ಕನ್ನಡದ ಕಾಂತಾರ ಚಿತ್ರದ (Kantara-2 Movie Updates) ಬಗ್ಗೆ ಕುತೂಹಲ ಆಗಲೂ ಇತ್ತು. ಈಗಲೂ ಅದು ಮುಂದುವರೆದಿದೆ. ಸಿನಿಮಾ ತಂಡದ ಪ್ರತಿ ನಡೆಯನ್ನು ಜನ ಕುತೂಹಲದಿಂದ ನೋಡುತ್ತಾರೆ. ದೈವಕ್ಕೆ ಹರಕೆ ತೀರಿಸಿದ ಸಿನಿಮಾ ತಂಡದ ವೀಡಿಯೋ ಕೂಡ ಗಮನ ಸೆಳೆಯುತ್ತಿದೆ. ಇದರ ಬೆನ್ನಲ್ಲಿ ಕಾಂತಾರ-2 (Kantara-2 Movie) ಚಿತ್ರದ ವಿಷಯ ಸಹ ಚರ್ಚೆ ಆಗುತ್ತಿದೆ. ಸಿನಿಪ್ರೇಮಿಗಳು ಕಾಂತಾರ-2 ಚಿತ್ರ ಯಾವಾಗ ಶುರು ಆಗುತ್ತದೆ ಅಂತಲೂ ಕುತೂಹಲದಿಂದ (Director Rishab Shetty) ಸಿನಿಮಾ ತಂಡದತ್ತ ನೋಡುತ್ತಿದ್ದಾರೆ. ಆದರೆ ಕಾಂತಾರ ಸಿನಿಮಾ ತಂಡ ಈ ಬಗ್ಗೆ ಎಲ್ಲೂ ಏನೂ ಈಗ ಹೇಳಿಕೊಂಡಿಲ್ಲ. ಆದರೂ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಸೋಷಿಯಲ್ (Social Media News) ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಸುತ್ತ ಇಲ್ಲೊಂದು ಸುದ್ದಿ ಇದೆ ಓದಿ.
ದೈವಕ್ಕೆ ಹರಕೆ ತೀರಿದ ಬಳಿಕ ಕಾಂತಾರ-2 ಚಿತ್ರದ ಚರ್ಚೆ ಜೋರು!
ಕಾಂತಾರ ಕನ್ನಡ ನಾಡಿನ ಹೆಮ್ಮಯ ಸಿನಿಮಾನೇ ಆಗಿದೆ. ಈ ಚಿತ್ರದ ದಾಖಲೆಗಳನ್ನು ಸದ್ಯಕ್ಕೆ ಯಾರು ಮುರಿಯೋಕೆ ಆಗೋದಿಲ್ಲ. ಅದನ್ನ ಸ್ವತಃ ಕಾಂತಾರ ಸಿನಿಮಾ ತಂಡವೇ ಮಾಡಬೇಕೋ ಏನೋ. ಕಾಂತಾರ ಸಿನಿಮಾ ಆ ಮಟ್ಟಕ್ಕೆ ಹೆಸರು ಮಾಡಿದೆ.
ಕಾಂತಾರ ಸಿನಿಮಾದ ಸೆಳೆತ ಈಗಲೂ ಇದೆ. ಹೊರಗಡೆಯ ಜನ ಈಗಲೂ ಕಾಂತಾರ ಚಿತ್ರದ ಕುರಿತು ಮಾತನಾಡುತ್ತಾರೆ. ಕಾಂತಾರ ಸಿನಿಮಾ ಅಷ್ಟು ಪ್ರಭಾವ ಬೀರಿದೆ. ಚಿತ್ರದ ಕಂಟೆಂಟ್ ಆ ಒಂದು ಕೆಲಸವನ್ನು ಇಲ್ಲಿ ಅದ್ಭುತವಾಗಿ ಮಾಡಿದೆ.
ಕಾಂತಾರ-2 ಚಿತ್ರ ಯಾವಾಗ ಶುರು ಆಗುತ್ತದೆ?
ಕಾಂತಾರ-2 ಸಿನಿಮಾದ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇದೆ. ಕಾಂತಾರ ಚಿತ್ರವನ್ನ ನೋಡಿದ ಪ್ರತಿಯೊಬ್ಬರು ಈ ಒಂದು ಆಸೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಕಾಂತಾರ-2 ಸಿನಿಮಾ ಹೇಗಿರಬಹುದು ಅಂತಲೂ ಕಲ್ಪಿಸಿಕೊಳ್ಳುತ್ತಿದ್ದಾರೆ.
ಆದರೆ ಕಾಂತಾರ ಬಗ್ಗೆ ಸಿನಿಮಾ ತಂಡ ಎಲ್ಲೂ ಏನೂ ಇನ್ನೂ ಹೇಳಿಕೊಂಡಿಲ್ಲ. ಅದರ ಬದಲು ತಾವು ಅಂದುಕೊಂಡಂತೆ ದೈವಕ್ಕೆ ಹರಕೆ ತೀರಿಸಿದ್ದಾರೆ. ಆ ಹರಕೆ ತೀರಿಸೋ ಸಮಯದಲ್ಲಿ ಇಡೀ ಕಾಂತಾರ ಟೀಮ್ ಅಲ್ಲಿ ಹಾಜರಿತ್ತು. ಆಗಲೂ ಕಾಂತಾರ-2 ಬಗ್ಗೆ ಏನೂ ಹೇಳಿಕೊಂಡಿಲ್ಲ.
ಇದೇ ಜೂನ್ ತಿಂಗಳಿನಿಂದ ಕಾಂತಾರ-2 ಶೂಟಿಂಗ್ ಪ್ಲಾನ್
ಕಾಂತಾರ-2 ಸಿನಿಮಾದ ಶೂಟಿಂಗ್ ಪ್ಲಾನ್ ಕೂಡ ಆಗಿದೆ ಅನ್ನೋ ಮಾಹಿತಿ ಇದೆ. ಇದೇ ವರ್ಷದ ಜೂನ್ ತಿಂಗಳಲ್ಲಿ ಕಾಂತಾರ-2 ಚಿತ್ರದ ಚಿತ್ರೀಕರಣ ಆರಂಭಿಸೋ ಪ್ಲಾನ್ ಕೂಡ ಚಿತ್ರ ತಂಡಕ್ಕಿದೆ ಅನ್ನೋ ಮಾಹಿತಿ ಸದ್ಯ ಹರಿದಾಡುತ್ತಿದೆ.
ಕಾಂತಾರ-2 ಚಿತ್ರಕ್ಕಾಗಿ ಸಿನಿಮಾ ತಂಡದ ರಿಸರ್ಚ್ ಶುರು!
ಕಾಂತಾರ ಚಿತ್ರ ತಂಡ ಸ್ಟ್ರಾಂಗ್ ಆಗಿದೆ. ಸಿನಿಮಾದ ಪ್ರತಿಯೊಬ್ಬ ಸದಸ್ಯ ಕೂಡ ಚಿತ್ರದ ಕೆಲಸದಲ್ಲಿ ಇನ್ವಾಲ್ವ್ ಆಗಿದ್ದಾರೆ. ಚಿತ್ರದ ಸ್ಕ್ರಿಪ್ಟ್ಗಾಗಿ ರಿಸರ್ಚ್ನ್ನು ಆರಂಭಿಸಲಾಗಿದೆ. ಆದರೆ ಯಾವ ವಿಷಯವನ್ನ ಗಮನದಲ್ಲಿಟ್ಟುಕೊಂಡು ರಿಸರ್ಚ್ ಆರಂಭಿಸಿದ್ದಾರೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ.
ಕಾಂತಾರ-2 ಸಿನಿಮಾ ರಿಲೀಸ್ ಯಾವಾಗ ಗೊತ್ತೇ?
ಕಾಂತಾರ-2 ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆ. ಸಿನಿಮಾ ತಂಡ ಸ್ಕ್ರಿಪ್ಟ್ಗಾಗಿ ರಿಸರ್ಚ್ ವರ್ಕ್ ಮುಂದುವರೆಸಿದೆ. ಹೆಚ್ಚು ಕಡಿಮೆ ಐದು ತಿಂಗಳಲ್ಲಿ ರಿಸರ್ಚ್ ವರ್ಕ್ ಮತ್ತು ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿಕೊಂಡು ಶೂಟಿಂಗ್ ಹೋಗುತ್ತಾರೆ ಅನಿಸುತ್ತದೆ.
ಅಲ್ಲಿಗೆ ಎಲ್ಲವೂ ಅಂದುಕೊಂಡಂತೆ ಆದರೆ, ಕಾಂತಾರ-2 ಸಿನಿಮಾ ಒಂದು ವರ್ಷದಲ್ಲಿಯೇ ರೆಡಿ ಆದರೂ ಆಗಬಹುದು. ಹಾಗಾಗಿಯೇ ಅಂದಾಜು ಮುಂದಿನ ವರ್ಷ ಕಾಂತಾರ-2 ಚಿತ್ರ ರಿಲೀಸ್ ಮಾಡುತ್ತಾರೆ ಅನಿಸುತ್ತದೆ.
ಇದನ್ನೂ ಓದಿ: Sapthami Gowda: ಬಾಲಿವುಡ್ನ ದಿ ವ್ಯಾಕ್ಸಿನ್ ವಾರ್ ಸಿನಿಮಾ ಬಗ್ಗೆ ಸಪ್ತಮಿ ಗೌಡ ಮಾತು!
2024ರ ಏಪ್ರಿಲ್ ಇಲ್ಲವೆ ಮೇ ತಿಂಗಳಲ್ಲಿ ಚಿತ್ರ ರಿಲೀಸ್!
ಕಾಂತಾರ-2 ರಿಲೀಸ್ ಯಾವಾಗ ಅನ್ನೋ ಕುತೂಹಲಕ್ಕೆ ಈಗೊಂದಷ್ಟು ಮಾಹಿತಿ ಹರಿದಾಡುತ್ತಿದೆ. ಬರುವ ವರ್ಷದ ಏಪ್ರಿಲ್ ಇಲ್ಲವೆ ಮೇ ತಿಂಗಳಲ್ಲಿ ಕನ್ನಡದ ಕಾಂತಾರ-2 ಸಿನಿಮಾ ರಿಲೀಸ್ ಆಗೋ ಸಾಧ್ಯತೆ. ಆದರೆ ಈ ಬಗ್ಗೆ ಸಿನಿಮಾ ತಂಡ ಎಲ್ಲೂ ಇನ್ನೂ ಏನೂ ಹೇಳಿಕೊಂಡಿಲ್ಲ. ಆದರೂ ಈ ಸುದ್ದಿ ಬೇಜಾನ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ