನಲ್ಲಿ ಕಾಂತಾರ ಸಿನಿಮಾ ಡಬ್ಬಿಂಗ್ ಪ್ಲಾನ್ ನಡೀತಾ ಇದೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಕಾಂತಾರ ಸಿನಿಮಾ ರಿಲೀಸ್ ಆಗುತ್ತದೆ. ಈ ಬಗ್ಗೆ ಚಿತ್ರದ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.


Kannada Kantara Cinema now Going to Release In other Language
ಕನ್ನಡದ ಕಾಂತಾರ ಇತರ ಭಾಷೆಯಲ್ಲೂ ರಿಲೀಸ್


ಸದ್ಯ ಕಾಂತಾರ ಸಿನಿಮಾದ ಪ್ರಯಾಣದಲ್ಲಿರೋ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಚಿತ್ರ ಬೇರೆ ಭಾಷೆಗೂ ಡಬ್ ಆಗುತ್ತದೆ ಅಂತಲೇ ಹೇಳಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲು ಈ ಸಿನಿಮಾ ಡಬ್ ಆಗುತ್ತಿದೆ.


ಈಗಾಗಲೇ ಆಯಾ ಭಾಷೆಯ ಸಿನಿಮಾ ವಿತರಕರು ಈ ಬೇಡಿಕೆಯನ್ನ ಹೊಂಬಾಳೆ ಪ್ರೋಡಕ್ಷನ್ ಹೌಸ್ ಅನ್ನ ಸಂಪರ್ಕಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರೋಡಕ್ಷನ್ ಹೌಸ್ ತಮ್ಮ ಸಿನಿಮಾದ ಇತರ ಭಾಷೆಯ ಡಬ್ಬಿಂಗ್ ರಿಲೀಸ್ ಬಗ್ಗೆ ಮಾಹಿತಿ ಕೊಡಲಿದೆ ಎಂದು ರಿಷಬ್ ಈಗ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್


ಉಳಿದಂತೆ ಕನ್ನಡದ ಕಾಂತಾರ ಹಬ್ಬದ ಈ ದಿನದ ರಜೆಯಲ್ಲಿ ಚೆನ್ನಾಗಿಯೇ ಥಿಯೇಟರ್​ ನಲ್ಲಿ ಓಡ್ತಾನೇ ಇದೆ.

First published: