ಸ್ಯಾಂಡಲ್ವುಡ್ನ ಕಬ್ಜ (Sandalwood Kabzaa Movie) ಚಿತ್ರದ ಕ್ರೇಜ್ ದಿನೇ ದಿನೇ ಜೋರಾಗುತ್ತಿದೆ. ಬಾಲಿವುಡ್ನಲ್ಲಿ (Bollywood Movie) ಇದರ ನಿರೀಕ್ಷೆ ಹೆಚ್ಚಾಗುತ್ತಿದೆ. ಅಲ್ಲಿನ ವಿತರಕರೂ ಚಿತ್ರವನ್ನು ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಟಾಲಿವುಡ್ನಲ್ಲೂ (Tollywood Movie) ಕನ್ನಡದ ಕಬ್ಜ ಚಿತ್ರಕ್ಕೆ ಒಳ್ಳೆ ವೆಲ್ಕಮ್ ಸಿಗುತ್ತಿದೆ. ಇಲ್ಲಿ ಸಿನಿಮಾ ವಿತರಿಸಲು ದೊಡ್ಡ ಸಂಸ್ಥೆಯೊಂದು ಆರ್.ಚಂದ್ರು (Director R Chandru Movie) ಅವರಿಗೆ ಸಾಥ್ ಕೊಡುತ್ತಿದೆ. ಫೆಬ್ರವರಿ 4 ರಂದು ದೊಡ್ಡಮಟ್ಟದಲ್ಲಿ ಚಿತ್ರದ ಲಿರಿಕಲ್ ವಿಡಿಯೋ ಇಲ್ಲಿ ರಿಲೀಸ್ ಆಗುತ್ತಿದೆ. ಆರ್.ಚಂದ್ರು ತಮ್ಮ ಈ ಚಿತ್ರದ ರಿಲೀಸ್ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಿನಿಮಾಗೆ ಯಾರೆಲ್ಲ ಸಪೋರ್ಟ್ ಮಾಡ್ತಿದ್ದಾರೋ ಅವರಿಗೆ ಥ್ಯಾಂಕ್ಸ್ ಕೂಡ ಹೇಳ್ತಿದ್ದಾರೆ.
ಕನ್ನಡದ ಕಬ್ಜ ಚಿತ್ರಕ್ಕೆ ಟಾಲಿವುಡ್ ನಟ ನಿತಿನ್ ಸಾಥ್
ಕನ್ನಡದ ಕಬ್ಜ ಪ್ಯಾನ್ ಇಂಡಿಯಾ ರಿಲೀಸ್ಗೆ ರೆಡಿ ಆಗುತ್ತಿದೆ. ಪುನೀತ್ ರಾಜ್ಕುಮಾರ್ ಜನ್ಮದಿನ ಮಾರ್ಚ್-17 ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಒಂದು ನಿರ್ಧಾರಕ್ಕೆ ಮುಂಬೈ ವಿತರಕರು ಚಂದ್ರು ಅವರಿಗೆ ಸಾಥ್ ಕೊಟ್ಟಿದ್ದಾರೆ. ತೆಲುಗು ಚಿತ್ರರಂಗದಲ್ಲೂ ಒಳ್ಳೆ ವೆಲ್ಕಮ್ ಸಿಕ್ಕಿದೆ.
ತೆಲುಗು ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ಫ್ಯಾನ್ಸ್ ಇದ್ದಾರೆ. ಕಿಚ್ಚ ಸುದೀಪ್ ಅವರಿಗೂ ಟಾಲಿವುಡ್ ನಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ಇದರಿಂದ ಇಲ್ಲಿ ದೊಡ್ಡಮಟ್ಟದಲ್ಲಿಯೇ ಕಬ್ಜ ರಿಲೀಸ್ ಆಗುತ್ತಿದೆ.
ಟಾಲಿವುಡ್ ಆ್ಯಕ್ಟರ್-ಪ್ರೋಡ್ಯೂಸರ್ ನಿತಿನ್ ವಿತರಣೆ!
ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇರೋದು ಗೊತ್ತೇ ಇದೆ. ಈ ಚಿತ್ರದಲ್ಲಿ ಬಿಗ್ ಸ್ಟಾರ್ ಇರುವುದರಿಂದ ಬಿಗ್ ಕ್ರೇಜ್ ಕೂಡ ಹುಟ್ಟಿಕೊಳ್ಳುತ್ತದೆ. ಅಂತಹ ಈ ಬಿಗ್ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ.
ಈ ನಿರೀಕ್ಷೆಯೊಂದಿಗೆ ನಟ-ನಿರ್ಮಾಪಕ ನಿತಿನ್ ಅವರು ಆರ್.ಚಂದ್ರು ಅವರಿಗೆ ಸಾಥ್ ಕೊಟ್ಟಿದ್ದಾರೆ. ತಮ್ಮ ರುಚಿರಾ ಎಂಟರಟೈನಮೆಂಟ್ ಮೂಲಕ ಚಿತ್ರ ವಿತರಿಸೋಕೆ ಜೋಡಿ ಆಗಿದ್ದಾರೆ. ಆರ್.ಚಂದ್ರು ಅವರಿಗೆ ಟಾಲಿವುಡ್ನಲ್ಲಿ ಎನ್.ಸಿನಿಮಾಸ್ ಕೂಡ ಜೋಡಿ ಆಗಿದೆ.
ಕಬ್ಜ ಚಿತ್ರಕ್ಕೆ ನಿತಿನ್ ಸಾಥ್-ಆರ್.ಚಂದ್ರು ಫುಲ್ ಖುಷ್
ಕಬ್ಜ ಸಿನಿಮಾ ಟಾಲಿವುಡ್ನಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ನಟ-ನಿರ್ಮಾಪಕ ನಿತಿನ್ ಕೂಡ ಚಿತ್ರವನ್ನ ತೆಲುಗು ಪ್ರೇಕ್ಷಕರಿಗೆ ಕೊಡಲು ಸಜ್ಜಾಗಿದ್ದಾರೆ. ನಿತಿನ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಈ ವಿಷಯವನ್ನ ಹೇಳಿಕೊಂಡಿದ್ದಾರೆ.
ಇದಕ್ಕೆ ಆರ್.ಚಂದ್ರು ಕೂಡ ಟ್ವಿಟರ್ನಲ್ಲಿ ರಿಪ್ಲೈ ಮಾಡಿದ್ದಾರೆ. ನನ್ನ ಕನಸಿನ ಪ್ರೋಜೆಕ್ಟ್ ದೊಡ್ಡಮಟ್ಟದಲ್ಲಿ ತೆಲುಗು ಪ್ರೇಕ್ಷಕರಿಗೂ ಕೊಡ್ತಿರುವುದು ಖುಷಿ ತಂದಿದೆ. ಇದನ್ನ ಸಾಕಾರಗೊಳಿಸಲು ಕೈ ಜೋಡಿಸಿದ ನಟ ನಿತಿನ್ ಅವರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
ಮಾರ್ಚ್-17 ರಂದು ಕಬ್ಜ ಪ್ಯಾನ್ ಇಂಡಿಯಾ ರಿಲೀಸ್
ಮಾರ್ಚ್-17 ರಂದು ಕನ್ನಡದ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹೈದರಾಬಾದ್ನಲ್ಲಿ ಫೆಬ್ರವರಿ-4 ರಂದು ದೊಡ್ಡಮಟ್ಟದಲ್ಲಿಯೇ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ.
ಮುಂಬೈಯಲ್ಲಿ ಮಾರ್ಚ್-3 ರಂದು ದೊಡ್ಡ ಇವೆಂಟ್ ಮೂಲಕ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ ಅನ್ನೋ ಮಾಹಿತಿ ಕೂಡ ಇದ್ದು ನಿರೀಕ್ಷೆ ಕೂಡ ದೊಡ್ಡಮಟ್ಟದಲ್ಲಿ ಇದೆ. ಆರ್.ಚಂದ್ರು ಈ ಚಿತ್ರಕ್ಕೆ ದುಡ್ಡು ಹಾಕೋದಲ್ಲದೇ ಡೈರೆಕ್ಷನ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್ನಲ್ಲಿ ನಡೆಯಲಿದೆ ಬಿಗ್ ಇವೆಂಟ್
ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಈ ಮೂಲಕ ತೆರೆ ಹಂಚಿಕೊಂಡು ದೊಡ್ಡಮಟ್ಟದಲ್ಲಿಯೇ ಮಾರ್ಚ್-17 ರಂದು ಎಂಟ್ರಿ ಕೊಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ